Connect with us

    FILM

    ನಟ ಶಾರುಖ್ ಖಾನ್​ಗೆ ಜೀ*ವ ಬೆ*ದರಿಕೆಯೊಡ್ಡಿದ್ದಾತ ಅರೆಸ್ಟ್; ಬಂಧಿತ ವಕೀಲ ಹೇಳೋದೇ ಬೇರೆ!

    Published

    on

    ಮಂಗಳೂರು/ಮುಂಬೈ : ಬಾಲಿವುಡ್ ನಟ ಶಾರುಖ್​ ಖಾನ್​ಗೆ ಕೊ*ಲೆ ಬೆ*ದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್​ಗಢದಲ್ಲಿ ಬಂಧಿಸಲಾಗಿದೆ. ವಕೀಲ ಫೈಜಾನ್ ಖಾನ್ ಬಂಧಿತ ಆರೋಪಿ. ಛತ್ತೀಸ್‌ಗಢದ ರಾಯ್‌ಪುರದ ಆತನ ನಿವಾಸದಲ್ಲಿ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.

    50 ಲಕ್ಷ ರೂ. ನೀಡುವಂತೆ ಬೆ*ದರಿಕೆ:

    ನವೆಂಬರ್ 7 ರಂದು ವ್ಯಕ್ತಿಯೊಬ್ಬ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಜೀ*ವ ಬೆ*ದರಿಕೆ ಹಾಕಿದ್ದಲ್ಲದೇ, 50 ಲಕ್ಷ ರೂ. ನೀಡುವಂತೆ  ಬೇಡಿಕೆಯೊಡ್ಡಿದ್ದ. ಈ ಸಂಬಂಧ ಮುಂಬಯಿಯ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಫೋನ್ ಟ್ರ್ಯಾಕ್ ಮಾಡಿದಾಗ, ಆರೋಪಿ ಛತ್ತೀಸ್‌ಗಢ ರಾಜ್ಯದ ರಾಯ್‌ಪುರದಿಂದ ಕರೆ ಮಾಡಿರುವುದು ತಿಳಿದು ಬಂದಿತ್ತು. ಇದೀಗ ಆರೋಪಿ ವಕೀಲ ಫೈಜಲ್ ಖಾನ್‌ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ರಾಯ್‌ಪುರದಲ್ಲಿ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್‌ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ನನ್ನ ವಿರುದ್ಧ ಪಿತೂರಿ ಎಂದ ವಕೀಲ :

    ಬೆ*ದರಿಕೆ ಪ್ರಕರಣಕ್ಕೆ ಸಂಬಂಧಿಸಿ ಫೈಜಲ್ ಖಾನ್‌ನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೇನೋ ಸರಿ. ಆದರೆ, ಈ ಕೇಸ್ ಕುರಿತು ಸವಾಲು ಎದುರಾಗಿದೆ. ಅದಕ್ಕೆ ಕಾರಣ ವಕೀಲ ನೀಡಿರುವ ಹೇಳಿಕೆ.
    ಇದನ್ನೂ ಓದಿ : Watch Video: ದೇವಸ್ಥಾನದಲ್ಲೇ ಹೃದಯಾಘಾ*ತದಿಂದ ಕುಸಿದು ಬಿದ್ದು ವ್ಯಕ್ತಿ ಸಾ*ವು 

    ನವೆಂಬರ್ 2ರಂದು ತನ್ನ ಮೊಬೈಲ್ ಕಳೆದು ಹೋಗಿದ್ದು, ಈಗಾಗಲೇ ದೂರು ದಾಖಲಿಸಿದ್ದೇನೆ. ಕಳೆದು ಹೋಗಿರುವ ತನ್ನ ಫೋನ್‌ನಿಂದ ಯಾರೋ ಕಿಡಿಗೇಡಿಗಳು ಶಾರುಖ್‌ ಖಾನ್‌ಗೆ ಬೆ*ದರಿಕೆ ಕರೆ ಮಾಡಿದ್ದಾರೆ. ಇದು ನನ್ನ ವಿರುದ್ಧ ನಡೆದಿರುವ ಪಿತೂರಿಯಾಗಿದೆ ಎಂದು ಫೈಜಲ್ ಖಾನ್ ಪೊಲೀಸರಿಗೆ ತಿಳಿಸಿದ್ದಾನೆ.

    FILM

    ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್!

    Published

    on

    ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಬೆನ್ನು ನೋವಿನ ಸಮಸ್ಯೆಯ ಕಾರಣ ತಿಳಿಸಿ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೀಗ ಡಿಸೆಂಬರ್ 10 ರಂದು ಅವರ ಮಧ್ಯಂತರ ಜಾಮೀನು ಅವಧಿ ಅಂತ್ಯವಾಗಲಿದ್ದು, ದರ್ಶನ್ ಪರ ವಕೀಲರು ಹೈಕೋರ್ಟಿಗೆ ಈ ಒಂದು ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿ ಎಂದು ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಕಳೆದ ಒಂದು ವಿಚಾರಣೆಯ ಸಂದರ್ಭದಲ್ಲಿ ದರ್ಶನ್ ಅವರ ಆರೋಗ್ಯದಲ್ಲಿ ಬಿಪಿ ಏರುಪೇರು ಆಗುತ್ತಿದ್ದು, ಹೀಗಾಗಿ ಸರ್ಜರಿ ಮಾಡಲು ಆಗುತ್ತಿಲ್ಲ ಎಂದು ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.ಪದೇ ಪದೇ ರಕ್ತದೊತ್ತಡ ಏರುಪೇರಿನಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿಲ್ಲ ಎಂದು ಈಗಾಗಲೇ ದರ್ಶನ್ ಪರ ವಕೀಲರು ಕೋರ್ಟಿಗೆ ಮಾಹಿತಿ ನೀಡಿದ್ದರು.

    ಆದ್ದರಿಂದ ಶಸ್ತ್ರಚಿಕಿತ್ಸೆಗಾಗಿ ಮೆಡಿಕಲ್ ಬೇಲ್ ಪಡೆದು ಜೈಲಿನಿಂದ ಹೊರಬಂದಿರುವ ದರ್ಶನ್ ಜಾಮೀನು ಅವಧಿ ವಿಸ್ತರಣೆ ಮಾಡಲು ಮಧ್ಯಂತರ ಆದೇಶ ನೀಡಬೇಕೆಂದು ದರ್ಶನ್‌ ಪರ ವಕೀಲರು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಶಸ್ತ್ರಚಿಕಿತ್ಸೆ ಮಾಡುವವರೆಗೂ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲು ಸಾಧ್ಯವಿಲ್ಲ. ಹೀಗಾಗಿ ಬೇಲ್‌ ಅವಧಿ ವಿಸ್ತರಿಸಲು ಮಧ್ಯಂತರ ಆದೇಶ ನೀಡಬೇಕೆಂದು ವಕೀಲರು ಕೋರ್ಟ್ ಮೆಟ್ಟಿಲೇರಿದ್ದಾರೆ.

    Continue Reading

    FILM

    ಬಾಕ್ಸ್ ಆಫೀಸ್ ನಲ್ಲಿ ಪುಷ್ಪ-2 ದಾಖಲೆ !

    Published

    on

    ಮಂಗಳೂರು/ಹೈದರಾಬಾದ್: ಪುಷ್ಪ-2 ಸಿನಿಮಾ ನಿನ್ನೆ ರಿಲೀಸ್ ಆಗಿದ್ದು, ಪುಷ್ಪರಾಜ್ ಮಾಸ್ ಜಾತ್ರೆ ಶುರುವಾಗಿದೆ. ಮೊದಲ ದಿನದಿಂದಲೇ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ.


    ಎಲ್ಲಾ ಭಾಷೆಗಳಲ್ಲಿ ಉತ್ತಮ ಯಶಸ್ಸನ್ನು ಗಳಿಸಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರ ಬ್ಲಾಕ್ ಬ್ಲಸ್ಟರ್ ಹಿಟ್ ಪಡೆದುಕೊಂಡಿದೆ. ಪುಷ್ಪ-2 ಮುಂಗಡ ಬುಕ್ಕಿಂಗ್ ಮೂಲಕವೇ 100 ಕೋಟಿ ಕಲೆಕ್ಷನ್ ಮಾಡಿದ್ದು, ಬಿಡುಗಡೆಯಾದ ಫಸ್ಟ್ ಡೇ ಭರ್ಜರಿ ಓಪನಿಂಗ್ ಪಡೆದಿದೆ.

    ಪ್ರೀಮಿಯರ್ ಶೋ ಮೂಲಕ ಚಿತ್ರ 10 ಕೋಟಿ ರೂಪಾಯಿ ಗಳಿಸಿತ್ತು. ನಿನ್ನೆ ಬಿಡುಗಡೆಯಾದ ಈ ಚಿತ್ರವು ಭಾರತದಲ್ಲಿ 165 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 175 ಕೋಟಿ ರೂಪಾಯಿ ಆಗಿದೆ. ಒಟ್ಟಾರೆ ವಿಶ್ವದಾದ್ಯಂತ ಒಟ್ಟು 250 ಕೋಟಿ ರೂಪಾಯಿ ಗಳಿಸಿರುವ ಸಾಧ್ಯತೆ ಇದೆ.

    ಹಳೇ ದಾಖಲೆಗಳು ಪೀಸ್ ಪೀಸ್
    ಭಾರತದಲ್ಲಿ RRR ಚಿತ್ರ ಮೊದಲ ದಿನ 133 ಕೋಟಿ ರೂಪಾಯಿ ಗಳಿಸಿತ್ತು. ಬಾಹುಬಲಿ 121 ಕೋಟಿ, ಕೆಜಿಎಫ್-2 116 ಕೋಟಿ ಗಳಿಸಿತ್ತು. ಈ ಎಲ್ಲಾ ದಾಖಲೆಗಳನ್ನು ಪುಷ್ಪ-2 ಅಳಿಸಿ ಹಾಕಿದೆ. ಪುಷ್ಪ-2 ಚಿತ್ರವು ಹೈದರಾಬಾದ್ ನಲ್ಲಿ 1549 ಶೋಗಳು ಪ್ರದರ್ಶನ ಕಂಡಿದೆ. ಕರ್ನಾಟಕದಲ್ಲಿ ಸುಮಾರು 1072 ಶೋಗಳು ಮತ್ತು ಚೆನ್ನೈನಲ್ಲಿ 244 ಶೋಗಳು ಆಗಿದೆ.

    ಪುಷ್ಪ-2 ಮೊದಲ ದಿನದ ಕಲೆಕ್ಷನ್ 175 ಕೋಟಿಯಲ್ಲಿ ತೆಲುಗು ಅವತರಣಿಕೆಯಿಂದ 95.1 ಕೋಟಿ, ಹಿಂದಿಯಿಂದ 67 ಕೋಟಿ, ತಮಿಳಿನಿಂದ 7 ಕೋಟಿ, ಮಲಯಾಳಂನಿಂದ 5 ಕೋಟಿ, ಕನ್ನಡದಿಂದ 1 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಈ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    Continue Reading

    FILM

    ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್‌ ರಾಜ್‌

    Published

    on

    ಹಿರಿಯ ನಟಿ ಡಾ.ಲೀಲಾವತಿ ಸ್ಮಾರಕ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ಜರುಗಿದೆ. ಸಚಿವ ಕೆ.ಎಚ್ ಮುನಿಯಪ್ಪ ಅವರಿಂದ ಲೀಲಾವತಿ ಸ್ಮಾರಕ ಉದ್ಘಾಟಿಸಿದ್ದಾರೆ.

    ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ಅದಕ್ಕೆ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ವಿನೋದ್ ರಾಜ್ ಹೆಸರಿಟ್ಟಿದ್ದಾರೆ. ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ.

    ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.

    Continue Reading

    LATEST NEWS

    Trending