Connect with us

LATEST NEWS

ಕೆಲಸ ಇಲ್ಲದವನು ಎಂದು ಬೈಯುತ್ತಿದ್ದ ಅಜ್ಜಿಯನ್ನು ಕೊಂದು ಸುಟ್ಟು ಹಾಕಿದ ಕಿರಾತಕ ಮೊಮ್ಮಗ

Published

on

ಮೈಸೂರು: ದುಡಿಯುವ ವಯಸ್ಸಿನಲ್ಲಿ ಪುಂಡ ಪೋಕರಿಯಂತೆ ಅಲೆಯುತ್ತಿದ್ದುದಕ್ಕೆ ಬೈಯುತ್ತಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಕೊಂದು ಸುಟ್ಟು ಹಾಕಿ ಶವವನ್ನು ಮಣ್ಣಿನಡಿ ಹೂತ್ತಿಟ್ಟ ಭಯಾನಕ ಘಟನೆ ನಗರದ ಗಾಯತ್ರಿ ಪುರಂನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ.

ಮೈಸೂರು ನಗರದ ಗಾಯತ್ರಿ ಪುರಂ ನಿವಾಸಿ ಸುಪ್ರೀತ್ 23 ಬಂಧಿತ ಆರೋಪಿ. ಈತ ತನ್ನ ಅಜ್ಜಿ ಸುಲೋಚನಾ 75 ಅವರನ್ನು ಕೊಲೆಗೈದಿದ್ದ.

 

ಮನೆಯಲ್ಲಿ ಸದಾ ತನಗೆ ಕೆಲಸ ಇಲ್ಲದವನು ಎಂದು ಅಜ್ಜಿ ಬೈಯುತ್ತಿದ್ದಳು ಇದರಿಂದ ಬೇಸತ್ತು ಅಜ್ಜಿಯನ್ನು ಹೊಡೆದು ಸಾಯಿಸಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಬಾಕ್ಸ್​ದಲ್ಲಿ ಹಾಕಿಕೊಂಡು ಕೆಆರ್​​​ಎಸ್ ಹಿನ್ನೀರಿಗೆ ತೆಗೆದುಕೊಂಡು ಹೋಗಿದ್ದ ಕೆ.ಆರ್ ಎಸ್ ಹಿನ್ನೀರಿನ ನಿರ್ಜನ ಪ್ರದೇಶದಲ್ಲಿ ಅಜ್ಜಿ ಶವವನ್ನು ಒಂದು ಗುಂಡಿಯಲ್ಲಿ ಹಾಕಿ ಸುಟ್ಟು ಹಾಕಿದ್ದು,

ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಮೊಮ್ಮಗ ಸುಪ್ರಿತ್ ಸ್ಥಳದಿಂದ ಪರಾರಿಯಾಗಿದ್ದನು ಈ ಘಟನೆ ಕುರಿತಾಗಿ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ವೇಳೆ ತಿಳಿದ ಸತ್ಯಾಂಶ ಅರೆಬೆಂದ ಸ್ಥಿತಿಯಲ್ಲಿದ್ದ ಅಜ್ಜಿಯ ಶವ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಪೊಲೀಸರು ಗಾಯತ್ರಿಪುರಂ ಮನೆಗೆ ಬಂದು ತನಿಖೆ ಆರಂಭಿಸಿದಾಗ ಏನು ಗೊತ್ತಿಲ್ಲದಂತೆ ಇದ್ದ ಮೊಮ್ಮಗ ಸುಪ್ರಿತ್​ನನ್ನು ವಶಕ್ಕೆ ಪಡೆದು ವಿಚಾರಿಸಿದ್ದರುಈ ವೇಳೆ ಮೊಮ್ಮಗ ಅಜ್ಜಿಯನ್ನು ಕೊಂದಿದ್ದು ತಾನೇ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ ಅಜ್ಜಿಯ ಅರೆಬೆಂದ ಶವ ಸಿಕ್ಕ ಅರು ದಿನದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು.

Click to comment

Leave a Reply

Your email address will not be published. Required fields are marked *

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

bengaluru

ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!

Published

on

ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.

ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending