Connect with us

LATEST NEWS

ಅರೆಬೆಂದ ಸ್ಥಿತಿಯಲ್ಲಿ ಯುವಕ ನಿಗೂಢ ಸಾವು: ಟ್ವಿಸ್ಟ್‌ ಕೊಟ್ಟ ಮತ್ತೊಬ್ಬರ ಮನೆ ಮುಂದಿದ್ದ ಚಪ್ಪಲಿ

Published

on

ಪುಣೆ: ನಿಗೂಢವಾಗಿ ಕೊಲೆಯಾಗಿದ್ದ ಯುವಕನೊಬ್ಬನ ಸಾವಿನ ಕೇಸ್‌ ಒಂದನ್ನು ಚಪ್ಪಲಿ ಮೂಲಕ ಪೊಲೀಸರು ಭೇದಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಘಟನೆ ವಿವರ
27 ವರ್ಷದ ಯುವಕ ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ತಾಯಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ನಂತರ ಎಲ್ಲೆಡೆ ಪತ್ತೆ ಹಚ್ಚಿದಾದ ಬಾವಧಾನ್‌ ಎಂಬಲ್ಲಿ ಕಳೆದ 22ರಂದು ಯುವಕನ ಅರೆಬೆಂದ ಶವ ಪತ್ತೆಯಾಗಿತ್ತು.

ಶರೀರದ ವಿವಿಧ ಭಾಗಗಳು ನಾಪತ್ತೆಯಾಗಿದ್ದವು.
ಈ ಕೊಲೆ ಬಗ್ಗೆ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಕೊಲೆಗಾರನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಮೊದಲಿಗೆ ಈತನ ಅಪಹರಣ ಮಾಡಿ ಕೊಲೆ ಮಾಡಲಾಗಿದೆ ಎಂದುಕೊಳ್ಳಲಾಗಿತ್ತು. ಆದರೆ ಪೊಲೀಸರು ಇದರ ಬೆನ್ನತ್ತಿ ಹೋದಾಗ ಯುವಕ ಧರಿಸಿದ್ದ ಚಪ್ಪಲಿ ಕ್ಲೂ ಕೊಟ್ಟಿತ್ತು.
ಅಂದು ಯುವಕ ಎಲ್ಲೆಲ್ಲಿ ಹೋಗಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಮನೆಯೊಂದರ ಎದುರು ಆತನ ಚಪ್ಪಲಿ ಸಿಕ್ಕಿದೆ.

ಇದು ತಮ್ಮ ಕೊಲೆಯಾದ ಮಗನ ಚಪ್ಪಲಿ ಎಂದು ತಾಯಿ ಹೇಳಿದ್ದಾರೆ. ಇದನ್ನೇ ಬೆನ್ನತ್ತಿಹೋದ ಪೊಲೀಸರಿಗೆ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ಚಪ್ಪಲಿ ಆ ಯುವಕನದ್ದೇ ಎಂದು ತಿಳಿಯುತ್ತಲೇ ಇದೇಮನೆಯಲ್ಲಿ ಕೊಲೆಗಾರರು ಇದ್ದಿರಬಹುದು ಎಂದು ಪೊಲೀಸರಿಗೆ ಬಲವಾದ ಸಂಶಯ ಮೂಡಿತು.

ನಂತರ ಮನೆ ಮಾಲೀಕನನ್ನು ಬಂಧಿಸಿ ಬಾಯಿ ಬಿಡಿಸಿದಾಗ ಹೊರಬಂದದ್ದು ಭಯಾನಕ ಸತ್ಯ.
ಅದೇನೆಂದರೆ ಕೊಲೆಯಾದ ಯುವಕ, ಈ ಮನೆ ಮಾಲೀಕನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದು ಮಾಲೀಕನಿಗೆ ತಿಳಿದಿದೆ.

ಅದೊಂದು ದಿನ ತಾನು ಮನೆಯಲ್ಲಿ ಇರುವುದಿಲ್ಲ ಎಂದು ಪತ್ನಿಗೆ ಆತ ಸುಳ್ಳು ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಪತ್ನಿ ಮತ್ತು ಯುವಕನ ನಡುವೆ ಫೋನ್‌ ಸಂಭಾಷಣೆ ಶುರುವಾಗಿದೆ.

ಇದನ್ನೆಲ್ಲ ಗಮನಿಸಿದ ಆರೋಪಿ, ಯುವಕ ಮನೆಗೆ ಬರುವುದನ್ನೇ ಕಾದು ತನ್ನ ಸ್ನೇಹಿತರ ಜತೆಗೂಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊನೆಗೆ ಸಾಯಿಸಿದ್ದಾನೆ.

ಯಾವುದೇ ಸುಳಿವು ಸಿಗಬಾರದು ಎನ್ನುವ ಕಾರಣಕ್ಕೆ ಯುವಕನ ಮೃತದೇಹವನ್ನು ಕಳ್ಳಭಟ್ಟಿ ಕೇಂದ್ರಕ್ಕೆ ಕೊಂಡೊಯ್ದು ಅದನ್ನು ಸುಟ್ಟಿದ್ದಾರೆ.

ಬಳಿಕ ಅಳಿದುಳಿದ ಅವಶೇಷಗಳನ್ನು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದರು.

ಆದರೆ ಈ ಗಡಿಬಿಡಿಯಲ್ಲಿ ಆತನ ಚಪ್ಪಲಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಕಳ್ಳರು ಒಂದಲ್ಲ, ಒಂದು ಸುಳಿವು ಕೊಟ್ಟೇ ಕೊಡುತ್ತಾರೆ ಎಂಬ ಮಾತಿನಂತೆ ಕೊಲೆಯಾದ ಯುವಕನ ಚಪ್ಪಲಿಯಿಂದ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.

Click to comment

Leave a Reply

Your email address will not be published. Required fields are marked *

LATEST NEWS

ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!

Published

on

ಕುಂದಾಪುರ: ಇನೋವಾ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ 25 ವರ್ಷದ ಕೀರ್ತಿ ಮೃತ ಯುವತಿ. ಘಟನೆಯಲ್ಲಿ ಬೆಂಗಳೂರು ಮೂಲದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂದೆ ಓದಿ..; ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

ಧರ್ಮಸ್ಥಳದಿಂದ ಮುರುಡೇಶ್ವರಕ್ಕೆ ಹೊರಟಿದ್ದ ಇನೋವಾ ಕಾರು ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಟ್ಟಾಗಿ ಮುರ್ಡೇಶ್ವರ, ಗೋಕರ್ಣಕ್ಕೆ ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

accident

Continue Reading

DAKSHINA KANNADA

ದೊಡ್ಡವರ ಜಗಳದಲ್ಲಿ ಇಹಲೋಕ ತಜ್ಯಿಸಿದ 3 ರ ಕಂದಮ್ಮ…

Published

on

ಮಂಗಳೂರು (ಬೆಳಗಾವಿ): ಅದು ಎರಡು ಕುಟುಂಬಗಳ ನಡುವೆ ನಡೆದಿರೋ ಜಗಳ . ಆದ್ರೆ ಆ ಜಗಳಕ್ಕೆ ಏನೂ ಅರಿಯದ ಮೂರು ವರ್ಷದ ಪುಟ್ಟ ಮಗು ಬಲಿಯಾಗಿದೆ. ಪಾಪಿಯೊಬ್ಬ ಮಗುವಿನ ಎದೆಗೆ ಕಾಲಿಟ್ಟು ಮಗುವಿನ ಉಸಿರು ನಿಲ್ಲಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಎಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೊಡ್ಡವರ ಜಗಳದಲ್ಲಿ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಮೂರು ವರ್ಷದ ಮಗು ಹತವಾಗಿದೆ. ಜೋತಿಭಾ ತುಕಾರಾಮ ಬಾಬಬರ ಎಂಬಾತ ಮಗುವಿನ ಜೀವಕ್ಕೆ ಕುತ್ತು ತಂದ ಆರೋಪಿಯಾಗಿದ್ದಾನೆ.
ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ತಾರಕ್ಕೇರಿದಾಗ ಸಿಟ್ಟಿನಲ್ಲಿ ಜೋತಿಬಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ಈ ವೇಳೆ ಮಗುವನ್ನು ಆತನ ಕಾಲಿನ ಅಡಿಯಿಂದ ತೆಗೆಯಲು ಮಗುವಿನ ತಾಯಿ ಯತ್ನಿಸಿದ್ದಾಳೆ . ಆ ವೇಳಗೆ ಇನ್ನಷ್ಟು ಗಟ್ಟಿಯಾಗಿ ಕಾಲಿನಿಂದ ಮಗುವಿನ ಎದೆಗೆ ಕಾಲಿನಿಂದ ಒತ್ತಿದ ಕಾರಣ ಮಗು ಉಸಿರು ನಿಲ್ಲಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

LATEST NEWS

Trending