Sunday, May 22, 2022

ಒತ್ತಾಯದಿಂದ ಯಾರಿಗೂ ಲಸಿಕೆ ನೀಡಲ್ಲ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

ನವದೆಹಲಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ ಲಸಿಕೆ ನೀಡುವುದಿಲ್ಲ. ಅಂತಹ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ಅಥವಾ ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.

ಲಸಿಕೆ ನೀಡುವುದು ಮತ್ತು ಲಸಿಕೆ ಪಡೆದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವ ಕ್ರಮವನ್ನು ಎಲ್ಲಿಯೂ ಜಾರಿಗೆ ತಂದಿಲ್ಲ.

ಜನರ ಹಿತಾಸಕ್ತಿಯಿಂದ ಮತ್ತು ಕೊರೊನಾ ಸೋಂಕು ಎಲ್ಲೆಡೆ ಹರಡುವುದನ್ನು ತಪ್ಪಿಸಲು ಲಸಿಕೆ ಪಡೆಯುವುದು ಮತ್ತು ಲಸಿಕೆ ಪ್ರಮಾಣಪತ್ರ ಹೊಂದಿರುವುದನ್ನು ಆರೋಗ್ಯ ಸಚಿವಾಲಯ ಅಭಿಯಾನ ಕೈಗೊಂಡಿದೆ.

ಆದರೆ ಒತ್ತಾಯದಿಂದ ಯಾರ ಮೇಲೂ ಅದನ್ನೂ ಹೇರಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಎಲ್ಲರೂ ಲಸಿಕೆ ಪಡೆದು ಕೋವಿಡ್ ಸೋಂಕಿನ ವಿರುದ್ಧ ಹೋರಾಡುವಂತೆ ಸೂಚಿಸಲಾಗಿದೆ.

ಆದರೆ ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here

Hot Topics

ದೈವಸ್ಥಾನಕ್ಕೆ ಕನ್ನ ಹಾಕಿದ ಮಣಿಪಾಲದ ಭಾಸ್ಕರ..!

ಉಡುಪಿ: ಹಿರೇಬೆಟ್ಟು ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಹಿರೇಬೆಟ್ಟು ಭಾಸ್ಕರ ಶೆಟ್ಟಿ (49) ಬಂಧಿತ ಆರೋಪಿ. 10 ದಿನಗಳ ಹಿಂದೆ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಆರೋಪಿ...

ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ನಾಳೆ ‘ಟೆಡೆಕ್ಸ್‌’ ಭಾಷಣ ಸರಣಿ

ಮಂಗಳೂರು: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಟೆಡೆಕ್ಸ್‌ನ ಭಾಷಣ ಸರಣಿ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಮೇ 22ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ ಪ್ರವೀಣ್‌ ಮಾರ್ಟಿಸ್‌ ಅವರು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ...

ವಿಶ್ವದ 11 ರಾಷ್ಟ್ರಗಳಿಗೆ ಹರಡಿದ ‘ಮಂಕಿಪಾಕ್ಸ್‌’: ಭಾರತದಲ್ಲಿ ಹೈ ಅಲರ್ಟ್‌

ನವದೆಹಲಿ: ಮಂಕಿ ಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ತನ್ನ ಪಾದ ಚಾಚುತ್ತಿದೆ. ಭಾರತದಲ್ಲಿ ಇದುವರೆಗೆ ಈ ಕಾಯಿಲೆಯ ಯಾವುದೇ ಪ್ರಕರಣ ಕಂಡುಬಂದಿಲ್ಲವಾದರೂ ಕೇಂದ್ರ ಸರ್ಕಾರ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ.ವಿಶ್ವದ ಸುಮಾರು 11 ದೇಶಗಳಲ್ಲಿ...