ಸುಳ್ಯ: ಅನಾರೋಗ್ಯದಿಂದ ಯುವತಿಯೊಬ್ಬಳು ನಿಧನರಾಗಿರುವ ಘಟನೆ ಸುಳ್ಯದ ಬೆಳ್ಳಾರೆಯ ಐವತ್ತೊಕ್ಲು ಗ್ರಾಮದ ಪಡ್ಪಿನಂಗಡಿ ಸಮೀಪದ ಜನತಾ ಕಾಲೋನಿಯಲ್ಲಿ ನಡೆದಿದೆ.
ಉಮೇಶ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕು.ಸುಪ್ರಿತಾ (19ವ) ಮೃತ ದುರ್ದೈವಿ.
ಇವರು ನಿಂತಿಕಲ್ಲುವಿನಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದು ನ.14 ರಂದು ಮನೆಯಲ್ಲಿ ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿ ಅವರನ್ನು ಮೊದಲು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆರೊಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಇವರನ್ನು ನ.15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದೀಗ ಯುವತಿ ಚಿಕಿತ್ಸೆ ಫಲಿಸದೆ ಸಾವನ್ನೊಪ್ಪಿರುವುದಾಗಿ ತಿಳಿದು ಬಂದಿದೆ.