Thursday, December 1, 2022

ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ‘ಕಾಂತಾರ’ದ ರಿಷಬ್‌ ಶೆಟ್ಟಿ..!

ಮಂಗಳೂರು: ಇದೀಗ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಚಲನಚಿತ್ರದ ತಂಡ ಇಂದು ಮಂಗಳೂರಿನ ಮಾಲ್‌ನಲ್ಲಿ ಚಿತ್ರ ಪ್ರೇಮಿಗಳೊಂದಿಗೆ ಹರಟೆ ಹೊಡೆದು ಚಿತ್ರ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ.


ಚಿತ್ರದ ನಾಯಕ ನಟ, ನಿರ್ದೇಶನ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ ಹಾಗೂ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು ಅವರ ತಂಡ ಇಂದು ನಗರದ ಖಾಸಗಿ ಮಾಲ್‌ನಲ್ಲಿ ಚಿತ್ರ ಪ್ರೇಮಿಗಳೊಂದಿಗೆ ಒಂದಷ್ಟು ಹರಟೆ ಹೊಡೆದಿದೆ. ತಮ್ಮ ಅಚ್ಚುಮೆಚ್ಚಿನ ನಟನನ್ನು ಕಂಡು ಚಿತ್ರ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದರು.


ಇನ್ನು ಚಿತ್ರ ಇಷ್ಟೊಂದು ಯಶಸ್ವಿಯಾಗಿ ಓಡಲು ಕಾರಣವಾದ ತುಳುನಾಡಿನ ಚಿತ್ರ ಪ್ರೇಮಿಗಳಿಗೂ ಕಾಂತಾರ ಚಿತ್ರ ತಂಡ ಧನ್ಯವಾದವನ್ನು ಸಲ್ಲಿಸಿದೆ. ಚಿತ್ರ ಪ್ರೇಮಿಗಳು ಕೂಡಾ ಚಿತ್ರ ತಂಡಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿ ತಮ್ಮ ಚಿತ್ರದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.


ಇನ್ನು ಈ ಬಗ್ಗೆ ಮಾತನಾಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ ‘ತುಳುನಾಡಿನ ದೈವಾರಾಧನೆಗೆ ಒಂದಷ್ಟು ಚ್ಯುತಿ ಬಾರದ ರೀತಿಯಲ್ಲಿ ನಾವು ಕಾಂತಾರಾ ಚಿತ್ರವನ್ನು ನೀಡಿದ್ದೇವೆ.

ಚಿತ್ರ ಇಷ್ಟೊಂದು ಒಳ್ಳೆಯದಾಗಿ ಮೂಡಿ ಬಂದಿದ್ದು, ಎಲ್ಲವೂ ತುಳುನಾಡಿದ ದೈವದ ಕೃಪೆ. ಅತ್ಯಂತ ಯಶಸ್ವಿಯಾಗಿರುವ ಈ ಸಿನೆಮಾವನ್ನು ನಾನು ನಾಡಿನ ದೈವಾರಾಧಕರಿಗೆ ಹಾಗೂ ನನ್ನ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‌ ಕುಮಾರ್‌ ಅವರಿಗೆ ಅರ್ಪಣೆ ಮಾಡಿರುವುದಾಗಿ ಹೇಳಿದ್ದಾರೆ.

ಚಿತ್ರದ ಯಶಸ್ಸಿನ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲೂ ಮಾತನಾಡಿದ ಅವರು ‘ಈ ಚಿತ್ರ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಇಂದು ದೊಡ್ಡ ಮಟ್ಟದಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈ ಸಿನೆಮಾ ನಾನುಮಾಡಿದ್ದಲ್ಲ.

ಇಲ್ಲಿನ ದೈವಗಳೇ ಅದನ್ನು ನನ್ನ ಕೈಯಲ್ಲಿ ಮಾಡಿಸಿದ್ದು. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರ ಮಾಡಿ ಎನ್ನುವ ಬೇಡಿಕೆ ಬರ್ತಾ ಇದೆ.

ಈ ನಿಟ್ಟಿನಲ್ಲಿ ನಾವು ಯೋಚನೆ ಮಾಡುತ್ತಿದ್ದೇವೆ’ ಎಂದರು.
ಚಿತ್ರ ನಿರ್ಮಾಣದಲ್ಲಿ ಸಲಹೆ ನೀಡಿದ ದೈವಾರಾಧಕ ಮುಖೇಶ್‌ ಅವರು ಮಾತನಾಡಿ ಈ ಚಿತ್ರವನ್ನು ಯಾವುದೇ ಹಣಕಾಸಿನ ವಿಚಾರ, ಲಾಭಕ್ಕಾಗಿ ಮಾಡಿದ ಚಿತ್ರ ಅಲ್ಲ.

ಇಲ್ಲಿನ ದೈವಗಳ ವಿಚಾರ ಇಡೀ ನಾಡಿನ ಜನತೆಯ ಮಣ್ಣಿನ ಸೊಬಗಿನ ಚಿತ್ರವನ್ನು ನಾವು ಕಟ್ಟಿಕೊಟ್ಟಿದ್ದೇವೆ ಎಂದರು.

ಮನುಷ್ಯ ಹುಟ್ಟಿದಾಗಿನಿಂದ ಪ್ರಕೃತಿ ಜೊತೆಗೆ ಸಂಘರ್ಷ ಇದ್ದೇ ಇದೆ. ಅದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದರು. ಚಿತ್ರದಲ್ಲಿ ನಟರಾದ ಪ್ರಮೋದ್‌, ನಟಿ ಸಪ್ತಮಿ ಗೌಡ, ಪ್ರಕಾಶ್‌, ಸ್ವರಾಜ್‌ ಶೆಟ್ಟಿ, ಗುರು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಅಡಿಕೆ ಮರ ಕಡಿಯುತ್ತಿದ್ದಾಗ ತಲೆಗೆ ಬಿದ್ದು ವೃದ್ಧ ಸಾವು

ಬೆಳ್ತಂಗಡಿ: ಹಳೆ ಅಡಕೆ ಮರ ಕಡಿಯುತ್ತಿರುವಾಗ ಆಕಸ್ಮಿಕವಾಗಿ ವೃದ್ಧನ ತಲೆ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ನಡೆದಿದೆ.ಮುಂಡಾಜೆ ಗ್ರಾಮದ ಮಂಜು ಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು ನಾಲ್ಕೆ(66) ಮೃತ...

ಲವ್ ಜಿಹಾದ್ ವಿರುದ್ಧ ಎಚ್ಚರಿಕೆ ನೀಡಿದ ಹಿಂದೂ ಮುಖಂಡ..! ಪುನೀತ್ ಅತ್ತಾವರ ಪೋಸ್ಟರ್ ವೈರಲ್..

ಮಂಗಳೂರು: ಲವ್ ಜಿಹಾದ್ ವಿರುದ್ದ ರಕ್ತಪಾತದ ಎಚ್ಚರಿಕೆ ನೀಡಿದ ಹಿಂದೂ ಮುಖಂಡನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.ಮಂಗಳೂರು ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಈ ಪೋಸ್ಟರನ್ನು ತನ್ನ...