HomeLATEST NEWSಮಣಿಪಾಲ ದಿ|ಡಾ. ಮೋಹನದಾಸ್ ಪೈ ಪತ್ನಿ ಲೀಲಾ ಪೈ(90) ನಿಧನ..!

ಮಣಿಪಾಲ ದಿ|ಡಾ. ಮೋಹನದಾಸ್ ಪೈ ಪತ್ನಿ ಲೀಲಾ ಪೈ(90) ನಿಧನ..!

ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷರಾಗಿದ್ದ ಉಡುಪಿಯ ಜನಪ್ರಿಯ ವೈದ್ಯ ದಿ ಡಾ ಕೊಚ್ಚಿಕಾರ್ ಮೋಹನದಾಸ್ ಪೈಯವರ ಪತ್ನಿ ಲೀಲಾ ಪೈ (90) ನಿಧನ ಹೊಂದಿದ್ದಾರೆ.

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷರಾಗಿದ್ದ ಉಡುಪಿಯ ಜನಪ್ರಿಯ ವೈದ್ಯ ದಿ ಡಾ ಕೊಚ್ಚಿಕಾರ್ ಮೋಹನದಾಸ್ ಪೈಯವರ ಪತ್ನಿ ಲೀಲಾ ಪೈ (90) ನಿಧನ ಹೊಂದಿದ್ದಾರೆ.

ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈಯವರ ಅಕ್ಕ ಆಗಿರುವ ಲೀಲಾ ಎಂ. ಪೈ  ವಯೋಸಹಜ ಕಾರಣದಿಂದ ಮೇ 23ರಂದು ಉಡುಪಿಯ ಡಾಟಿಎಂಎ ಪೈ ಆಸ್ಪತ್ರೆೆಯಲ್ಲಿ ನಿಧನ ಹೊಂದಿದರು.

ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾಾರೆ.

ಸಮಾಜಸೇವಾಸಕ್ತಿಯ ಲೀಲಾ ಎಂ. ಪೈಯವರು ಉಡುಪಿಯ ಮುಕುಂದಕೃಪಾ ಶಾಲೆಯ ಸಂಚಾಲಕರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದರು.

ಕಾಡಬೆಟ್ಟು ಟಿ. ಎ. ಪೈ ಮೋಡರ್ನ್ ಶಾಲೆಯ ಸಂಚಾಲಕರಾಗಿ, ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಸಮಿತಿ ಸದಸ್ಯರಾಗಿ, ಮಹಿಳಾ ಗ್ರಾಹಕರ ಸಹಕಾರ ಸಂಘದ ನಿರ್ದೇಶಕರಾಗಿಯೂ ಲೀಲಾ ಪೈಯವರು ಸೇವೆ ಸಲ್ಲಿಸಿದ್ದರು.

ಇವರ ಅಂತಿಮ ಸಂಸ್ಕಾಾರ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಬುಧವಾರ ನೆರವೇರಿತು.

Latest articles

ಕಾಸರಗೋಡು: ಎಮರ್ಜೆನ್ಸಿಲೈಟ್‌ನಲ್ಲಿ ಅಕ್ರಮ ಚಿನ್ನ ಸಾಗಾಟ- ಓರ್ವನ ಬಂಧನ..!

ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು...

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ- ಐದು ಮಂದಿ ಸ್ಥಳದಲ್ಲೇ ಸಾವು…!

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ...

ಬಂಟ್ವಾಳ ವಿಟ್ಲದಲ್ಲಿ ರಸ್ತೆಗೆ ಅಡ್ಡ ಬಂದ ದನ : ಆಟೋ ರಿಕ್ಷಾ ಪಲ್ಟಿ-50 ಲೀಟರ್ ಹಾಲು ನಷ್ಟ..!

ಸಾರಡ್ಕ - ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ಹಾಲು...

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...