Thursday, August 11, 2022

ಫ್ಲೈಯಿಂಗ್​ ಸಿಖ್​ ಮಿಲ್ಕಾ ಸಿಂಗ್​ ಇನ್ನಿಲ್ಲ : ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ..!

ನವದೆಹಲಿ : 400 ಮೀಟರ್‌ ಓಟದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಮಿಲ್ಕಾ ಸಿಂಗ್​ ಇನ್ನಿಲ್ಲ. ನಿನ್ನೆರಾತ್ರಿ 11.30ಕ್ಕೆ ಮಿಲ್ಕಾ ಸಿಂಗ್​ ಕೊನೆಯುಸಿರೆಳೆದಿದ್ದಾರೆ. ಗುರುವಾರ ಸ್ಥಿರವಾಗಿದ್ದ ಅವರ ಆರೋಗ್ಯ ಸ್ಥಿತಿ ನಿನ್ನೆ ಸಂಜೆಯಿಂದ ಬಿಗಡಾಯಿಸಿತ್ತು.

ಮಿಲ್ಕಾ ಸಿಂಗ್​ ಅವರು ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.ಭಾರತದ ಕೀರ್ತಿ ಪತಾಕೆಯನ್ನು ದೇಶ ವಿದೇಶದಲ್ಲಿ ಹಾರಿಸುವಂತೆ ಮಾಡಿದ್ದ ದಿಗ್ಗಜ ಅಥ್ಲೀಟ್​ ಮಿಲ್ಕಾ ಸಿಂಗ್​ (Milkha Singh) ಇನ್ನಿಲ್ಲ.

91 ವರ್ಷದ ಮಿಲ್ಕಾ ಸಿಂಗ್​ ಹಾಗೂ ಅವರ ಮಡದಿ ನಿರ್ಮಲ್​ ಕೌರ್​ ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕಾಗಿತ್ತು.

ಕಳೆದ ಭಾನುವಾರ ನಿರ್ಮಲ್​ ಕೌರ್​ ಅವರು ಕೋವಿಡ್​ನಿಂದಾಗಿಯೇ ಕೊನೆಯುಸಿರೆಳೆದಿದ್ದರು. ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಿಲ್ಕಾ ಸಿಂಗ್​​ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮತ್ತೆ ಕೊರೋನಾ ಪರೀಕ್ಷೆ ಮಾಡಿ, ಬುಧವಾರ ಅವರನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿತಿ ನಿನ್ನೆ ಗಂಭೀರವಾಗಿತ್ತು.

ಪಿಜಿಐಎಂಇಆರ್​ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿತ್ತು. ಮಿಲ್ಕಾ ಸಿಂಗ್​ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಆಮ್ಲಜನಕ ಪ್ರಮಾಣವು ಇಳಿಕೆಯಾಗ ತೊಡಗಿತ್ತು ಎನ್ನಲಾಗಿದೆ.

ನಿನ್ನೆರಾತ್ರಿ 11.30ಕ್ಕೆ ಮಿಲ್ಕಾ ಸಿಂಗ್​ ಕೊನೆಯುಸಿರೆಳೆದಿದ್ದಾರೆ. ಗುರುವಾರ ಸ್ಥಿರವಾಗಿದ್ದ ಅವರ ಆರೋಗ್ಯ ಸ್ಥಿತಿ ನಿನ್ನೆ ಸಂಜೆಯಿಂದ ಬಿಗಡಾಯಿಸಿತ್ತು. ಮಿಲ್ಕಾ ಸಿಂಗ್​ ಅವರು ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.

400 ಮೀಟರ್‌ ಓಟದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಮಿಲ್ಕಾ ಸಿಂಗ್​ ಅವರು 1958ರ ಕಾಮನ್‌ವೆಲ್ತ್‌ ಗೇಮ್ಸ್​ನಲ್ಲಿ 200 ಹಾಗೂ 400 ಮೀಟರ್​ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಾಲ್ಕು ಬಾರಿ ಏಷ್ಯನ್ ಗೇಮ್ಸ್‌ ಚಾಂಪಿಯನ್ ಆಗಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು.

ಫ್ಲೈಯಿಂಗ್​ ಸಿಖ್​

1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್‌ ಅಂತರವನ್ನು 45.6 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಮಿಲ್ಕಾ ಸಿಂಗ್‌ ಅವರ ಈ ರಾಷ್ಟ್ರೀಯ ದಾಖಲೆಯನ್ನು 1998ರ ಒಲಿಂಪಿಕ್ಸ್‌ನಲ್ಲಿ ಪರಮ್‌ಜೀತ್ ಸಿಂಗ್‌ ಮುರಿದರು. ಓಟದ ಸ್ಪರ್ಧೆಯಲ್ಲಿ ಆಗ ಹೆಸರು ಮಾಡಿದ್ದ ಕ್ರೀಡಾಪಟು ಅಬ್ದುಲ್ ಖಲೀಲ್​ ಅವರನ್ನು ಸೋಲಿಸಿದ ನಂತರ 1960ರಲ್ಲಿ ಪಾಕಿಸ್ತಾನದ ಜನರಲ್ ಅಯೂಬ್ ಖಾನ್, ಮಿಲ್ಕಾ ಸಿಂಗ್​ ಅವರಿಗೆ ಫ್ಲೈಯಿಂಗ್​ ಸಿಖ್​ ಅನ್ನೋ ಬಿರುದನ್ನು ನೀಡಿದ್ದರು. ಅಂದಿನಿಂದ ಫ್ಲೈಯಿಂಗ್​ ಸಿಖ್​ ಎಂದೇ ಖ್ಯಾತರಾದರು.

ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮಹಾನ್​ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ. ಇಡೀ ದೇಶದ ಕಲ್ಪನೆಯ ಮೇಲೆ ಹಿಡಿತ ಸಾಧಿಸಿದ್ದ ಮಿಲ್ಕಾ ಸಿಂಗ್​ ಅಸಂಖ್ಯ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದರು ಎಂದು ಟ್ವೀಟ್​ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಚಪ್ಪಲಿಯಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಲಕ್ಷ ರೂ ಮೌಲ್ಯದ ಚಿನ್ನ ವಶ

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದಿಳಿದ ಕೇರಳ ಮೂಲದ ಪ್ರಯಾಣಿಕನೊಬ್ಬ ಚಪ್ಪಲಿಯಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಆ.10 ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದ ಸ್ಪೈಸ್‌ ಜೆಟ್‌...

ಪಿ.ಯು.ಸಿ ಪೂರಕ ಪರೀಕ್ಷೆ: ಆ.12ರಿಂದ ಆ.25ರವರೆಗೆ ನಿಷೇಧಾಜ್ಞೆ

ಮಂಗಳೂರು: ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ಹಿನ್ನೆಲೆ ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯ 4 ಪರೀಕ್ಷಾ ಕೇಂದ್ರಗಳಲ್ಲಿ ಆ.12ರಿಂದ ಆ.25ರ ವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.ಪರೀಕ್ಷೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ...

ಕಾಲು ಜಾರಿ ಹೊಳೆಗೆ ಬಿದ್ದ ಸನ್ನಿಧಿಯ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಕುಟುಂಬಸ್ಥರು-ಸ್ನೇಹಿತರ ಆಕ್ರಂದನ

ಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಬಾಲಕಿ ಸನ್ನಿಧಿ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದ್ದು, ಈಕೆ ಅಂತ್ಯ ಕ್ರಿಯೆಯನ್ನು ಮನೆ ಸಮೀಪದಲ್ಲೇ ನಿನ್ನೆ ನೆರವೇರಿಸಲಾಗಿದೆ. ಸರ್ಕಾರಿ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ...