Connect with us

  LATEST NEWS

  ಬಾಡಿಗೆಗೆ ಮನೆ ಕೊಟ್ಟಿದ್ದ ಆಂಟಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಬಿಹಾರ ಯುವಕರು..!

  Published

  on

  ಅನೇಕಲ್: ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದ ಬಳಿಕ ದೇಶದಲ್ಲಿ ಮತ್ತೆ ಮತ್ತೆ ದೇಹ ತುಂಡರಿಸಿ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಿವಿಗೆ ಬೀಳುತ್ತಲೇ ಇವೆ.

  ನಾಲ್ಕು ದಿನದ ಹಿಂದಷ್ಟೇ ಮಹಾರಾಷ್ಟ್ರದ ಥಾಣೆಯಲ್ಲಿ ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡಿ ಕುಕ್ಕರ್​ನಲ್ಲಿ ಬೇಯಿಸಿ ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಇದೀಗ ನಮ್ಮ ರಾಜ್ಯದಲ್ಲೇ ಇಂತಹ ಬೀಭತ್ಸ ಘಟನೆ ನಡೆದಿದೆ.

  ಮನೆ ಬಾಡಿಗೆಗೆಂದು ಬಂದಿದ್ದ ಯುವಕರು ಒಂಟಿ ಮಹಿಳೆಯೆಂದು ತಿಳಿಯುತ್ತಿದ್ದಂತೆ ಆಕೆಯ ಮನೆಯನ್ನು ತಮ್ಮ ಹೆಸರಿಗೆ ಬರೆಯುವಂತೆ ಹಿಂಸಿಸಿ ಕೊನೆಗೆ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ್ದರು. ಸದ್ಯ ಸಿಕ್ಕ ತುಂಡು ದೇಹದ ಜಾಲ ಹಿಡಿದು ಹೊರಟಿದ್ದ ಪೊಲೀಸರ ಕೈಗೆ ಓರ್ವ ಸಿಕ್ಕಿ ಬಿದ್ದಿದ್ದು ಘಟನೆಯ ರಹಸ್ಯ ಬಯಲಾಗಿದೆ.

  ಮಹಿಳೆ ಕೊಂದು ತುಂಡು ತುಂಡಾಗಿ ಕತ್ತರಿಸಿದ ಯುವಕರು
  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ವಾಸವಿದ್ದ ಐವತ್ನಾಲ್ಕು ವರ್ಷದ ಗೀತಾಮ್ಮ ಮೇ ತಿಂಗಳ ಅಂತ್ಯದಲ್ಲಿ ನಾಪತ್ತೆಯಾಗಿದ್ದರು.

  ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ‌ ಮದುವೆ ಮಾಡಿಕೊಟ್ಟು, ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ಗೀತಾಮ್ಮ, ಒಂದು ಮನೆಯಲ್ಲಿ ವಾಸವಿದ್ರೆ ಉಳಿದ ಎರಡು ಮನೆಗಳನ್ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದರು.

  ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಾಮ್ಮರ ತುಂಡರಿಸಿದ ದೇಹ ಜೂನ್ 1ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ವಾಸನೆ ಬರಿತ್ತಿದ್ದ ಸ್ಥಳಕ್ಕೆ ಬಂದು ನೋಡಿದಾಗ ಕಾಲು, ಕೈ ಕತ್ತರಿಸಿದ ರುಂಡ ವಿಲ್ಲದ ದೇಹ ಪತ್ತೆಯಾಗಿತ್ತು.

  ಬಳಿಕವೇ ನಾಪತ್ತೆಯಾಗಿದ್ದಾರೆ ಎಂದು ತಿಳಿದಿದ್ದ ಗೀತಾ ಬರ್ಬರವಾಗಿ ಕೊಲೆಯಾಗಿದ್ದಾರೆಂಬ ವಿಚಾರ ಬೆಳಕಿಗೆ ಬಂದಿತ್ತು.
  ಇನ್ನು ದೇಹದ ತುಂಡುಗಳು ಪತ್ತೆಯಾಗುತ್ತಿದ್ದಂತೆ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲು ಸಜ್ಜಾದ ಬನ್ನೇರುಘಟ್ಟ ಪೊಲೀಸರು ಮಹಿಳೆಯ ರುಂಡಾ ಪತ್ತೆಯಾದ ಕೇವಲ ಒಂದು ವಾರದಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಜನರ ಪೈಕಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

  ಬಿಹಾರದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ನಾಲ್ಕು ಜನ ಯುವಕರು ಕೊಲೆಯಾದ‌ ಗೀತಾ ಮನೆಯಲ್ಲಿ ಬಾಡಿಗೆಗೆ ಇದ್ದರು. ಗೀತಾ ಒಂಟಿಯಾಗಿರುವುದನ್ನೇ ಬಂಡವಾಳ‌ ಮಾಡಿಕೊಂಡು ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಾಗದ ಪತ್ರಗಳ‌ ಮೇಲೆ ಸಹಿ ಹಾಕುಬಂತೆ ಬಲವಂತ ಮಾಡಿ, ನಂತರ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ.
  ಕೊಲೆ ಮಾಡಿದ ಆರೋಪಿಗಳು, ಕೊಲೆ ವಿಚಾರ ಗೊತ್ತಾಗದಿರಲು ದೇಹ ಬಿಸಾಡಲು ಪ್ಲ್ಯಾನ್ ಮಾಡಿದ್ದಾರೆ. ಹಂತ ಹಂತವಾಗಿ ದೇಹ ಕತ್ತರಿಸಿ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್​ನಲ್ಲಿ ಸಾಗಿಸಿದ್ದಾರೆ. ಕೊಲೆಯಾದ‌ ಒಂದು ದಿನದ ನಂತರವೂ ಕೆಲಸಕ್ಕೆ ತೆರಳಿದ್ದ ಕಿರಾತಕರು, ಒಟ್ಟು ಎರಡು ದಿನಗಳ ವರೆಗೂ ದೇಹ ಕಟ್ ಮಾಡಿ‌ ಸಾಗಿಸಿದ್ದಾರೆ.

  ಕಟ್ ಮಾಡಿದ ಶವದ ಮುಂದೆಯೇ ಊಟ ಮಾಡಿದ್ದು ಕೃತ್ಯ ನಡೆದ ಮೂರು ದಿನಗಳ ಬಳಿಕ ಆರೋಪಿಗಳಿಗೆ ಭಯ ಕಾಡಲು ಶುರುವಾಗಿದೆ. ಮನೆ ಸುತ್ತಾ ಸತ್ತ ದೇಹದ ವಾಸನೆ ಪಸರಿಸುತ್ತಿದ್ದಂತೆ ನಡುಕ ಶುರುವಾಗಿದೆ. ಅದಕ್ಕೆ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ ಎಸ್ಕೇಪ್ ಆಗಿದ್ದಾರೆ.

  ಕಿ.ಮಿ ದೂರದಲ್ಲಿ ಸತ್ತ ಮಹಿಳೆಯ ತಲೆ,‌‌ ಒಂದು ಕೈ ಪತ್ತೆಯಾಗಿದೆ. ಹಂತಕರು ಬನ್ನೇರುಘಟ್ಟ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಬಿಸಾಡಿದ್ದರು. ಇನ್ನು ಕೃತ್ಯದ ಮುಂಚೆ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು ಪೊಲೀಸರು ಪೋಸ್ಟ್ ಮಾರ್ಟಮ್‌ ರಿಪೋರ್ಟ್ ಪರಿಶೀಲನೆ ಮಾಡಲಿದ್ದಾರೆ. ಸದ್ಯಕ್ಕೆ ಆಸ್ತಿ ವಿಚಾರವಾಗಿಯೇ ಕೊಲೆ ನಡೆದಿರುವ ಶಂಕೆ ಇದ್ದು ಮತ್ತಷ್ಟು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

  LATEST NEWS

  ಮಳೆ ಆರ್ಭಟ; ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾ*ಲು

  Published

  on

  ಮಳೆ ಬಂದ್ರೆ ಇಳೆಗೆ ಜೀವ ಕಳೆ. ಅದೇ ಮಳೆ ರೌದ್ರನರ್ತನ ಮೆರೆದ್ರೆ ಸಾ*ವು-ನೋವಿನ ಸೆಲೆ. ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಅಬ್ಬಿರಿಸಿ ಬೊಬ್ಬರಿಯುತ್ತಿರೋ ವರುಣ ಸಾ*ವು ನೋವಿನ ಸಂಕಷ್ಟಗಳ ಸರಮಾಲೆಗೆ ಸಾಕ್ಷಿಯಾಗಿದ್ದಾನೆ.

  ಕೃಷ್ಣಾ ನದಿಗೆ ಭಾಗಿನ ಅರ್ಪಿಸಲು ಹೋದ ಯುವಕ ಸಾ*ವು

  ಕೃಷ್ಣಾ ನದಿಯ ಹಿನ್ನೀರಿನಲ್ಲಿ ಭಾಗಿನ ಅರ್ಪಿಸಲು ಹೋದ ಯುವಕ ನೀರುಪಾ*ಲಾಗಿರೋ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

  ಈಜಲು ಬರದ ಹಿನ್ನಲೆ 28 ವರ್ಷದ ಯುವಕ ರೋಹಣ ಪಾಟೀಲ ಆಯತಪ್ಪಿ ನೀರಿಗೆ ಬಿದ್ದು ಸಾ*ವನ್ನಪ್ಪಿದ್ದಾನೆ. ಸ್ಥಳೀಯರ ಸಹಾಯದಿಂದ ಬೋಟ್ ಮೂಲಕ ರೋಹಣ ಪಾಟೀಲ ಮೃ*ತದೇಹ ಹೊರ ತೆಗೆಯಲಾಗಿದೆ.

  Continue Reading

  LATEST NEWS

  ಕೇಂದ್ರ ಬಜೆಟ್ 2024 : ಗಮನ ಸೆಳೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆ

  Published

  on

  ಮಂಗಳೂರು / ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ.  ಪ್ರತೀ ವರ್ಷದಂತೆ ಈ ವರ್ಷವೂ ಅವರ ಸೀರೆ ಗಮನ ಸೆಳೆದಿದೆ. ಅವರು ಮೆಜೆಂಟಾ ಮತ್ತು ಗೋಲ್ಡ್ ಬಾರ್ಡರ್ ಹೊಂದಿರುವ ಬಿಳಿ ಚೆಕ್ ಸೀರೆಯನ್ನು ಉಟ್ಟಿದ್ದಾರೆ.


  ಸತತ ಏಳನೇ ಬಜೆಟ್ ಮಂಡಿಸುತ್ತಿರುವ ಮೊದಲ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಹೊರಹೊಮ್ಮಿದ್ದಾರೆ. ಇದು ಭಾರತದ ಇತಿಹಾಸದ ಪುಟ ಸೇರಿದೆ.

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೈಮಗ್ಗ ಸೀರೆ ಸಂಗ್ರಹ ಅಧಿಕ. ಹೀಗಾಗಿ ಇದು ಎಲ್ಲರ ಗಮನ ಸೆಳೆಯುತ್ತದೆ. ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲು ಸಂಸತ್ತಿಗೆ ತೆರಳುತ್ತಿದ್ದಾಗ,  ತಮ್ಮ ತಂಡದೊಂದಿಗೆ ಫೋಟೋಗೆ ಫೋಸ್ ನೀಡಿದರು. ಅವರು ಚೌಕಾಕಾರದ ಚೆಕ್ ಮತ್ತು ಚಿನ್ನದ ಕಸೂತಿಯೊಂದಿಗೆ ಅಗಲವಾದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಬೇಸ್ ಕೈಮಗ್ಗ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

  Continue Reading

  DAKSHINA KANNADA

  ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡಿ; ರಾಜ್ಯ ಸರಕಾರಕ್ಕೆ ದ.ಕ. ಹಾಲು ಒಕ್ಕೂಟ ಪ್ರಸ್ತಾವನೆ

  Published

  on

  ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

  ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪ್ರಸಕ್ತ ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ 35 ರೂ. ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಮೊತ್ತ 5 ರೂ. ಸೇರಿ ಒಟ್ಟು 40 ರೂ. ನೀಡಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 3,91,367 ಲೀ. ಹಾಲು ಉತ್ಪಾದನೆಯಾಗುತ್ತಿದ್ದು ಕೊರತೆ ಸರಿದೂಗಿಸಲು ಹೊರ ಜಿಲ್ಲೆಗಳಿಂದ 1 ಲಕ್ಷ ಲೀಟರ್‌ ಹಾಲು ಖರೀದಿಸಲಾಗುತ್ತಿದೆ. ಇತರ ಜಿಲ್ಲೆಗೆ ಹೋಲಿಸಿ ದರೆ ನಮ್ಮಲ್ಲಿ ಉತ್ಪಾದನ ವೆಚ್ಚವೂ ಅಧಿಕ. ಅದಕ್ಕಾಗಿ ಮತ್ತೆ 5 ರೂ. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ ಮಾತ್ರ ಹಾಲು ಉತ್ಪಾದನೆ ಹೆಚ್ಚಳ ನಿರೀಕ್ಷಿಸಬಹುದು ಎಂದರು.

  ನಂದಿನಿ ಪಶು ಆಹಾರ ಚೀಲಕ್ಕೆ 1,350 ರೂ. ದರವಿದ್ದು, ಆಗಸ್ಟ್‌ 1ರಿಂದ ಹೈನುಗಾರರಿಗೆ ಪ್ರತಿ ಚೀಲಕ್ಕೆ 25 ರೂ. ಸಬ್ಸಿಡಿ ನೀಡಲಾಗುವುದು. ಇದರಿಂದ ಒಕ್ಕೂಟಕ್ಕೆ 30 ಲಕ್ಷ ರೂ. ಹೊರೆಯಾಗಲಿದೆ. ಇದಲ್ಲದೆ ಪಶು ಸಾಕಣೆ, ಮೇವು ಮುಂತಾದವುಗಳಿಗೆ ಸಬ್ಸಿಡಿ ಯೋಜನೆ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿ ಸಾಲ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

  ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್‌.ಬಿ.ಜಯರಾಮ ರೈ ಬಳಜ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನಾರಾಯಣ ಪ್ರಕಾಶ್‌, ಪದ್ಮನಾಭ ಶೆಟ್ಟಿ, ಸುಧಾಕರ ರೈ, ಬೋಳ ಸದಾಶಿವ ಶೆಟ್ಟಿ, ನರಸಿಂಹ ಕಾಮತ್‌, ಕಮಲಾಕ್ಷ ಹೆಬ್ಟಾರ್‌, ಸವಿತಾ ಎನ್‌.ಶೆಟ್ಟಿ, ಸ್ಮಿತಾ ಆರ್‌.ಶೆಟ್ಟಿ, ಸುಭದ್ರಾ ರಾವ್‌, ವ್ಯವಸ್ಥಾಪಕ ನಿರ್ದೇಶಕ ವಿವೇಕ್‌, ಮಾರುಕಟ್ಟೆ ಮುಖ್ಯಸ್ಥ ರವಿರಾಜ್‌ ಉಡುಪ ಉಪಸ್ಥಿತರಿದ್ದರು.

  Continue Reading

  LATEST NEWS

  Trending