Connect with us

Ancient Mangaluru

ಮಂಗಳೂರಿನಿಂದ ಪಾಕಿಸ್ತಾನಕ್ಕೆ ಇತ್ತು ರೈಲು ಸಂಚಾರ..!

Published

on

ಮಂಗಳೂರು: ಮಂಗಳೂರು ಎಂಬುವುದೇ ವಿಶೇಷ ಊರು. ಕಾರಣ ಹಲವು, ಈಗಲೂ ನೀವು ಮಂಗಳೂರಿಗೆ ಬರಬೇಕೆಂದಿದ್ದರೆ ಜಲ, ವಾಯು, ರಸ್ತೆ ಮೂಲಕ ಮಂಗಳೂರು ತಲುಪಬಹುದು. ಬ್ರಿಟೀಷರು  ಮೊದಲಿಗೆ ಜಲಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದರು. ಆಗಿನ ಭಾರತ ವಿಶಾಲವಾದ ಭೂವಿಸ್ತೀರ್ಣ ಹೊಂದಿತ್ತು. ಅಂದರೆ ಈಗಿನ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಭಾರತದ ಒಂದು ಭಾಗವಾಗಿತ್ತು. ವ್ಯವಹಾರ ಹಾಗೂ ಆಡಳಿತದ ದೃಷ್ಟಿಯಿಂದ ರೈಲು ಸಂಪರ್ಕವನ್ನು ಅವರೇ ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಎಪ್ರಿಲ್‌ 16, 1853ರಂದು ಮುಂಬೈನಿಂದ ಥಾಣೆಗೆ ರೈಲು ಸಂಚಾರ ಆರಂಭವಾಯಿತು.

1907ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ನಿರ್ಮಾಣಗೊಂಡಿತು. ಅದಾದ 22 ವರ್ಷಗಳ ನಂತರ 1929ರಲ್ಲಿ ‘ಗ್ರ್ಯಾಂಡ್‌ ಟ್ರಂಕ್‌ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ  ರೈಲು ಭಾರತದಿಂದ ಪಾಕಿಸ್ತಾನದ ಪೇಶಾವರಕ್ಕೆ ಸಂಚಾರ ಆರಂಭಿಸಿತು.

ಸುಮಾರು 104 ಗಂಟೆಗಳು ಅಂದರೆ ಸುಮಾರು 5 ದಿನಗಳ ನಿರಂತರ ಪ್ರಯಣ. 2497 ಮೈಲಿ ದೂರವನ್ನು ಈ ರೈಲು ಕ್ರಮಿಸುತಿತ್ತು. ಈ ರೈಲಿನಲ್ಲಿ ಪ್ರಥಮ ದರ್ಜೆ, ದ್ವಿತೀಯ ದರ್ಜೆ, ಹಾಗೂ ತೃತೀಯ ದರ್ಜೆ ಹಾಗೂ ಲಗೇಜ್‌ ಕೋಚ್‌ಗಳು ಇದ್ದವು. ಮದ್ರಾಸ್‌ ಅಂದರೆ ಈಗಿನ ಚೆನ್ನೈನಿಂದ ಹೊರಡುವ ರೈಲು ಕೇರಳದ ಕಣ್ಣೂರು ಮೂಲಕ ಮಂಗಳೂರಿಗೆ ಈ ರೈಲು ಬರುತ್ತಿತ್ತು.

ವಿಶೇಷ ಅಂದರೆ ಮಂಗಳೂರಿನಿಂದ ಮತ್ತೆರಡು ಕೋಚ್‌ಗಳನ್ನು ಇದಕ್ಕೆ ಸೇರಿಸಲಾಗುತಿತ್ತು. ಕಾರಣ ಈ ಪ್ರಾಂತ್ಯದಲ್ಲಿ ಅಕ್ಕಿ, ಅಡಿಕೆ, ಕಾಳುಮೇಣಸು, ತೆಂಗು ಹಾಗೂ ಹುಣಸೆ ಹಣ್ಣು ಸೇರಿದಂತೆ ವಿವಿಧ ಸಾಂಬಾರ ಪದಾರ್ಥಗಳು ಕರಾವಳಿಯಿಂದ ಸರಬರಾಜು ಆಗುತಿತ್ತು. ಜೊತೆಗೆ ಈ ರೈಲನ್ನು ಬ್ರಿಟೀಷ್‌ ಸೈನ್ಯದ ಸ್ಥಳಾಂತರಕ್ಕಾಗಿ ಬಳಸುತ್ತಿದ್ದರು.

@ರಾಜೇಶ್ ಫೆರಾವೋ

Ancient Mangaluru

ನೀರಿನ ಅಭಾವ ತಪ್ಪಿಸಲು ಟ್ಯಾಂಕರ್‌ ಮಾನಿಟರಿಂಗ್‌ ಆಪ್‌ ಅನುಷ್ಠಾನ-ಯು.ಟಿ ಖಾದರ್‌

Published

on

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್‌ ಮಾನಿಟರಿಂಗ್‌ ಆಪ್‌ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್‌ ಹೇಳಿದ್ದಾರೆ.

ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳು , ಅಧ್ಯಕ್ಷರು, ಉಪಾಧ್ಯಕ್ಷರು , ಉಳ್ಳಾಲ ತಾಲೂಕು ತಹಶೀಲ್ದಾರ್‌ಸಮ್ಮುಖದಲ್ಲಿ ಹಮ್ಮಿಕೊಂಡ ಕುಡಿಯುವ ನೀರು ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ಮಂಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗದಂತೆ ಅಧಿಕಾರಿಗಳು, ಪಿಡಿಓ, ಸೆಕ್ರೆಟರಿಗಳು ಪಂಚಾಯಿತಿ ಅಧ್ಯಕ್ಷರು , ಗ್ರಾಮದ ಹಿರಿಯರನ್ನು ಕ್ರೂಢೀಕರಿಸಿಕೊಂಡು ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಕಳೆದ ವರ್ಷ ಯಾವ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಅನ್ನುವ ಕುರಿತು ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ.

ಆ ಭಾಗಗಳಲ್ಲಿ ಪ್ರಸಕ್ತ ವರ್ಷ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ತಯಾರಿರಬೇಕು ಅನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ಪ್ರಯತ್ನವಾಗಿ ಕುಡಿಯುವ ನೀರಿನ ಟ್ಯಾಂಕರುಗಳಿಗೆ ಮಾನಿಟರಿಂಗ್‌ಆಪ್‌ ಯೋಜನೆಯನ್ನು ರೂಪಿಸಲಾಗಿದೆ. ಅದರ ಸಾಧಕ ಬಾಧಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿ ವರ್ಗದವರಿಗೆ ಅರಿಯಲು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲು ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಸಮಗ್ರವಾಗಿ ಜಾರಿಯಾದಲ್ಲಿ ರಾಜ್ಯದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ರಾಜ್ಯದಾದ್ಯಂತ ನೀರಿನ ಅಭಾವ ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಕೊನೆಯ ಹಂತದಲ್ಲಿದೆ.

ಉಳ್ಳಾಲ ನಗರ ವ್ಯಾಪ್ತಿಯ ಕೆಲಸ ಪೂರ್ಣಗೊಂಡರೂ, ಗ್ರಾಮೀಣ ಮಟ್ಟಕ್ಕೆ ಎರಡು ವರ್ಷಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಟೆಂಡರ್‌ಪ್ರಕ್ರಿಯೆ ನಡೆದು ಎರಡು ವರ್ಷ ಬೇಕಾಗುತ್ತದೆ. ಆನಂತರ ನೀರಿನ ವ್ಯವಸ್ಥೆ ಆಗಲಿದೆ. ಗ್ರಾಮ ಪಂಚಾಯತ್ ನವರು ವರ್ಷಕ್ಕೆ 12 ಲಕ್ಷ ನೀರಿಗಾಗಿ ಗ್ರಾ.ಪಂ.ನಿಂದ ಕೊಡುವ ಬದಲು ಟ್ಯಾಂಕರ್‌ ಖರೀದಿಗೆ ಕೇಳಿಕೊಂಡಿದ್ದಾರೆ. ಆದರೆ ಸರಕಾರದಿಂದ ಟ್ಯಾಂಕರ್‌ ಬಾಡಿಗೆ ಪಡೆಯಲು ಮಾತ್ರ ಅವಕಾಶವಿದೆ. ಕರಾರು ಪತ್ರದಂತೆ ಟ್ಯಾಂಕರ್‌ಅನ್ನು ಸದ್ಯಕ್ಕೆ ನೀಡಬಹುದು. ಮುಂದೆಯೂ ಸಮಸ್ಯೆ ಮುಂದುವರಿದಲ್ಲಿ ರಾಜ್ಯದ ಸಚಿವರುಗಳನ್ನು ಚರ್ಚಿಸಲಾಗುವುದು ಎಂದರು.ಜಲಯೋಜನೆ, ಕಂದಾಯ , ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ಕುಡಿಯುವ ನೀರಿನ ಯೋಜನೆಯಲ್ಲಿ ಕಾರ್ಯಾಚರಿಸಲಿದೆ. ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ತಹಶೀಲ್ದಾರ್‌ಪುಟ್ಟರಾಜು ಡಿ, ಉಪತಹಶೀಲ್ದಾರ್‌ನವನೀತ್‌ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್‌ಕುಮಾರ್‌, ಕೃಷಿ ಇಲಾಖೆ ಅಧಿಕಾರಿ ವೀಣಾ ರೈ, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು.

Continue Reading

Ancient Mangaluru

ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

Published

on

ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

Ancient Mangaluru

ಉಡುಪಿ ಪರಿಹಾರ ಕಾಣದ ನೀರಿನ ಸಮಸ್ಯೆ: ಖಾಲಿ ಕೊಡಗಳೊಂದಿಗೆ ಅಂಬಲಪಾಡಿ ಗ್ರಾಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ..!

Published

on

ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ.
ಉಡುಪಿ: ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ.

ಕಳೆದೆರಡು ತಿಂಗಳುಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಖಾಲಿ ಕೊಡದೊಂದಿಗೆ ನುಗ್ಗಿದ ಗ್ರಾಮಸ್ಥರು, ಕಚೇರಿಯೊಳಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಿಡ್ಡಿ ಮನೆಗಳಿಗೆ ಕಳೆದ ಎರಡು ತಿಂಗಳುಗಳಿಂದ ಸಮರ್ಪಕವಾಗಿ ಗ್ರಾಪಂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕಚೇರಿ ಆವರಣಕ್ಕೆ ಆಗಮಿಸಿದರು.

ಗ್ರಾಪಂ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ ಮಹಿಳೆಯರು ನೇರವಾಗಿ ಕೊಡಗಳೊಂದಿಗೆ ನೇರ ಕಚೇರಿಯೊಳಗೆ ನುಗ್ಗಿದರು.

ಕಚೇರಿಯೊಳಗೆ ಕೊಡಗಳನ್ನಿಟ್ಟು ಧರಣಿ ಕುಳಿತು ಸ್ಥಳಕ್ಕೆ ಅಧ್ಯಕ್ಷರು ಹಾಗೂ ಪಿಡಿಓ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸಿಕೊಡುವಂತೆ ಪಟ್ಟು ಹಿಡಿದರು.

ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೀರು ಕೊಡಲು ಸಾಧ್ಯವಾಗದ ಪಂಚಾಯತ್‌ಗೆ ಬೀಗ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಎರಡು ತಿಂಗಳಿನಲ್ಲಿ ಮೂರು ಬಾರಿ ಮಾತ್ರ ನೀರು ಕೊಟ್ಟಿದ್ದಾರೆ. ಅದರ ನಂತರ ನೀರು ಕೊಡಲಿಲ್ಲ. ಸ್ಥಳೀಯರೊಬ್ಬರು ನಮಗೆ ನೀರು ಪೂರೈಕೆ ಮಾಡುತ್ತಿದ್ದಾರೆ.

ಅವರು ನೀರು ಪೂರೈಸದಿದ್ದರೆ ನಮಗೆ ನೀರೇ ಇಲ್ಲ. ನಾವು ಇನ್ನು ಎಲ್ಲಿಗೆ ಹೋಗುವುದು. ಕೆಲವು ಪ್ರದೇಶಗಳಿಗೆ ಗ್ರಾಪಂನವರು ನೀರು ಕೊಡುತ್ತಾರೆ.

ಆದರೆ ನಮ್ಮಲ್ಲಿಗೆ ಬರುವುದಿಲ್ಲ. ಸುಮಾರು 80 ಮನೆಯವರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಾದ ಬೇಬಿ ಆರೋಪಿಸಿದರು.

ಬಳಿಕ ಕಚೇರಿಗೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ರೋಹಿಣಿಯವರೊಂದಿಗೆ ನೀರಿನ ಸಮಸ್ಯೆ ಕುರಿತು ಧರಣಿನಿರತರು ವಾಗ್ವಾದ ನಡೆಸಿದರು.

ಎರಡು ತಿಂಗಳುಗಳಿಂದ ನೀರಿಲ್ಲದೆ ಜನ ಪರದಾಡುತ್ತಿದ್ದರೂ ಅಧ್ಯಕ್ಷರು ಒಮ್ಮೆಯೂ ಭೇಟಿ ನೀಡದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಳಿಕ ಮಾತುಕತೆ ನಡೆಸಿ, ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಅಧ್ಯಕ್ಷರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಾಸ್ ಪಡೆದರು.

Continue Reading

LATEST NEWS

Trending