ಕಡಬ: ಅನ್ಯಮತೀಯ ಯುವಕನ ಕೊಠಡಿಯಲ್ಲಿದ್ದ ಯುವತಿಯೋರ್ವಳನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರ ಮೂಲಕ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಪೋಷಕರಿಗೆ ಒಪ್ಪಿಸಿರುವ ಘಟನೆ ಕಡಬದ ಅಲಂಕಾರು ಸಮೀಪದ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ನಡೆದಿದೆ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಕೊಠಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರಿದ್ದು, ಈ ಬಾಲಕಿಯನ್ನು ಕೊಠಡಿಗೆ ಕರೆತಂದ ಯುವಕನ ಹೆಸರು ಸವಾದ್ ಎಂದು ತಿಳಿಸಿದ್ದಾರೆ.
ಯುವತಿ ಮಂಜೇಶ್ವರ ಮೂಲದವಳಾಗಿದ್ದು, ಮುಡಿಪು ಮೂಲದ ಮುಸ್ಲಿಂ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದು, ಅಲ್ಲಿಗೆ ಯುವತಿಯನ್ನು ಯುವತಿಯನ್ನು ಬರುವಂತೆ ಹೇಳಿದ್ದ.
ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಯುವಕನ ರೂಮ್ ಮಾಡಿಕೊಂಡಿದ್ದ ಸ್ಥಳಕ್ಕೆ ಧಾವಿಸಿದ್ದರು. ಅವರು ಬರುತ್ತಿದ್ದಂತೆ ಯುವಕನು ಯುವತಿಯನ್ನು ಹಿಂಬಾಗಿಲಿನ ಮೂಲಕ ಹೊರಗೆ ಕಳುಹಿಸಿ ಆತನೂ ಅಲ್ಲಿಂದ ಎಸ್ಎಕೇಪ್ನ್ನ ಆಗಿದ್ದಾನೆ ಎನ್ನಲಾಗಿದೆ.
ಕಾರ್ಯಕರ್ತರು ಬಂದಾಗ ಇಬ್ಬರೂ ಯುವಕರು ಕೊಠಡಿಯಿಂದ ಪರಾರಿಯಾಗಿದ್ದಾರೆ. ನಂತರ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ಕಡಬ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.