Connect with us

LATEST NEWS

ಉಡುಪಿ: ಮನೆಯಲ್ಲಿ ಕ್ರಿಸ್ಮಸ್ ಆಚರಿಸಲು ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

Published

on

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಗಣಪತಿಕಟ್ಟೆ ರಸ್ತೆಯ ಎಸ್ತೆಲ ಲೂಯಿಸ್ ಅವರಿಗೆ ತಮ್ಮ ಮನೆಯಲ್ಲಿ ಕ್ರಿಸ್ಮಸ್ ಪ್ರಾರ್ಥನೆ ನಡೆಸಲು ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.


ಕ್ರಿಸ್ಮಸ್ ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಜಾರಿ ಮಾಡಿದ್ದ ನೋಟಿಸ್‌ ಪ್ರಶ್ನಿಸಿ ಎಸ್ತೆಲ ಲೂಯಿಸ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಕೃಷ್ಣ ಎಸ್. ದೀಕ್ಷಿತ್ ಅವರು ನಿನ್ನೆ ಆದೇಶ ಮಾಡಿದರು.


ಅರ್ಜಿದಾರರು ತಮ್ಮ ಮನೆಯಲ್ಲಿ ಕ್ರಿಸ್ಮಸ್ ಪ್ರಾರ್ಥನೆ ಮಾಡಬಹುದು. ಈ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕ ತೊಂದರೆ ಉಂಟು ಮಾಡಬಾರದು. ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಬಾರದು ಎ೦ದು ಅರ್ಜಿದಾರರಿಗೆ ಷರತ್ತು ವಿಧಿಸಿದ ಹೈಕೋರ್ಟ್‌,

ಪ್ರಾರ್ಥನೆ ಸಂದರ್ಭದಲ್ಲಿ ಪೊಲೀಸರು ನಿಗಾವಹಿಸಬಹುದು ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಿಸಿದ ಸರ್ಕಾರಿ ವಕೀಲ ವಿನೋದ್, ಅರ್ಜಿದಾರರು ಕ್ರಿಸ್ಮಸ್ ಪ್ರಾರ್ಥನೆ ಹೆಸರಿನಲ್ಲಿ ಅನ್ಯ ಧರ್ಮದವರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದರಿಂದಲೇ ಪೊಲೀಸರು ನೋಟಿಸ್ ನೀಡಿದ್ದಾರೆ. ಹಾಗಾಗಿ, ಅರ್ಜಿದಾರರ ಮನೆಯಲ್ಲಿ ಕ್ರಿಸಸ್ ಪ್ರಾರ್ಥನೆ ನಡೆಸಲು ಅನುಮತಿ ನೀಡಬಾರದು ಎಂದು ಕೋರಿದರು.
ಅರ್ಜಿದಾರ ಪರ ವಕೀಲರು, ಮತಾ೦ತರ ಚಟುವಟಿಕೆ ನಡೆಸುತ್ತಿಲ್ಲ. ಕೇವಲ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರಾರ್ಥನೆ ಮಾಡಲಾಗುತ್ತಿದೆ. ಮತಾಂತರ ಚಟುವಟಿಕೆ ಮುಂದಾಗುವುದೂ ಇಲ್ಲ ಎ೦ದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

DAKSHINA KANNADA

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಹೆಸರು ಉಲ್ಲೇಖಿಸಿದ್ದ ವರ..! ವರನ ಮೇಲೆ ದೂರು ದಾಖಲು..!

Published

on

ಕಡಬ: ವ್ಯಕ್ತಿಯೊಬ್ಬರು  ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಯ ಕುರಿತಾಗಿ ಉಲ್ಲೇಖಿಸಿದ್ದು ಇದೀಗ ಇಕ್ಕಟ್ಟಿಗೆ ಸಿಲುಕಿರುವ ಘಟನೆ ನಡೆದಿದೆ.  ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ಎಂಬವರು ತಮ್ಮ ಮದುವೆಯ ಆಮಂತ್ರನ ಪತ್ರಿಕೆಯಲ್ಲಿ ಪ್ರಧಾನಿ ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವುದು ನಮಗೆ ನೀವು ನೀಡುವ ಉಡುಗೊರೆ ಎಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು.

ಮುಂದೆ ಓದಿ..; ಮಕ್ಕಳ ಮುಂದೆಯೇ ದಾಂಪತ್ಯಕ್ಕೆ ಕಾಲಿಟ್ಟ ವೃದ್ದರು..!! ಅಚ್ಚರಿಯಾದ್ರು ಇದು ಸತ್ಯ..!!

marriage

ಮದುವೆ ನಡೆದ ಬಳಿಕ ವರನ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.  ಮಾರ್ಚ್‌1 ರಂದು ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಶಿವಪ್ರಸಾದ್‌ರವರು ಹಂಚಿದ್ದರು. ನೀತಿ ಸಂಹಿತಿ ಘೋಷಣೆಗೆ ಮೊದಲೇ ಈ ಆಮಂತ್ರಣ ಪತ್ರಿಕೆ ಮುದ್ರಣಗೊಂಡಿತ್ತಾದರೂ ಇದೀಗ ಚುನಾವಣಾ ಅಧಿಕಾರಿಗಳಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Continue Reading

FILM

ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಅಬ್ಬರಿಸಲಿದೆ ‘ಪುನೀತ್’ ಸಿನೆಮಾ..! ಯಾವ ಸಿನೆಮಾ?

Published

on

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಫ್ಯಾಮಿಲಿ ಪ್ಯಾಕೇಜ್, ಹಿಟ್ ಮೂವಿಯೊಂದು ರಿ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ ನಲ್ಲಿ ಅಪ್ಪು ಅಭಿನಯದ ಜಾಕಿ ಚಿತ್ರ ರಿ ರಲೀಸ್‌ ಆಗಿದ್ದು ಹಿಟ್‌ ಲಿಸ್ಟ್‌ಅಲ್ಲಿ ಸೇರಿಕೊಂಡಿದೆ. ಇದೀಗ ಅವರ ಅಭಿನಯದ ಮತ್ತೊಂದು ಸಿನೆಮಾ ‘ಅಂಜನಿಪುತ್ರ’ ರಿ ರಲೀಸ್‌ಗೆ ತಯಾರಾಗಿದೆ.

anjani

ರಿ ರಿಲೀಸ್ ಯಾವಾಗ?

ಪುನೀತ್‌ ರಾಜ್‌ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಅಂಜನಿ ಪುತ್ರ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ, ಎನ್‌ಎಮ್‌ಕೆ ಮೂವೀಸ್ ಲಾಂಛನದಲ್ಲಿ ಬಿಡುಗಡೆಗೊಂಡಿತ್ತು.  2017ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಆರು ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ.  ರಾಜ್ಯದ  ಹಲವು ಚಿತ್ರಮಂದಿರಗಳಲ್ಲಿ ಮೇ.10ರಂದು ಸಿನೆಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಎಮ್‌ಎನ್ ಕುಮಾರ್ ತಿಳಿಸಿದ್ದಾರೆ.

 

ಮುಂದೆ ಓದಿ..; ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಹಿಟ್‌ ಸಾಂಗ್‌ಗಳನ್ನು ಒಳಗೊಂಡಿದೆ. ಅದರಲ್ಲೂ’ಭಾರಿ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ’ ಸಾಂಗ್ ಎಲ್ಲರ ತುಟಿಯಂಚಿನಲ್ಲಿ ಈಗಲೂ ಗುಣುಗುಟ್ಟುವಂತಿದೆ. ಮುಂದಿನ ದಿನಗಳಲ್ಲಿ ಪುನೀತ್ ಹಲವು ಸಿನೆಮಾಗಳು ರಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

Continue Reading

DAKSHINA KANNADA

ಮೇ 3 ರಂದು ಗಬ್ಬರ್ ಸಿಂಗ್ ತುಳು ಸಿನಿಮಾ ತೆರೆಗೆ

Published

on

ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಸತೀಶ್ ಬಾರ್ಕೂರು ನಿರ್ಮಾಣದ ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಗಬ್ಬರ್ ಸಿಂಗ್ ತುಳು ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಈ ಚಿತ್ರವನ್ನುಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಗಬ್ಬರ್ ಸಿಂಗ್ ಸಿನಿಮಾ ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

“ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಈ ಸಿನಿಮಾದ ಕಥೆ, ಚಿತ್ರಕಥೆ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್ , ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್ ಮಾಡಿದ್ದಾರೆ.

ಪ್ರೀಮಿಯರ್ ಶೋ

ಈಗಾಗಲೇ ಮಸ್ಕತ್, ಕತಾರ್ ಉಡುಪಿ, ಸುರತ್ಕಲ್ ನಲ್ಲಿ ಗಬ್ನರ್ ಸಿಂಗ್ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಾಂಸಾರಿಕ ಕತೆಯ ಜೊತೆ ಇಲ್ಲಿ ಹಾಸ್ಯವೂ ಚೆನ್ನಾಗಿ ವಕ್೯ಹೌಟ್ ಆಗಿದೆ. ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ರವಿರಾಮ ಕುಂಜ ಇವರ ಹಾಸ್ಯ ಸಕ್ಕತ್ತಾಗಿದೆ. ಜೊತೆಗೆ ಗಿರೀಶ್ ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರ ಪಾತ್ರಗಳೂ ಕೂಡಾ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಭೋಜರಾಜ ವಾಮಂಜೂರು, ಮಧು ಸುರತ್ಕಲ್, ಚಂದ್ರ ಶೇಖರ ನಾನಿಲ್ ಹಳೆಯಂಗಡಿ, ನಟ ಶರಣ್ ಶೆಟ್ಟಿ
ನಟಿ ವೆನ್ಸಿಟಾ ಇದ್ದರು.

Continue Reading

LATEST NEWS

Trending