LATEST NEWS
Udupi: 2000 ರೂಪಾಯಿ ಲಂಚಕ್ಕಾಗಿ ಕೈಯೊಡ್ಡಿದ ಮೆಸ್ಕಾಂ ಲೈನ್‌ಮ್ಯಾನ್ ಬಂಧನ..!
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಕಾರ್ಯಾಚರಣೆ ನಡೆಸಿದ್ದು, ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ರಮೇಶ್ ಬಡಿಗೇರನನ್ನು ಬಂಧಿಸಿದೆ.
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಕಾರ್ಯಾಚರಣೆ ನಡೆಸಿದ್ದು, ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ರಮೇಶ್ ಬಡಿಗೇರನನ್ನು ಬಂಧಿಸಿದೆ.
ರಮೇಶ್ ಬಡಿಗೇರ ಕೇವಲ 2,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಲೈನ್ ಮ್ಯಾನ್ ಆಗಿದ್ದಾರೆ.
ವಿದ್ಯುತ್ ಕಂಬದ ಲೈನ್ ನಿಷ್ಕ್ರಿಯಗೊಳಿಸಬೇಕಾದರೆ ಲಂಚ ನೀಡಬೇಕೆಂದು ರಮೇಶ್ ಬೇಡಿಕೆ ಇಟ್ಟಿದ್ದರು.
ಮರ ಕಡಿಯುವ ಸಂದರ್ಭ ಲೈನ್ ಕಟ್ ಮಾಡಿಕೊಡುವಂತೆ ಬೈಂದೂರಿನ ಕುಸುಮಾ ಎಂಬವರು ಮನವಿ ಮಾಡಿದ್ದರು.
ಆದರೆ ಲೈನ್ ನಿಷ್ಕ್ರಿಯಗೊಳಿಸಬೇಕಾದರೆ ಲಂಚ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕುಸುಮಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ರಮೇಶ್ ಬಡಿಗೇರ ಲಂಚದ ಹಣವನ್ನು ಪಡೆಯುತ್ತಿದ್ದಾಗಲೇ ರೆಡ್‌ಹ್ಯಾಂಡಾಗಿ ಬಂದಿಸಿದ್ದಾರೆ.
ಡಿವೈಎಸ್ ಪಿ ಪ್ರಕಾಶ್, ಇನ್ಸ್ಪೆಕ್ಟರ್ ಜಯರಾಮ್ ಗೌಡ ತಂಡದ ಕಾರ್ಯಾಚರಣೆ ನಡೆಸಿದ್ದರು.
LATEST NEWS
ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್ ಗಳನ್ನು ಇಟ್ಟ ಕಿಡಿಗೇಡಿಗಳು: ತಪ್ಪಿದ ರೈಲು ದುರಂತ
ಅಜ್ಮೀರ್: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಸರಕು ಸಾಗಣೆ ಕಾರಿಡಾರ್ ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇಡುವ ಮೂಲಕ ಸರಕು ರೈಲನ್ನು ಹಳಿ ತಪ್ಪಿಸುವ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ತಲಾ 70 ಕೆ.ಜಿ ತೂಕದ ಸಿಮೆಂಟ್ ಬ್ಲಾಕ್ ಗಳಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಆದರೆ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ‘ಭಾನುವಾರ ಕೆಲವು ದುರ್ಷ್ಕಮಿಗಳು ಸರಕು ಸಾಗಣೆ ಕಾರಿಡಾರ್ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇಟ್ಟಿದ್ದಾರೆ. ಗೂಡ್ಸ್ ರೈಲು ಅದಕ್ಕೆ ಡಿಕ್ಕಿ ಹೊಡೆದಿದೆ’ ಎಂದು ವಾಯುವ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್ಪುರದಲ್ಲಿ ಭಾನುವಾರ ಕಾಳಿಂದಿ ಎಕ್ಸ್ ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದರು. ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್ ತುಂಬಿದ ಬಾಟಲಿಗಳು, ಗನ್ ಪೌಡರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇರಿ ರೈಲು ಸಿಲಿಂಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು. ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ.
ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆಗೆ ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಯಿತು.
FILM
ನಟ ದರ್ಶನ್ ಮನವಿ ಪುರಸ್ಕರಿಸಿದ ಹೈಕೋರ್ಟ್; ಮಾಧ್ಯಮಗಳಿಗೆ ನಿರ್ಬಂಧ
ಮಂಗಳೂರು/ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿರುವ ಅಂಶಗಳ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬಿತ್ತರವಾಗುತ್ತಿತ್ತು.
ಚಾರ್ಜ್ ಶೀಟ್ ನಲ್ಲಿರುವ ವರದಿಯನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇಂದು(ಸೆ.10) ಆದೇಶವನ್ನು ಪ್ರಕಟಿಸಿದ್ದು, ದರ್ಶನ್ ಮನವಿಯನ್ನು ಪುರಸ್ಕರಿಸಿ, ಅದನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆದೇಶಿಸಿದೆ.
ಕಳೆದ ತಿಂಗಳು ಆಗಸ್ಟ್ 27 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು.
ಇದನ್ನೂ ಓದಿ :ಮಗುವನ್ನು ಕೊಂ*ದು ವಾಷಿಂಗ್ ಮೆಷಿನ್ ನಲ್ಲಿಟ್ಟ ಮಹಿಳೆ!
ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೈಕೋರ್ಟ್ ಏಕಸದಸ್ಯ ಪೀಠ ಮುಂದಿನ ವಿಚಾರಣೆಯವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿ ಆದೇಶ ಹೊರಡಿಸಿದೆ.
LATEST NEWS
CPI(M)ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗಂಭೀರ..!
ನವ ದೆಹಲಿ : ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಪರಿಸ್ಥಿತಿ ಗಂಭೀರವಾಗಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಯೆಚೂರಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಯೆಚೂರಿ ಅವರಿಗೆ 72 ವರ್ಷ ವಯಸ್ಸಾಗಿದ್ದು, ಅವರು ತೀವೃ ಉಸಿರಾಟದ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಹಲವು ತಜ್ಞ ವೈದ್ಯರ ತಂಡ ಯೆಚೂರಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ದೇಹಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ. ನ್ಯುಮೋನಿಯಾ ತರದ ಎದೆ ಸೊಂಕಿನ ಚಿಕಿತ್ಸೆಗಾಗಿ ಆಗಸ್ಟ್ 19 ರಂದು ಏಮ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
- LATEST NEWS6 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- DAKSHINA KANNADA5 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM5 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
- LATEST NEWS24 hours ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್