Connect with us

DAKSHINA KANNADA

ಪೊಳಲಿ ಚೆಂಡಿನ ಹಿಂದಿದೆ ಒಂದು ರಹಸ್ಯ ಕಥೆ…!

Published

on

ಮಂಗಳೂರು : ಪೊಳಲಿ ರಾಜರಾಜೇಶ್ವರಿ ಕ್ಷೇತ್ರದ ಜಾತ್ರೆ ಅಂದ್ರೆ ಅದು ಕಲ್ಲಂಗಡಿ ಹಣ್ಣು ಮತ್ತು ಪೊಳಲಿ ಚೆಂಡಿನ ಮೂಲಕವೇ ಫೇಮಸ್. ಎಪ್ರಿಲ್ 6 ರಿಂದ ಆರಂಭವಾಗುವ ಐದು ದಿನಗಳ ಚೆಂಡಿನ ಆಟದಲ್ಲಿ ಬಳಸುವ ಚರ್ಮದ ಚೆಂಡಿಗೆ ವಿಶೇಷ ಪ್ರಾತಿನಿಧ್ಯ ಇದೆ. ಈ ಪೊಳಲಿ ಚೆಂಡಿಗೂ ರಾಣಿ ಅಬ್ಬಕ್ಕನ ಊರಿಗೂ ಅವಿನಾಭಾವ ಸಂಬಂಧ ಇದೆ.

ಮೂಡಬಿದ್ರೆಯಲ್ಲಿ ತಯಾರಾಗಿ ಪೊಳಲಿಗೆ ಬರುವ ಚೆಂಡು

ಪೊಳಲಿ ರಾಜರಾಜೇಶ್ವರಿ ದೇವಿಯ ಜಾತ್ರೆಯಲ್ಲಿ ಆಡುವ ಪೊಳಲಿ ಚೆಂಡು ತಯಾರಾಗೋದು ಮೂಡಬಿದ್ರೆಯಲ್ಲಿ. ಪೊಳಲಿ ಚೆಂಡು ನಡೆಯುವ ಒಂದು ದಿವಸ ಮೊದಲು ಈ ಚೆಂಡನ್ನೂ ಅದ್ಧೂರಿಯಾಗಿ ಪೊಳಲಿಗೆ ತೆಗೆದುಕೊಂಡು ಬರಲಾಗುತ್ತದೆ. ಹೀಗೇ ಬರುವ ದಾರಿಯಲ್ಲಿ ಪುತ್ತಿಗೆ ಮಾರ್ಗವಾಗಿ ಬಂದು ಮಳಲಿಯ ಮೂಲಕ ಪೊಳಲಿಗೆ ತರಲಾಗುತ್ತದೆ. ಮಳಲಿಯ ಕಡಪುಕರಿಯ ಗಾಣಿಗ ಸಮಾಜದವರು ಈ ಚೆಂಡನ್ನು ಪೊಳಲಿಗೆ ತರುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಸಾಕಷ್ಟು ಸಂಪ್ರದಾಯದೊಂದಿಗೆ ಭಕ್ತಿ ಪೂರ್ವಕವಾಗಿ ಈ ಚೆಂಡನ್ನು ಪೊಳಲಿಗೆ ತರಲಾಗುತ್ತದೆ.

ರಾಣಿ ಅಬ್ಬಕ್ಕನಿಗೆ ಇದೆ ಪೊಳಲಿ ಚೆಂಡಿನ ನಂಟು

ಇತಿಹಾಸ ಪ್ರಕಾರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಮೂಡಬಿದ್ರೆಯ ಪುತ್ತಿಗೆ ಚೌಟ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಕಾಲಾ ನಂತರದಲ್ಲಿ ಆಡಳಿತದ ಅಧಿಕಾರ ಬದಲಾದರೂ ಪೊಳಲಿ ಜಾತ್ರೆಯ ಚೆಂಡು ಮೂಡಬಿದ್ರೆಯಿಂದ ಬರುವುದು ನಿಂತಿಲ್ಲ. ಹೀಗೆ ಮೂಡಬಿದ್ರೆಯಿಂದ ಬರುವ ಪೊಳಲಿ ಚೆಂಡು ಮಳಲಿಯಲ್ಲಿರುವ ರಾಣಿ ಅಬ್ಬಕ್ಕನ ಮಣೀಲ್ ಅರಮನೆಗೆ ತರಲಾಗುತ್ತಿತ್ತು. ಅರಮನೆಯಲ್ಲಿ ರಾಣಿಯರಿಗೆ ಚೆಂಡು ತೋರಿಸಿ ಬಳಿಕ ಊರ ಜನರು ಸಂಭ್ರಮದೊಂದಿಗೆ ಚೆಂಡನ್ನು ಪೊಳಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಅನ್ನೋ ಇತಿಹಾಸ ಇದೆ. ಇದು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದ್ದು, ಅಬ್ಬಕ್ಕನ ಕಾಲಾನಂತರ ಮಳಲಿಯ ಕಟ್ಟೆಮಾರು ಮನೆಗೆ ಬರುವ ಸಂಪ್ರದಾಯ ಸಾಂಕೇತಿಕವಾಗಿ ನಡೆಯುತ್ತದೆ.

ಪೊಳಲಿ ಚೆಂಡಿಗೆ ಕಟ್ಟೆಮಾರು ಮನೆತನದಿಂದ ಗೌರವ ಸಲ್ಲಿಕೆ

ಪುತ್ತಿಗೆಯಿಂದ ಚೆಂಡು ಬರುವ ಮೊದಲು ಇಡೀ ಕಟ್ಟೆಮಾರು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಮನೆಯ ಅಂಗಳವನ್ನು ಸಾರಿಸಿ , ರಂಗೋಲಿ ಹಾಕಿ ತಳಿರು ತೋರಣದಿಂದ ಸಿಂಗರಿಸಲಾಗುತ್ತದೆ. ಮನೆಯ ಅಂಗಳದಲ್ಲಿ ಚೆಂಡನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ವೇಳೆ ಊರಿನ ಜನರೆಲ್ಲರೂ ಸೇರಿ ಚೆಂಡಿಗೆ ಗೌರವ ಸಲ್ಲಿಸುತ್ತಾರೆ. ಬಳಿಕ ಅಲ್ಲಿಂದ ಚೆಂಡನ್ನು ಪೊಳಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಇದನ್ನು ಈಗಲೂ ಕಟ್ಟೆಮಾರ್ ಮನೆಯವರು ಮುಂದುವರಿಸಿಕೊಂಡು ಬಂದಿದ್ದು, ಪ್ರಶಾಂತ್ ಜೈನ್ ಮತ್ತು ಮನೆಯವರು ಈ ಬಾರಿ ಚೆಂಡಿಗೆ ರಾಜಮರ್ಯಾದೆ ಸಲ್ಲಿಕೆಯ ಸಂಪ್ರದಾಯವನ್ನು ನಡೆಸಿದ್ದಾರೆ.

DAKSHINA KANNADA

ಸಿಡಿಲ ಬಡಿತಕ್ಕೆ ನವವಿವಾಹಿತ ಬಲಿ..!15 ದಿನಗಳ ಹಿಂದೆಯಷ್ಟೆ ವೈವಾಹಿಕ ಜಿವನಕ್ಕೆ ಕಾಲಿಟ್ಟ ಯುವಕ ವಿಧಿಯಾಟಕ್ಕೆ ಬಲಿ!!

Published

on

ಕಡಬ:  ಹದಿನೈದು ದಿನಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತ ಸಿಡಿಲು ಬಡಿದು ಸಾವನಪ್ಪಿರುವ ಘಟನೆ ಮೇ.3ರ ಸಂಜೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಇಲ್ಲಿನ ಪರ್ವತಮುಖಿ ನಿವಾಸಿ ಸೋಮಸುಂದರ್(34 ವ)ಮೃತಪಟ್ಟವರು.

death

ಸುಬ್ರಹ್ಮಣ್ಯದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಡಿತ್ತು. ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ರಾಶಿ ಮಾಡುತ್ತಿದ್ದ ವೇಳೆ ಸೋಮಸುಂದರ್‌ರವರಿಗೆ ಸಿಡಿಲು ಬಡೆದಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮುಂಧೆ ಓದಿ..; ಉಳ್ಳಾಲ : ಕಾರು ಡಿ*ಕ್ಕಿ; ಇಹಲೋಕ ಇಹಲೋಕ ತ್ಯಜಿಸಿದ ಬಿಜೆಪಿ ಕಾರ್ಯಕರ್ತ

15 ದಿನಗಳ ಹಿಂದೆಯಷ್ಟೆ ಏ.18ರಂದು ಮೋಹಿನಿ(ಪವಿತ್ರ) ಎಂಬವರ ಜೊತೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯ ಸಭಾಭವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ವಿಧಿಯಾಟಕ್ಕೆ ಸೋಮಸುಂದರ್ ಬಲಿಯಾಗಿದ್ದಾರೆ. ಹೊಸೋಳಿಕೆ ಪರ್ವತಮುಖಿ ದಿ.ಸಾಂತಪ್ಪ ಗೌಡರ ಪುತ್ರ ಸೋಮಸುಂದರ್ ಪರ್ವತಮುಖಿ ಬಳಿ ಕಾರ್ ವಾಷಿಂಗ್ ಉದ್ಯಮವನ್ನು ನಡೆಸುತ್ತಿದ್ದರು. ಮದುವೆ ಸಂಭ್ರಮ ಮಾಸುವ ಮುನ್ನವೇ ಮನೆಯಲ್ಲಿ ಸಾವಿನ ಛಾಯೆ ಮೂಡಿದೆ. ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ. ಮೃತರು ತಾಯಿ, ತಂಗಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

Continue Reading

DAKSHINA KANNADA

ಉಳ್ಳಾಲ : ಕಾರು ಡಿ*ಕ್ಕಿ; ಇಹಲೋಕ ಇಹಲೋಕ ತ್ಯಜಿಸಿದ ಬಿಜೆಪಿ ಕಾರ್ಯಕರ್ತ

Published

on

ಉಳ್ಳಾಲ : ಕಾರು ಡಿ*ಕ್ಕಿ ಹೊಡೆದು ಪಾದಚಾರಿ ಬಿಜೆಪಿ ಕಾರ್ಯಕರ್ತ ಮೃ*ತಪಟ್ಟ ಘಟನೆ ರಾ.ಹೆ.66 ರ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ನಡೆದಿದೆ. ಕೋಟೆಕಾರು ನೆಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಶ್ರೀಕಾಂತ್ (46)ಮೃ*ತಪಟ್ಟವರು. ಶ್ರೀಕಾಂತ್ ಆಟೋ ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು.

ಶುಕ್ರವಾರ ಮಧ್ಯಾಹ್ನ ಅಡ್ಕದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೇರಳದಿಂದ ಧಾವಿಸುತ್ತಿದ್ದ ಕಾರು ಶ್ರೀಕಾಂತ್ ಗೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಶ್ರೀಕಾಂತ್ ರನ್ನು ಅಪಘಾ*ತ ನಡೆಸಿದ ಕಾರು ಚಾಲಕನೇ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕೊಡದೆ ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ : ಮಂಗಳೂರು : ನಾಳೆಯಿಂದ ರೇಶನಿಂಗ್ ಆರಂಭ; ಎಲ್ಲೆಲ್ಲಿ ನೀರಿಲ್ಲ?

ಮೃ*ತ ಶ್ರೀಕಾಂತ್ ತುಳುನಾಡು ಫ್ರೆಂಡ್ಸ್ ಕೋಟೆಕಾರುವಿನ ಸಕ್ರಿಯ ಸದಸ್ಯರಾಗಿದ್ದು, ಬಿಜೆಪಿಯ ಕಾರ್ಯಕರ್ತರಾಗಿದ್ದರು. ಶ್ರೀಕಾಂತ್ ಅವಿವಾಹಿತರಾಗಿದ್ದು ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರು : ನಾಳೆಯಿಂದ ರೇಶನಿಂಗ್ ಆರಂಭ; ಎಲ್ಲೆಲ್ಲಿ ನೀರಿಲ್ಲ?

Published

on

ಮಂಗಳೂರು: ಕರಾವಳಿಗೆ ಬಿರುಬೇಸಿಗೆಯ ಬಿಸಿ ಭಾರೀ ತಟ್ಟಿದ್ದು, ನೀರಿನ ಅಭಾವ ಎದುರಾಗಿದೆ. ಮಂಗಳೂರು ಮಹಾ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಮಂಗಳೂರು ನಗರ ಪಾಲಿಕೆ ಆಯುಕ್ತರು ಮೇ 5 ರಿಂದ ನೀರಿನ ರೇಶನಿಂಗ್ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಲಭ್ಯವಿರುವ ನೀರನ್ನು ಮಂಗಳೂರು ನಗರ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ ನೀರು ಬಿಡಲು ಕ್ರಮ ವಹಿಸಲಾಗಿದೆ.

ಬೆಂದೂರು ಸ್ಥಾವರದಿಂದ ನೀರು ಪೂರೈಕೆ :

ಮೇ 5ರಿಂದ ಬೆಸ ದಿನಗಳಲ್ಲಿ ಬೆಂದೂರು ಸ್ಥಾವರದಿಂದ ಕೋರ್ಟ್ ಪ್ರದೇಶ, ಕಾರ್‌ಸ್ಟ್ರೀಟ್, ಬಾವುಟಗುಡ್ಡ, ಆಕಾಶವಾಣಿ, ಪದವು, ಗೋರಿಗುಡ್ಡ, ಸೂಟರ್‌ಪೇಟೆ, ಶಿವಬಾಗ್, ಕದ್ರಿ, ವಾಸ್‌ಲೇನ್, ಬೆಂದೂರು, ಲೋವರ್ ಬೆಂದೂರು, ಕುದ್ರೋಳಿ, ಕೋಡಿಯಾಲ್ ಬೈಲ್ ಮತ್ತು ಪಡೀಲ್ ಸ್ಥಾವರದಿಂದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡ, ವೆಲೆನ್ಸಿಯಾ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್‌ನಗರ, ಬಜಾಲ್, ತಿರುವೈಲು, ವಾಮಂಜೂರು ಹಾಗೂ ಶಕ್ತಿನಗ ಟ್ಯಾಂಕ್‌ನಿಂದ ಕುಂಜತ್ತಬೈಲ್, ಮೊಗ್ರೊಡಿ, ಶಕ್ತಿನಗರ, ಸಂಜಯನಗರ, ಪ್ರೀತಿನಗರ, ಮಂಜಡ್ಕ, ರಾಜೀವ ನಗರ, ಬೋಂದೆಲ್, ಗಾಂಧಿ ನಗರ, ಶಾಂತಿನಗರ, ಕಾವೂರು ಮತ್ತು ತುಂಬೆ – ಪಣಂಬೂರು ನೇರ ಲೈನ್‌ನಿಂದ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಳ್ಳೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆ ಮಾಡಲಾಗುವುದು.

ಪಣಂಬೂರು ಸ್ಥಾವರದಿಂದ ನೀರು ಪೂರೈಕೆ :

ಮೇ 6 ರಿಂದ ಪಣಂಬೂರು ಸ್ಥಾವರದಿಂದ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ ಮತ್ತು ಪಡೀಲ್ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡ, ಮುಗೇರ್, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೆ ಸ್ಟೇಷನ್, ಕುಡುಪು, ಪಾಂಡೇಶ್ವರ, ಸ್ಟೇಟ್‌ ಬ್ಯಾಂಕ್, ಗೂಡ್ಸ್‌ಶೆಡ್, ಬಂದರ್ ದಕ್ಕೆ,ಕಣ್ಣೂರು, ನಿಡ್ಡೆಲ್, ಶಿವನಗರ. ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗದ ಹಾಗೂ ಶಕ್ತಿನಗರ ಟ್ಯಾಂಕ್‌ನಿಂದ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ ಮತ್ತು ತುಂಬೆ-ಪಣಂಬೂರು ನೇರ ಲೈನ್‌ನಿಂದ ಮುಡಾ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕ್ಕಾಡ್, ದಡ್ಡಲ್‌ಕಾಡ್, ಬಂಗ್ರ ಕೂಳೂರುಗೆ ನೀರು ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೋಲು ಮಾಡಿದಲ್ಲಿ ನೀರು ಕಡಿತ :

ಕಟ್ಟಡ ರಚನೆ ಮತ್ತಿತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್‌ಗಳ ಜೋಡಣೆ ಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸುವುದು. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :

ಸಂಪರ್ಕ ಸಂಖ್ಯೆ :

ಕುಡಿಯುವ ನೀರಿನ ಸಮಸ್ಯೆಯಾದರೆ ದೂ.ಸಂ: ಪಡೀಲ್ ರೇಚಕ ಸ್ಥಾವರ-0824-2220364 ಹಾಗೂ ಮನಪಾ ವಾಟ್ಸ್‌ಆ್ಯಪ್ ಸಂಖ್ಯೆ 9449007722/ಮನಪಾ ಕಂಟ್ರೋಲ್ ರೂಮ್- 0824-2220319/2220306ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Continue Reading

LATEST NEWS

Trending