ಕಾರು ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಯ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದದಲ್ಲಿ ನಡೆದ ಅಪಘಾತದಲ್ಲಿ 32 ವರ್ಷದ ವೈಭವಿ ಮೃತರಾಗಿದ್ದಾರೆ.
ಹಿಮಾಚಲ ಪ್ರದೇಶ : ಕಾರು ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಯ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದದಲ್ಲಿ ನಡೆದ ಅಪಘಾತದಲ್ಲಿ 32 ವರ್ಷದ ವೈಭವಿ ಮೃತರಾಗಿದ್ದಾರೆ.
ಮಂಗಳವಾರ ಗೆಳೆಯನ ಜೊತೆಯಲ್ಲಿ ವೈಭವಿ ಉಪಾಧ್ಯಯ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೆ ಒಳಗಾಗಿತ್ತು.
ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತ ವಿಷಯ ತಿಳಿಯುತ್ತಿದ್ದಂತೆ ನಟಿ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.
ಖ್ಯಾತ ಸಾರಾಭಾಯಿ ವರ್ಸಸ್ ಸಾರಾಭಾಯಿ ಧಾರಾವಾಹಿಯಲ್ಲಿ ವೈಭವಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಜಾಸ್ಮೀನ್ ಪಾತ್ರ ನಟಿಗೆ ಹೆಸರು ತಂದು ಕೊಟ್ಟಿತ್ತು.
ದೀಪಿಕಾ ಪಡುಕೋಣೆಯ ಛಾಪಕ್ ಸಿನಿಮಾದಲ್ಲಿಯೂ ವೈಭವಿ ನಟಿಸಿದ್ದರು. ಈ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದರು.ನಟಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.