Connect with us

DAKSHINA KANNADA

ಲೇಖಕ ಎಂ.ಶಾಂತಾರಾಂ ಕುಡ್ವಗೆ ವಾಗೀಶ್ವರೀ ಶತಮಾನೋತ್ಸವ ಪ್ರಶಸ್ತಿ

Published

on

ಮಂಗಳೂರು: ‘ಯಕ್ಷಗಾನ ಸಂಘವನ್ನು ನಿರಂತರ ನೂರು ವರ್ಷಗಳಿಂದ ನಡೆಸಿಕೊಂಡು ಬಂದದ್ದು ಅಚ್ಚರಿ ಹಾಗೂ ಸಂಭ್ರಮದ ಸಂಗತಿ. ಪ್ರತಿಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುವ ಹವ್ಯಾಸಿ ತಾಳಮದ್ದಳೆ ಕಲಾವಿದರ ಕೊಡುಗೆ ಸ್ಮರಣೀಯ” ಎಂದು ಹಿರಿಯ ಹವ್ಯಾಸಿ ಅರ್ಥಧಾರಿ ,ಸಂಘಟಕ ,ಲೇಖಕ ಎಂ.ಶಾಂತಾರಾಂ ಕುಡ್ವ ಹೇಳಿದ್ದಾರೆ.


ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ – 7 ಸ್ವೀಕರಿಸಿ ಅವರು ಮಾತನಾಡಿದರು.

ಇದೇ ವೇಳೆ ಮಂಗಳೂರಿನ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಪ್ರಬಂಧಕ ಪಾಂಡುರಂಗ ಕಾಮತ್ ಮಾತನಾಡಿ “ವಾಗೀಶ್ವರೀ ಸಂಘದ ಸದಸ್ಯರಲ್ಲಿ ಎಲ್ಲಾ ಜಾತಿ, ವರ್ಗ ,ಅಂತಸ್ತಿನ ಕಲಾವಿದರಿದ್ದರೂ ತಾಳಮದ್ದಳೆಯಲ್ಲಿ ಪಾಲ್ಗೊಳ್ಳುವಾಗ ಯಾವ ಭೇಧ ಭಾವವೂ ಕಾಣಿಸದ ನಿಷ್ಕಲ್ಮಶ ಉಲ್ಲೇಖನೀಯ” ಎಂದು ಅವರು ಶ್ರೀ ವಾಗೀಶ್ವರೀ ಶತಮಾನೋತ್ಸವದ ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮೂರ ಆಟ ಕೂಟ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ ವಹಿಸಿದ್ದರು.

ಶ್ರೀ ಮಹಾಮಾಯಾ ಭಜನಾ ಮಂಡಳಿಯ ಬಾಬುರಾಯ ಪ್ರಭು ,ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು,ಉಪಾಧ್ಯಕ್ಷೆ ಪ್ರಪುಲ್ಲಾ ನಾಯಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

BANTWAL

ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

Published

on

ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :

ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

DAKSHINA KANNADA

ಅಕ್ಕಿಯಲ್ಲಿ ಕೀಟಗಳಿದ್ದರೆ ಅದನ್ನು ದೂರ ಮಾಡಲು ಹೀಗೆ ಮಾಡಿ…!

Published

on

ಮಂಗಳೂರು: ಅಕ್ಕಿ ಹೆಚ್ಚಿನವರ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಹೀಗಾಗಿ ಅಕ್ಕಿಯಿಂದ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಸೇವಿಸುತ್ತಾರೆ. ಆದರೆ ಈ ಅಕ್ಕಿಯನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡುವುದು ಸ್ವಲ್ಪ ಕಷ್ಟವೇ. ಕೆಲವೊಮ್ಮೆ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅಕ್ಕಿಯಲ್ಲಿ ಹುಳಗಳು ಹಾಗೂ ಕೀಟಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯಲ್ಲೇ ಸುಲಭವಾದ ವಿಧಾನವನ್ನು ಬಳಸಿ ಹುಳಗಳು ಹಾಗೂ ಕೀಟಗಳಿಂದ ಅಕ್ಕಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದಾಗಿದೆ.

ಅಕ್ಕಿಯಲ್ಲಿ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿದ್ದು, ವಿಟಮಿನ್ ಡಿ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಥಯಾಮಿನ್ ಮತ್ತು ರಿಬೋಫ್ಲಾವಿನ್ ಗಳಿವೆ. ಕೆಲವರು ಮನೆಯಲ್ಲಿ ಅಕ್ಕಯನ್ನ ಶೇಖರಿಸಿ ಇಟ್ಟರೂ ಕೀಟಗಳು ಹಾಗೂ ಹುಳಗಳ ಬಾಧೆ ತಪ್ಪಿದ್ದಲ್ಲ. ಅಕ್ಕಿಗೆ ಕೀಟಬಾಧೆ ಬಾರದಂತೆ ರಾಸಾಯನಿಕ ಮಿಶ್ರಿತ ಪೌಡರ್ ಬಳಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

  • ಅಕ್ಕಿಯನ್ನು ಸಂಗ್ರಹಿಸುವ ಪ್ರದೇಶವು ಶುಷ್ಕವಾಗಿಟ್ಟುಕೊಳ್ಳಿ. ಅಕ್ಕಿಯ ಚೀಲದಲ್ಲಿ ಮಸಾಲೆ ಪದಾರ್ಥಗಳನ್ನು ಇಟ್ಟರೆ ಕೀಟಗಳು ಬರುವುದಿಲ್ಲ. ಕರ್ಪೂರ, ಇಂಗು, ಲವಂಗ, ದಾಲ್ಚಿನ್ನಿ, ಬಿರಿಯಾನಿ ಎಲೆಗಳು ಮತ್ತು ನಕ್ಷತ್ರದ ಹೂವುಗಳನ್ನು ಕವರ್‌ನಲ್ಲಿ ಹಾಕಿ ಅಕ್ಕಿ ಚೀಲಗಳಲ್ಲಿ ಹಾಕಿಟ್ಟರೆ ದೀರ್ಘಕಾಲದವರೆಗೆ ಯಾವುದೇ ಕೀಟಗಳು ಬಾರದಂತೆ ಸಂರಕ್ಷಿಸಿಡಬಹುದು.
  • ಅಕ್ಕಿಯನ್ನು ಕೀಟಗಳಿಂದ ಮುಕ್ತವಾಗಿಡುವಲ್ಲಿ ಬೇವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬಹಳಷ್ಟು ಪರಿಣಾಮಕಾರಿಯಾಗಿದೆ.
  • ಅಕ್ಕಿ ಚೀಲಗಳಲ್ಲಿ ಬೆಳ್ಳುಳ್ಳಿ ಮತ್ತು ಉಪ್ಪನ್ನು ಹಾಕಿಟ್ಟರೆ ಅಕ್ಕಿಗೆ ಕೀಟಗಳು ಬರದಂತೆ ನೋಡಿಕೊಳ್ಳಬಹುದು. ಸಿಪ್ಪೆ ಸುಲಿದ ಬೆಳ್ಳುಳ್ಳಿ ಹಾಗೂ ಉಪ್ಪನ್ನು ಕವರ್ ನಲ್ಲಿಟ್ಟು ಅಕ್ಕಿಯ ಶೇಖರಣೆಯಲ್ಲಿಟ್ಟರೆ ಕೀಟಗಳು ಬರುವುದಿಲ್ಲ.
  • ಅಕ್ಕಿ ಚೀಲದಲ್ಲಿ ತುಳಸಿ ಎಲೆಗಳನ್ನು ಇರಿಸಿದರೆ ಹುಳಗಳು ಬೇಗನೇ ಆಗುವುದಿಲ್ಲ.
  • ಒಂದು ವೇಳೆ ಅಕ್ಕಿಯಲ್ಲಿ ಹುಳಗಳು ಆಗಿದ್ದರೆ ಆ ಅಕ್ಕಿಯನ್ನು ಗಾಳಿಯಾಡದ ಕವರ್‌ನಿಂದ ಹಾಕಿಟ್ಟು 3-4 ದಿನಗಳವರೆಗೆ ಫ್ರಿಜ್‌ನಲ್ಲಿ ಇಟ್ಟರೆ ಕೀಟಗಳು ಹಾಗೂ ಹುಳಗಳು ಸಾಯುತ್ತವೆ.
Continue Reading

LATEST NEWS

Trending