ದಿಕ್ಕು ತೋಚದ ಯುವಕ ಅಸಹಾಯಕ ಸ್ಥಿತಿಯಲ್ಲಿ ಕೊನೆ ಪ್ರಯತ್ನ ಎಂಬಂತೆ ನಡುರಾತ್ರಿ 2.30ಕ್ಕೆ ನೇರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರರ ಮೊಬೈಲಿಗೆ ಕಾಲ್ ಮಾಡಿದ್ದಾನೆ.
ಶಿವಮೊಗ್ಗ : ಆತ ತೀರ್ಥಹಳ್ಳಿಯಲ್ಲಿ ಮಾಂಸದ ವ್ಯಾಪಾರ ಮಾಡುವವನು, ಕಡೂರಿ ನಲ್ಲಿ ಯಾರೋ ಒಬ್ಬರು ಬಲಾಡ್ಯರ ಬಳಿ ಸಾಲ ಬಾಕಿ ಉಳಿಸಿಕೊಂಡಿದ್ದ.
ಅವರು ಒಂದಕ್ಕೆ ನಾಲ್ಕು ಪಟ್ಟು ಬಡ್ಡಿ ಲೆಕ್ಕ ಬರೆದು ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಿದ್ದರು.
ಈತ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡು ಸಾಲ ತೀರಿಸಲಾಗದ ಅಸ ಪಾಯಕ ಸ್ಥಿತಿಯಲ್ಲಿದ್ದ ಕಡೂರಿನ ಬಲಾಡ್ಯ ಅಲ್ಲಿನ ಪೋಲಿಸಿದ ನೊಬ್ಬನನ್ನು ಅಡಸ್ಟ್ ಮಾಡಿಕೊಂಡು ನಡುರಾತ್ರಿ 2.30ಕ್ಕೆ ತೀರ್ಥ ಹಳ್ಳಿಗೆ ಬಂದು ನಿಂತ ಜಾಗದಲ್ಲಿ 3 ಲಕ್ಷ ಕೊಡು ಎಂದು ಪೀಡಿಸ ಲಾರಂಭಿಸಿ ಗಲಾಟೆ ರಾದ್ಧಾಂತ ಶುರು ಮಾಡಿದ್ದಾನೆ.
ಅಷ್ಟೇ ಅಲ್ಲದೆ ಇದಕ್ಕೂ ಮೊದಲೇ ಇವನ ಕಾರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದಾನೆ.
ದಿಕ್ಕು ತೋಚದ ಯುವಕ ಅಸಹಾಯಕ ಸ್ಥಿತಿಯಲ್ಲಿ ಕೊನೆ ಪ್ರಯತ್ನ ಎಂಬಂತೆ ನಡುರಾತ್ರಿ 2.30ಕ್ಕೆ ನೇರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರರ ಮೊಬೈಲಿಗೆ ಕಾಲ್ ಮಾಡಿದ್ದಾನೆ.
ಅವನ ಅದೃಪ್ಪ ಆ ಸರಿ ಹೊತ್ತಿನಲ್ಲಿ ಎರಡೇ ರಿಂಗಿಗೆ ಗೃಹ ಸಚಿವರು ಕಾಲ್ ರಿಸೀವ್ ಮಾಡಿದ್ದಾರೆ.
ಈತ ತನ್ನ ಸಮಸ್ಯೆ ಅವರ ಹೇಳಿಕೊಂಡು ರಕ್ಷಣೆಗೆ ಮನವಿ ಮಾಡಿದ್ದಾನೆ.
ಫೋನನ್ನು ಪೋಲೀಸನವನ ಕೈಗೆ ಕೊಡಲು ಆರಗರು ಹೇಳಿದ್ದಾರೆ. ನಡುರಾತ್ರಿ ಕಾನೂನು ಬಾಹಿರ ರೀತಿಯಲ್ಲಿ ಸಾಲ ವಸೂಲಾತಿಗೆ ಬಂದವರಿಗೆ ಛಳಿ ಜ್ವರ ಬರುವುದು ಒಂದೇ ಬಾಕಿ.
ಪಡೆದ ಸಾಲ ನ್ಯಾಯಯುತ ಬಡ್ಡಿಯೊಂದಿಗೆ ಸ್ವೀಕರಿಸಿ ಯುವಕನ ಕಾರು ಸಹ ಹಿಂದಿರುಗಿಸಹಬೇಕು. ಮತ್ತು ಆತನಿಗೆ ಮಾನಸಿಕ ಹಿಂಸೆ ನೀಡಬಾರದೆಂಬ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದಾಗಲೇ ಯುವಕನ ಸಮಸ್ಯೆ ಬಗೆಹರಿದಿದೆ.
ರಾಜ್ಯದ ಗೃಹ ಮಂತ್ರಿಯೇ ನಡುರಾತ್ರಿ ಒಬ್ಬ ಯುವಕನ ಸಂಕಷ್ಟಕ್ಕೆ ನೆರವಾಗಿದ್ದು ಬಹುಷ ಬೇರೆ ಉದಾಹರಣೆ ಸಿಗುವುದೇ ಕಷ್ಟ..!