Tuesday, January 31, 2023

ಉಪ್ಪಿನಂಗಡಿಯಲ್ಲಿ ಆಟೋ-ಎಟಿಎಂ ಹಣ ಸಾಗಾಟ ವಾಹನ ಢಿಕ್ಕಿ: ಆಟೋ ಚಾಲಕ ಸ್ಥಳದಲ್ಲೇ ಸಾವು..!

ಎಟಿಎಂ ನ ಹಣ ಸಾಗಿಸುವ ವಾಹನ ಹಾಗೂ ಅಟೋ ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಯಲ್ಲಿ  ಸಂಭವಿಸಿದೆ.

ಪುತ್ತೂರು : ಎಟಿಎಂ ನ ಹಣ ಸಾಗಿಸುವ ವಾಹನ ಹಾಗೂ ಅಟೋ ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ  ಸಂಭವಿಸಿದೆ.

ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿಯ ಬೊಳ್ಳಾರು ಸಮೀಪ ಈ ದುರ್ಘಟನೆ ಸಂಭವಿಸಿದೆ.

ಮೃತ ರಿಕ್ಷಾ ಚಾಲಕನನ್ನು ಉಪ್ಪಿನಂಗಡಿಯ ಸುಭಾಶ್ ನಗರ ನಿವಾಸಿ, ವಾಸು ಪೂಜಾರಿ (50 ವರ್ಷ) ಎಂದು ಗುರುತಿಸಲಾಗಿದೆ.ಎಟಿಎಂ ವಾಹನ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು,

ಆಟೋ ರಿಕ್ಷಾ ಉಪ್ಪಿನಂಗಡಿ ಕಡೆಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

“ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ..ನಾಚಿಕೆ ಇಲ್ವಾ.!?” ಉಳ್ಳಾಲ ಪೊಲೀಸರಿಗೆ ಶಾಸಕ ಖಾದರ್ ಕ್ಲಾಸ್..!

ಮಂಗಳೂರು: ಜನ ಸಾಮಾನ್ಯರ ಮನೆಯ ತಳಪಾಯ ಬಿದ್ದುಹೋಗುವ ಸ್ಥಿತಿ ನಿರ್ಮಾಣ ಮಾಡಿದ ಮರಳು ಮಾಫಿಯಾ ವಿರುದ್ದ ಉಳ್ಳಾಲ ಶಾಸಕ ಯು ಟಿ. ಖಾದರ್ ಗರಂ ಆಗಿದ್ದಾರೆ.ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗದ ಉಳ್ಳಾಲ ಪೊಲೀಸರು...

ಮಂಗಳೂರು : ಮೊಬೈಲ್ ಬಳಕೆಗೆ ಗದರಿದ ತಾಯಿ – ನೇಣಿಗೆ ಕೊರಳೊಡ್ಡಿದ ಬಾಲಕ..!

ಮಂಗಳೂರು : ಮೊಬೈಲ್ ಬಳಕೆಯ ಬಗ್ಗೆ ತಾಯಿ ಗದರಿಸಿದರು ಎಂಬ ಕಾರಣಕ್ಕೆ ಬಾಲಕ ಜೀವಾಂತ್ಯ ಮಾಡಿದ ಘಟನೆ ಮಂಗಳೂರು ನಗರದ ಕುಲಶೇಖರ ಕೋಟಿಮುರ ಅಪಾರ್ಟ್ ಒಂದಲ್ಲಿ ನಡೆದಿದೆ.ಜಗದೀಶ್ ಹಾಗೂ ವಿನಯ ದಂಪತಿಗಳ ಮಗನಾದ...

ಮಂಗಳೂರು ತಲಪಾಡಿ ಟೋಲ್ ಸಿಬ್ಬಂದಿ ಗೂಂಡಾಗಿರಿ :ಸಾಮಾಜಿಕ ಜಾಲತಾಣದಲ್ಲಿ ವೈರಲ್..!

ಉಳ್ಳಾಲ: ಟೋಲ್ ಸಿಬ್ಬಂದಿಗಳ ಗೂಂಡಾ ವರ್ತನೆಯಿಂದ ಕಾರು ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ತಲಪಾಡಿ ಟೋಲ್ ಪ್ಲಾಜಾದಲ್ಲಿ ಭಾನುವಾರ ನಡೆದಿರುವುದು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ.ಕೇರಳ ಗಡಿಭಾಗದ...