Monday, July 4, 2022

ವಿಟ್ಲ: ಅಕ್ರಮ ಮದ್ಯ ಮಾರಾಟ ಅಡ್ಡೆಗೆ ದಾಳಿ- ಓರ್ವನ ಬಂಧನ

ಬಂಟ್ವಾಳ: ಅಕ್ರಮವಾಗಿ ಮದ್ಯವನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 24.93 ಲೀಟರ್‌ ಸಮೇತ ಓರ್ವನನ್ನು ಬಂಧಿಸಿದ ಘಟನೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕುದ್ದುಪದವಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಆನಂದ ಪೂಜಾರಿ ಎಂದು ಗುರುತಿಸಲಾಗಿದೆ.


ಘಟನೆ ಹಿನ್ನೆಲೆ
ಜ. 15 ರಂದು ವಿಟ್ಲ ಪೊಲೀಸ್ ಠಾಣೆಯ ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ತಂಡ ರೌಂಡ್ಸ್ನಲ್ಲಿದ್ದ ವೇಳೆ ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ಆನಂದ ಪೂಜಾರಿ ಎಂಬವರ ಮನೆಯ ಪಕ್ಕದ ಕೋಣೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತಿದೆ.

ಈ ಬಗ್ಗೆ ಸಂಜೆ 7.30ಕ್ಕೆ ದಾಳಿ ಮಾಡಿದ ವೇಳೆ ಬೆಂಗಳೂರು ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 40 ಪ್ಯಾಕೆಟ್, ಓರಿಜಿನಲ್ ಚಾಯಿಸ್ 90 ಎಂಎಲ್ ಮದ್ಯ ತುಂಬಿರುವ 19 ಪ್ಯಾಕೆಟ್, ಓರಿಜಿನಲ್ ಚಾಯಿಸ್ 180 ಎಂಎಲ್ ಮದ್ಯ ತುಂಬಿರುವ 40 ಪ್ಯಾಕೆಟ್, ಪ್ರೆಸ್ಟಿಜ್ ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 50 ಪ್ಯಾಕೆಟ್,

ಪ್ರೆಸ್ಟಿಜ್ ವಿಸ್ಕಿ 180 ಎಂಎಲ್ ಮದ್ಯ ತುಂಬಿರುವ 29 ಪ್ಯಾಕೆಟ್, ಮೈಸೂರ್ ಲ್ಯಾನ್ಸರ್ 90 ಎಂಎಲ್ ಮದ್ಯ ತುಂಬಿರುವ 30 ಪ್ಯಾಕೆಟ್ ಸೇರಿ ಒಟ್ಟು 10,493 ರೂಪಾಯಿ ಅಂದಾಜಿನ 24.93 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಆರೋಪಿ ಆನಂದ ಪೂಜಾರಿಯ ವಶದಲ್ಲಿದ್ದ ರೂಪಾಯಿ 14,193 ನಗದು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here

Hot Topics

ಸೌದಿ ಅರೇಬಿಯಾ: ಹಜ್‌ ಯಾತ್ರಿಗಳ ಸೇವೆಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ(I.F.F.)

ರಿಯಾದ್‌: ಕೊಲ್ಲಿ ರಾಷ್ಟ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯ ಫ್ರೆಟರ್ನಿಟಿ ಫೋರಂ (ಐ.ಎಫ್.ಎಫ್) ಪ್ರತೀ ವರ್ಷದಂತೆ ಈ ವರ್ಷವೂ ಹಜ್‌ ಯಾತ್ರಾರ್ಥಿಗಳ ಸೇವೆಯಲ್ಲಿ ಸಕ್ರಿಯವಾಗಿದೆ.2022 ರ ಹಜ್‌ಗೆ ಈಗಾಗಲೇ ಭಾರತದಿಂದ ಎಪ್ಪತ್ತು...

ಬೈಂದೂರಿನಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ಸರ್ವೆ ನಂಬ್ರ 170 ರಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ (ಎಸ್.ಎಲ್.ಆರ್.ಎಂ) ನಿರ್ಮಿಸಬಾರದು ಎಂದು ಸ್ಥಳೀಯರು ಬೃಹತ್ ಪ್ರತಿಭಟನೆ...

ಬೆಳ್ತಂಗಡಿ: ಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಕೊನೆಯುಸಿರು

ಬೆಳ್ತಂಗಡಿ: ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಬದ್ಯಾರು ಬಳಿ ಇಂದು ನಡೆದಿದೆ.ಕುಶಾಲಪ್ಪ ಗೌಡ (46) ಮೃತ ವ್ಯಕ್ತಿ. ಮೃತ ಕುಶಾಲಪ್ಪ ಗೌಡ ಮನೆಯ...