FILM
ಹಿರಿಯ ನಟ ನಿರ್ಮಾಪಕ…ಕಳ್ಳ ‘ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೇರು ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್(81 ವ) ರವರು ಎ.16ರಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ. ಹಲವು ದಿಗ್ಗಜರ ಜೊತೆ ನಟಿಸಿದ್ದ ಇವರು ವಿಷ್ಣುವರ್ದನ್ ಜೊತೆ ನಡಿಸಿದ್ದ ಕಳ್ಳ-ಕುಳ್ಳ ಸಿನೆಮಾದಲ್ಲಿ ಇವರಿಬ್ಬರ ಜೋಡಿ ಬಹಳಷ್ಟು ಸದ್ದು ಮಾಡಿತ್ತು.
ರಾತ್ರಿ ಭೇದಿ ಆರಂಭ ಆಗಿದ್ದರಿಂದ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ದ್ವಾರಕೀಶ್ ಸಾವಿನ ಸುಳ್ಳು ಸುದ್ದಿ ಹರಡಿತ್ತು…!
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಸಂತಾಪ ಸೂಚಿಸುತ್ತಿದ್ದಾರೆ. ಈ ಹಿಂದೆ ದ್ವಾರಕೀಶ್ ಮರಣ ಫೇಕ್ ಸುದ್ದಿ ಹರಿದಾಡಿತ್ತು. ಇದೇ ರೀತಿ ಈ ಬಾರಿಯೂ ಆಗಿರಬಹುದು ಎಂದು ಹಲವರು ಭಾವಿಸಿದ್ದರು. ಇದೀಗ ದ್ವಾರಕೀಶ್ ರವರ ಕುಟುಂಬದವರು ಅವರ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.
READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್
ರಾಜ್‌ಕುಮಾರ್, ವಿಷ್ಣವರ್ಧನ್, ಶ್ರೀನಾಥ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದರು. ಇವರ ಮಂಕು ತಿಮ್ಮ ಸಿನೆಮಾ ಸುಪರ್ ಹಿಟ್ ಆಗಿತ್ತು. ನಟಿ ಮಂಜುಳಾ ಜೊತೆ ಹಲವು ಸಿನೆಮಾದಲ್ಲಿ ನಟಿಸಿದ್ದರು. ನಟನಾಗಿ ನಿರ್ದೇಶನಕ್ಕೂ ಇಳಿದಿದ್ದ ಇವರು ಹಲವು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಮಮತೆಯ ಬಂಧನ ಇವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ‘ವೀರ ಸಂಕಲ್ಪ’ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ.
FILM
ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ ಗೌಡ
ರ‍್ಯಾಪರ್ ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಆದ್ಮೇಲೆ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಟ್ರೋಲಿಗರ ಕಾಟದ ನಡುವೆಯೂ ಹೊಸ ರೀಲ್ಸ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ.
ಕೆಂಪು ಬಣ್ಣದ ಗೌನ್ ಧರಿಸಿ ಸಖತ್ ಹಾಟ್ ಆಗಿ ನಟಿ ಪೋಸ್ ಕೊಟ್ಟಿದ್ದಾರೆ. ಸಖತ್ ಸ್ಟೈಲೀಶ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಹೊಸ ರೀಲ್ಸ್‌ನಲ್ಲಿ ನಟಿಯ ಅವತಾರ ಕಂಡು ಸಖತ್ ಹಾಟ್ ಮಗಾ ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.
ನಿಮಗೆ ಡಿವೋರ್ಸ್ ಆಗಿದೆ ಅನ್ನೋದು ನೆನಪಿದ್ಯಾ? ಎಂದೆಲ್ಲಾ ನಟಿಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಯಾವ ಕಾಮೆಂಟ್‌ಗಳಿಗೂ ತಲೆಕೆಡಿಸಿಕೊಳ್ಳದೇ ನಟಿ ಸೈಲೆಂಟ್ ಆಗಿದ್ದಾರೆ. ಇನ್ನೂ ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ರಿಲೀಸ್‌ಗೆ ನಟಿ ಎದುರು ನೋಡ್ತಿದ್ದಾರೆ. ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದಾರೆ.
ಅಂದಹಾಗೆ, ಚಂದನ್ ಶೆಟ್ಟಿ ಜೊತೆ ನಿವೇದಿತಾ 2020ರಲ್ಲಿ ಮೈಸೂರಿನಲ್ಲಿ ಮದುವೆಯಾದರು. 2024ರ ಜೂನ್‌ನಲ್ಲಿ ಈ ಜೋಡಿ ಡಿವೋರ್ಸ್ ಘೋಷಿಸಿದರು.
BIG BOSS
ಚೈತ್ರಾ ಕುಂದಾಪುರ ವಿಚಿತ್ರ ಪೂಜೆಗೆ ಬಿಗ್‌ಬಾಸ್ ಮನೆಯ ಎಲ್ರೂ ಶಾಕ್; ವಿಡಿಯೋ!
ಬಿಗ್ ಬಾಸ್ ಸೀಸನ್ 11ರ ಆಟದ ಶೈಲಿ ಬದಲಾಗಿದೆ. ವಾರಗಳು ಕಳೆದಂತೆ ಒಬ್ಬೊಬ್ಬರು ತಮ್ಮದೇ ಗೇಮ್ ಪ್ಲಾನ್ ಮಾಡುತ್ತಾ, ಮನೆಯ ಸದಸ್ಯರಿಗೆ ಟಫ್ ಫೈಟ್ ನೀಡುತ್ತಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಮತ್ತು ಪೈಪೋಟಿಯ ಮಧ್ಯೆ ಪ್ರತಿಯೊಬ್ಬ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗುತ್ತಿದೆ.
5ನೇ ವಾರದಲ್ಲಿ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಕಳೆದ 4 ವಾರದಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಂಡಿರುವ ಸ್ಪರ್ಧಿಗಳು ಆಟ ಆಡುವುದನ್ನ ಕಲಿತಿದ್ದಾರೆ. ಸೀಸನ್ 11ರ ಸ್ಪರ್ಧಿಗಳು ತಮ್ಮ ಎದುರಾಳಿಗಳಿಗೆ ಟಕ್ಕರ್ ಕೊಡೋಕೆ ಶುರು ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಟ, ಪಟ ಅಂತ ಮಾತನಾಡುತ್ತಿದ್ದ ಚೈತ್ರಾ ಅವರು ಆಟದಲ್ಲಿ ಈಗ ಚಿತ್ರ, ವಿಚಿತ್ರ ಪಟ್ಟು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರ ಆಟದ ಶೈಲಿ ಬದಲಾಗಿರೋದಕ್ಕೆ ಈ ಪೂಜಾ ಶೈಲಿಯೇ ಸಾಕ್ಷಿಯಾಗಿದೆ.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಚೈತ್ರಾ ಅವರ ವಿಚಿತ್ರ ಪೂಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
FILM
ನಟ ಸಲ್ಮಾನ್ ಖಾನ್ ಬಳಿಕ ಈಗ ಶಾರುಖ್ ಖಾನ್‌ಗೆ ಕೊ*ಲೆ ಬೆ*ದರಿಕೆ
ಮಂಗಳೂರು/ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಈಗಾಗಲೇ ಹಲವಾರು ಬಾರಿ ಜೀ*ವ ಬೆದರಿಕೆ ಬಂದಿವೆ. ಇದೀಗ ನಟ ಶಾರುಖ್ ಖಾನ್‌ಗೆ ಕೊ*ಲೆ ಬೆ*ದರಿಕೆಯೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಾರುಖ್ ಖಾನ್ ತಂಡ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. 50 ಲಕ್ಷ ರೂ. ಕೊಡದಿದ್ದರೆ ಕೊ*ಲ್ಲುವುದಾಗಿ ಬೆ*ದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಶಾರುಖ್‌ಗೆ ಬೆ*ದರಿಕೆ ಬಂದ ಫೋನ್ ಫೈಜಾನ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಆತನ ಲೊಕೇಷನ್ ರಾಯ್‌ಪುರದಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರ ಪೊಲೀಸ್ ತಂಡ ರಾಯಪುರ ತಲುಪಿದ್ದು, ಫೈಜಾನ್ ಖಾನ್ ಆತನಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಫೇಸ್ ಬುಕ್ ಮೂಲಕ ಮಗು ಮಾರಾಟ ಮಾಡಿದ ಮಹಿಳೆ!
ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ಗ್ಯಾಂಗ್ಸ್ಟರ್ಗಳ ಕಣ್ಣಿವೆ. ಸಲ್ಮಾನ್ ಗೆ ಒಂದರ ಹಿಂದೆ ಒಂದರಂತೆ ಬೆ*ದರಿಕೆಗಳು ಬರುತ್ತಿವೆ. ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶಾರುಖ್ ಖಾನ್‌ಗೆ ಬೆ*ದರಿಕೆ ಕರೆ ಬಂದಿರುವ ಬಗ್ಗೆ ದೂರು ದಾಖಲಾಗಿದೆ.
- DAKSHINA KANNADA6 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- LATEST NEWS4 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA4 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್