ಉಡುಪಿ : ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಇಕ್ಕೆಲದಲ್ಲಿ ತ್ಯಾಜ್ಯ ಸುರಿದು ಪರಾರಿಯಾಗಲು ಯತ್ನಿಸಿದ ವಾಹನವನ್ನು ತಡೆದು ದಂಡ ವಿಧಿಸಿದ ಘಟನೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಫಾ ಹೊಟೇಲ್ ಬಳಿ ಸಂಭವಿಸಿದೆ.
ಶುಕ್ರವಾರ ಸಂಜೆ ಹುಬ್ಬಳ್ಳಿ ಮೂಲದ ವಾಹನವೊಂದು ಮಂಗಳೂರಿನ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಲೋಡ್ ಇಳಿಸಿದ ಚಾಲಕ,ಮರಳಿ ಹುಬ್ಬಳ್ಳಿಯತ್ತ ಸಲಿಸುತ್ತಿದ್ದಾಗ ಉಚ್ಚಿಲದ ರಾ.ಹೆ ಬಳಿ ಕೊಳೆತು ಹೋದ ಕಲ್ಲಂಗಡಿ ತ್ಯಾಜ್ಯವನ್ನು ಸುರಿದು ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯ ಸಹಿತ ಸಾರ್ವಜನಿಕರು ವಾಹನವನ್ನು ತಡೆದಿದ್ದಾರೆ.ಕೂಡಲೇ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸಿಬ್ಬಂದಿಗಳು ದಂಡ ವಿಧಿಸಿ ಸುರಿದ ತ್ಯಾಜ್ಯವನ್ನು ಮತ್ತೆ ವಾಹನಕ್ಕೆ ತುಂಬಿಸಿ ಕೊಂಡೊಯ್ಯಲು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಗ್ರಾ.ಪಂ ಸದಸ್ಯ ಮಜೀದ್ ಪೊಲ್ಯ ಮಾತನಾಡಿ,ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ಥಳ ಇಲ್ಲ ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ಕೋಳಿ ಹಾಗು ಇನ್ನಿತರ ತ್ಯಾಜ್ಯಗಳನ್ನು ಸುರಿದು ಪರಾರಿಯಾಗಿತ್ತಾರೆ.
ರಸ್ತೆ ಪಕ್ಕದಲ್ಲಿ ಯಾರೇ ತ್ಯಾಜ್ಯಗಳನ್ನು ತಂದು ಸುರಿದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭ ಗ್ರಾ.ಪಂ ಸದಸ್ಯ ಶಿವಕುಮಾರ್ ಸಿಬ್ಬಂದಿ ರಮೇಶ್ ಹಾಗು ಸ್ಥಳೀಯರಾದ ಕಿಶೋರ್ ಉಪಸ್ಥಿತರಿದ್ದರು.