bengaluru
World cup 2023: ಈ ಬಾರಿ ಇಂಡಿಯಾ ವಿಶ್ವ ದಾಖಲೆ ಮುರಿಯುತ್ತಾ..?
ಅಹಮದಾಬಾದ್: ವಿಶ್ವಕಪ್ ಟೂರ್ನಿ ಈಗಾಗಲೇ ಆರಂಭವಾಗಿದ್ದು, ಈ ಬಾರಿ ಇಂಡಿಯಾ ವಿಶ್ವ ದಾಖಲೆ ಮುರಿಯುತ್ತಾ ಅನ್ನೂ ಕೂತಹಲ ಎಲ್ಲರಲ್ಲೂ ಮೂಡಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿ ಒಂದರಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ.
2023 ರ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ, ಸಚಿನ್ ದಾಖಲೆ ಮುರಿದರು. 101.57ರ ಸರಾಸರಿಯಲ್ಲಿ ಒಟ್ಟಾರೆ 711 ರನ್ ಬಾರಿ ಕೊಹ್ಲಿ ದಾಖಲೆ ಸೃಷ್ಟಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ತಮ್ಮ ದಾಖಲೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಈ ಆವೃತ್ತಿಯಲ್ಲಿ ಕೊಹ್ಲಿ 3 ಶತಕ, 9 ಅರ್ಧಶತಕ ಗಳಿಸಿ ಮಿಂಚಿದ್ದಾರೆ.
ವಿರಾಟ್ ಕೊಹ್ಲಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಸೆಮಿ ಮತ್ತು ಫೈನಲ್ ಎರಡರಲ್ಲೂ 50+ ರನ್ ಗಳಿಸಿದ ಮೊದಲ ಭಾರತೀಯರಾಗಿದ್ದಾರೆ. 2023ರ ವಿಶ್ವಕಪ್ ಟೂರ್ನಿ ಒಂದೇ ಆವೃತ್ತಿಯಲ್ಲಿ 9 ಅರ್ಧಶತಕ, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 72 ಅರ್ಧಶತಕ ಬಾರಿಸಿದ್ದಾರೆ. ಇದೀಗ ಇಂಡಿಯಾ ವಿಶ್ವ ದಾಖಲೆ ಮುರಿಯುತ್ತಾ ಅನ್ನೊದು ಕಾದುನೋಡಬೇಕಿದೆ.
bangalore
ಇವ್ರು ಯಾರಂತ ಗೊತ್ತಾಯ್ತ ಫ್ರೆಂಡ್ಸ್? ನ್ಯೂ ಕಪಲ್ಸ್ ಫಾರಿನ್ ಟ್ರಿಪ್ ಅಂತೆ..!
Film: ತೆಲುಗು ನಟ ನರೇಶ್ ಈಗಾಗಲೇ ಮೂರನೇ ಪತ್ನಿ ರಮ್ಯಾ ರಘುಪತಿಯವರಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ರೆ ರಮ್ಯಾ ಡಿವೋರ್ಸ್ ನೀಡಲು ಒಪ್ಪುತ್ತಿಲ್ಲ. ಹೀಗಿರುವಾಗಲೇ ಪವಿತ್ರಾ ಲೋಕೇಶ್ ಜೊತೆ ನರೇಶ್ ಸಹಜೀವನ ನಡೆಸುತ್ತಿದ್ದಾರೆ.
ಬಹುದಿನಗಳ ನಂತರ ನರೇಶ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. “ನಾನು ನನ್ನ ಜೀವನದಲ್ಲಿ ಸಂಕಷ್ಟದಲ್ಲಿದ್ದಾಗ, ಈ ಒಂದು ಹಾಡು ನನಗೆ ಸ್ಫೂರ್ತಿ ನೀಡಿತು. ಆ ಸಮಯದಲ್ಲಿ ನಾನು ನನ್ನ ಕರಿಯರ್ ಕಳೆದುಕೊಂಡೆ. ನಾನು ಆರ್ಥಿಕ ಸಮಸ್ಯೆ ಎದುರಿಸಿದೆ. ನನ್ನ ಆತ್ಮೀಯರು ನನ್ನನ್ನು ಅಗಲಿದ್ದರು. ಕ್ಷುಲ್ಲಕ ಪ್ರಕರಣದಲ್ಲಿ ಸಂಬಂಧಿಕರಿಂದ ಕಿರಿಕಿರಿ, ಜೋಕರ್‌ನಿಂದ ತೊಂದರೆ ಎದುರಾದರೂ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ತಾಯಿ ಮತ್ತು ಸ್ನೇಹಿತ ವಿಜಯ್ ವಾಧ್ವಾ ಮಾತ್ರ.ಈಗ ಈ ರೀತಿ ಬದಲಾಗಿದ್ದೇನೆ. ಈ ಹಾಡು ನನಗೆ ಸ್ಫೂರ್ತಿ ನೀಡಿದ್ದು ಮಾತ್ರವಲ್ಲ. ಮತ್ತೆ ಬಲವಾಗಿ ಎದ್ದು ನಿಲ್ಲುವಂತೆ ಮಾಡಿದೆ. ಈಗಲೂ ಪ್ರೇರೇಪಿಸುತ್ತದೆ. ಈಗ ನಾನು ನನ್ನ ವೃತ್ತಿಜೀವನದ 50ನೇ ವರ್ಷದಲ್ಲಿದ್ದೇನೆ. ಈ ಮಹತ್ತರವಾದ ಮೈಲಿಗಲ್ಲನ್ನು ಸಾಧಿಸಲು ನನಗೆ ತುಂಬಾ ಸಹಾಯ ಮಾಡಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದು ನರೇಶ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
bengaluru
41ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಕ್ವೀನ್ ರಮ್ಯಾ
ಬೆಂಗಳೂರು : ಇಂದು ಸ್ಯಾಂಡಲ್‌ವುಡ್ ಕ್ವೀನ್.. ಮೋಹಕತಾರೆ ರಮ್ಯಾ ಜನ್ಮದಿನ.. ಸೋಷಿಯಲ್ ಮಿಡಿಯಾದಲ್ಲಿ ಅವರ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಈ ಹುಟ್ಟುಹಬ್ಬಕ್ಕೆ ಅವರ ಹೊಸ ಸಿನಿಮಾದ ಅಪ್ಡೇಟ್ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಈವರೆಗೆ ರಮ್ಯಾರ ಹೊಸ ಸಿನಿಮಾಗಳ ಯಾವುದೇ ಅಪ್ಡೇಟ್ಗಳು ಹೊರಬಿದ್ದಿಲ್ಲ. ಆದರೆ ರಮ್ಯಾ ಈ ಹುಟ್ಟುಹಬ್ಬವನ್ನು ಸರಳವಾಗಿ, ತಮಗೆ ಇಷ್ಟವಾದವರೊಟ್ಟಿಗೆ ಸಮಯ ಕಳೆಯುತ್ತಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.. ಈ ಚೆಲುವೆ 2003ರಲ್ಲಿ ‘ಅಭಿ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.. ಇವರು ಮೊದಲು ನಾಯಕಿಯಾಗಿ ನಟಿಸಿದ್ದು ಡಾ. ರಾಜ್ ಪುತ್ರ ಅಪ್ಪು ಅಲಿಯಾಸ್ ಪುನೀತ್ ರಾಜ್‌ಕುಮಾರ್ ಅವರ ಜೊತೆ.. ಇದೇ ಚಿತ್ರದ ಅಪಾರ ಅಭಿಮಾನಿಗಳ ಜೊತೆಗೆ ಜನಪ್ರಿಯತೆ ಗಳಿಸಿದ ರಮ್ಯಾ ‘ಎಕ್ಸ್ಕ್ಯೂಸ್ ಮಿ’ ಸಿನಿಮಾದಿಂದ ಮತ್ತೊಂದು ದೊಡ್ಡ ಯಶಸ್ಸು ಗಳಿಸಿದರು.. ನಂತರ ಹಲವಾರು ಸ್ಟಾರ್ ನಟರ ಜೊತೆಯಲ್ಲಿ ತೆರೆಹಂಚಿಕೊಂಡಿದ್ದಾರೆ.
ಪುಟ್ಟ-ಪುಟ್ಟ ನಾಯಿ ಮರಿಗಳೊಟ್ಟಿಗೆ ಆಟವಾಡುತ್ತಿರುವ ವಿಡಿಯೋ ಒಂದನ್ನು ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘‘ನಿಮ್ಮ ಹುಟ್ಟುಹಬ್ಬದ ಶುಭಾಶಯಗಳು ನನ್ನ ಮನಸ್ಸಿಗೆ ಮುದ ನೀಡಿದಂತೆ ಈ ಪುಟ್ಟ ವಿಡಿಯೋ ನಿಮ್ಮ ಮನಸ್ಸಿಗೆ ಮುದ ನೀಡುವ ವಿಶ್ವಾಸವಿದೆ’’ ಎಂದು ವಿಡಿಯೋಕ್ಕೆ ಕ್ಯಾಪ್ಷನ್ ಬರೆದಿದ್ದಾರೆ ನಟಿ ರಮ್ಯಾ.
ಮತ್ತೊಮ್ಮೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.
bengaluru
ಮನ್ಸಿಂದ ಯಾರೂನು ಕೆಟ್ಟೋರಲ್ಲ..ಬಿಗ್ ಬಾಸ್ ವಿನಯ್ ಕಣ್ಣೀರು
ಬೆಂಗಳೂರು : ಬಿಗ್ಬಾಸ್ ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮಂಗಳವಾರ ಪ್ರಸಾರವಾದ ಎಪಿಸೋಡ್ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.
ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಜೊತೆ ಮಾತನಾಡುತ್ತಿದ್ದಾಗ ಸ್ನೇಹಿತ್ ಬಿಗ್ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗಿರುವ ಅಭಿಪ್ರಯಾದ ಬಗ್ಗೆ ತಿಳಿಸುವಂತೆ ಹೇಳ್ತಾರೆ.ಆಗ ಪವಿ ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು.ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.
ಇದರಿಂದಾಗಿ ವಿನಯ್ ತೀರಾ ಡಲ್ ಆಗ್ಬಿಟ್ಟರು. ಬಾತ್‌ರೂಮ್ ಒಳಗೆ ಹೋಗಿ ವಿನಯ್ ಗಳಗಳನೆ ಅತ್ತುಬಿಟ್ಟರು. ಬಳಿಕ ‘ಬಿಗ್ ಬಾಸ್’ ಬಳಿ ಮಾತನಾಡಿದ್ಮೇಲೆ ವಿನಯ್ ಸಮಾಧಾನಗೊಂಡರು.
- FILM4 days ago
ಆಲಿಯಾ ಭಟ್ ಡೀಫ್ ಫೇಕ್ ವಿಡಿಯೋ ವೈರಲ್ – ವಿಡಿಯೋ ನೋಡಿದ್ರಾ..?
- bangalore4 days ago
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾದ ಈ ಸ್ಪರ್ಧಿಗಳು ಯಾರು..?
- bangalore6 days ago
ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಿದ ಅಶ್ವಿನಿ ಪುನಿತ್ ರಾಜ್ ಕುಮಾರ್
- DAKSHINA KANNADA6 days ago
Puttur: ಮಹಿಳೆಗೆ ಅಮಲು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ..!