Connect with us

    NATIONAL

    ಅಪ್ರಾಪ್ತೆ ಬಾಲಕಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ

    Published

    on

    ನವದೆಹಲಿ: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಕೊಡಲಿಯಿಂದ ಹೊಡೆದು ಯುವಕನೊಬ್ಬ ಹತ್ಯೆಗೈದ ಘಟನೆ ಹರ್ಯಾಣದ ಪಾಲ್ವಾಲ್‌ನಲ್ಲಿ ನಡೆದಿದೆ.


    ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 11ನೇ ತರಗತಿ ವಿದ್ಯಾರ್ಥಿನಿಯನ್ನು ಕೊಡಲಿಯಿಂದ ಕಡಿದು ಹತ್ಯೆಗೈದ ನಂತರ ಆರೋಪಿ ಪ್ರವೀಣ್ ಪರಾರಿಯಾಗಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಈತ ಕಳೆದ ಒಂದು ತಿಂಗಳಿನಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
    ದಕ್ಷಿಣ ಕ್ಯಾಂಪಸ್ ಪೊಲೀಸ್ ಠಾಣೆಯಿಂದ ಮಧ್ಯಾಹ್ನ 1.30ಕ್ಕೆ ಪಿಸಿಆರ್ ಕರೆಯೊಂದು ಬಂದಿದ್ದು, ಬಾಲಕಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲಾಗಿದ್ದು, ಆಕೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಸಾವನ್ನಪ್ಪಿದ್ದಳು ಎಂದು ಮಾಹಿತಿ ನೀಡಲಾಗಿತ್ತು.
    ಆರೋಪಿಯನ್ನು ಶೀಘ್ರವೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ದೆಹಲಿಯ ಮೋತಿ ಬಾಗ್ ಪ್ರದೇಶದ ಶಾಂತಿಟೌನ್ ನಿವಾಸಿ ಪ್ರವೀಣ್ ನಿರುದ್ಯೋಗಿಯಾಗಿದ್ದ.

    Click to comment

    Leave a Reply

    Your email address will not be published. Required fields are marked *

    NATIONAL

    ಮಸೀದಿಯೊಳಗೆ ಪತ್ತೆಯಾದ ಶಿವಲಿಂಗ; ಸುಪ್ರೀಂ ಕೋರ್ಟ್‌ ಹೇಳಿದ್ದೇನು ಗೊತ್ತಾ ?

    Published

    on

    ಮಂಗಳರು/ನವದೆಹಲಿ : ಕಾಶಿಯ ಗ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿದ್ದ ಕಾರಣಕ್ಕೆ ಅಲ್ಲಿ ಉತ್ಖನನ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಗ್ಯಾನವ್ಯಾಪಿ ನಿರ್ವಹಣಾ ಸಮಿತಿ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟೀಸ್‌ ನೀಡಿದೆ.

    ಕಳೆದ ಬಾರಿ ಪುರಾತತ್ವ ಇಲಾಖೆಯ ವತಿಯಿಂದ ಮಸೀದಿಯ ವಜುಖಾನಾದಲ್ಲಿ ವಿಡಿಯೋಗ್ರಾಫಿಕ್‌ ಸಮೀಕ್ಷೆ ನಡೆಸಲಾಗಿದ್ದು, ವಜೂಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಇದೀಗ ಕಾಶಿ ವಿಶ್ವನಾಥ ಹಾಗೂ ಗ್ಯಾನ ವ್ಯಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶಕ್ಕೆ ಮುಂದಾಗಿದೆ.

    ತಕ್ಷಣವೇ ಸಮೀಕ್ಷೆಗೆ ತಡೆಯಾಜ್ಞೆ ತರಲಾಗಿದೆ. ಮಸೀದಿಯ ಕೆಲವು ಭಾಗಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ ಮಾತ್ರವಲ್ಲದ, ಕೋಣೆಗಳಿಗೆ ಬೀಗ ಹಾಕಲಾಗಿದೆ.  ಗ್ಯಾನವಾಪಿ ಮಸೀದಿಯ ಸಂಪೂರ್ಣ ಸಮೀಕ್ಷೆ ನಡೆಯಬೇಕೆಂಬುದು ಹಿಂದೂಪರ ಸಂಘಟನೆಗಳ ಒತ್ತಾಯವಾಗಿದೆ.

     

    Continue Reading

    Baindooru

    ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ

    Published

    on

    ಮಂಗಳೂರು/ ನವದೆಹಲಿ :  ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೈವಾಡ ಇದೆ ಎಂಬ ವರದಿಯ ಬಗ್ಗೆ ತೀವ್ರ ಆಕ್ಷೇಪ ಬಂದ ಬೆನ್ನಲ್ಲೇ ಕೆನಡಾ ಈ ಬಗ್ಗೆ ಸ್ಪಷ್ಟನೆ ನೀಡಿದೆ.  ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

    ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೆನಡಾದೊಳಗೆ ಯಾವುದೇ ಕ್ರಿ*ಮಿನಲ್ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಕೆನಡಾ ಸರ್ಕಾರದ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟ ಪಡಿಸಿದೆ.

    ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ : 

    ಕೆನಡಾ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಿಜ್ಜರ್ ಹ*ತ್ಯೆಗೆ ಭಾರತದ ನಾಯಕರೇ ಸಂಚು ರೂಪಿಸಿದ್ದರು ಎಂಬುದಾಗಿ  ವರದಿಯಲ್ಲಿ ಆರೋಪ ಮಾಡಲಾಗಿತ್ತು. ಇದೀಗ ಎಚ್ಚೆತ್ತ ಕೆನಡಾ ಸರ್ಕಾರ  ಪ್ರತಿಕ್ರಿಯೆ ನೀಡಿದೆ.  ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ. ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ ಎಂದು ಹೇಳಿದೆ.
    ಈ ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಹೇಳಿಕೆ ನೀಡಿದ್ದಾರೆ.
    ಇದನ್ನೂ ಓದಿ : ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?
    ಕಳೆದ ವರ್ಷ ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ನಡೆದಿತ್ತು. ಈ  ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಪ್ರಧಾನಿ ಮೋದಿ ಮತ್ತು ಎನ್‌ಎಸ್‌ಎ ದೋವಲ್ ಲಿಂಕ್ ಮಾಡುವ ಲೇಖನವನ್ನು ಕೆನಡಾದ ಪ್ರತಿಷ್ಠಿತ ಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ ಪ್ರಕಟಿಸಿತ್ತು. ಪ್ರಧಾನಿ ಮೋದಿಯವರಿಗೆ ನಿಜ್ಜರ್ ಹತ್ಯೆಯ ಬಗ್ಗೆ ಗೊತ್ತಿತ್ತು ಎಂದು ಕೆನಡಾದ ಭದ್ರತಾ ಏಜೆನ್ಸಿಗಳು ನಂಬುತ್ತವೆ ಎಂಬುದಾಗಿ ಹೆಸರಿಸದ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಭಾರತ ಸರ್ಕಾರ ಈ ಆರೋಪವನ್ನು ನಿರಾಕರಿಸಿತ್ತು.

    Continue Reading

    LATEST NEWS

    ಎಚ್ಚರ!! ಪ್ರೀತಿ ಪಾತ್ರರ ಸಾ*ವೇ ಟಾರ್ಗೆಟ್; ಸೈಬರ್ ಕ್ರೈಂನಲ್ಲಿ ಅಂ*ತ್ಯಸಂಸ್ಕಾರ

    Published

    on

    ಮಂಗಳೂರು/ನವದೆಹಲಿ:  ಭಾವನೆ, ನೋವು, ದುಃಖಗಳನ್ನೇ ಟಾರ್ಗೆಟ್ ಮಾಡಿ ವಂಚಕರು ನಡೆಸುವ ಹೊಸ ಸೈಬರ್ ಕ್ರೈಂ ಈ ಅಂತ್ಯಸಂಸ್ಕಾರ ಸೈಬರ್ ಕ್ರೈಂ ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲೇ ಈ ಸೈಬರ್ ಕ್ರೈಂ ನಡೆಯುತ್ತದೆ. ನಗರ ಪ್ರದೇಶಗಳಲ್ಲಿನ ಬದುಕಿಗೆ ಸಮಯವಿಲ್ಲ. ಎಲ್ಲವನ್ನೂ ನಿಭಾಯಿಸಲು, ನಿರ್ವಹಿಸಲು ಆಪ್ತರು, ನೆರಮನೆಯವರ ಸಹಾಯವಿರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲ ಹೊಣೆಗಾರಿಕೆಯನ್ನು ಎಜೆನ್ಸಿಗಳ ಕೈಗೆ ವಹಿಸಲಾಗತ್ತವೆ. ಈ ಪೈಕಿ ಅಂತ್ಯಸಂಸ್ಕಾರ ನಡೆಸಲು ನಗರ ಪ್ರದೇಶದಲ್ಲಿ  ಖಾಸಗಿ ಎಜೆನ್ಸಿಗಳಿವೆ. ಈ ಎಜೆನ್ಸಿಗಳು ಸಂಪ್ರದಾಯದ ಪ್ರಕಾರ ಅಂ*ತ್ಯಸಂಸ್ಕಾರ ನಡೆಸುತ್ತದೆ. ಅಂ*ತಿಮ ವಿಧಿ ವಿಧಾನಗಳು, ಪೂಜಾ ಕೈಂಕರ್ಯ, ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ.

    ಈ ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ?

    ಸೈಬರ್ ಕ್ರೈಂ ಭೂತ  ಯಾವ ರೂಪದಲ್ಲಿ ವಕ್ಕರಿಸಲಿದೆ ಅನ್ನೋದೇ ತಿಳಿಯಲ್ಲ. ಮೋಸ ಹೋದ ಬಳಿಕವಷ್ಟೇ ಇದೊಂದು ಸೈಬರ್ ಕ್ರೈಂ ಆಗಿತ್ತು ಅನ್ನೋದು ಅಂದಾಜಾಗುವುದು. ಪ್ರತಿ ಗಂಟೆಯಲ್ಲಿ ಲಕ್ಷಾಂತರ ಸೈಬರ್ ಕ್ರೈಂ ಪ್ರಕರಣಗಳು ಪತ್ತೆಯಾಗಿ, ದೂರು ದಾಖಲಾಗುತ್ತಿದೆ. ಹೊಸ ಹೊಸ ವಿಧಾನದಲ್ಲಿ ವಂಚಕರು ಮೋಸ ಮಾಡುತ್ತಿದ್ದಾರೆ. ಅಮಾಯಕರು, ಎಚ್ಚರವಹಿಸಿ ಹೆಜ್ಜೆ ಇಟ್ಟರೂ ಹೇಗೋ ಬಲಿಯಾಗುತ್ತಿದ್ದಾರೆ.

    ಅಂ*ತ್ಯಸಂಸ್ಕಾರ ಸೈಬರ್ ಕ್ರೈಂ ಎಂದರೇನು?

    ಅಂ*ತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ನಾವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂ*ತ್ಯಸಂಸ್ಕಾರ ನಡೆಸಬೇಕು ಎಂದು ಕೇಳಿಕೊಂಡ ತಕ್ಷಣವೇ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಅದರಲ್ಲಿ ನಾವು ಹೆಸರು, ವಿಳಾಸ, ಮೃ*ತಪಟ್ಟವರ ಹೆಸರು, ಧರ್ಮ, ಗೋತ್ರ, ಅಂ*ತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಿರುತ್ತೇವೆ. ನಂತರ  5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಿದಾಗ ಒಂದು ಮೆಸೇಜ್ ಬರಲಿದೆ. ಅಂ*ತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಮೆಸೇಜ್ ಬರುತ್ತವೆ. ಇದೇ ವೇಳೆ ಬಂದ ಒಟಿಪಿ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.

    ಅಂ*ತ್ಯಸಂಸ್ಕಾರವನ್ನೇ ಟಾರ್ಗೆಟ್ ಮಾಡಿ ಹಲವು ಸೈಬರ್ ಕ್ರೈಂ ದಾಖಲಾಗಿದೆ. ಈ ಕುರಿತು ಎಚ್ಚರಿಕೆ ಸಂದೇಶ ನೀಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿ ವ್ಯವಹಾರಕ್ಕೂ ಮುನ್ನ ಯೋಚಿಸಿ, ತಾಳ್ಮೆ ವಹಿಸಿ ಮುನ್ನಡೆಯಬೇಕು ಯಾವುದೇ ಕಾರಣಕ್ಕೂ ಅನಾಮಿಕರು ಕಳುಹಿಸುವ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಒಟಿಪಿ ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು.

    Continue Reading

    LATEST NEWS

    Trending