Connect with us

    bengaluru

    ಬೆಂಗಳೂರಿನ ಗೋವರ್ಧನಗಿರಿ ಕ್ಷೇತ್ರದಲ್ಲಿ ಪುತ್ತಿಗೆ ಶ್ರೀಗಳ 50 ನೇ ಚಾತುರ್ಮಾಸ್ಯ ಸಂಭ್ರಮ

    Published

    on

    ಬೆಂಗಳೂರು: ಬೆಂಗಳೂರಿನ ಗೋವರ್ಧನಗಿರಿ ಕ್ಷೇತ್ರದಲ್ಲಿ 78 ದಿನಗಳ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರ 50ನೇ ಚಾತುರ್ಮಾಸ್ಯ ವೈಭವದಿಂದ ಸಮಾಪನಗೊಂಡಿತು.

    ಪೂಜ್ಯ ಶ್ರೀಗಳ ಚಾತುರ್ಮಾಸ್ಯ ಕಾರ್ಯದ ನಡುವೆಯೂ ಕೋಟಿ ಕೋಟಿ ಗೀತಾ ಲೇಖನ ಯಜ್ಞದ ಕುರಿತಾಗಿ ವಿಶೇಷ ಕಾರ್ಯಕ್ರಮಗಳು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಈ ಚಾತುರ್ಮಾಸ್ಯದ ಸಮಾರೋಪ, ಸನ್ಯಾಸ ಸ್ವೀಕಾರ ಮಾಡಿದ 50 ವರ್ಷದ ಸುವರ್ಣ ಮಹೋತ್ಸವ ಸಂಭ್ರಮದಿಂದ ಜರುಗಿತು.

    ವೇದಮಂತ್ರಗಳ ಘೋಷಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಭಾವೀ ಪರ್ಯಾಯ ಮಠದ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಆಶೀರ್ವಚನವನ್ನು ನೀಡಿದರು. ವಿದ್ವಾನ್ ಮಾಲಗಿ ರಾಮಾಚಾರ್ಯರು, ವಿದ್ವಾನ್‌ ಕೇಶವ ಬಾಯಿರಿ ಅವರು ಶ್ರೀಗಳನ್ನು ಮಾಲಾರ್ಪಣೆ ಮಾಡಿದರು.

    ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸರಕಾರದ ಪರವಾಗಿ ಶುಭ ಹಾರೈಸಿದರು.

    ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುಗುಣೇಂದ್ರ ಶ್ರೀಗಳು ಅವರು ಪ್ರಸಿದ್ಧಿಯನ್ನು ಮಾಡಿದ್ದಾರೆ. ಧರ್ಮದ ಕೈಂಕರ್ಯವನ್ನು ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅವರು ಕಾರ್ಯಕ್ರಮ ಮಾಡಿದ್ದಾರೆ ಎಂದು ಅಭಿನಂದಿಸಿದರು.

    ನಿಮಿಷದ ಬಳಿಕ  ಖ್ಯಾತ ಚಲನಚಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಮಾತನಾಡಿ, ಇದೊಂದು ಎಲ್ಲರೂ ಸಂಭ್ರಮ ಪಡಬೇಕಾದ ವಿಚಾರವಾಗಿದೆ. ನಮ್ಮ ತಾಯಿ ಉಡುಪಿಯವಾಗಿದ್ದು, ಕೃಷ್ಣ ಮಠ ತುಂಬಾ ಹತ್ತಿರ. ಕೃಷ್ಣನ ಪರವಾಗಿ ಒಂದು ಚಿತ್ರ ಮಾಡಬೇಕೆಂಬ ಆಸೆಯನ್ನು ಶ್ರೀಗಳಲ್ಲಿ ಅರಿಕೆ ಮಾಡಿದ್ದೇನೆ ಎಂದರು.

    ಇದೇ ಸಂದರ್ಭ ಶ್ರೀಗಳು ಭಕ್ತರಿಂದ ವಿಶೇಷ ಪೂಜೆಯನ್ನು ನೆರವೇರಿಸಿಕೊಂಡರು.

    ಎಲ್ಲಾ ಭಕ್ತರೂ ಸೇರಿ ನನ್ನನ್ನು ಹರಸಿದ್ದೀರಿ. ಶ್ರೀ ಕೃಷ್ಣನ ಪೂಜಾ ಕಾರ್ಯ ಮಾಡಲು ಸಿಕ್ಕಿರುವುದು ಪುಣ್ಯಫಲ. ಭಕ್ತರು ನನಗೆ ಅರ್ಪಣೆ ಮಾಡಿದ ಎಲ್ಲವನ್ನೂ ನಾವು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಿದ್ದೇವೆ.

    ನೀವು ಕೊಟ್ಟ ಸುವರ್ಣ ಅಭಿಷೇಕ ಸಂಕಲ್ಪ ಮಾಡಿದ ಸುವರ್ಣ ರಥಕ್ಕೆ ಅರ್ಪಣೆ ಮಾಡುತ್ತೇವೆ ಎಂದರು. ಎಲ್ಲಾ ಸಮಿತಿಯ ಭಕ್ತರಿಗೂ ಕೃಷ್ಣ ಭಗವದ್ಗನುಗ್ರಹ ಮಾಡಲಿ ಎಂದು ಹರಸಿದರು.

    ಬಳಿಕ ಶ್ರೀಗಳು ಎಲ್ಲರಿಗೂ ಫಲಮಂತ್ರಾಕ್ಷತೆ ನೀಡಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಸ್ ಅಹಲ್ಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಭಕ್ತರಾದ ಮಂಜುನಾಥ ಹೆಗಡೆ, ಹಯಗ್ರೀವ ಆಚಾರ್ಯರು, ಸಮಿತಿ ಸದಸ್ಯ ಯು ಬಿ ವೆಂಕಟೇಶ್‌, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ, ಸಿಒಒ ಕದ್ರಿ ನವನೀತ್‌ ಶೆಟ್ಟಿ ಸಹಿತ ಗಣ್ಯಾತಿಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

    ಜನವರಿ 18ರಿಂದ ಶ್ರೀಗಳ ಪರ್ಯಾಯ ಮಹೋತ್ಸವ ಆರಂಭವಾಗಲಿದೆ.

    bangalore

    ಅಬ್ಬಬ್ಬಾ! ಖತರ್ನಾಕ್ ಗರ್ಲ್ ಫ್ರೆಂಡ್; ಪ್ರಿಯಕರನನ್ನೇ ರಾಬರಿ ಮಾಡಿಸಿದ ಯುವತಿ, ಯಾಕೆ ಗೊತ್ತಾ!?

    Published

    on

    ಮಂಗಳೂರು/ ಬೆಂಗಳೂರು: ಇತ್ತೀಚೆಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೆಲವೊಂದು ಪ್ರಕರಣಗಳು ವಿಚಿತ್ರವಾಗಿರುತ್ತವೆ. ಇಲ್ಲೊಬ್ಬಾಕೆ ಪ್ರಿಯತಮನ ಮೊಬೈಲ್‌ನಲ್ಲಿದ್ದ ತನ್ನ ಫೋಟೋ ಹಾಗೂ ವೀಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.

    ಬೆಳ್ಳಂದೂರು ಪೊಲೀಸರು ಟೆಕ್ಕಿ ಶ್ರುತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

    ಆ್ಯಕ್ಸಿಡೆಂಟ್ – ಡ್ರಾಮಾ :
    ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶ್ರುತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದ ಅಪರಿಚಿತರು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ಅಲ್ಲದೇ, ವಂಶಿ ಜತೆಯಲ್ಲಿಯೇ ಇದ್ದ ಶ್ರುತಿಯ ಮೊಬೈಲ್‌ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್‌ ವಂಶಿ ಮುಂದೆ ಶ್ರುತಿ ನಾಟಕವಾಡಿದ್ದಾಳೆ.
    ಆದರೆ, ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.
    ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

    ಇದನ್ನು ಓದಿ:ಪುತ್ತೂರು ಕಾಂಗ್ರೆಸ್‌ ಮುಖಂಡನ ಅಶ್ಲೀ*ಲ ವೀಡಿಯೋ ವೈರಲ್‌..!

    ಬೇಡವಾಗಿದ್ದ ಬಾಯ್ ಫ್ರೆಂಡ್ :

    ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶ್ರುತಿ ಯತ್ನಿಸಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್‌ನಲ್ಲಿ ಶ್ರುತಿಯ ಫೋಟೋಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂಬ ಭಯದಿಂದ ಶ್ರುತಿ ಮೊಬೈಲ್ ರಾಬರಿ ಮಾಡುವ ಯೋಜನೆ ರೂಪಿಸಿದ್ದಾರೆ. ಸದ್ಯ ಆರೋಪಿ ಟೆಕ್ಕಿ ಶ್ರುತಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದು, ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    Continue Reading

    bengaluru

    ಜೈಲಿನಲ್ಲೇ ಮೊಬೈಲ್‌ ಬಳಕೆ !

    Published

    on

    ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್ಗೆ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


    ಕೋಲಾರದ ಕೆಜಿಎಫ್ ನ ವಿಜಯ್ನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು.
    ಜೈಲಿನೊಳಗೆ ವಿಜಯ್ ಸಿಬ್ಬಂದಿಯೊಬ್ಬರ ನೆರವು ಪಡೆದು ಸ್ಮಾರ್ಟ್ ಫೋನ್ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಅವುಗಳನ್ನು ಜೈಲಿನಲ್ಲಿರುವ ಇತರ ಖೈದಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಮೊಬೈಲ್ ಪೂರೈಸುವುದಕ್ಕೆ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
    ಕಸ್ಟಡಿಯಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಜೈಲು ಅಧಿಕಾರಿಗಳ ಸಹಾಯದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರು ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
    ಸೆ. 15 ರಂದು ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ಇನ್ನಷ್ಟು ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುವುದು ಖಚಿತವಾಗಿದೆ ಎಂದು ವರದಿಯಾಗಿದೆ

    Continue Reading

    bengaluru

    ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕ*ರಣಕ್ಕೆ ಟ್ವಿಸ್ಟ್..! ಎಸ್‌ಐಟಿ ರಚನೆ!!

    Published

    on

    ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.  ಪ್ರಜ್ವಲ್ ಸಾವಿರಾರು ಹೆಣ್ಣುಮಕ್ಕಳ ಮೇಲಿನ ಲೈಂ*ಗಿಕ ದೌರ್ಜ*ನ್ಯ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.

    prajwal

    47 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಈ ಹಿಂದೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ನೀಡಿದ ದೂರಿನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ತಂದೆ ಎಚ್‌ಡಿ ರೇವಣ್ಣ ಅವರನ್ನು ಎ1 ಆರೋಪಿಯಾಗಿ ನಮೂದಿಸಿದ್ದು, ಎ2 ಪ್ರಜ್ವಲ್ ರೇವಣ್ಣ ಆಗಿದ್ದಾರೆ. ದೂರಿನಲ್ಲಿ ಏನಿದೆ ಅಂದರೆ… ನಮ್ಮ ಪತಿಗೆ ಎಚ್‌ಡಿ ರೇವಣ್ಣ ತಮ್ಮ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ 2015ರಲ್ಲಿ ಹಾಸ್ಟೆಲ್‌ ಒಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ರೇವಣ್ಣ ಹೇಳಿದ್ದರು. ಅಡುಗೆ ಕೆಲಸಕ್ಕೆ ಸೇರಿಕೊಂಡ ಬಳಿಕ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದ ವೇಳೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಡುಗೆ ಮನೆಗೆ ಬಂದು ಪ್ರಜ್ವಲ್ ಸಹ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಪ್ರಜ್ವಲ್ ರೇವಣ್ಣ ಅಸಭ್ಯವಾಗಿ ವರ್ತಿಸಿದ್ದಾರೆ. ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಪದೇ ಪದೇ ಕಾಲ್ ಮಾಡಿದ್ದಕ್ಕೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದರು. ಲೈಂಗಿಕ ಕಿರುಕುಳ ಹೆಚ್ಚಾದಾಗ ಕೆಲಸಬಿಟ್ಟು ಹೋಗಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.  ಸದ್ಯ ಪೆನ್‌ಡ್ರೈವ್ ವಿವಾದದಲ್ಲಿರುವ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು  ಜರ್ಮನಿ ಸೇರಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಹಾಸನದಲ್ಲಿ ಏಪ್ರಿಲ್ 26 ರಂದು ನಡೆದಿದೆ. ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ.

    ಮುಂದೆ ಓದಿ..; ಲೈಂ*ಗಿಕ ದೌರ್ಜ*ನ್ಯ ಆರೋಪ : ವಿಕಿಪೀಡಿಯಾದಲ್ಲಿ ಸೇವ್ ಆಯ್ತು ಪ್ರಜ್ವಲ್ ರೇವಣ್ಣ ಕೇಸ್!

    ಎಸ್‌ಐಟಿಗೆ ನೀಡುವುದಾಗಿ ಗೃಹಸಚಿವರಿಂದ ಸೂಚನೆ:

    ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿರುವಾಗ ಈ ವಿಡಿಯೊ ದೃಶ್ಯಾವಳಿಗಳ ತುಣುಕುಗಳ ಪೆನ್‌ಡ್ರೈವ್‌ಗಳು ಹಾಸನದಾದ್ಯಂತ ವೈರಲ್ ಆಗಿತ್ತು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ನೀಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

    Continue Reading

    LATEST NEWS

    Trending