bengaluru
ಆ.1ರಿಂದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್, ಆಟೋ ನಿಷೇಧ..!
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರ ಆ.1ರಿಂದ ನಿಷೇಧಿಸಲಾಗಿದ್ದು, ನಿಯಮವನ್ನು ಉಲ್ಲಂಘಿಸಿದರೆ 500ರೂ. ದಂಡ ವಿಧಿಸಲಾಗುತ್ತದೆ.
ಬೆಂಗಳೂರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರ ಆ.1ರಿಂದ ನಿಷೇಧಿಸಲಾಗಿದ್ದು, ನಿಯಮವನ್ನು ಉಲ್ಲಂಘಿಸಿದರೆ 500ರೂ. ದಂಡ ವಿಧಿಸಲಾಗುತ್ತದೆ.
ರಾಜ್ಯದ ಏಕೈಕ ಎಕ್ಸ್‌ಪ್ರೆಸ್ ವೇ ಆಗಿರುವ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಆ.1ರಿಂದ ಅಂದರೆ ನಾಳೆಯಿಂದ ಎಲ್ಲಾ ಮಾದರಿಯ ದ್ವಿಚಕ್ರ ವಾಹನ (ಬೈಕ್‌ಗಳು) ಹಾಗೂ ತ್ರಿಚಕ್ರ ವಾಹನ (ಆಟೋಗಳು) ಹಾಗೂ ಟ್ರ್ಯಾಕ್ಟರ್ ಸೇರಿ ಕಡಿಮೆ ವೇಗ ಸಾಮಥ್ರ್ಯದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಈ ನಿಯಮವನ್ನು ಉಲ್ಲಂಘಿಸಿ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡಿದರೆ 500 ರೂ. ದಂಡವನ್ನು ವಿಧಿಸಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
bangalore
FILM: ಎಲ್ಲೆಲ್ಲೂ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಸಾಂಗ್ ಹವಾ
‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ..
ಬೆಂಗಳೂರು: ಕೆಲ ದಿನಗಳ ಹಿಂದೆ ಕನ್ನಡದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ರೀಲ್ಸ್ ಭಾರೀ ವೈರಲ್ ಆಗಿತ್ತು. ರಾತ್ರಿ ಬೆಳಗಾಗೋದ್ರಲ್ಲಿ ಇದನ್ನು ಹಾಡಿದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಸೆಲೆಬ್ರಿಟಿ ಲೆವೆಲ್ ಗೆ ಸುದ್ದಿಯಾಗಿದ್ರು.
ಇದೀಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಬಿಡುಗಡೆಗೊಂಡ ದಿನ 5 ಮಿಲಿಯನ್ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.. ‘I am barbie girl’ ಎಂಬ ಇಂಗ್ಲಿಷ್ ಹಾಡಿನ ಟ್ಯೂನ್ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ.
ಈಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ.
‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ
ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ ಎನ್ನುವ ವಿಕಿ ಪೀಡಿಯಾ ವಿಕಾಸ್ ಅವರ ರೀಲ್ಸ್ ಗೆ ಜನಾ ಫಿದಾ ಆಗಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಫೇಸ್ಬುಕ್ನಲ್ಲಿ ಮತ್ತು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ ಎಂಬುವವರು. ಬಹುತೇಕರಿಗೆ ಇವರ ಪರಿಚಯ ಮಾಡಬೇಕಾಗಿಲ್ಲ. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೈರಲ್ ಆಗಿದ್ದಲ್ಲದೇ ವಿಕ್ಕಿ ಅವರಿಗೆ ಬಹಳಷ್ಟು ಪ್ರಸಿದ್ದಿ ತಂದುಕೊಟ್ಟಿದೆ.
bengaluru
ಚೈತ್ರಾ ಕುಂದಾಪುರ ಪ್ರಕರಣ- ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿಕೆ
ಚೈತ್ರಾ ಕುಂದಾಪುರ ಮತ್ತು ತಂಡದವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಸಿಸಿಬಿ ಪೊಲೀಸರು ಉಡುಪಿ ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿ ಮಹಜರು, ರಿಕವರಿ ನಡೆಸಿದರು.
ಉಡುಪಿ: ಚೈತ್ರಾ ಕುಂದಾಪುರ ಮತ್ತು ತಂಡದವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಸಿಸಿಬಿ ಪೊಲೀಸರು ಉಡುಪಿ ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿ ಮಹಜರು, ರಿಕವರಿ ನಡೆಸಿದರು.
ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ ಆರೋಪಿಗಳು ಪಡೆದಿದ್ದರೆನ್ನಲಾದ 5 ಕೋಟಿ ರೂಪಾಯಿಗಳನ್ನು ಯಾವ ರೀತಿ ವಿನಿಯೋಗ ಮಾಡಿದ್ದಾರೆ ಎನ್ನುವುದರ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.
ಆರೋಪಿಗಳು ಈ ಹಣದಿಂದ ಆಸ್ತಿ ಪಾಸ್ತಿ, ಜಮೀನು ಖರೀದಿಸಿರುವ ಶಂಕೆ ಇದ್ದು, ಈ ಹಿನ್ನೆಲೆಯಲ್ಲಿ ಬೈಂದೂರು, ಕುಂದಾಪುರ, ಉಡುಪಿ ತಾಲೂಕುಗಳಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿದರು.
ಕೆಲವು ಕಡೆ ಮಹಜರು ಮತ್ತು ರಿಕವರಿ ಮಾಡಿದರು.
ಆರೋಪಿಗಳಲ್ಲಿ ಒಬ್ಬನಾಗಿರುವ ಶ್ರೀಕಾಂತ್ ನಾಯಕ್ ನನ್ನು ಜಿಲ್ಲೆಯ ಖಾಸಗಿ ಸೊಸೈಟಿಯೊಂದಕ್ಕೆ ಕರೆದೊಯ್ದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಸೊಸೈಟಿಯಲ್ಲಿ ಆರೋಪಿಗಳು ಹಣ ಮತ್ತು ಚಿನ್ನ ಅಡವಿರಿಸಿದ ಬಗ್ಗೆ ಆಸ್ತಿ ಪತ್ರ ಸಿಕ್ಕಿದೆ ಎಂದು ಹೇಳಲಾಗಿದೆ.
bangalore
ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್- ರಿಲೀಸ್ ಡೇಟ್?
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್ ಸೆ.22ರಂದು ರಿಲೀಸ್ ಆಗುತ್ತಿದೆ.
ಬೆಂಗಳೂರು: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ಭಾಷೆಯಲ್ಲಿ ಬರಲು ಸಜ್ಜಾಗಿದೆ.
ಕನ್ನಡಿಗರನ್ನು ಸಪ್ತ ಸಾಗರದಾಚೆ ಎಲ್ಲೋ ಕರೆದೊಯ್ದಿದ್ದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್, ಇದೀಗ ಇದೇ ಚಿತ್ರವನ್ನು ತೆಲುಗು ಭಾಷೆಗೂ ಡಬ್ ಮಾಡಿ ಅಲ್ಲಿನವರನ್ನು ಸೆಳೆಯಲು ಸಜ್ಜಾಗಿದ್ದಾರೆ.
ಎಸ್. ಸೆ.22ರಂದು ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌ನಲ್ಲಿ ಬರುತ್ತಿದೆ.ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ.
ಮನು-ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಹಾಗಾಗಿ ತೆಲುಗು ಅಂಗಳಕ್ಕೆ ಹಾರಲು ಸಜ್ಜಾಗಿದೆ. ‘ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಲ್ಲಿ ತೆಲುಗು ಸಿನಿಮಾ ಸೆ.22ರಂದು ಗ್ರ್ಯಾಂಡಾಗಿ ಬಿಡುಗಡೆಯಾಗುತ್ತಿದೆ.
ತೆಲುಗು ಆಡಿಯನ್ಸ್ ಗೂ ರಕ್ಷಿತ್ ಶೆಟ್ಟಿ ಅವರದ್ದು ಪರಿಚಿತ ಮುಖ. ಶ್ರೀಮನ್ನಾರಾಯಣ ಮತ್ತು ಚಾರ್ಲಿ ಸಿನಿಮಾಗಳಿಂದಲೇ ರಕ್ಷಿತ್ ಹೆಚ್ಚು ಸದ್ದು ಮಾಡಿದ್ದರು.
ಅದರಲ್ಲೂ 777 ಚಾರ್ಲಿ ಚಿತ್ರವನ್ನು ಬಹುವಾಗಿ ಇಷ್ಟಪಟ್ಟಿದ್ದರು. ಇದೀಗ ಸೂಪರ್ ಡೂಪರ್ ಹಿಟ್ ಸಿನೆಮಾ ತೆಲುಗಿನ ಅಂಗಳಕ್ಕೂ ಕಾಲಿಡಲು ಮುಂದಾಗಿದೆ. ಚಿತ್ರ್ಕೆ ತೆಲುಗು ಆಡಿಯನ್ಸ್ ಎಷ್ಟು ಮಾರ್ಕ್ಸ್ ಕೊಡ್ತಾರೆ ಎನ್ನೋದನ್ನ ಕಾದು ನೋಡಬೇಕು.
- FILM6 days ago
‘ಜವಾನ್’ ಶಾಕಿಂಗ್ ಕಲೆಕ್ಷನ್ – ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ..!
- LATEST NEWS6 days ago
“ಕಚೇರಿ ವೇಳೆಯಲ್ಲಿ ಗಂಟೆ ಗಟ್ಟಲೆ ಕಾಫಿ, ಟೀಗೆ ಹೋಗುವ ಸರ್ಕಾರಿ ನೌಕರರ ವಿರುದ್ದ ಕಠಿಣ ಕ್ರಮ”
- FILM6 days ago
ಸೈಮಾ 2023-ಅತೀ ಹೆಚ್ಚು ಪ್ರಶಸ್ತಿ ಗೆದ್ದು ಬೀಗಿದ ಕನ್ನಡದ “ಕಾಂತಾರ”
- bangalore6 days ago
ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್- ರಿಲೀಸ್ ಡೇಟ್?