Connect with us

FILM

ಲಾಂಗ್ ಹಿಡಿಯಲಿದ್ದಾರಾ.. ‘ರಕ್ಷಕ್ ಬುಲೆಟ್’..? ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ರಕ್ಷಕ್

Published

on

ಬೆಂಗಳೂರು: ಕನ್ನಡ ಬಿಗ್‌ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ ಇದೀಗ ನಾಯಕನಟನಾಗಲು ಸಿದ್ಧರಾಗಿದ್ದಾರೆ. ಹೌದು, ತನ್ನ ತಂದೆ ದಿ.ಬುಲೆಟ್ ಪ್ರಕಾಶ್ ರವರ ಜನ್ಮದಿನದಂದು ಸಿನೆಮಾ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.

rakshak

ಈಗಾಗಲೆ ರಕ್ಷಕ್ ಗುರು ಶಿಷ್ಯರು ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದರು. ಸಿನಿಮಾಕ್ಕಿಂತ ಇವರು ಸೋಶೀಯಲ್ ಮೀಡಿಯಾದಲ್ಲಿ ಟ್ರೋಲ್ ನಿಂದಲೇ ಹೆಚ್ಚು ಫೇಮಸ್ ಆಗಿದ್ದಾರೆ ಅಂದ್ರೆ ತಪ್ಪಾಗಲ್ಲ. ಒಂದಲ್ಲ ಒಂದು ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗುತ್ತಿದ್ರು. ಒಂದು ತಿಂಗಳ ಕಾಲ ಬಿಗ್‌ಬಾಸ್‌ನಲ್ಲಿದ್ದ ಇವರು ಹೊರ ಬಂದ ಬಳಿಕ ಹಲವು ಮೀಡಿಯಾಗಳಿಗೆ ಸಂದರ್ಶನ ನೀಡಿದ್ದರು. ಜೊತೆಗೆ ಅನೇಕ ವಿವಾದಗಳಿಗೂ ಎಡೆ ಮಾಡಿಕೊಂಡಿದ್ದರು.

ಸದ್ಯ ಚಿತ್ರರಂಗದಲ್ಲಿ ನಾಯಕನಟನಾಗಿ ಮಿಂಚಲು ಹೊರಟಿರುವ ಇವರು ತನ್ನ ತಂದೆಯ ಜನ್ಮದಿನದಂದು ಸಿನೆಮಾ ಘೋಷಣೆ ಮಾಡಿದ್ದಾರೆ. ಸಿನಿಮಾಕ್ಕೆ ‘RB 01’ ಎಂದು ಪೋಸ್ಟರ್‌ನಲ್ಲಿ ಹೆಸರಿದೆ. ಸಿನಿಮಾ ಪೋಸ್ಟರ್‌ ನಲ್ಲಿ ಸಿನೆಮಾ ಟೈಟಲ್ ಹಾಗೂ ಟೀಸರ್‌ ಅನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಪೋಸ್ಟರ್‌ನಲ್ಲಿರುವ ಟೈಟಲ್‌ನಲ್ಲಿ ಲಾಂಗ್ ಇರುವುದರಿಂದ ಇದೊಂದು ರೌಡಿಸಂ ಮೂವಿ ಅಂದುಕೊಂಡ್ರೆ ಇದರ ಜೊತೆಗೆ ಗಣಪತಿ ವಿಗ್ರಹ ಕೂಡಾ ಕಂಡು ಬಂದಿದೆ.  ಕನ್‌ಫ್ಯೂಶನ್ ಕ್ರಿಯೇಟ್ ಮಾಡಿರುವ ಸಿನೆಮಾ ಪೋಸ್ಟರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡು ಮಾಡುತ್ತವೆ. ಆದರೆ ಸೌಂಡ್ ಕೇಳ್ತಿದ್ದ ಹಾಗೆ ಇದೇ ಗಾಡಿ ಅಂತ ಹೇಳೋಕೆ ಆಗೋದು ಒಂದನ್ನೇ ಅದುವೇ ಬುಲೆಟ್. ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು’ ಎಂದು ಪೋಸ್ಟರ್‌ ನಲ್ಲಿ  ಬರೆಯಲಾಗಿದೆ.

 

 

 

 

FILM

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

Published

on

ಮಂಗಳೂರು/ ಮುಂಬೈ : ಸದ್ಯ ಡೀಪ್ ಫೇಕ್ ಹಾವಳಿ ಮುಗಿಯುವಂತೆ ಕಾಣುತ್ತಿಲ್ಲ. ಅನೇಕ ನಟ – ನಟಿಯರು ಡೀಪ್ ಫೇಕ್ ನಿಂದ ತೊಂದರೆ ಅನುಭವಿಸಿದ್ದಾರೆ. ಕತ್ರೀನಾ ಕೈಫ್, ರಶ್ಮಿಕಾ ಮಂದಣ್ಣ, ಕಾಜಲ್, ಅಲಿಯಾ ಭಟ್ ರ ಡೀಪ್ ಫೆಕ್ ವೀಡಿಯೋ ವೈರಲ್ ಆಗಿತ್ತು. ಕೇವಲ ನಟಿಯರದ್ದು ಮಾತ್ರವಲ್ಲ, ನಟರಾದ ಅಮೀರ್ ಖಾನ್, ಅಲ್ಲು ಅರ್ಜುನ್ ಚುನಾವಣಾ ಪ್ರಚಾರದ ಫೇಕ್ ವೀಡಿಯೋಗಳು ಸೃಷ್ಟಿಯಾಗಿದ್ದವು. ಈ ಬಗ್ಗೆ ಚಿತ್ರರಂಗದ ಅನೇಕರು ಧ್ವನಿ ಎತ್ತಿದ್ದರೂ ಕೂಡ. ಆದ್ರೆ, ಇಲ್ಲಿಗೆ ಮುಕ್ತಾಯವಾಗಿಲ್ಲ. ಇದೀಗ ಮತ್ತೆ ಡೀಪ್ ಫೇಕ್ ಹಾವಳಿ ಮುಂದುವರೆದಿದೆ.

 

ಮತ್ತೆ ಅಲಿಯಾ ಭಟ್ ಡೀಪ್ ಫೇಕ್ :

ಡೀಪ್ ಫೆಕ್ ಗೆ ಮತ್ತೆ ಅಲಿಯಾ ಭಟ್ ಬಲಿಯಾಗಿದ್ದಾರೆ. ಅಲಿಯಾ ಭಟ್ ಹೊಸ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಇದುವರೆಗೆ ಬೇರೆ ಯಾರು ಯಾರದೋ ವೀಡಿಯೋ ಗಳಿಗೆ ನಟಿಯರ ಮುಖವನ್ನು ಕೂರಿಸಿ ವೀಡಿಯೋ ಮಾಡಲಾಗುತ್ತಿತ್ತು. ಇದೀಗ ನಟಿಯೊಬ್ಬಳ ವೀಡಿಯೋಗೆ ನಟಿ ಮುಖವನ್ನು ಬಳಸಲಾಗಿದೆ. ಹೌದು, ನಟಿಯೊಬ್ಬಳ ಮುಖ ಎಡಿಟ್ ಮಾಡಿ ಅಲ್ಲಿ ಅಲಿಯಾ ಭಟ್ ಮುಖವನ್ನು ಬಳಸಲಾಗಿದೆ.

ಆ ನಟಿಯರು ಯಾರು?


ಇಷ್ಟರ ವರೆಗೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಬೇರೆಯವರ ದೇಹಕ್ಕೆ ಸೆಲೆಬ್ರಿಟಿಗಳ ಮುಖ ಜೋಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಈಗ ಬೇರೊಬ್ಬ ನಟಿಯ ವೀಡಿಯೋ ಬಳಸಿಕೊಂಡಿದ್ದಾರೆ. ಈ ಡೀಪ್ ಫೇಕ್ ವೀಡಿಯೋದ ಅಸಲಿ ವೀಡಿಯೋ ನಟಿ ವಾಮಿಕಾ ಅವರದ್ದು. ವಾಮಿಕ ಬಾಲಿವುಡ್ ನಟಿ. 2007 ರಿಂದ ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಯಾವುದೂ ಆಕೆಗೆ ಹೆಸರು ಕೊಟ್ಟಿಲ್ಲ. ಈಗ ಡೀಪ್ ಫೇಕ್ ಪ್ರಕರಣದಿಂದ ಅವರು ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ : ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

ನಟಿ ವಾಮಿಕಾ ವೀಡಿಯೋಗೆ ಅಲಿಯಾ ಭಟ್ ಫೇಸ್ :

ನಟಿ ವಾಮಿಕ ಕೆಲವು ದಿನಗಳ ಹಿಂದೆಯಷ್ಟೇ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಅವರು, ಕೆಂಪು ಸೀರೆಯುಟ್ಟು ಮಿಂಚಿದ್ದರು. ನೆಟ್ ಫ್ಲಿಕ್ಸ್ ಸರಣಿ ‘ಹೀರಾಮಂಡಿ’ ಸ್ಕ್ರೀನಿಂಗ್ ಗಾಗಿ ವಾಮಿಕಾ ಕೆಂಪು ಸೀರೆಯುಟ್ಟಿದ್ದರು.
ಇದೀಗ ಈ ವೀಡಿಯೋಗೆ ಅಲಿಯಾ ಭಟ್ ಮುಖ ಬಳಸಿ ವೈರಲ್ ಮಾಡಲಾಗಿದೆ.

ಆಲಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? ಆಲಿಯಾ ಮುಖ ನೀವು ಬಳಸಿರುವುದು ಕಾನೂನುಬದ್ಧವೇ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಕಮೆಂಟ್ಸ್ ಬಾಕ್ಸ್ ನಲ್ಲಿ ಆಲಿಯಾ ಭಟ್ ಅವರನ್ನು ಟ್ಯಾಗ್ ಮಾಡಿದ್ದಾರೆ.

 

Continue Reading

FILM

ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

Published

on

ತಿರುವನಂತಪುರಂ/ಮಂಗಳೂರು: ಮಲಯಾಳಂ ನಟಿ ಕನಕಲತಾ(63 ವ)  ತಿರುವನಂತಪುರಂ ಜಿಲ್ಲೆಯ ಮಲಯಿಂಕೀಝುನಲ್ಲಿರುವ ತಮ್ಮ ನಿವಾಸದಲ್ಲಿ ಎ.06ರಂದು ಅನಾರೋಗ್ಯದಿಂದಾಗಿ ನಿಧನರಾದರು. ಇವರು ಪಾರ್ಕಿನ್ಸನ್ ಮತ್ತು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದರು.

kanakalatha

300 ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ:

ಕಳೆದ ವರ್ಷ ಅವರ ಸಹೋದರಿ ವಿಜಯಮ್ಮ ಅವರು ಕನಕಲತಾ ಅವರ ಅನಾರೋಗ್ಯವನ್ನು ಬಹಿರಂಗಪಡಿಸಿದ್ದರು. ಆಗಸ್ಟ್ 2022 ರಲ್ಲಿ, ವೈದ್ಯರು MRI ಸ್ಕ್ಯಾನ್ ಮೂಲಕ ಬುದ್ಧಿಮಾಂದ್ಯತೆಯನ್ನು ಪತ್ತೆಹಚ್ಚಿದ್ದರು. ರಂಗಭೂಮಿಯಲ್ಲಿ ಹಿನ್ನೆಲೆ ಹೊಂದಿರುವ ಕನಕಲತಾ ಸುಮಾರು 300 ಚಲನಚಿತ್ರಗಳು ಮತ್ತು ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. “ಒರು ಯಾತ್ರಾಮೊಳಿ,” “ಗುರು,” “ಕಿಲುಕಿಲ್ ಪಂಬರಂ,” “ಪಾರ್ವತಿ ಪರಿಣಯಂ,” “ತುಂಪೋಲಿ ಕಡಪ್ಪುರಂ,” “ಆದ್ಯತೆ ಕಣ್ಮಣಿ,” “ಎಫ್.ಐ.ಆರ್.,” “ಆಕಾಶಗಂಗಾ,” “ಅನಿಯತಿಪ್ರವು,” “ಅಂಚರಕಲ್ಯಾಣಂ,” “ದೋಸ್ತ್,” ಮಾಯಿಲ್‌ಪೀಲಿಕ್ಕಾವು,” ಮತ್ತು “ಮಂತ್ರಮೋತಿರಂ”, ಇವುಗಳು ಅವರ ಜನಪ್ರಿಯ ಚಲನಚಿತ್ರಗಳಾಗಿದೆ.

ಮುಂದೆ ಓದಿ..; ಹೆಣ್ಣು ಮಕ್ಕಳು ಕನಿಷ್ಠ 25 ದಾಟಿದ ಮೇಲೆ ಮದುವೆಯಾಗಿ; ಮಿಲನಾ ನಾಗರಾಜ್

“ಪೂಕ್ಕಳಂ” ಚಿತ್ರ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.  ಆದರೆ, ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ ಸಿನಿಮಾ ಮತ್ತು ಧಾರಾವಾಹಿಗಳೆರಡರಿಂದಲೂ ಹಿಂದೆ ಸರಿಯಬೇಕಾಯಿತು. “ಅಮ್ಮ” ಸಂಸ್ಥೆಯ ಆರ್ಥಿಕ ನೆರವು ಮತ್ತು ಚಲನಚಿತ್ರ ಅಕಾಡೆಮಿಯ ಬೆಂಬಲವು ಅವರ ವೈದ್ಯಕೀಯ ಚಿಕಿತ್ಸೆಗೆ ಸಹಕಾರ ನೀಡಿತ್ತು ಎನ್ನಲಾಗಿದೆ.

Continue Reading

FILM

ಅರೆಬೆತ್ತಲೆ ಫೊಟೊ ಪೋಸ್ಟ್ ಮಾಡಿದ ಸಮಂತಾ..! ಅಸಲಿಯತ್ತೇನು?

Published

on

ಜನಪ್ರಿಯ ನಟಿ ಸಮಂತಾರುತು ಪ್ರಭು  ತಮ್ಮ ಸಿನೆಮಾ ನಟನೆ ಮೂಲಕ ಎಲ್ಲರ ಫೇವರೆಟ್ ಆಗಿದ್ದವರು. ಮುದ್ದು ಮುಖದ ಚೆಲುವೆಯ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈಕೆ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇತ್ತೀಚೆಗೆ ತನ್ನ ಮಾಜಿ ಪತಿಯ ವಿಚಾರಕ್ಕೆ ಸಂಬಂಧಿಸಿ ಹಲವಾರು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ.

ಇದೀಗ ಸಮಂತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಖಾತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಅರೆನಗ್ನ ಫೊಟೋವನ್ನು ಪೋಸ್ಟ್‌ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿತ್ತು. ಯಾರೋ ಕಿಡಿಗೇಡಿಗಳು ಸಮಂತಾ ಫೊಟೋವನ್ನು ತಿರುಚಿ ಪೋಸ್ಟ್ ಮಾಡಿದ್ದಾರೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಇನ್ನು ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಸಮಂತಾ ದಿನಕ್ಕೊಂದು ಆರೋಗ್ಯ ಮಾಹಿತಿಯನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ’ ಉಪಯೋಗಗಳು ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಪೋಸ್ಟ್‌ನಲ್ಲಿ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನರು ಬಾತ್‌ ಟಬ್‌ನಲ್ಲಿ ಸ್ವಲ್ಪ ಸಮಯ ಇರುತ್ತಾರೆ ಎಂದು ಬರೆದುಕೊಂಡಿದ್ದರು.

ಅರೆಬೆತ್ತಲೆ ಫೊಟೊ ವೈರಲ್:

ಇನ್ನು ಬಾತ್ ಟಬ್‌ನಲ್ಲಿ ಟವಲ್ ಸುತ್ತಿಕೊಂಡು ಇರುವ ಸಮಂತಾ ಅವರ ಫೊಟೋದ ಜೊತೆಗೆ ಕೆಲವೊಂದು ಹೆಲ್ತ್‌ ಟಿಪ್ಸ್‌ಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲೇ ಇನ್ನೊಂದು ಸಮಂತಾ ಅರೆಬೆತ್ತಲೆ ಫೊಟೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಅದರಲ್ಲಿ ಆಕೆಯ ಮುಖ ಕಾಣುತ್ತಿಲ್ಲ. ಅಸಲಿಗೆ ಅದು ನಕಲಿ ಎಂದು ಗೊತ್ತಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಫೇಕ್‌ ಸುದ್ದಿ ಹಬ್ಬಿಸುವವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಆಕೆಯ ಅಂತಹ ಯಾವುದೇ ಫೋಟೊ ಪೋಸ್ಟ್ ಮಾಡಿಲ್ಲ. ಕಿಡಿಗೇಡಿಗಳು ಈ ರೀತಿ ಫೋಟೊ ವೈರಲ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೂ ನಡೀತಿದೆ. ಒಟ್ಟಾರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಕಾಮೆಂಟ್ಸ್ ಬರುತ್ತಿವೆ.

Continue Reading

LATEST NEWS

Trending