Tuesday, May 30, 2023

ನಿಶ್ಚಿತಾರ್ಥ ಆಗಿದ್ದ ಯುವತಿ ನೇಣಿಗೆ ಶರಣು-ಹಲವು ಅನುಮಾನ…!

ಬೆಂಗಳೂರು: ನಿಶ್ಚಿತಾರ್ಥ ಆಗಿದ್ದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬಸವೇಶ್ವರನಗರದ ಕಮಲಾನಗರದಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ ರಕ್ಷಿತಾ (17) ಆತ್ಮಹತ್ಯೆಗೊಳಗಾದ ಯುವತಿ.


ಈಕೆ ಅಣ್ಣನ ಜೊತೆಗೆ ವಾಸವಿದ್ದಳು. ಇತ್ತೀಚೆಗಷ್ಟೇ ರಕ್ಷಿತಾಗೆ ನಿಶ್ಚಿತಾರ್ಥ ಆಗಿತ್ತು. 18 ವರ್ಷ ತುಂಬಿದ ಬಳಿಕ ಮದುವೆ ಮಾಡುವ ಯೋಚನೆಯಲ್ಲಿದ್ದರು.

ಅಷ್ಟರಲ್ಲಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics