Connect with us

  LATEST NEWS

  ಆಂಜನೇಯ ಹುಟ್ಟಿದ ಜಾಗಕ್ಕೆ ಸಿಕ್ಕಿತು ಪುರಾವೆ…! ಅಂಜನಾದ್ರಿಯಲ್ಲಿ ಸಿಕ್ಕಿತು ಪುರಾತನ ಶಾಸನ..!

  Published

  on

  ಕೊಪ್ಪಳ : ಆಂಜನೇಯನ ಜನ್ಮ ಸ್ಥಳದ ಬಗ್ಗೆ ಇದ್ದ ವಿವಾದಕ್ಕೆ ಅಂತ್ಯ ಹಾಡುವಂತಹ ಶಾಸನವೊಂದು ಕೊಪ್ಪಳ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಆನೆಗೊಂದಿಯ ಕಡೇಬಾಗಿಲು ಗ್ರಾಮದ ಬೆಟ್ಟದ ಮೇಲೆ ಈ ಶಾಸನ ಕಂಡು ಬಂದಿದೆ. ಬೆಟ್ಟದ ಮೇಲಿರೋ ಕೋಟೆಗೆ ಚಾರಣ ಹೋಗಿದ್ದ ಯುವಕರ ತಂಡಕ್ಕೆ ಈ ಶಾಸನ ಕಾಣಿಸಿಕೊಂಡಿದೆ. ಇದರಲ್ಲಿ ರಾಮಾಯಣದಲ್ಲಿ ಉಲ್ಲೇಖಿಸಿರುವ ಕಿಷ್ಕಿಂಧೆ ಪರ್ವತ ಇದೇ ಆನೆಗೊಂದಿಯ ಪರ್ವತ ಎಂದು ಸಾಬೀತು ಪಡಿಸಬಲ್ಲ ಶಾಸನ ಇದಾಗಿದೆ.

  ವಿಶ್ವವಿಖ್ಯಾತವಾಗಿದ್ದ ವಿಜಯನಗರದ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಎಂಬುವುದು ಇತಿಹಾಸದಲ್ಲಿ ಪುಟದಲ್ಲಿ ಉಲ್ಲೇಖವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಆನೆಗೊಂದಿಯಲ್ಲಿ ವಿಜಯನಗರದ ಅರಸರ ಕಾಲಘಟ್ಟದಲ್ಲಿನ ಶಾಸನ, ಸ್ಮಾರಕದಂತ ಕುರುಹುಗಳು ಲಭಿಸುತ್ತಲೇ ಇರುತ್ತವೆ. ಇದೀಗ ವಿಜಯನಗರದ ಅರಸರ 1527ರ ಕಾಲಘಟ್ಟಕ್ಕೆ ಸಂಬಂಧಿಸಿದ್ದು ಎನ್ನಲಾದ ಶಿಲಾ ಶಾಸನವೊಂದು ಆನೆಗೊಂದಿ ಸಮೀಪದ ಕಡೇಬಾಗಿಲು ಎಂಬ ಗ್ರಾಮದಲ್ಲಿರುವ ಬೆಟ್ಟದ ಮೇಲಿನ ಕೋಟೆಯ ಪ್ರದೇಶದಲ್ಲಿ ಪತ್ತೆಯಾಗಿದೆ.

  ಸಮಾನ ಮನಸ್ಕ ಯುವಕರನ್ನೊಳಗೊಂಡ ಗಂಗಾವತಿಯ ಕಿಷ್ಕಿಂದ ಯುವ ಚಾರಣ ಬಳಗದ ಸದಸ್ಯರು ಚಾರಣಕ್ಕೆಂದು ಈ ಬೆಟ್ಟಕ್ಕೆ ಹೋದಾಗ ಈ ಶಿಲಾ ಶಾಸನ ಕಂಡು ಬಂದಿದೆ. ದೊಡ್ಡ ಬಂಡೆಯಾಕಾರದ ಶಿಲೆಯ ಮೇಲೆಯೇ ಈ ಶಾಸನ ಬರೆಯಲಾಗಿದ್ದು, ಬಹುತೇಕ ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು. ಶಾಸನದ ಮೇಲಿದ್ದ ಮಣ್ಣಿನ ಪದರಗಳನ್ನು ಸ್ವಚ್ಛಗೊಳಿಸಿದ ಯುವಕರು ಬಳಿಕ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ ಅವರಿಗೆ ಮಾಹಿತಿ ನೀಡಿದ್ದಾರೆ.

  1449ನೇ ಶಕ ವರುಷದಲ್ಲಿ ಬರೆಯಲಾದ ಶಾಸನ

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಶೋಧಕ ಶರಣಬಸಪ್ಪ ಕೊಲ್ಕಾರ, ಈ ಶಾಸನ ಪರಿಶೀಲಿಸಿದಾಗ 8 ಸಾಲುಗಳಲ್ಲಿದ್ದು, ಸ್ವಸ್ತಿ ಶ್ರೀ ಜಯದ್ ಉದಯ ಶಾಲಿವಾಹನ ಶಕ ವರುಷ 1449 ನೆಯ ಕಾಲವನ್ನು ಉಲ್ಲೇಖಿಸಲಾಗಿದೆ. ಅದು ಪ್ರಸಕ್ತ ಶಕ 1527 ಕ್ಕೆ ಸರಿಯಾಗುತ್ತದೆ ಎಂದಿದ್ದಾರೆ.
  ಶಾಸನದಲ್ಲಿ ಆನೆಗೊಂದಿಯ ಮಹಾ ಪ್ರಧಾನರಾಗಿದ್ದ ಲಕ್ಕಿ ಶೆಟ್ಟಿಯ ಮಗನಾದ ವಿಜಯನಾಥನು ಬೆಟ್ಟದ ಮೇಲಿನ ವೀರಭದ್ರ ದೇವರನ್ನು ಆರಾಧಿಸುತ್ತಿದ್ದ ಸಂಗತಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಶಾಸನದಲ್ಲಿ ಪ್ರಾಸಂಗಿಕವಾಗಿ ಆನೆಗೊಂದಿಯನ್ನು ಹಸ್ತಿನಾವತಿ ಎಂದು ಅದು ಪಂಚಕೋಶ ಮಧ್ಯದಲ್ಲಿ ಇತ್ತು ಎಂದು ಹೇಳಲಾಗಿದೆ. ಅಲ್ಲದೇ ಆನೆಗೊಂದಿಗೆ ಕಿಷ್ಕಿಂಧ ಪರ್ವತ ಎಂದು ಕೂಡ ಹೆಸರಿತ್ತು ಎಂದು ಉಲ್ಲೇಖಿಸಲಾಗಿರುವುದು ಗಮನಾರ್ಹ ಸಂಗತಿ. ಇದು ಐತಿಹಾಸಿಕವಾಗಿ ಅತ್ಯಂತ ಮಹತ್ವದ ದಾಖಲೆಯಾಗಲಿದೆ ಎಂದು ಕೋಲ್ಕಾರ ತಿಳಿಸಿದ್ದಾರೆ.

  ಕಿಷ್ಕಿಂಧೆ ಬಗ್ಗೆ ಶಾಸನಗಳು ಸಿಕ್ಕಿರಲಿಲ್ಲ

  ಆನೆಗೊಂದಿಯೆ ರಾಮಾಯಣ ಕಾಲದ ಕಿಷ್ಕಿಂಧಾ ಎಂದು ಗುರುತಿಸಲು ನೇರವಾಗಿ ಇಲ್ಲಿವರೆಗೂ ಯಾವುದೇ ಐತಿಹಾಸಿಕ ದಾಖಲೆ ಅಥವಾ ಶಾಸನ ಬದ್ಧ ಐತಿಹ್ಯಗಳು ಆನೆಗೊಂದಿಯಲ್ಲಿ ಯಾವ ಶಾಸನಗಳು ಲಭಿಸಿರಲಿಲ್ಲ. ಹೀಗಾಗಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಕೊಲ್ಕಾರ ತಿಳಿಸಿದ್ದಾರೆ.
  ಆನೆಗೊಂದಿ ಯಿಂದ ದೂರದ ದೇವಘಾಟ್ ಮತ್ತು ಹುಲಿಗಿಗಳ ಶಾಸನಗಳಲ್ಲಿ ಮಾತ್ರ ಕಿಷ್ಕಿಂದೆಯ ಉಲ್ಲೇಖವಿತ್ತು. ಪ್ರಸ್ತುತ ಆನೆಗೊಂದಿಯ ಈ ಶಾಸನವೇ ಕಿಷ್ಕಿಂಧಾ ಪರ್ವತ ಎಂದು ಉಲ್ಲೇಖಿಸಿರುವುದು ಕಿಷ್ಕಿಂದ ಮತ್ತು ಆಂಜನೇಯನ ಜನ್ಮಸ್ಥಳಗಳ ಬಗೆಗಿನ ವಾದ ವಿವಾದಗಳ ಸಂದರ್ಭದಲ್ಲಿ ಈ ಉಲ್ಲೇಖ ತುಂಬಾ ಮಹತ್ವ ಪಡೆದುಕೊಂಡಿದೆ.
  ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯೇ ಅಂಜನಾದ್ರಿ ಬೆಟ್ಟ ಎನ್ನಲು ಹಾಗೂ ಆಂಜನೇಯನ ಜನ್ಮಸ್ಥಳವೆಂದು ಗುರುತಿಸಲು ಈ ಶಾಸನ ಮತ್ತೊಂದು ಐತಿಹಾಸಿಕ ದಾಖಲೆಯಾಗಿದೆ ಎಂದು ಡಾ. ಕೋಲ್ಕಾರ್ ಅಭಿಪ್ರಾಯ ಪಟ್ಟಿದ್ದಾರೆ.

  LATEST NEWS

  ಅಂತೂ ಟೇಕಾಫ್ ಆದ ಪ್ರಜ್ವಲ್‌ ಫ್ಲೈಟ್‌..! ಲ್ಯಾಂಡ್ ಆಗ್ತಾ ಇದ್ದಂತೆ SIT ಲಾಕ್‌..!

  Published

  on

  ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಜ್ವಲ್‌ ರೇವಣ್ಣ ಅಂತೂ ಇಂತು ಸ್ವದೇಶಕ್ಕೆ ರಿಟರ್ನ್‌ ಆಗ್ತಾ ಇದ್ದಾನೆ. ಪೆನ್‌ಡ್ರೈವ್ ಲೀಕ್‌ ಆಗ್ತಾ ಇದ್ದಂತೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದ ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ಹಲವು ನೊಟೀಸ್ ನೀಡಿದ್ರೂ ಕ್ಯಾರೆ ಅಂದಿರಲಿಲ್ಲ. ಇದೀಗ ವಿದೇಶದಿಂದ ವಾಪಾಸಾಗಲು ಮನಸ್ಸು ಮಾಡಿರೋ ಪ್ರಜ್ವಲ್‌ನನ್ನು ಲಾಕ್‌ ಮಾಡಲು ಎಸ್‌ಐಟಿ ಅಧಿಕಾರಿಗಳು ಕೂಡಾ ಸಿದ್ಧತೆ ನಡೆಸಿಕೊಂಡಿದ್ದಾರೆ.


  ದೇಶಕ್ಕೆ ಬರುವುದಾಗಿ ಹಲವು ಬಾರಿ ಸುದ್ದಿಯಾಗಿದ್ರೂ ಪ್ರಜ್ವಲ್‌ ರೇವಣ್ಣ ಬಾರದೆ ಜಾರಿಕೊಂಡಿದ್ದ. ಪ್ರಜ್ವಲ್‌ ಬರ್ತಾನೆ ಅನ್ನೋ ಸುದ್ದಿಯಾದಾಗ ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಾದು ಕೂತು ಸುಸ್ತಾಗಿ ಹೋಗಿದ್ದರು. ಇಷ್ಟೆಲ್ಲಾ ಬೆಳವಣಿಗೆಯ ಬಳಿಕ ಜನರೂ ಕೂಡಾ ರೊಚ್ಚಿಗೆದ್ದು ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಕೊನೆಗೂ ಹಲವು ಒತ್ತಡಗಳ ಬಳಿಕ ತಾನು ಬರುತ್ತಿರುವುದಾಗಿ ವಿಡಿಯೋ ಮಾಡಿ ಸಂದೇಶ ನೀಡಿ ಫ್ಲೈಟ್ ಹತ್ತಿದ್ದಾನೆ.

  ವಿದೇಶದಲ್ಲಿ ಕುಳಿತು  ಮೇ.31 ರಂದು ಅಂದ್ರೆ ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವೀಡಿಯೋ ಮೂಲಕ ಹೇಳಿದ್ದ. ಇದೀಗ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಮಾನವನ್ನು ಹತ್ತಿದ್ದಾನೆ. ಇಂದು ತಡರಾತ್ರಿ ಪ್ರಜ್ವಲ್ ರೇವಣ್ಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

  ಪ್ರಜ್ವಲ್​ ರೇವಣ್ಣಗೆ ಬಂಧನ ಭೀತಿ ಕಾಡುತ್ತಿರುವ ಮಧ್ಯೆ ವಿದೇಶದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದ. ಆದರೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಆ ಮೂಲಕ ಪ್ರಜ್ವಲ್ ಬಂಧನ ಫಿಕ್ಸ್​ ಆಗಿದೆ. ಇದೀಗ ಪ್ರಜ್ವಲ್ ಬರುವಿಕೆಯನ್ನು ಕಾದು ಕುಳಿತಿರುವ SIT ತಂಡ ಈಗಾಗಲೇ ಏರ್​ಪೋರ್ಟ್​ನಲ್ಲೇ ಬೀಡುಬಿಟ್ಟಿದೆ.

  Continue Reading

  LATEST NEWS

  ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್‌ ಮದುವೆ ಡೇಟ್‌ ಫಿಕ್ಸ್‌..! ವೈರಲ್ ಆಯ್ತು ವೆಡ್ಡಿಂಗ್ ಕಾರ್ಡ್‌..!

  Published

  on

  ಮುಂಬೈ/ಮಂಗಳೂರು: ಅನಂತ್ ಅಂಬಾನಿ ಹಾಗೂ ರಾದಿಕಾ ಮರ್ಚಂಟ್‌ ರವರ ವಿವಾಹವು ಇಟಲಿಯಲ್ಲಿ ನಡೆಯಲಿದ್ದು, ಇದೀಗ ಮದುವೆಯ ಆಮಂತ್ರಣ ಪತ್ರ ಬಹಿರಂಗವಾಗಿದೆ.

  ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಗೆ ತೆರೆ ಬಿದ್ದಿದೆ. ಇನ್ನು ಇವರಿಬ್ಬರ ಪ್ರಿ ವೆಡ್ಡಿಂಗ್‌ ಬಹಳ ಅದ್ಧೂರಿಯಾಗಿ ಜರಗಿದ್ದು  ಸ್ಟಾರ್ ನಟ-ನಟಿಯರು ಸಾಕ್ಷಿಯಾಗಿದ್ದರು. ಅತೀ ಶೀಘ್ರದಲ್ಲೇ ರಾಧಿಕಾ ಮರ್ಚಂಟ್‌ ಹಾಗೂ ಅನಂತ್ ಅಂಬಾನಿ ವಿವಾಹವಾಗಲಿದ್ದಾರೆ. ಇನ್ನು ಮದುವೆಗೂ ಮುನ್ನ ಮೊದಲನೇ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದ್ದು, ಎರಡನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಇಟಲಿಯ ಕ್ರೂಸ್‌ನಲ್ಲಿ ಆಯೋಜಿಸಲಾಗಿದೆ.


  ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜು.12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ನಡೆಯಲಿದೆ.  ಅತಿಥಿಗಳು  ಆಮಂತ್ರಣ ಕಾರ್ಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅನಂತ್-ರಾಧಿಕಾ ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಗೋಲ್ಡನ್ ಬಣ್ಣದಿಂದ ಕೂಡಿದ್ದು ಇವರಿಬ್ಬರ ವಿವಾಹ ಕಾರ್ಯಕ್ರಮದ ವಿವರಗಳನ್ನೂ ಕಾರ್ಡ್‌ನಲ್ಲಿ ನೀಡಲಾಗಿದೆ.

  ಇದನ್ನೂ ಓದಿ.. ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

  ಕಾರ್ಡ್‌ನಲ್ಲಿ ಜು.12ರಂದು ವಿವಾಹವಿದ್ದು ಇದಕ್ಕೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು, ಜು.13ರಂದು ಆಶೀರ್ವಾದ ಕಾರ್ಯಕ್ರಮವಿದ್ದು ಇದಕ್ಕೆ ಭಾರತೀಯ ಫಾರ್ಮಲ್ ಹಾಗೂ ಜು. 14ರಂದು  ಆರತಕ್ಷತೆ ಸಮಾರಂಭವಿದ್ದು, ಇದಕ್ಕೆ ಇಂಡಿಯನ್ ಚಿಕ್ ಥೀಮ್ ಬಟ್ಟೆಗಳನ್ನು ಧರಿಸಿ ಬರಲು ಕೇಳಲಾಗಿದೆ. ಈ ಆಮಂತ್ರಣದ ಬೆನ್ನಲ್ಲೇ ಅಧಿಕೃತ ಆಮಂತ್ರಣ ಬರಲಿದೆ ಎಂದೂ ಹೇಳಲಾಗಿದೆ.

  Continue Reading

  DAKSHINA KANNADA

  ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ..?

  Published

  on

  ಮಂಗಳೂರು: ಹಾವು.. ಆ ಶಬ್ಧ ಕೇಳಿದೊಡನೆ ಒಮ್ಮೆ ಭಯ ಹುಟ್ಟಿಸುತ್ತದೆ. ಇನ್ನು ಎದುರಿಗೆ ಹಾವು ನೋಡಿದರೆ ಹೃದಯದ ಬಡಿತವೇ ನಿಂತು ಹೋದಂತೆ ಆಗುತ್ತದೆ. ಹಾಗೆಯೇ ಒಂದು ವೇಳೆ ನಿಮ್ಮ ಮನೆಯೊಳಗೆ ಹಾವು ಬಂದರೆ ನಿಮಗೆ ಹೇಗಾಗಬಹುದು. ಕೆಲವೊಮ್ಮೆ ಎಷ್ಟೋ ಜನರ ಮನೆಯೊಳಗೆ ಹಾವು ಬಂದಿರುತ್ತದೆ. ಹಾಗೋ ಹೀಗೋ ಹಾವು ಹಿಡಿಯುವರನ್ನು ಕರೆದು ಹಾವನ್ನು ಹೊರಗೆ ಕಳಿಸುವ ಸಾಹಸ ಮಾಡಿದ ನಂತರವೂ ಕೆಲವು ದಿನಗಳವರೆಗೂ ಆ ಭಯ ಇದ್ದೇ ಇರುತ್ತದೆ.

  ಆದರೆ ಹಾವು ಮನೆಯೊಳಗೆ ಬಂದರೆ ಅದನ್ನು ಕೆಲವರು ಶುಭವೆಂದೂ ಇನ್ನೂ ಕೆಲವರು ಸಮಸ್ಯೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆಹಾವು ಮನೆಗೆ ಬಂದರೆ ಏನು ಅರ್ಥ? ಅದರಿಂದ ಏನಾದರೂ ಸಮಸ್ಯೆ ಇದೆಯೇ ತಿಳಿಯೋಣ.

  ಮನೆಯೊಳಗೆ ಹಾವು ಬರುವುದು ಶುಭ ಸೂಚಕ ಎಂದು ಹೇಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹಾವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಆದಿಶೇಷ ಸರ್ಪಗಳ ರಾಜ, ಶಿವನು ಕೂಡಾ ಹಾವನ್ನು ತನ್ನ ಕತ್ತಿನಲ್ಲಿ ಸುತ್ತಿಕೊಂಡಿದ್ದಾನೆ. ಆದ್ದರಿಂದ ದೇವರ ಸ್ವರೂಪವಾಗಿರುವುದರಿಂದ ಮನೆಯೊಳಗೆ ಹಾವು ಬಂದರೆ ಅದು ಖಂಡಿತ ಏನೋ ಶುಭ ಮುನ್ಸೂಚನೆ ಎಂದು ನಂಬಲಾಗಿದೆ.

  ಮನೆಯೊಳಗೆ ಒಂದು ವೇಳೆ ಕಪ್ಪು ಹಾವು ಬಂದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಶಿವನ ಕೃಪೆ ದೊರೆಯಲಿದ್ದು ಕೆಲವೇ ದಿನಗಳಲ್ಲಿ ನಿಮ್ಮ ಜೀವನ ಬದಲಾಗಲಿದೆ, ನೀವು ಸಂತೋಷ ಜೀವನವನ್ನು ಗಳಿಸಲಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ.

  ಹಾವಿನ ಮರಿ ಮನೆಯೊಳಗೆ ಬಂದರೆ ನೀವು ಕೆಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂದು ಅರ್ಥ. ಹಾವು ಮನೆಯನ್ನು ಪ್ರವೇಶಿಸಿದರೆ ಲಕ್ಷ್ಮೀ ಆಶೀರ್ವಾದ ಕೂಡಾ ನಿಮ್ಮ ಮೇಲಿದೆ ಎಂದು ಅರ್ಥ. ಇದುವರೆಗೂ ನೀವು ಎದುರಿಸುತ್ತಿದ್ದ ನಿಮ್ಮ ಆರ್ಥಿಕ ಸಮಸ್ಯೆ ಕೊನೆಗೊಳ್ಳುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳುವುದು ಖಚಿತ.

  ಒಂದು ವೇಳೆ ನಿಮ್ಮ ಮನೆಗೆ ಬಿಳಿ ಬಣ್ಣದ ಹಾವು ಪ್ರವೇಶಿಸಿದರೆ ಇದು ಇನ್ನಷ್ಟು ಮಂಗಳಕರ ಎನ್ನಲಾಗಿದೆ. ಇದು ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಹಸಿರು ಹಾವು ಬಂದರೆ ಅದೂ ಕೂಡಾ ಶುಭವೇ. ಶೀಘ್ರದಲ್ಲೇ ನೀವು ಶುಭ ಸುದ್ದಿ ಕೇಳಲಿದ್ದೀರಿ, ನಿಮ್ಮ ಕಷ್ಟನಷ್ಟಗಳು ಕೊನೆಗೊಳ್ಳುತ್ತವೆ.

  ಹಳದಿ ಬಣ್ಣದ ಹಾವು ಮನೆಗೆ ಬಂದರೆ ನೀವು ಅತಿ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಜೀವನದಲ್ಲಿ ಪ್ರಗತಿ ಹೊಂದಲಿದ್ದೀರಿ ಎಂದು ಅರ್ಥ. ಅಷ್ಟೇ ಅಲ್ಲ, ಮನೆಗೆ ಹಾವು ಬಂದರೆ ಪತಿ ಪತ್ನಿ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಜೀವನ ಸುಂದರವಾಗಿರುತ್ತದೆ.

  Continue Reading

  LATEST NEWS

  Trending