LATEST NEWS
ನೇಣು ಬಿಗಿದ ಸ್ಥಿತಿಯಲ್ಲಿ ಕೆಎಎಸ್ ಅಧಿಕಾರಿಯ ಪತ್ನಿಯ ಶ*ವ ಪತ್ತೆ
Published
7 months agoon
By
NEWS DESK4ಬೆಂಗಳೂರು : ಕೆಎಎಸ್ ಅಧಿಕಾರಿಯ ಪತ್ನಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವಂತಹ ಘಟನೆ ಸಂಜಯ್ನಗರದ ನಿವಾಸದಲ್ಲಿ ನಡೆದಿದೆ. ಚೈತ್ರಾ ಗೌಡ ಮೃ*ತ ಮಹಿಳೆ. ವೃತ್ತಿಯಲ್ಲಿ ವಕೀಲರಾಗಿದ್ದ ಚೈತ್ರಾ ಮನೆಯಲ್ಲಿ ಫ್ಯಾನ್ಗೆ ನೇ*ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃ*ತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
3 ತಿಂಗಳ ಹಿಂದೆ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆ:
ಚೈತ್ರಾ ಶ*ವ ನೇ*ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಮನೆಯಲ್ಲಿ 3 ತಿಂಗಳ ಹಿಂದೆ ಬರೆದಿಟ್ಟಿದ್ದ ಡೆ*ತ್ ನೋಟ್ ಪತ್ತೆ ಆಗಿದೆ. ಮಾ.11 ರಂದು ಬರೆದಿದ್ದ ಡೆ*ತ್ ನೋಟ್ ಪತ್ತೆಯಾಗಿದೆ. ನನ್ನ ಗಂಡ ಒಳ್ಳೆಯವರು, ಜೀವನ ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನಿಸಿದೆ ಆಗಲಿಲ್ಲ, ಹಾಗಾಗಿ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಆತ್ಮಹ*ತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದ್ರೂ ನನ್ನ ಜೀವನ ಅಂ*ತ್ಯ ಮಾಡುತ್ತಿದ್ದೇನೆ ಎಂದು ಬರೆಯಲಾಗಿದೆ.
ಪತಿಯೊಂದಿಗೆ ಮಾತನಾಡಿದ್ದ ಚೈತ್ರಾ:
ಚೈತ್ರಾ ಮೂರು ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಎರಡನೇ ಫ್ಲಾಟ್ನಲ್ಲಿ ಅವರ ಕುಟುಂಬಸ್ಥರು ವಾಸವಾಗಿದ್ದು, ಇನ್ನೊಂದು ಫ್ಲಾಟ್ನಲ್ಲಿ ಮೃ*ತಳ ತಮ್ಮ ವಾಸವಾಗಿದ್ದಾರೆ. ಬೆಳಗ್ಗೆ ಹತ್ತು ಘಂಟೆ ಸುಮಾರಿಗೆ ಪತಿ ಶಿವ ಕುಮಾರ್ ಜೊತೆಗೆ ಮಾತನಾಡಿದ್ದಾರೆ. ನಂತರ ತಮ್ಮನ ಜೊತೆಗೆ ಮಾತನಾಡಿದ್ದಾರೆ. ಹನ್ನೊಂದು ಘಂಟೆ ಸುಮಾರಿಗೆ ಮೃ*ತಳ ತಮ್ಮ ಕರೆದಾಗ ಸ್ಪಂದಿಸಿಲ್ಲ. ಈ ವೇಳೆ ಕಿಟಕಿಯಿಂದ ನೋಡಿದಾಗ ಫ್ಯಾನ್ಗೆ ನೇ*ಣು ಹಾಕಿಕೊಂಡು ಸಾ*ವನಪ್ಪಿರುವುದು ಕಂಡು ಬಂದಿದೆ. ತಕ್ಷಣ ಮೃ*ತಳ ತಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೀನ್ ಆಫ್ ಕ್ರೈಂ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಮೃ*ತದೇಹ ಇಳಿಸಲಾಗಿದೆ.
ಇದನ್ನೂ ಓದಿ : ವಿದ್ಯಾರ್ಥಿನಿ ರುಂಡ ಕತ್ತರಿಸಿ ಕೊಲೆ ಪ್ರಕರಣ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು
ಡಿಸಿಪಿ ಏನು ಹೇಳಿದ್ರು?
ಪ್ರಕರಣದ ಬಗ್ಗೆ ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಪ್ರತಿಕ್ರಿಯೆ ನೀಡಿದ್ದು, ಕೆಎಎಸ್ ಅಧಿಕಾರಿ ಪತ್ನಿ ಆತ್ಮಹ*ತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ. ಸೀರೆಯಿಂದ ಫ್ಯಾನ್ಗೆ ಹ್ಯಾಂಗ್ ಮಾಡ್ಕೊಂಡು ಆತ್ಮಹ*ತ್ಯೆ ಆಗಿದೆ. ಇದರ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಅಂತಾ ಬರೆದಿರುವುದು ಗೊತ್ತಾಗಿದೆ. ಅದನ್ನ ಅವರೇ ಬರೆದಿದ್ದಾರಾ ಅಂತಾ ಪರಿಶೀಲನೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಮೃ*ತದೇಹ ರವಾನೆ ಮಾಡಲಾಗಿದೆ. ತನಿಖೆ ಬಳಿಕ ವಿಚಾರ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
LATEST NEWS
ಮಕ್ಕಳು ಅಪ್ಪ – ಅಮ್ಮನ ಮುಂದೆ ಸುಳ್ಳು ಹೇಳಲು ಮುಖ್ಯ ಕಾರಣಗಳೇನು ಗೊತ್ತಾ ??
Published
10 hours agoon
06/12/2024ಮಕ್ಕಳು ಏನೇ ವಿಷಯಗಳಿದ್ದರೂ ಅದನ್ನು ತಂದೆ – ತಾಯಿಯ ಬಳಿ ಹೇಳಲು ಬಯಸುತ್ತಾರೆ. ಆದರೆ, ಹೀಗೆ ಹೇಳಲು ಬಂದ ಮಕ್ಕಳ ಮೇಲೆ ಕೆಲವೊಮ್ಮೆ ಪೋಷಕರು ರೇಗುವುದುಂಟು. ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲದೆ ಮಾಡುವ ಈ ತಪ್ಪು ಮುಂದೆ ಪೋಷಕರಿಗೇ ಸಮಸ್ಯೆಯಾಗಬಹುದು.
ಅಮ್ಮನ ಅಡುಗೆ ರುಚಿಯ ವಿಚಾರ ಇರಬಹುದು, ಸಹೋದರ ಸಹೋದರಿಯರ ನಡುವಿನ ಜಗಳ ಇರಬಹುದು, ಶಾಲೆಯಲ್ಲಿ ನಡೆದಿರುವ ಅದ್ಯಾವುದೋ ಸಂತಸದ ಅಥವಾ ಬೇಸರದ ಸಂಗತಿ ಇರಬಹುದು, ಪೋಷಕರು ವ್ಯವಧಾನದಿಂದ ಕೇಳಿಸಿಕೊಳ್ಳಬೇಕು. ಅದರ ಬದಲಾಗಿ ಮಕ್ಕಳು ಅದೇನೋ ಹೇಳಲು ಬಂದಾಗ ಅಸಹನೆ, ಸಿಟ್ಟು ಪ್ರದರ್ಶಿಸಿದರೆ ಮಕ್ಕಳ ಮೃದು ಮನಸಿಗೆ ಘಾಸಿ ಉಂಟಾಗುವ ಅಪಾಯ ಇದೆ. ಇದು ಪೋಷಕರನ್ನು ಮೆಚ್ಚಿಸಲು ಅಥವಾ ಗಮನವನ್ನು ತಮ್ಮತ್ತ ಸೆಳೆಯಲು ಮಕ್ಕಳು ಸುಳ್ಳಿನ ದಾರಿ ಹಿಡಿಯಲು ಅವಕಾಶ ಮಾಡಿಕೊಡುವ ಅಪಾಯ ಇದೆ.
ಇನ್ನು ಮಕ್ಕಳೇನೋ ಮಾಡಬೇಕು ಎಂಬ ತುಡಿತವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದಾಗ ಗದರಿಸಿ ಸುಮ್ಮನಿರುವಂತೆ ಮಾಡುವುದು ಕೂಡ ಅವರ ಭವಿಷ್ಯವನ್ನು ಚಿವುಟಿದಂತೆ. ಇದರಿಂದ ತಮ್ಮ ಕನಸನ್ನು ಪೋಷಕರು ಕಮರಿ ಹಾಕಿದ್ರು ಎಂಬ ಅಸಮಾಧಾನ ಮಕ್ಕಳ ಮನಸಿನ ಮೂಲೆಯಲ್ಲಿ ಕೂತು ಬಿಡುತ್ತದೆ. ಇದು ಮುಂದೆ ಬೆಳೆದು ದೊಡ್ಡವರಾದ ಮಕ್ಕಳಲ್ಲಿ ಪೋಷಕರು ತಮಗೇನು ಮಾಡಿಲ್ಲ ಎಂಬ ಭಾವ ಮೂಡಿಸುವ ಸಾಧ್ಯತೆ ಕೂಡ ಇದೆ. ತಾನು ಮಾಡಬೇಕು ಅಂದುಕೊಂಡಿದ್ದನ್ನು ಮನೆಯಲ್ಲಿ ಸುಳ್ಳು ಹೇಳಿ ಮಾಡಲು ಆರಂಭಿಸಿ ಮುಂದೆ ಸುಳ್ಳು ಹೇಳುವುದನ್ನೇ ಮೈಗೂಡಿಸುವ ಮನಸ್ಥಿತಿಗೆ ಮಕ್ಕಳು ಬರಬಹುದು.
ಹುಟ್ಟಿದ ಮಗುವಿನ ಲಾಲನೆ ಪಾಲನೆ ಮಾಡುವ ಪೋಷಕರು ಮಗುವಿಗೆ ನಡೆಯುವುದರಿಂದ ಹಿಡಿದು ಮಾತನಾಡುವುದು, ತಿನ್ನುವುದು ಎಲ್ಲವನ್ನೂ ಕಲಿಸುತ್ತಾರೆ. ಆದರೆ, ಮಕ್ಕಳು ಬೆಳೆಯುತ್ತಾ ಹೋದಂತೆ ಕೆಲವೊಂದು ಬಾರಿ ಮಕ್ಕಳು ಕೇಳುವ ಪ್ರಶ್ನೆಗಳು, ಮಾಡುವ ಹಠಗಳು, ಹಾಗೂ ಅವರ ಬೇಡಿಕೆಗಳು ಕಿರಿಕಿರಿ ಅನಿಸಿ ಬಿಡುತ್ತದೆ. ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬುವುದು ಪೋಷಕರಿಗೆ ಗೊತ್ತಿರುತ್ತದೆಯಾದ್ರೂ ಕೆಲವೊಂದು ವಿಚಾರವನ್ನು ಮಕ್ಕಳಿಗೆ ನವಿರಾಗಿ ವಿವರಿಸಿ ಅರ್ಥೈಸಬೇಕು. ಆದ್ರೆ, ಎಲ್ಲವನ್ನೂ ನವಿರಾಗಿ ನಿರಾಕರಿಸುತ್ತಾ ಹೋದರೆ ನನ್ನ ಹೆತ್ತವರು ನನಗಾಗಿ ಏನೂ ಮಾಡುತ್ತಿಲ್ಲ ಎಂಬ ಭಾವ ಮಕ್ಕಳಲ್ಲಿ ಮೂಡಬಹುದು. ತಮ್ಮ ಕನಸಿಗೆ ಪೋಷಕರೇ ಅಡ್ಡಿ ಎಂಬ ಸಣ್ಣದೊಂದು ಅಸಹನೆ ಇಲ್ಲಿಂದಲೇ ಆರಂಭವಾಗಬಹುದು.
ಸಣ್ಣ ಪ್ರಾಯದಲ್ಲಿ ಮಕ್ಕಳು ದೂರು ಹೇಳುವ ಪ್ರಮುಖ ಕಾರಣಗಳು :
ಗಮನವನ್ನು ತನ್ನತ್ತ ಸೆಳೆಯಲು:
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದು, ಒಬ್ಬರ ಕಡೆ ಹೆಚ್ಚಿನ ಗಮನ ನೀಡುತ್ತಾರೆ ಅಂತ ಮಗುವಿನ ಮನಸಿನಲ್ಲಿ ಮೂಡಿದಾಗ ಗಮನ ತನ್ನತ್ತ ಸೆಳೆಯಲು ಸುಳ್ಳು ದೂರುಗಳನ್ನು ಹೇಳಲು ಆರಂಭಿಸುತ್ತಾರೆ. ಇದು ಶಾಲೆಯಲ್ಲೂ , ಕುಟುಂಬ ಸದಸ್ಯರ ಮುಂದೆಯೂ ನಡೆಯುವ ಮೂಲಕ ಪೋಷಕರನ್ನು ಮುಜುಗರಕ್ಕೆ ಸಿಲುಕಿಸಬಹುದು. ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಮನೋಭಾವನೆಯಿಂದ ಮಕ್ಕಳು ಸಣ್ಣ ಸಣ್ಣ ವಿಚಾರಗಳಲ್ಲೂ ಜಗಳ ಆಡುವುದು, ಸುಳ್ಳು ಹೇಳುವುದು ಮಾಡಬಹುದು. ಇಂತಹ ವಿಚಾರ ಬಂದಾಗ ಮಕ್ಕಳ ಜಗಳವನ್ನು ನಾಜೂಕಾಗಿ ಪರಿಹರಿಸಬೇಕು.
ಅಸಹನೆ , ಸಿಟ್ಟು, ಜಗಳ , ದೂರುಗಳು ಇವುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಮಕ್ಕಳು ಪದೇಪದೇ ಸಿಟ್ಟಾಗುವುದು, ಅಸಹನೆಯಿಂದ ಒಂಟಿಯಾಗಿ ಕೂರುವುದು, ಸ್ನೇಹಿತರ ಜೊತೆ ಜಗಳ ಮಾಡುವುದು, ದೂರುಗಳನ್ನು ಹೇಳಿಕೊಂಡು ಬರುತ್ತಾರೆ ಅಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು ಯಾಕಾಗಿ ಹೀಗೆ ಎಂಬುವುದನ್ನು ಮೊದಲು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳಿ. ಪೋಷಕರಾಗಿ ತಮ್ಮಿಂದೇನು ತಪ್ಪಾಗಿಲ್ಲ ಎಂದರೆ ಒಂದು ಬಾರಿ ತಜ್ಞ ವೈದ್ಯರನ್ನು ಸಂಪರ್ಕಿಸಿ.
LATEST NEWS
ಉಡುಪಿ : ಶೀರೂರು ಪರ್ಯಾಯಕ್ಕೆ ಬಾಳೆ ಮುಹೂರ್ತ ಸಂಪನ್ನ
Published
10 hours agoon
06/12/2024By
NEWS DESK4ಉಡುಪಿ : ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠ ಏರಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಇಂದು ಬಾಳೆ ಮುಹೂರ್ತ ನೆರವೇರಿಸಿದರು. ಪೂರ್ಣ ಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ಭಾವಿ ಪರ್ಯಾಯ ಶ್ರೀಗಳು ಬಾಳೆ ಸಸಿ ನೆಟ್ಟರು.
ಮುಹೂರ್ತಕ್ಕೂ ಮುನ್ನ ಕೃಷ್ಣ, ಮುಖ್ಯ ಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಶ್ರೀಗಳು ಶೀರೂರು ಮಠ, ಅನಂತೇಶ್ವರ, ಚಂದ್ರಮೌಳೀಶ್ವರನ ದರ್ಶನ ಪಡೆದರು. ಮೆರವಣಿಗೆಯಲ್ಲಿ ಬಾಳೆ ಗಿಡಗಳನ್ನು ಹೊತ್ತು ಸಾಗಿ ಮುಹೂರ್ತ ಕಾರ್ಯ ನೆರವೇರಿಸಲಾಯಿತು.
ಇದನ್ನೂ ಓದಿ : ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ!
ಈ ಬಾಳೆಯ ಎಲೆಗಳನ್ನು ಬಳಸಿಕೊಂಡು ಪರ್ಯಾಯ ಅವಧಿಯಲ್ಲಿ ಅನ್ನದಾಸೋಹ ಕಾರ್ಯ ನಡೆಯಲಿದೆ. ಇನ್ನು ಒಂದು ವರ್ಷಗಳ ಕಾಲ ಶೀರೂರು ಶ್ರೀ ದೇಶಾದ್ಯಂತ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಲಿದ್ದಾರೆ.
LATEST NEWS
ಮಂಗಳೂರು: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ
Published
11 hours agoon
06/12/2024By
NEWS DESK2ಮಂಗಳೂರು: ಮನೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಅತ್ತಾವರದಲ್ಲಿ ಶುಕ್ರವಾರ(ಡಿ.6) ನಡೆದಿದೆ.
ಮನೆ ಮಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ನ ರೇಗ್ಯುಲೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಮನೆಮಂದಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಬಳಿಕ ಪಾಂಡೇಶ್ವರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.