Connect with us

    FILM

    ಮತ್ತೆ ಗರ್ಭಿಣಿಯಾದ ಅನುಷ್ಕಾ ಶರ್ಮ… ಬೇಬಿ ಬಂಪ್ ವಿಡೀಯೋ ವೈರಲ್

    Published

    on

    ಬಾಲಿವುಡ್ ಹೀರೋಯಿನ್ ಅನುಷ್ಕಾ ಶರ್ಮಾ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ.

    ಮುಂಬೈ : ಬೇಬಿ ಬಂಪ್ ಅನ್ನು ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಅನುಷ್ಕಾ ಮತ್ತು ವಿರಾಟ್ ಮತ್ತೆ ಪೋಷಕರಾಗಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನವೆಂಬರ್ 12 ರಂದು ನಡೆಯಲಿರುವ ಭಾರತ ಮತ್ತು ನೆದರ್ಲ್ಯಾಂಡ್ಸ್ ವಿಶ್ವಕಪ್ ಪಂದ್ಯಕ್ಕಾಗಿ ಇಬ್ಬರೂ ಬೆಂಗಳೂರಿಗೆ ಬಂದಿಳಿದಿದ್ದಾರೆ.


    ಈ ವಿಡೀಯೋದಲ್ಲಿ ಬೇಬಿ ಬಂಪ್ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.ನೆಟ್ಟಿಗರೊಬ್ಬರು.. ಎರಡನೇ ವಿರಾಟ್ ಬರಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ, ಮತ್ತೊಬ್ಬರು ಇದು ತುಂಬಾ ಒಳ್ಳೆಯ ಸುದ್ದಿ ಎಂದಿದ್ದಾರೆ.. ದೇವರು ಅವರಿಬ್ಬರನ್ನು ಆಶೀರ್ವದಿಸಲಿ. ಅನೇಕ ಅಭಿಮಾನಿಗಳು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.


    ಅನುಷ್ಕಾ ಶರ್ಮಾ ಹಾಗೂ ವಿರಾಟ್​ಗೆ ವಮಿಕಾ ಹೆಸರಿನ ಮಗಳಿದ್ದಾಳೆ. 2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರವೇ ಕೊನೆ. ಇದಾದ ನಂತರ ಯಾವುದೇ ಸಿನೆಮಾದಲ್ಲಿ ಕಾಣಿಸಿಕೊಂಡಿಲ್ಲ.

    FILM

    ನಟಿ ಓವಿಯಾ ಖಾಸಗಿ ವಿಡಿಯೋ ಲೀಕ್​? ನಿಜಾನಾ ಎಂದು ಕೇಳಿದ್ದಕ್ಕೆ ಎಂಜಾಯ್​ ಮಾಡಿ ಎಂದ ಕಿರಾತಕ ಬೆಡಗಿ

    Published

    on

    ಚೆನ್ನೈ : ಯಶ್ ಜೊತೆ ಕಿರಾತಕ ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸಿದ್ದ ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಿನ್ನೆಯಿಂದಲೇ ಟ್ರೆಂಡಿಂಗ್ ನಲ್ಲಿರುವ #OviyaLeaked ಭಾರೀ ಸದ್ದು ಮಾಡುತ್ತಿದೆ. ತಮಿಳು, ಮಲೆಯಾಳಂ ಕನ್ನಡ ಸಿನೆಮಾಗಳಲ್ಲಿ ನಟಿಸಿರುವ ಓವಿಯಾ ಕನ್ನಡದಲ್ಲಿ ಎರಡು ಸಿನೆಮಾಗಳಲ್ಲಿ ನಟಿಸಿದ್ದಾರೆ.

    ಸಿನೆಮಾಗಳಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ತಮಿಳಿನ ಬಿಗ್ ಬಾಸ್ ಸೀಸನ್ 1 ರಲ್ಲಿ ಸ್ಪರ್ದಿಯಾಗಿದ್ದ ಓವಿಯಾ ತಮ್ಮ ಕಾಂಟ್ರವರ್ಸಿಗಳಿಂದ ಪೇಮಸ್ ಆಗಿದ್ದಾರೆ. ಬಿಗ್ ಬಾಸ್ ಬಿಳಿಕ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಯೋ ಕುರಿತಂತೆ ಓವಿಯಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಪುಲ್ ವಿಡಿಯೋ ಬೇಕು ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಓವಿಯಾ, ‘ಮುಂದಿನ ಸಲ ಬ್ರೋ’ ಎಂದು ಲಘು ಕಾಮೆಂಟ್ ಹಾಕಿದ್ದಾರೆ.

    ಇದು ಫೇಕ್ ವಿಡಿಯೋ ಎಂದು ಕೆಲವು ಕಮೆಂಟ್ ಮಾಡಿದ್ದಾರೆ. ಹರಿದಾಡುತ್ತಿರುವ ವಿಡಿಯೋ ನಟಿಯದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳಿಕೊಳ್ಳುತ್ತಿದ್ದು, ವಿಡಿಯೋದಲ್ಲಿರುವ ಯುವತಿ ತೋಳಿನ ಮೇಲೆ ಅದೇ ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ, ಇದೊಂದು ಡೀಪ್ ಫೇಕ್ ವಿಡಿಯೋ ಎಂದು ವಾದಿಸುವವರೂ ಇದ್ದಾರೆ. ’90 ಎಂಎಲ್’ ಚಿತ್ರದ ಓವಿಯಾ ಅವರ ಇಂಟಿಮೇಟ್ ದೃಶ್ಯಗಳು ಕೂಡ ಸದ್ದು ಮಾಡುತ್ತಿವೆ.

    Continue Reading

    BIG BOSS

    ಬಿಗ್​ಬಾಸ್ ಮನೆಯಲ್ಲಿ ಜಗದೀಶ್- ಹಂಸಾ ಡುಯೇಟ್ ! ಶುರುವಾಯ್ತು ಪ್ರೇಮ್ ಕಹಾನಿ

    Published

    on

    ಬಿಗ್​ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದು ಯಶಸ್ವಿಯಾಗಿ ಸಾಗುತ್ತಿದೆ. ಬಿಗ್ ಮನೆಯೊಳಗೆ ಸ್ಪರ್ಧಿಗಳು ಕೂಡ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಶನಿವಾರ-ಭಾನುವಾರ ಬಂದರೆ ಸಾಕು ಪ್ರೇಕ್ಷಕರೆಲ್ಲ ಕಿಚ್ಚನ ಪಂಚಾಯತಿಗಾಗಿ ಕಾಯುತ್ತಿರುತ್ತಾರೆ. ಶನಿವಾರದ ಪಂಚಾಯತಿಯಲ್ಲಿ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗಿತ್ತು. ಇದರ ಜೊತೆಗೆ ಏನೇನು ಆಗಿದೆ ಎಂದು ನಿಮಗೆಲ್ಲ ಗೊತ್ತಿದೆ. ಸದ್ಯ ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನೆಲ್ಲ ನಡೆಯಲಿದೆ?

    ಇಂದಿನ ಕಿಚ್ಚನ ಪಂಚಾಯತಿ ಫುಲ್ ಜೋಶ್​ನಲ್ಲಿ ಇರಬಹುದೆಂದು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹಂಸಾ ಅವರ ಕ್ಯಾಪ್ಟನ್ಸಿಯಲ್ಲಿ ಏನೇನು ಫೆಸಲಿಟಿ ಇತ್ತು ಎಂದು ಲಾಯರ್ ಜಗದೀಶ್​ಗೆ ಸುದೀಪ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಲಾಯರ್ ಜಗದೀಶ್ ಫುಲ್ ಕಾಮಿಡಿಯಾಗಿ ಉತ್ತರಿಸಿದ್ದು ಬೇಜಾರ ಎಂದರೆ ನನ್ನ ಜೊತೆ ಡುಯೇಟ್ ಮಾಡಿದ್ದು ಅಂತ ಹೇಳಿ ಎಲ್ಲ ಸ್ಪರ್ಧಿಗಳನ್ನ ನಕ್ಕು ನಲಿಸಿದ್ದಾರೆ.

    ಇನ್ನು ಹಂಸಾನೂ ಮಾತನಾಡಿ ಲಾಯರ್ ಬಳಿ ಮಾತಿನಿಂದ ಗೆಲ್ಲಲು ಆಗಲ್ಲ. ಮನಸಾದ್ರೂ ಗೆದ್ದರೇ ನನ್ನ ಕೆಲಸ ಮಾಡಿಕೊಳ್ಳಬಹುದು ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಕಿಚ್ಚ ಏನ್​ ಗೆದ್ದರೇ ಎಂದು ಪ್ರಶ್ನಿಸುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಇನ್ನು ಧನ್​ರಾಜ್ ಕೂಡ ಪಂಚಾಯತಿಯಲ್ಲಿ ಲಾಯರ್​ ಬಗ್ಗೆ ಮಾತನಾಡಿ, ರಾತ್ರಿ ಮಲಗಿಕೊಳ್ಳಬೇಕಾದರೆ, ನನಗೆ ಫೀಲ್ ಆಗ್ತಿದೆ. ನನ್ನ ಹೆಂಡತಿ ಜೊತೆ ಒಂದು ಸಾರಿನೂ ಈ ತರ ಡುಯೇಟ್ ಮಾಡಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ. ಇನ್ನು ಜಗದೀಶ್ ಹಾಗೂ ಹಂಸಾ ಸಾಂಗ್​ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೆಲ್ಲ ನೋಡಲು ಇನ್ನು ಕೆಲ ಗಂಟೆ ಕಾಯಬೇಕಾಗಿದೆ.

    Continue Reading

    BIG BOSS

    ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್​ಬಾಸ್ ಮನೆಯಲ್ಲಿ ಇದೇ ಮೊದಲು

    Published

    on

    ಬಿಗ್​ಬಾಸ್​ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ವಿಷಯಗಳು ಪಕ್ಕಾ ಇರುತ್ತವೆ. ಜನರು ಗಿಫ್ಟ್​ ಕಳಿಸುವುದು, ಕಿಚ್ಚ ಅಡುಗೆ ಕಳಿಸುವುದು, ಪ್ರತಿ ವಾರ ಕ್ಯಾಪ್ಟನ್ ಆಗುವುದು, ಭಾನುವಾರದ ಎಲಿಮಿನೇಷನ್ ಇದೆಲ್ಲವೂ ಒಂದು ರೀತಿ ಫಿಕ್ಸ್​ ಕಾರ್ಯಕ್ರಮಗಳು. ಇದೇ ರೀತಿ ಕಿಚ್ಚನ ಚಪ್ಪಾಳೆ ಸಹ ಕಳೆದ ಕೆಲ ಸೀಸನ್​ನಿಂದ ಫಿಕ್ಸ್ ಕಾರ್ಯಕ್ರಮವಾಗಿದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಜನ ಕಾಯುವಂತೆ ಈ ವಾರ ಕಿಚ್ಚ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಸಹ ಜನ ಕಾಯುತ್ತಾರೆ. ಆದರೆ ಕಳೆದ ವಾರ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಕಳೆದ ವಾರ ಮಾಡದಿದ್ದನ್ನು ಕಿಚ್ಚ ಈ ವಾರ ಮಾಡಿದ್ದಾರೆ.

    ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಮೊದಲ ವಾರ ಮನೆಯಲ್ಲಿ ಸಾಕಷ್ಟು ಜಗಳ, ತರ್ಲೆ ತಾಪತ್ರಯಗಳು ನಡೆದಿದ್ದವು. ಲಾಯರ್ ಜಗದೀಶ್ ಅಂತೂ ಬಿಗ್​ಬಾಸ್​ ಮನೆಯಲ್ಲಿದ್ದುಕೊಂಡೆ ಬಿಗ್​ಬಾಸ್​ಗೆ ಧಮ್ಕಿ ಹಾಕಿದ್ದರು. ಹಲವರು ನಿಯಮ ಮೀರಿದ್ದರು. ಮನೆಯಲ್ಲಿ ಮೊದಲ ದಿನದಿಂದಲೂ ಬರೀ ಜಗಳಗಳೇ ನಡೆದಿದ್ದವು. ಸುದೀಪ್ ಮೊದಲ ವಾರದ ಪಂಚಾಯ್ತಿಯ ಎರಡೂ ದಿನದಲ್ಲಿ ಸುದೀಪ್​ ಮನೆಯವರಿಗೆ ವ್ಯಕ್ತಿತ್ವದ ಪಾಠ ಮಾಡಿ ಸುಸ್ತಾದರು. ಮೊದಲ ವಾರದ ಗಲಾಟೆಯ ನಡುವೆ ಆ ವಾರ ಚೆನ್ನಾಗಿ ಆಡಿದ್ದ ಸ್ಪರ್ಧಿಗೆ ಚಪ್ಪಾಳೆ ಕೊಡುವುದನ್ನೇ ಸುದೀಪ್ ಮರೆತಿದ್ದರು.

    ಎರಡನೇ ವಾರಾಂತ್ಯದ ವಾರದ ಪಂಚಾಯ್ತಿಯ ಆರಂಭದಲ್ಲಿಯೇ ಒಂದು ಚಿತ್ರವೊಂದನ್ನು ಹಂಸ ಅವರಿಗೆ ಹೇಳಿ ಸ್ಟೋರ್ ರೂಂನಿಂದ ತರಲು ಹೇಳಿದರು ಸುದೀಪ್. ಆ ಚಿತ್ರ ಒಂದು ಕಾರ್ಟೂನ್ ಆಗಿತ್ತು, ವ್ಯಕ್ತಿಯೊಬ್ಬನ ತಲೆ ಬಳಿಯ ಏನೇನೋ ಚಿತ್ರಗಳಿದ್ದವು. ತಲೆ ಚಿಟ್ಟು ಹಿಡಿದ ವ್ಯಕ್ತಿಯೊಬ್ಬ ಕಾರ್ಟೂನ್ ಅದು. ಆ ಚಿತ್ರದ ಬಗ್ಗೆ ವಿವರಣೆ ನೀಡಿದ ಸುದೀಪ್, ಅದು ನನ್ನದೇ ಚಿತ್ರ. ಮೊದಲ ವಾರ ಎಪಿಸೋಡ್ ನೋಡಿ, ನಿಮ್ಮ ಬಳಿ ಎರಡು ವಾರ ಮಾತನಾಡಿದ ಬಳಿಕ ಆ ಸ್ಥಿತಿ ಆಗಿತ್ತು ಎಂದರು. ಅಲ್ಲದೆ, ಮೊದಲ ವಾರ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಆದರೆ ಈಗ ನೀಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಕಿಚ್ಚನಿಗೆ ಕಿಚ್ಚನ ಚಪ್ಪಾಳೆ ನೀಡುತ್ತಿದ್ದೇನೆ ಎಂದರು.

    ನಿಮ್ಮ ಮೊದಲ ವಾರದ ಎಪಿಸೋಡ್ ಎಲ್ಲ ನೋಡಿ, ನಿಮ್ಮ ಬಳಿ ಮಾತನಾಡಿ, ನಿಮಗೆ ಅರ್ಥ ಮಾಡಿಸುವುದು, ತಪ್ಪು ತಿದ್ದುವುದು, ಮಾರ್ಗದರ್ಶನ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಹಾಗಾಗಿ ಆ ಚಪ್ಪಾಳೆಗೆ ನಾನೇ ಅರ್ಹ ಎನಿಸಿತು, ಅದಕ್ಕೆ ಇದೇ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಯನ್ನು ನನಗೆ ನಾನೇ ಕೊಟ್ಟುಕೊಳ್ಳುತ್ತಿದ್ದೇನೆ ಎಂದರು. ಆ ಕಾರ್ಟೂನ್ ಚಿತ್ರವನ್ನು ಮನೆಯಲ್ಲಿ ನೇತು ಹಾಕಿಸಿದರು.

    Continue Reading

    LATEST NEWS

    Trending