Connect with us

  LATEST NEWS

  ಮೀನುಗಾರಿಕಾ ಬೋಟ್‌ನಲ್ಲಿ ಆಕಸ್ಮಿಕ ಬೆಂಕಿ: ಏಳು ಮಂದಿ ರಕ್ಷಣೆ

  Published

  on

  ಉಡುಪಿ: ಮೀನುಗಾರಿಕಾ ಬೋಟ್‌ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, 7 ಮೀನುಗಾರರನ್ನು ರಕ್ಷಿಸಿದ ಘಟನೆ ಕಾರವಾರ ಲೈಟ್‌ ಹೌಸ್‌ನಿಂದ ಹತ್ತು ನಾಟಿಕಲ್‌ ಮೈಲ್‌ ದೂರದ ಸಮುದ್ರದಲ್ಲಿ ನಿನ್ನೆ ಬೆಳಗಿನ ಜಾವ ನಡೆದಿದೆ.

  ಮೀನುಗಾರಿಕೆಗೆ ತೆರಳಿದ್ದ ವರದಾ ವಿನಾಯಕ ಮೀನುಗಾರಿಕಾ ಬೋಟ್‌ನಲ್ಲಿ ಏಕಾಏಕಿ ಶಾಟ್ ಸರ್ಕ್ಯೂಟ್‌ ಉಂಟಾಗಿದ್ದು, ಇದರಿಂದ ಬೆಂಕಿ ಬೋಟ್‌ಗೆ ಹತ್ತಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಮೀನುಗಾರಿಕಾ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

  ಬೆಂಕಿ ಅವಘಡ ನಡೆದಿರುವ ಬಗ್ಗೆ ಮಲ್ಪೆ ಕಚೇರಿಯಿಂದ ಬಂದ ಮಾಹಿತಿಯಂತೆ, ಭಾರತೀಯ ಕೋಸ್ಟ್ ಗಾರ್ಡ್ ಮಂಗಳೂರು ಕಚೇರಿಯಿಂದ ರಾತ್ರಿ ಕಾರ್ಯಾಚರಣೆ ಆರಂಭಿಸಲಾಗಿತ್ತು.

  LATEST NEWS

  ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಹ*ತ್ಯೆಗೈದ ಪಾಪಿ!

  Published

  on

  ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬುಧವಾರ(ಜೂ.19) ಸಂಜೆ  3 ವರ್ಷದ ಮಗುವನ್ನು ಹ*ತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬೆಂಬತ್ತಿದ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊ*ಲೆಗೈದಿದ್ದು ಬೇರ್ಯಾರೂ ಅಲ್ಲ, ಮಗುವಿನ ಚಿಕ್ಕಪ್ಪನೆ ಎಂಬುದು ಬಹಿರಂಗವಾಗಿದೆ.


  ಆರೋಪಿ ರಂಜಿತ್​ಗೆ ಅತ್ತಿಗೆ,​ ದುಡಿದು ತಿನ್ನುವಂತೆ ಬುದ್ದಿವಾದ ಹೇಳಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇಂಜಿನಿಯರಿಂಗ್ ಮುಗಿಸಿದ್ದ ಆರೋಪಿ ರಂಜಿತ್​ ಕೆಲಸವಿಲ್ಲದೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ ಅತ್ತಿಗೆ ಉಂಡಾಡಿ ಗುಂಡ ಆಗಿದ್ದೀಯಾ ಅಂತ ಬುದ್ದಿವಾದ ಹೇಳಿದ್ದಾರಂತೆ. ಇದರಿಂದ ಕೋಪಗೊಂಡ ರಂಜಿತ್, ಅತ್ತಿಗೆಗೆ ಹೊಡೆದಿದ್ದಲ್ಲದೆ, ಮಗುವನ್ನು ಕರೆದುಕೊಂಡು ಹೋಗಿ ಕೊ*ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

  ಏನಿದು ಪ್ರಕರಣ ?

  ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬುಧವಾರ(ಜೂ.20) ಸಂಜೆ ಬೆಚ್ಚಿ ಬೀಳುವಂತಹ ಘಟನೆ ನಡೆದಿತ್ತು. ಸ್ವತಃ ಚಿಕ್ಕಪ್ಪ ರಂಜಿತ್ ತನ್ನ ಅಣ್ಣನ 3 ವರ್ಷದ ಮಗುವನ್ನು ಮನೆ ಬಳಿಯ ಪಾಳುಬಿದ್ದ ಮನೆಯೊಂದರಲ್ಲಿ ಬಟ್ಟೆ ಒಗೆದಂತೆ ಚಪ್ಪಡಿಕಲ್ಲಿಗೆ ಹೊಡೆದು, ನಂತರ ಚಾಕುವಿನಿಂದ ಕತ್ತುಸೀಳಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾನೆ.

  ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್, ಬಟ್ಲಹಳ್ಳಿ ಠಾಣೆಯ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.  ಆರೋಪಿ ರಂಜಿತ್ ಮೃ*ತ ಬಾಲಕನ ತಂದೆ ಮಂಜುನಾಥ್ ಚಿಕ್ಕಪ್ಪನ ಮಗನಾಗಿದ್ದಾನೆ. 2 ಕುಟುಂಬಗಳು ಒಟ್ಟಿಗೆ ಇವೆ. ಭೂ ವಿವಾದ, ವೈಯಕ್ತಿಕ ದ್ವೇಷ, ಹಳೇ ದ್ವೇಷ ಯಾವುದೂ ಇವರ ನಡುವೆ ಇರಲಿಲ್ಲವಂತೆ. ಹಾಗಾಗಿ ಯಾವುದೇ ಅನುಮಾನ ಬಂದಿರಲಿಲ್ಲ.

  ಇದನ್ನೂ ಓದಿ …ಬೆಚ್ಚಿ ಬಿದ್ದ ಹಾಸನ….ಹಾಡಹಗಲೇ ಗುಂಡಿಕ್ಕಿ ಇಬ್ಬರ ಹ*ತ್ಯೆ

  ಆರೋಪಿ ರಂಜಿತ್ ಬುಧವಾರ ಸಂಜೆ 4 ಗಂಟೆ ಸಮಯದಲ್ಲಿ ಅಣ್ಣನ ಮನೆಯಲ್ಲೇ ಊಟ ಮಾಡಿ, ಮಗುವಿನ ಜೊತೆ ಆಟವಾಡಿದ್ದಾನೆ. ನಂತರ ಮಗುವನ್ನು ಕರೆದುಕೊಂಡು ಹೋಗಿದ್ದ. ಇನ್ನು ಆರೋಪಿಯ ಮೇಲೆ ಆತನ ಸಂಬಂಧಿಕರಿಗೆ ಯಾವುದೇ ಅನುಮಾನವಿರಲಿಲ್ಲ. ಪೊಲೀಸರ ಮುಂದೆಯೂ ಆರೋಪಿ ಬಾಯ್ಬಿಡುತ್ತಿರಲಿಲ್ಲ. ಇದರಿಂದ ಪುಟಾಣಿ ಕೊ*ಲೆ ನಿಗೂಢವಾಗಿ ಉಳಿದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

  Continue Reading

  LATEST NEWS

  ಬೆಚ್ಚಿ ಬಿದ್ದ ಹಾಸನ….ಹಾಡಹಗಲೇ ಗುಂಡಿಕ್ಕಿ ಇಬ್ಬರ ಹ*ತ್ಯೆ

  Published

  on

  ಹಾಸನ : ಹಾಸನದಲ್ಲಿ ಹಾಡಹಗಲೇ ಗುಂ*ಡಿನ ಸದ್ದು ಕೇಳಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಗುಂ*ಡಿನ ದಾಳಿ ನಡೆದಿದೆ. ಪರಿಣಾಮ ಇಬ್ಬರು ಸಾ*ವನ್ನಪ್ಪಿದ್ದಾರೆ.


  ಒಬ್ಬ ವ್ಯಕ್ತಿಯ ಶ*ವ ಕಾರಿನ ಒಳಗೆ ಕಂಡುಬಂದಿದ್ದು, ಕಾರಿನ ಹೊರಗಡೆ ಮತ್ತೊಂದು ಶ*ವ ಪತ್ತೆಯಾಗಿದೆ. ಆಸ್ತಿ ವಿಚಾರಕ್ಕೆ ಕೊ*ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

  ಹಾಸನದ ಕೆಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್​ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಎಫ್​ಎಸ್​​ಎಲ್​ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ.

  ಘಟನೆ ಬಗ್ಗೆ ಮಾಹಿತಿ ನೀಡಿದ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹ*ತ್ಯೆ ಮಾಡಿ ಮತ್ತೋರ್ವ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಇಂದು(ಜೂ.20) ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ : ರಾಹೋವನ : ರಾಮಾಯಣ ಅವಹೇಳನ ಮಾಡಿ ನಾಟಕ ಮಾಡಿದ ವಿದ್ಯಾರ್ಥಿಗಳಿಗೆ 1.2 ಲಕ್ಷ ರೂ ದಂಡ!

  ಘಟನಾ ಸ್ಥಳದಲ್ಲಿದ್ದ ಕಾರು ಮೈಸೂರು ಮೂಲದ್ದು ಎನ್ನಲಾಗಿದೆ. ಮೃತ ವ್ಯಕ್ತಿಗಳ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಕಾರಿನ ಹೊರಗಿರುವ ಶ*ವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಸೈಟ್​ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಮಾಹಿತಿ ಇದೆ. ಆದರೆ, ವಾಸ್ತವ ಏನೆಂಬುದು ತನಿಖೆಯ ನಂತರ ತಿಳಿಯಬೇಕಿದೆ ಎಂದು ಮೊಹಮ್ಮದ್ ಸುಜೀತಾ ಮಾಹಿತಿ ನೀಡಿದರು.

  Continue Reading

  LATEST NEWS

  ರಾಹೋವನ : ರಾಮಾಯಣ ಅವಹೇಳನ ಮಾಡಿ ನಾಟಕ ಮಾಡಿದ ವಿದ್ಯಾರ್ಥಿಗಳಿಗೆ 1.2 ಲಕ್ಷ ರೂ ದಂಡ!

  Published

  on

  ಮಂಗಳೂರು / ಮುಂಬೈ: ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ಅವಹೇಳನಕಾರಿಯಾಗಿ ನಾಟಕ ಮಾಡಿದ್ದ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೆ 1.2ಲಕ್ಷ ರೂ ದಂಡ ವಿಧಿಸಿದೆ.

  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಮಾರ್ಚ್ 31 ರಂದು ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ (ಪಿಎಎಫ್) ಆಯೋಜಿಸಿತ್ತು. ಈ ಸಂದರ್ಭದಲ್ಲಿ ರಾಮಾಯಣದ ವಿಡಂಬನೆ ಎಂದು ಹೇಳಲಾದ ‘ರಾಹೋವನ’ ಶೀರ್ಷಿಕೆಯ ವಿವಾದಾತ್ಮಕ ನಾಟಕವನ್ನು ಎಂಟು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು. ಈ ನಾಟಕ ತಂಡಕ್ಕೆ ಇದೀಗ ಆಡಳಿತ ಮಂಡಳಿ ದಂಡ ವಿಧಿಸಿದೆ.


  ಈ ನಾಟಕದಲ್ಲಿ ಹಿಂದೂಗಳು ಪೂಜ್ಯನೀಯ ಎಂದು ಭಾವಿಸುವ ಹಿಂದೂ ಮಹಾಕಾವ್ಯ ರಾಮಾಯಣವನ್ನು ಮತ್ತು ಅದರಲ್ಲಿನ ಪಾತ್ರಗಳನ್ನು ಸಡಿಲವಾಗಿ ಚಿತ್ರಿಸಲಾಗಿದೆ. ಹಿಂದೂ ನಂಬಿಕೆಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ತಂಡವೊಂದು ನಾಟಕದ ವಿರುದ್ಧ ಔಪಚಾರಿಕವಾಗಿ ದೂರು ನೀಡಿತ್ತು.

  ಇದನ್ನೂ ಓದಿ : ಮೆಕ್ಕಾ ಯಾತ್ರೆ ವೇಳೆ ದುರಂತ : ತೀವ್ರ ಶಾಖಕ್ಕೆ ಕನಿಷ್ಠ 68 ಭಾರತೀಯರು ಸಾ*ವು

  “ಸ್ತ್ರೀವಾದವನ್ನು ಉತ್ತೇಜಿಸುವ” ಸೋಗಿನಲ್ಲಿ ನಾಟಕವು ರಾಮ, ಲಕ್ಷ್ಮಣ ಸೇರಿದಂತೆ ಪ್ರಮುಖ ಪಾತ್ರಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಿದೆ ಎಂದು ಕೆಲವು ವಿದ್ಯಾರ್ಥಿಗಳಿಂದ ಆರೋಪ ಕೇಳಿ ಬಂದಿತ್ತು. ಇದೇ ದೂರಿನ ಆಧಾರದ ಮೇಲೆ ಮೇ 8 ರಂದು ಐಐಟಿ ಬಾಂಬೆ ಶಿಸ್ತು ಸಮಿತಿ ಸಭೆ ಕರೆದಿತ್ತು. ಇದರ ಪರಿಣಾಮವಾಗಿ ಜೂನ್ 4 ರಂದು ಸ್ಕಿಟ್ ಮಾಡಿದ್ದ ತಂಡಕ್ಕೆ 1.2ಲಕ್ಷ ರೂ ದಂಡ ವಿಧಿಸಲಾಗಿದೆ.

  Continue Reading

  LATEST NEWS

  Trending