Saturday, June 3, 2023

ಕಲಾವಿದ ಪಕ್ಷಿಕೆರೆ ಪದ್ಮನಾಭರಿಗೆ ಮಸ್ಕತ್ ನಲ್ಲಿ ಸನ್ಮಾನ 

ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೆಳ ಕಲಾವಿದನಾಗಿ, ಸಂಘಟಕನಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಒಮನ್ ಮಸ್ಕತ್ ನಲ್ಲಿ ‘ಬಿರುವ ಜವನೆರ್ ಮಸ್ಕತ್’ ಸನ್ಮಾನಿಸಿ ಗೌರವಿಸಿದರು.

ಮಸ್ಕತ್: ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೆಳ ಕಲಾವಿದನಾಗಿ, ಸಂಘಟಕನಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಒಮನ್ ಮಸ್ಕತ್ ನಲ್ಲಿ ‘ಬಿರುವ ಜವನೆರ್ ಮಸ್ಕತ್’ ತಂಡವು ಸನ್ಮಾನಿಸಿ ಗೌರವಿಸಿದರು.

ಪದ್ಮನಾಭ ಅವರು ಸಹೋದರ ನೋಣಯ್ಯ ಶೆಟ್ಟಿಗಾರ್ ಅವರಿಂದ ಬಾಲ ಪಾಠ ಹಾಗೂ ದಿವಾಣ ಭೀಮ ಭಟ್ ಅವರಿಂದ ಚೆಂಡೆ ಮದ್ದಳೆ ಕಲಿತು ಹವ್ಯಾಸಿ ವಲಯದಲ್ಲಿ ಹಲವಾರು ಸಂಘಗಳಲ್ಲಿ ತಾಳಮದ್ದಳೆ, ಬಯಲಾಟಗಳಲ್ಲಿ ಹಿಮ್ಮೆಳವಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ಎಂಬ ತಂಡ ಕಟ್ಟಿ ಮಸ್ಕತ್, ದುಬೈ, ಅಬುದಾಬಿ, ಮುಂಬೈ, ಊರು ಪರವೂರುಗಳಲ್ಲಿ ಶನಿ ಪೂಜೆ ತಾಳಮದ್ದಳೆ ಸಂಘಟಿಸಿದ್ದಾರೆ.

ಎರಡನೇ ಸಲ ಮಸ್ಕತ್ ಗೆ ತಂಡ ಸಂಯೋಜಕರಾಗಿ ಆಗಮಿಸಿ ಸ್ವಾಮಿ ಕೊರಗಜ್ಜ, ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ನಡೆಸಿಕೊಟ್ಟ ಪದ್ಮನಾಭ ಅವರನ್ನು ಕದ್ರಿ ನವನೀತ ಶೆಟ್ಟಿ ಹಾಗೂ ದಯಾನಂದ ಜಿ. ಕತ್ತಲ್ ಸಾರ್ ಪರಿಚಯಿಸಿ ಅಭಿನಂದಿಸಿದರು.

ಕಾರ್ಯಕ್ರಮವನ್ನು ಶ್ವೇತ ಸುವರ್ಣ ನಿರೂಪಿಸಿದರು.

ಬಿರುವ ಜವನೆರ್ ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ಸನಿಲ್, ನಿತಿನ್ ಕುಮಾರ್ ಹುಣಸೆಕಟ್ಟೆ, ಶಂಕರ್ ಉಪ್ಪುರ್, ಶ್ರೀಧರ ಅಮೀನ್ ಚಂದ್ರಕಾಂತ್ ಕೋಟ್ಯಾನ್, ದಾಮೋದರ ಕುಂದರ್, ಮಾಧುರಿ ಸುವರ್ಣ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

Hot Topics