ಮಂಗಳೂರು : ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚಳವಾಗುತ್ತಿವೆ. ಇಂದು ಒಟ್ಟು 6 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 5 ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆವೊಂದರಲ್ಲೇ ಪತ್ತೆಯಾಗಿದ್ದು ಕರಾವಳಿಯಲ್ಲಿ ಆತಂಕ ಮನೆ ಮಾಡಿದೆ.
ಬಂಟ್ವಾಳ ಕುರ್ನಾಡುವಿನ ಶಾಲೆಯ 16 ವಿದ್ಯಾರ್ಥಿಗಳಿಗೆ ಡಿಸೆಂಬರ್ 10 ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಜೆನೊಮಿಕ್ ರಿಪೋರ್ಟ್ ಇಂದು ಬಂದಿದ್ದು, ಇದರಲ್ಲಿ ನಾಲ್ಕು ಮಂದಿಗೆ ಒಮಿಕ್ರಾನ್ ವೈರಸ್ ಇರುವುದು ಗೊತ್ತಾಗಿದೆ.
ಹಾಗೆಯೇ ಖಾಸಾಗಿ ನರ್ಸಿಂಗ್ ಕಾಲೇಜಿನ 19 ವಿದ್ಯಾರ್ಥಿಗಳಿಗೆ ಡಿಸೆಂಬರ್ 9 ರಂದು ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇವರ ಮಾದರಿಯನ್ನು ಡಿಸೆಂಬರ್ 10 ರಂದು ಜೆನೊಮಿಕ್ ರಿಪೋರ್ಟ್ಗೆ ಕಳುಹಿಸಲಾಗಿತ್ತು.
ಇಂದು ಬಂದ ವರದಿಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಒಮಿಕ್ರಾನ್ ವೈರಸ್ ಇರುವುದು ಪತ್ತೆಯಾಗಿದೆ.
ಆದ್ರೆ ಈಗಾಗಲೇ ಈ ಎಲ್ಲ ಐವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈ ಮೂಲಕದ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.