ಮಂಗಳೂರು: ಚಂಪಾ ಷಷ್ಠಿ ದಿನವಾದ ಮಂಗಳವಾರ ನಾಡಿನೆಲ್ಲೆಡೆ ಸ್ಕಂದ, ಷಣ್ಮುಖ, ಕಾರ್ತಿಕೇಯ, ಕುಮಾರ ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವ ಶ್ರೀ ಸುಬ್ರಹ್ಮಣ್ಯನ ಪರ್ವ ದಿನ. ಸುಬ್ರಹ್ಮಣ್ಯನ ದೇಗುಲಗಳಲ್ಲಿ ಮತ್ತು ನಾಗಾರಾಧನೆಯ ತಾಣಗಳಲ್ಲಿ ಇಂದು ನಾಗನಿಗೆ ವಿಶೇಷ ಪೂಜೆ, ಸೇವೆಗಳು ನಡೆಯುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ವರ್ಕಾಡಿ ಶ್ರೀ ಸುಬ್ರಹ್ಮಣ್ಯ ದೇವಳ, ಬೇಳ ಶ್ರೀ ಕುಮಾರ ಮಂಗಲ ದೇವಸ್ಥಾನ ಮತ್ತು ಇತರ ಸುಬ್ರಹ್ಮಣ್ಯ ದೇಗುಲಗಳು ಮತ್ತು ನಾಗ ಕ್ಷೇತ್ರಗಳಲ್ಲಿ ಷಷ್ಠಿ ಮಹೋತ್ಸವದ ಆಚರಣೆ ನಡೆಯುತ್ತಿದೆ.
ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ದೇವಳಗಳಿಗೆ ಮತ್ತು ನಾಗಾರಾಧನೆಯ ತಾಣಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಿದ್ದಾರೆ. ಷಷ್ಠಿ ಎಂದರೆ ಸಂಸ್ಕೃತದಲ್ಲಿ ಆರು ಎಂದು ಅರ್ಥ. ಪಂಚಾಂಗದಲ್ಲಿ ಬರುವ ಹದಿನೈದು ತಿಥಿಗಳಲ್ಲಿ ಷಷ್ಠಿ ತಿಥಿಗೆ ತನ್ನದೇ ಆದ ಸ್ಥಾನಮಾನವಿದೆ.
ಈ ತಿಥಿಯ ಅಧಿಪತಿ ಸ್ಕಂದ ಅಂದರೆ ಕಾರ್ತಿಕೇಯ. ಈತನನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿ ಕೀರ್ತಿವಂತನೂ ಪ್ರಸಿದ್ಧನೂ ಆಗುತ್ತಾನೆ ಎಂಬ ನಂಬಿಕೆಯಿದೆ. ಬುದ್ಧಿವಂತಿಕೆ ಕಡಿಮೆ ಇರುವ ಮಗು ಅಥವಾ ತೊದಲುವಿಕೆ ಕಡಿಮೆಯಿರುವ ಮಕ್ಕಳು ಕಾರ್ತಿಕೇಯನ ಆರಾಧನೆ ಮಾಡಿದಲ್ಲಿ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ.
ನಾಗನ ಅಥವಾ ಸುಬ್ರಹ್ಮಣ್ಯನ ಆರಾಧನೆ ಎಂದರೆ ಪ್ರಕೃತಿಯ ಆರಾಧನೆ. ನಮ್ಮ ಪ್ರಾಚೀನರು ಯಾವುದೇ ಗುಡಿ ಗೋಪುರಗಳನ್ನು ದೇವರಿಗೆ ಕಟ್ಟದೆ ಕೇವಲ ಶಿಲೆ, ವೃಕ್ಷ ಜಲ ನೆಲಗಳಲ್ಲಿ ಭಗವದಾರಾಧನಾ ಕ್ರಮ ಅನುಸರಿಸಿದರು. ಎನ್ನುವುದು ನಮ್ಮ ಪರಂಪರಾಗತ ಆರಾಧನಾ ಕ್ರಮಗಳಿಂದ ತಿಳಿದು ಬರುತ್ತದೆ. ತುಳುನಾಡಿನಲ್ಲಿ ಷಷ್ಠಿಯಂದು ಆಬಾಲ ವೃದ್ಧರಾದಿಯಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡುತ್ತಾರೆ. ಕೆಲವು ದೇವಾಲಯಗಳಲ್ಲಿ ಸಂತಾನ ಪ್ರಾಪ್ತಿಯಾದವರು ತುಲಾಭಾರ ಸೇವೆ ಮಾಡಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ವರ್ಕಾಡಿ ಶ್ರೀ ಸುಬ್ರಹ್ಮಣ್ಯ ದೇವಳ, ಬೇಳ ಶ್ರೀ ಕುಮಾರ ಮಂಗಲ ದೇವಸ್ಥಾನ ಮತ್ತು ಇತರ ಸುಬ್ರಹ್ಮಣ್ಯ ದೇಗುಲಗಳು ಮತ್ತು ನಾಗ ಕ್ಷೇತ್ರಗಳಲ್ಲಿ ಷಷ್ಠಿ ಮಹೋತ್ಸವದ ಆಚರಣೆ ನಡೆಯುತ್ತಿದೆ.
ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ದೇವಳಗಳಿಗೆ ಮತ್ತು ನಾಗಾರಾಧನೆಯ ತಾಣಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಿದ್ದಾರೆ.
ಷಷ್ಠಿ ಎಂದರೆ ಸಂಸ್ಕೃತದಲ್ಲಿ ಆರು ಎಂದು ಅರ್ಥ. ಪಂಚಾಂಗದಲ್ಲಿ ಬರುವ ಹದಿನೈದು ತಿಥಿಗಳಲ್ಲಿ ಷಷ್ಠಿ ತಿಥಿಗೆ ತನ್ನದೇ ಆದ ಸ್ಥಾನಮಾನವಿದೆ.
ಈ ತಿಥಿಯ ಅಧಿಪತಿ ಸ್ಕಂದ ಅಂದರೆ ಕಾರ್ತಿಕೇಯ. ಈತನನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿ ಕೀರ್ತಿವಂತನೂ ಪ್ರಸಿದ್ಧನೂ ಆಗುತ್ತಾನೆ ಎಂಬ ನಂಬಿಕೆಯಿದೆ. ಬುದ್ಧಿವಂತಿಕೆ ಕಡಿಮೆ ಇರುವ ಮಗು ಅಥವಾ ತೊದಲುವಿಕೆ ಕಡಿಮೆಯಿರುವ ಮಕ್ಕಳು ಕಾರ್ತಿಕೇಯನ ಆರಾಧನೆ ಮಾಡಿದಲ್ಲಿ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ. ನಾಗನ ಅಥವಾ ಸುಬ್ರಹ್ಮಣ್ಯನ ಆರಾಧನೆ ಎಂದರೆ ಪ್ರಕೃತಿಯ ಆರಾಧನೆ.
ನಮ್ಮ ಪ್ರಾಚೀನರು ಯಾವುದೇ ಗುಡಿ ಗೋಪುರಗಳನ್ನು ದೇವರಿಗೆ ಕಟ್ಟದೆ ಕೇವಲ ಶಿಲೆ, ವೃಕ್ಷ ಜಲ ನೆಲಗಳಲ್ಲಿ ಭಗವದಾರಾಧನಾ ಕ್ರಮ ಅನುಸರಿಸಿದರು. ಎನ್ನುವುದು ನಮ್ಮ ಪರಂಪರಾಗತ ಆರಾಧನಾ ಕ್ರಮಗಳಿಂದ ತಿಳಿದು ಬರುತ್ತದೆ. ತುಳುನಾಡಿನಲ್ಲಿ ಷಷ್ಠಿಯಂದು ಆಬಾಲ ವೃದ್ಧರಾದಿಯಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡುತ್ತಾರೆ. ಕೆಲವು ದೇವಾಲಯಗಳಲ್ಲಿ ಸಂತಾನ ಪ್ರಾಪ್ತಿಯಾದವರು ತುಲಾಭಾರ ಸೇವೆ ಮಾಡಿಸುತ್ತಾರೆ.