LATEST NEWS
ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!
ಮಂಗಳೂರು : ಜಗತ್ತು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಕೊಳ್ಳುತ್ತದೆ. ಹೊಸ ಆವಿಷ್ಕಾರಗಳು ಜನರ ಹುಬ್ಬೇರಿಸುವಂತೆ ಮಾಡುತ್ತದೆ. ರೋಬೋಟ್ ತಂತ್ರಜ್ಞಾನವೇನೋ ಹಳತು. ಆದ್ರೆ, ಈಗ ಈ ರೊಬೋಟ್ ಬಗ್ಗೆ ನಾವು ಹೇಳುತ್ತಿರುವ ಸುದ್ದಿ ಹೊಸತು. ಹೌದು, ಇಲ್ಲೊಬ್ಬ ರೋಬೋಟ್ ಅನ್ನೇ ಮದುವೆಯಾಗುತ್ತಿದ್ದಾನೆ. ಇದು ಸಾಧ್ಯನಾ ಅನ್ಬೇಡಿ! ಇದು ಸಾಧ್ಯ ಎಂದು ಯುವಕ ಸಾರಲು ಹೊರಟಂತಿದೆ.
ಎಲ್ಲಿ ನಡೆಯಲಿದೆ ಈ ಅಚ್ಚರಿಯ ಘಟನೆ?
ರೋಬೋಟ್ ತಂತ್ರಜ್ಞಾನ ಆವಿಷ್ಕಾರ ಆದಂದಿನಿಂದಲೂ ಅಚ್ಚರಿ ಹುಟ್ಟು ಹಾಕುತ್ತಿರುವುದೇನೋ ಸರಿ. ಆದ್ರೆ ಮದುವೇನೂ ಆಗ್ಬೋದಾ!? ಈ ಹಿಂದೆ ಸಿನಿಮಾವೊಂದರಲ್ಲಿ ರೋಬೋಟ್ ನ್ನು ಮದುವೆಯಾಗಿದ್ದ ಕಥೆ ಹೆಣೆಯಲಾಗಿತ್ತು. ‘ತೇರೆ ಬಾತೋಮೆ ಅಯ್ಸಾ ಉಲ್ಜಾದಿಯಾ’ ಅನ್ನೋ ಈ ಹಿಂದಿ ಸಿನೆಮಾದಲ್ಲಿ ಹೀರೋ ರೋಬೋಟ್ ಅನ್ನು ಮದುವೆಯಾಗಿ, ಸಂಸಾರ ಮಾಡುವ ಕಥೆ ಇದೆ.
ಇದೀಗ ರಾಜಸ್ಥಾನದಲ್ಲಿ ಯುವಕನೊಬ್ಬ ರೋಬೋಟ್ ಜೊತೆ ಮದುವೆ ಆಗಲು ಮುಂದಾಗಿದ್ದಾನೆ. ಅಂದಹಾಗೆ, ಈ ಯುವಕ ಸಾಫ್ಟ್ ವೇರ್ ಇಂಜಿನಿಯರ್. ಆತನ ಹೆಸರು ಸೂರ್ಯಪ್ರಕಾಶ್ ಸುಮೋತಾ. ಸಿಕರ್ ಎಂಬ ಗ್ರಾಮವೊಂದರ ಸೂರ್ಯಪ್ರಕಾಶ್ ಸುಮೋತಾ ರೋಬೋಟ್ ಜೊತೆ ಮದುವೆಯಾಗಲು ಮುಂದಾಗಿದ್ದಾರೆ.
ಮದುವೆ ದಿನಾಂಕ ಫಿಕ್ಸ್ ಆಗಿಲ್ಲ :
ಮಾರ್ಚ್ 22 ರಂದು ರೋಬೋಟ್ ಜೊತೆ ಎಂಗೇಜ್ ಮೆಂಟ್ ಮುಗಿಸಿಕೊಂಡಿದ್ದು, ಮದುವೆಯ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ರೋಬೋಟ್ ಜೊತೆ ಮದುವೆಗೆ ಮುಂದಾಗಿರುವ ಸೂರ್ಯಪ್ರಕಾಶ್ ಸುಮೋತಾ ಮೂಲತಃ ಬಡ ಕೃಷಿ ಕುಟುಂಬದಿಂದ ಬಂದವರು. ತಂದೆ – ತಾಯಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಗ ರೋಬೋಟ್ ಜೊತೆ ಸಂಸಾರ ಮಾಡುತ್ತೇನೆ ಅಂದ್ರೆ ತಂದೆ – ತಾಯಿ ಒಪ್ತಾರೆಯೇ ? ಸೂರ್ಯಪ್ರಕಾಶ ತಂದೆ – ತಾಯಿ ಈ ಮದುವೆಗೆ ಸಮ್ಮತಿ ಸೂಚಿಸಿಲ್ಲ. ಕುಟುಂಬದ ಸದಸ್ಯರು ಸೂರ್ಯಪ್ರಕಾಶ್‌ಗೆ ಓಕೆ ಅಂದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ತಂದೆ ತಾಯಿ ಕೂಡಾ ಈ ರೋಬೋಟ್ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ : ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
ರೋಬೋ ತಯಾರಿಗೆ 19 ಲಕ್ಷ ಖರ್ಚು :
ಎನ್‌ಎಮ್‌ಎಸ್ 5.0 ಗಿಗಾ ಎಂದು ರೋಬೋಟ್‌ಗೆ ಹೆಸರಿಟ್ಟಿದ್ದು, ಈ ರೋಬೋಟ್ ತಯಾರು ಮಾಡಲು ಸೂರ್ಯಪ್ರಕಾಶ್ 19 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರಂತೆ. ರೋಬೋಟನ್ನು ತಮಿಳನಾಡು ಹಾಗೂ ನೋಯ್ಡಾದ ಕಂಪೆನಿಗಳು ಜಂಟಿಯಾಗಿ ತಯಾರು ಮಾಡುತ್ತಿದೆ. ಇನ್ನು ರೋಬೋಟ್‌ಗೆ ಬೇಕಾದ ಸಾಫ್ಟ್‌ವೇರ್ ಹಾಗೂ ಅದರ ಕಮಾಂಡ್‌ಗಳನ್ನು ಖುದ್ದು ಸೂರ್ಯಪ್ರಕಾಶ್ ರೆಡಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೋಬೋಟ್‌ಗಳನ್ನು ಕೃಷಿಯಲ್ಲಿ ಬಳಕೆ ಮಾಡಿ ಅವುಗಳ ವರ್ತನೆಯನ್ನು ಸೂರ್ಯಪ್ರಕಾಶ ಅಧ್ಯಯನ ಮಾಡಿದ್ದಾನೆ.
ಇದೇ ವೇಳೆ ಮನೆಯವರು ಮದುವೆಗೆ ಒತ್ತಾಯಿಸಿದಾಗ ಈ ರೀತಿ ರೋಬೋಟ್ ಜೊತೆ ಮದುವೆ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಕಳೆದ ಎರಡು ವರ್ಷದಿಂದ ಪರಿಪೂರ್ಣ ಮನುಷ್ಯರಂತೆ ವರ್ತಿಸೋ ರೋಬೋಟ್ ತಯಾರಿಯಲ್ಲಿ ಸೂರ್ಯಪ್ರಕಾಶ್ ತೊಡಗಿಸಿಕೊಂಡಿದ್ದರು.
LATEST NEWS
ಮಂಗಳೂರು: ಮನೆಯ ಗೋಡೆ ಕುಸಿದು ಇಬ್ಬರು ಮೃ*ತ್ಯು
ಮಂಗಳೂರು: ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಇಬ್ಬರು ಮೃ*ತಪಟ್ಟಿರುವ ಘಟನೆ ನಗರದ ಜೈಲ್ ರಸ್ತೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಜೇಮ್ಸ್ ಜತ್ತನ್ನ ಮತ್ತು ಅಡ್ವಿನ್ ಜೆರಾಲ್ಡ್ ಮೊಬಿನ್ ಮೃ*ತರು ಎಂದು ಗುರುತಿಸಲಾಗಿದೆ.
ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಇಬ್ಬರು ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ:
LATEST NEWS
ಭರ್ಜರಿ ಶಾಕ್ ಕೊಟ್ಟ ಕೇಂದ್ರ ಸರ್ಕಾರ ! ಪೆಟ್ರೋಲ್ , ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ !
ಮಂಗಳೂರು/ನವದೆಹಲಿ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿರುವುದರಿಂದ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಲು ಸರ್ಕಾರ ಆಲೋಚಿಸುತ್ತಿರುವುದು ತಿಳಿದುಬಂದಿದೆ. ಪೆಟ್ರೋಲ್ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಅವರು, ತೈಲ ಕಂಪನಿಗಳಿಗೆ ಹಾಕಲಾಗುವ ವಿಂಡ್ಫಾಲ್ ತೆರಿಗೆಯನ್ನು ತೆಗೆದುಹಾಕುವ ಪ್ರಸ್ತಾಪವೊಂದು ಸರ್ಕಾರದ ಪರಾಮರ್ಶೆಯಲ್ಲಿರುವುದನ್ನು ತಿಳಿಸಿದ್ದಾರೆ.
ವಿಂಡ್ಫಾಲ್ ಟ್ಯಾಕ್ಸ್ ಎಂದರೇನು ?
ಇದು ಆದಾಯ ತೆರಿಗೆಯಲ್ಲಿನ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ರೀತಿಯಂಥದ್ದು. ಅಸ್ವಾಭಾವಿಕವಾಗಿ ಲಾಭ ಹೆಚ್ಚಳ ಆದಾಗ ವಿಂಡ್ಫಾಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪೆಟ್ರೋಲಿಯಂ ಸೇರಿ ಕೆಲ ಉದ್ಯಮಗಳಲ್ಲಿ ಸರ್ಕಾರ ಈ ತೆರಿಗೆ ಹಾಕುತ್ತದೆ. 2022ರಲ್ಲಿ ಮೊದಲ ಬಾರಿಗೆ ಸರ್ಕಾರ ವಿಂಡ್ಫಾಲ್ ಟ್ಯಾಕ್ಸ್ ಜಾರಿಗೆ ತಂದಿತು. ಜಾಗತಿಕ ತೈಲ ಬೆಲೆಯಲ್ಲಿ ದಿಢೀರ್ ಏರಿಳಿತಗಳಾಗಿ ತೈಲ ಕಂಪನಿಗಳು ದೊಡ್ಡ ಲಾಭ ಗಳಿಸಿದಾಗ ಅದಕ್ಕೆ ತೆರಿಗೆ ವಿಧಿಸಲೆಂದು ಇದನ್ನು ತರಲಾಗಿತ್ತು.
ಜಾಗತಿಕ ತೈಲ ಬೆಲೆಗಳ ಅನುಸಾರವಾಗಿ ತಿಂಗಳಿಗೆ ಎರಡು ಬಾರಿ ಸರ್ಕಾರ ವಿಂಡ್ಫಾಲ್ ಟ್ಯಾಕ್ಸ್ ಅನ್ನು ಪರಿಷ್ಕರಿಸುತ್ತದೆ. ಈಗ ಪೂರ್ಣವಾಗಿ ಟ್ಯಾಕ್ಸ್ ತೆಗೆದುಹಾಕುವ ಪ್ರಸ್ತಾಪ ಸರ್ಕಾರದ ಮುಂದಿದೆ. ತೈಲ ಸಂಸ್ಕರಣಾ ಕಂಪನಿಗಳಿಗೆ ಲಾಭದ ಮಾರ್ಜಿನ್ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಂಡ್ಫಾಲ್ ಟ್ಯಾಕ್ಸ್ ತೆಗೆದುಹಾಕಲು ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಸಾಕಷ್ಟು ಇಳಿಕೆ ಆಗಿರುವುದರಿಂದ ಭಾರತದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ರೀಟೇಲ್ ಬೆಲೆಗಳನ್ನು ಇಳಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದಾದ ಸಾಧ್ಯತೆ ಇದೆ.
LATEST NEWS
ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಅವರು, ದಾಖಲೆಯ 29 ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಶ್ಲಾಘಿಸಿದರು.
ಜೂಡೋದಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್ ಅವರು ಪ್ರಧಾನಿ ಮೋದಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಧಾನಿ ಮೋದಿ ಕಪಿಲ್‌ಗೆ ಆಟೋಗ್ರಾಫ್‌ನ್ನು ಸಹ ನೀಡಿದರು. ಇದೇ ವೇಳೆ ಅವನಿ ಲೆಖರಾ ಅವರು ಪ್ರಧಾನಿ ಮೋದಿಯವರಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೇ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಮಂಗಳವಾರ ದೇಶಕ್ಕೆ ಮರಳಿದ್ದ ಭಾರತೀಯ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆದ್ದಿದೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 19 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. ಈ ಸಾಧನೆಯ ಮೂಲಕ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದ ಭಾರತ 18 ನೇ ಸ್ಥಾನಕ್ಕೆ ಏರಿದೆ. ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್‌ಗೆ ತೆರಳಿತ್ತು.
ಕ್ರೀಡಾಪಟುಗಳ ಜೊತೆ ಮೋದಿ ಮಾತುಕತೆ ನಡೆಸಿದ ವೇಳೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಇದ್ದರು.
- LATEST NEWS3 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM2 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- DAKSHINA KANNADA4 days ago
WATCH : ಕದ್ರಿ ಪಾರ್ಕ್ ನ ರಸ್ತೆಯಲ್ಲಿ ‘ಅಪರೇಷನ್ ಹೆಬ್ಬಾವು’; ಭಾರಿ ಗಾತ್ರದ ಹಾವನ್ನು ಕಂಡು ಬೆಚ್ಚಿ ಬಿದ್ದ ಜನ
- LATEST NEWS1 day ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ