Connect with us

NATIONAL

ಅಪ್ರಾಪ್ತೆ ಬಾಲಕಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ

Published

on

ನವದೆಹಲಿ: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಕೊಡಲಿಯಿಂದ ಹೊಡೆದು ಯುವಕನೊಬ್ಬ ಹತ್ಯೆಗೈದ ಘಟನೆ ಹರ್ಯಾಣದ ಪಾಲ್ವಾಲ್‌ನಲ್ಲಿ ನಡೆದಿದೆ.


ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 11ನೇ ತರಗತಿ ವಿದ್ಯಾರ್ಥಿನಿಯನ್ನು ಕೊಡಲಿಯಿಂದ ಕಡಿದು ಹತ್ಯೆಗೈದ ನಂತರ ಆರೋಪಿ ಪ್ರವೀಣ್ ಪರಾರಿಯಾಗಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಈತ ಕಳೆದ ಒಂದು ತಿಂಗಳಿನಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕ್ಯಾಂಪಸ್ ಪೊಲೀಸ್ ಠಾಣೆಯಿಂದ ಮಧ್ಯಾಹ್ನ 1.30ಕ್ಕೆ ಪಿಸಿಆರ್ ಕರೆಯೊಂದು ಬಂದಿದ್ದು, ಬಾಲಕಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲಾಗಿದ್ದು, ಆಕೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಸಾವನ್ನಪ್ಪಿದ್ದಳು ಎಂದು ಮಾಹಿತಿ ನೀಡಲಾಗಿತ್ತು.
ಆರೋಪಿಯನ್ನು ಶೀಘ್ರವೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ದೆಹಲಿಯ ಮೋತಿ ಬಾಗ್ ಪ್ರದೇಶದ ಶಾಂತಿಟೌನ್ ನಿವಾಸಿ ಪ್ರವೀಣ್ ನಿರುದ್ಯೋಗಿಯಾಗಿದ್ದ.

DAKSHINA KANNADA

ಮೊಬೈಲ್ ನೋಡುತ್ತಿದ್ದಾಗ 16 ವರ್ಷದ ಬಾಲಕ ದಿಢೀರ್ ಸಾ*ವು; ವೈದ್ಯರಿಂದ ಶಾಕಿಂಗ್‌ ರಿಪೋರ್ಟ್‌; ಆಗಿದ್ದೇನು?

Published

on

ಸಾ*ವು ಹೇಗೆ, ಎಲ್ಲಿ ಬೇಕಾದರೂ ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. 16 ವರ್ಷದ ಬಾಲಕ ಮೊಬೈಲ್ ಫೋನ್ ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಈ ದುರಂತ ನಡೆದಿದೆ.

16 ವರ್ಷದ ಅಮನ್ ಖುರೇಷಿ ಮೃ*ತ ದುರ್ದೈವಿ. ಖುರೇಷಿ ಮೊಬೈಲ್ ಫೋನ್ ನೋಡುತ್ತಿದ್ದಾಗ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಮನ್ ಖುರೇಷಿ ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾ*ಣ ಕಳೆದುಕೊಂಡಿದ್ದಾರೆ.

ಅಮನ್ ಖುರೇಷಿ ಸಾ*ವನ್ನಪ್ಪಿದ್ದನ್ನು ವೈದ್ಯರು ಖಚಿತ ಪಡಿಸಿದ್ದು, ಹಾರ್ಟ್ ಅಟ್ಯಾಕ್‌ನಿಂದ ಪ್ರಾ*ಣ ಬಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃ*ತಪಟ್ಟ ಬಾಲಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಈ ದುರಂತ ನಡೆದಿದೆ.

ಇತ್ತೀಚೆಗೆ ದೇಶಾದ್ಯಾಂತ ಹೃದಯಾಘಾತಕ್ಕೆ ಸಾ*ವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿ ಹರಿಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರೋದು ನಿಜಕ್ಕೂ ಶಾಕಿಂಗ್‌ ಘಟನೆಯಾಗಿದೆ.

ಹೃದಯಾಘಾತವು ವ್ಯಕ್ತಿಯ ಮಾನಸಿಕ ಒತ್ತಡ ಮತ್ತು ದೈಹಿಕ ಪರಿಶ್ರಮದಿಂದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೈನಂದಿನ ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದರಿಂದ ಹೃದಯದ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.

ಪ್ರಮುಖವಾಗಿ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮಗಳು ಸಣ್ಣ ವಯಸ್ಸಿನವರಿಂದ ವಯಸ್ಸಾದವರಿಗೂ ಹೃದಯಾಘಾತ ಆಗಲು ಕಾರಣವಾಗಿದೆ. ನ್ಯುಮೋನಿಯದಂತಹ ತೀವ್ರ ಸೋಂಕು ಹೃದಯ ಸ್ನಾಯುವಿನ ಊತಕವೂ ಸಾ*ವನ್ನು ಉಂಟು ಮಾಡಬಹುದು. ರಕ್ತನಾಳದಲ್ಲಿ ಬೇಗ ರಕ್ತು ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಪಾರಾಗಬಹುದು.

Continue Reading

LATEST NEWS

ಇಲ್ಲಿ ಕಂಠಪೂರ್ತಿ ವೈನ್‌‌ ಕುಡಿದ್ರೂ ಫ್ರೀ! ಆದ್ರೆ ಒಂದು ಕಂಡೀಷನ್‌!

Published

on

ಫ್ರೀ ಎಂದರೆ ಯಾರು ತಾನೇ ಬಿಡ್ತಾರೆ ಹೇಳಿ. ಫ್ರೀ ಅನ್ನುವ ಪದ ಕೇಳಿದ ಕೂಡಲೇ ಜನ ನಾ ಮುಂದು ತಾ ಮುಂದು ಅಂತ ನುಗ್ಗುತ್ತಾ ಇರುತ್ತಾರೆ. ಇನ್ನು ವೈನ್ ಫ್ರೀ ಅಂದರೆ ಬಾಯಿ ಬಿಡೋದು ಗ್ಯಾರಂಟಿನೇ. ಆದರೆ ವೈನ್ ಫ್ರೀ ಆಫರ್ ನಮ್ಮ ಭಾರತದಲ್ಲಿ ಅಲ್ವೇ ಅಲ್ಲ. ಈ ರೀತಿಯ ಆಫರ್ ಇರೋದು ಇಟಲಿ ದೇಶದಲ್ಲಿ. ಇಟಲಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಎಷ್ಟೇ ವೈನ್ ಕುಡಿದರೂ ಹಣ ಕೇಳಲ್ಲ. ಆದರೆ ರೆಸ್ಟೋರೆಂಟ್ ಮಾಲೀಕರ ಒಂದು ಕಂಡೀಷನ್ ಮಾತ್ರ ಫಾಲೋ ಮಾಡಲೇಬೇಕು. ವೈನ್ ಫ್ರೀ ಆಫರ್, ಮಾಲೀಕರ ಕಂಡೀಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಸುದ್ದಿ ನೋಡಿದವರೆಲ್ಲಾ ವ್ಹಾವ್ ಎನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ರೆಸ್ಟೋರೆಂಟ್‌ನಲ್ಲಿ ಎಷ್ಟಾದರೂ ವೈನ್ ಕುಡಿಯಬಹುದು!

ಇಟಲಿಯಲ್ಲಿನ ವೆರೋನಾದಲ್ಲಿರುವ ಅಲ್ ಕಾಂಡೋಮಿನಿಯೊ ಹೆಸರಿನ ಇಟಾಲಿಯನ್ ರೆಸ್ಟೋರೆಂಟ್ ಗೆ ಭೇಟಿ ಕೊಡುವ ಗ್ರಾಹಕರಿಗೆ ಉಚಿತವಾಗಿ ವೈನ್ ದೊರೆಯುತ್ತದೆ. ಆದರೆ ಊಟಕ್ಕೆ ಕುಳಿತುಕೊಳ್ಳುವಾಗ ಗ್ರಾಹಕರ ಬಳಿ ಮೊಬೈಲ್ ಫೋನ್ ಗಳು ಇರಬಾರದು. ರೆಸ್ಟೋರೆಂಟ್ ಗೆ ಪ್ರವೇಶಿಸಿದ ಕೂಡಲೇ ಮೊಬೈಲ್ ಫೋನ್ ಅನ್ನು ಸಿಬ್ಬಂದಿ ಬಳಿ ಒಪ್ಪಿಸಿಬಿಡಬೇಕು.

ಮೊಬೈಲ್‌ ಸೈಡಿಗಿಟ್ಟು ವೈನ್‌ ಕುಡಿಯಿರಿ!

ಇದೇ ಉದ್ದೇಶಕ್ಕಾಗಿ ಒಂದು ಬಾಟಲ್ ವೈನ್ ಅನ್ನು ಫ್ರೀ ಆಗಿ ಕೊಟ್ಟಿರಬಹುದು ಎಂದು ಅನ್ನಿಸುತ್ತದೆ. ಆದರೆ ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೇ ಸಮಸ್ಯೆ ಆಗೋಗಿದೆ. ಪ್ರತಿ 5 ಸೆಕೆಂಡ್‌ಗೆ ಜನರು ತಮ್ಮ ಫೋನ್ ನೋಡುತ್ತಾ ಇರುತ್ತಾರೆ. ಆದರೆ ಆಗಾಗ ಫೋನ್ ನೋಡುವ ಅವಶ್ಯಕತೆ ಜನರಿಗೆ ಇಲ್ಲ ಕಾಣಿಸುತ್ತದೆ. ಈ ರೆಸ್ಟೊರೆಂಟ್‌ನಲ್ಲಿ ಜನರು ಸ್ವಲ್ಪ ಕಾಲ ಮೊಬೈಲ್ ಪಕ್ಕಕ್ಕೆ ಇಟ್ಟು ವೈನ್ ಕುಡಿಯಬೇಕು. ವೈನ್ ಕುಡಿದು ಮುಗಿಸುವವರೆಗೆ ಜನರು ಮೋನ್ ಮುಟ್ಟುವಂತಿಲ್ಲ.

ಇನ್ ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ನ ಆಫರ್, ಕಂಡೀಷನ್ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ. ಪೋಸ್ಟ್ ಗೆ ಸುಮಾರು 68000 ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ತಮಾಷೆ ಸಹ ಮಾಡಿದ್ದಾರೆ.

ರೆಸ್ಟೋರೆಂಟ್ ಮಾಲೀಕರ ಈ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ ನೆಟ್ಟಿಗರೊಬ್ಬರು, ಗ್ರಾಹಕರು ತಮ್ಮ ಸಮಯವನ್ನು ಆನಂದಿಸಲು ಈ ಮಾಲೀಕರು ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ನಿಜಕ್ಕೂ ಮಾಲೀಕರು ಒಳ್ಳೆಯ ಮನುಷ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading

LATEST NEWS

ಇದು ಕಳ್ಳನೊಬ್ಬ ಜಡ್ಜ್‌ ಆದ ರೋಚಕ ಕಥೆ..! ಜಡ್ಜ್‌ ಆಗಿ ಆತ ಮಾಡಿದ್ದೇನು ಗೊತ್ತಾ..?

Published

on

ನವದೆಹಲಿ : ಆತ ಖತರ್ನಾಕ್ ಕಳ್ಳ. ಭಾರತದ ಚಾರ್ಲ್ಸ್ ಎಂದೇ ಕುಖ್ಯಾತನಾಗಿದ್ದ. ಅವನ ಮಾಸ್ಟರ್ ಮೈಂಡ್ ಗೆ ಇಡೀ ದೇಶವೇ ಬೆರಗಾಗಿತ್ತು. ಆತನೇ ಧನಿ ರಾಮ್ ಮಿತ್ತಲ್. ನ್ಯಾಯಾಧೀಶರಂತೆ ನಟಿಸಿ, ಜೈಲಿನಲ್ಲಿದ್ದ 2 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಿದ್ದ ಧನಿ ರಾಮ್ ಇಹಲೋಕ ತ್ಯಜಿಸಿದ್ದಾನೆ. ಆತನಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 18ರಂದು ಆತ ನಿಧ*ನನಾಗಿದ್ದಾನೆ.

150 ಕ್ಕೂ ಹೆಚ್ಚು ಪ್ರಕರಣ:

ಮಿತ್ತಲ್ ವೈಯಕ್ತಿಕ ಖುಷಿಗಾಗಿ 1968 ರಿಂದ ಕಳ್ಳತನ ಮಾಡಲು ಪ್ರಾರಂಭಿಸಿದ್ದ. ಬೇರೆ ಬೇರೆ ಫ್ಯಾನ್ಸಿ ನಂಬರ್ ನ ಕಾರುಗಳನ್ನು ಕದಿಯುತ್ತಿದ್ದ. ಹರಿಯಾಣ, ಚಂಡೀಗಢ, ಪಂಜಾಬ್, ರಾಜಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಅಲ್ಲದೇ, ಆತ, 90ಕ್ಕೂ ಹೆಚ್ಚು ಬಾರಿ ಕಂಬಿ ಎಣಿಸಿದ್ದ. 1000ಕ್ಕೂ ಅಧಿಕ ವಂಚನೆ ಕೇಸ್ ಇವನ ಮೇಲಿತ್ತು. ತನ್ನ ವೈಯಕ್ತಿಕ ಬಳಕೆಗಾಗಿ ಹರಿಯಾಣದ ಝಜ್ಜರ್‌ ನ್ಯಾಯಾಲಯದ ಪಾರ್ಕಿಂಗ್ ಏರಿಯಾದಲ್ಲಿ ಕಾರೊಂದನ್ನು ಕಳವುಗೈದು ಸುದ್ದಿಯಾಗಿದ್ದ. ಕೊನೆಯದಾಗಿ 2017 ರಲ್ಲಿ ತನ್ನ 77 ನೇ ವಯಸ್ಸಿನಲ್ಲಿ ಕಾರು ಕಳ್ಳತನ ಮಾಡಿದ್ದಕ್ಕೆ 95ನೇ ಸಲ ಅರೆಸ್ಟ್ ಮಾಡಿದ್ದು ದಾಖಲೆಯಾಗಿತ್ತು.

ವೆಲ್ ಎಜ್ಯುಕೇಟೆಡ್ ಕಳ್ಳ :

ಅಂದಹಾಗೆ ಈತ ಕಾಂಜಿಪೀಂಜಿ ಕಳ್ಳ ಅಂದುಕೊಳ್ಳಬೇಡಿ. ಈತ ವೆಲ್ ಎಜ್ಯುಕೇಟೆಡ್ ಕಳ್ಳ. ಬಿಎಸ್ಸಿ ಪದವೀಧರ. ತನ್ನ ಓದಿಗೆ ಕೆಲಸ ಸಿಕ್ಕಿಲ್ಲವೆಂದು ಸ್ಟೇಷನ್ ಮಾಸ್ಟರ್ ಆಗಿ ಕೆಲಸಕ್ಕೆ ಸೇರಿದ್ದ. ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದಿದ್ರೆ ಆಗ್ತಿತ್ತು. ಆದ್ರೆ, ಆತ ಕಳ್ಳತನಕ್ಕೆ ಕೈ ಹಾಕಿ ಕೆಲಸ ಕಳೆದುಕೊಂಡ. ಕೋರ್ಟ್ ಆವರಣದಲ್ಲಿ ಕಾರು ಕದ್ದು ಕೆಲಸ ಕಳೆದುಕೊಂಡ. ಬಳಿಕ, ಕಳ್ಳತನವೇ ಕಸುಬಾಯಿತು.

ಅಂದಹಾಗೆ, ಈತ ಕಾನೂನು ಪದವಿಯೂ ಮುಗಿಸಿದ್ದ. ಓದಿ ಜನರಿಗೆ ನ್ಯಾಯ ಕೊಡಿಸಬೇಕೆಂದು ಕಾನೂನು ಪದವಿ ಮಾಡುತ್ತಾರೆ. ಆದರೆ ಈತ ಜೈಲ್‌ಗೆ ಹೋಗುತ್ತಿದ್ದಾಗ ವಕೀಲರಿಗೆ ಫೀಸ್‌ ಕೊಡಬೇಕಾಗಿತ್ತು, ಅದೇ ನಾನೇ ಕಾನೂನು ಓದಿದರೆ ನಮ್ಮ ಕೇಸ್‌ ನಾನೇ ವಾದಿಸಬಹುದಲ್ವಾ ಎಂಬ ಉದ್ದೇಶದಿಂದ ಕಾನೂನು ಪದವಿ ಪೂರ್ಣಗೊಳಿಸುತ್ತಾನೆ. ಅಲ್ಲದೆ, ಕೋರ್ಟ್‌ನಲ್ಲಿ ತನ್ನ ಮೇಲಿದ್ದ ಕೇಸ್‌ಗಳನ್ನು ತಾನೇ ವಾದಿಸಿ ಗೆಲ್ಲುತ್ತಿದ್ದ.

ಜಡ್ಜ್ ಕೂಡ ಆದ ಖದೀಮ:

ಮಿತ್ತಲ್ ಜಡ್ಜ್ ಸೀಟ್ ನಲ್ಲೂ ಕೂತು ನ್ಯಾಯತೀರ್ಮಾನವನ್ನೂ ಮಾಡಿದ್ದ. ಆತ ಕಾನೂನು ಪದವಿಯನ್ನೂ ಮಾಡಿದ್ದ. ಹ್ಯಾಂಡ್ ರೈಟಿಂಗ್ ಅನಾಲಿಸಿಸ್ ಕೂಡ ಮಾಡಿದ್ದ. ಹೀಗಾಗಿ ಜಡ್ಜ್‌ ಪಕ್ಕದಲ್ಲೇ ಕುಳಿತುಕೊಳ್ಳವ ಕ್ಲರ್ಕ್ ಕೂಡ ಆಗಿ ಬಳಿಕ ಅಲ್ಲಿ ಖತರ್ನಾಕ್ ಕೆಲಸ ಮಾಡಿ ಜಡ್ಜ್ ಆಗಿದ್ದ. ಹರಿಯಾಣದ ಜಿಲ್ಲಾ ನ್ಯಾಯಾದೀಶರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಈತ ನಕಲಿ ಲೆಟರ್ ತಯಾರಿಸಿ ಜಡ್ಜನ್ನೇ 2 ತಿಂಗಳು ಮನೆಗೆ ಕಳುಹಿಸಿದ್ದ. ಬಳಿಕ ಮತ್ತೊಂದು ಲೆಟರ್ ತಯಾರಿಸಿ ಆ ನ್ಯಾಯಾಲಯಕ್ಕೆ ತನ್ನನ್ನೇ ಜಡ್ಜ್‌ ಆಗಿ ನೇಮಕ ಮಾಡಿಕೊಂಡಿದ್ದ.  ತಾನೇ ಬರೆದಿರುವ ಲೆಟರ್ ಇದಾಗಿದ್ರೂ, ಯಾರಿಗೂ ಅನುಮಾನ ಬಾರದಂತೆ ನಕಲಿ ಸೀಲ್‌ಗಳನ್ನು ಉಪಯೋಗಿಸಿ ಬರೆದಿದ್ದ. ಹೀಗೇ ಹೊಸ ಜಡ್ಜ್‌ ಆಗಿ ಕೋರ್ಟ್‌ಗೆ ಎಂಟ್ರಿ ಕೊಟ್ಟ ಈತ ಕೇವಲ 40 ದಿನದಲ್ಲಿ 2 ಸಾವಿರ ಖೈದಿಗಳನ್ನು ರಿಲೀಸ್ ಮಾಡಿದ್ದ. ಯಾವಾಗ ಈತನ ಮೇಲೆ ಅಧಿಕಾರಿಗಳಿಗೆ ಅನುಮಾನ ಬರಲು ಆರಂಭವಾಗಿತ್ತೋ ಆವಾಗ ಅಲ್ಲಿಂದ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : WATCH VIDEO : ಮದುವೆಯಲ್ಲಿ ಪುರೋಹಿತರಿಗೆ ಯುವಕರ ಕೀಟಲೆ; ಛೇ! ಹೀಗೂ ಮಾಡ್ಬೋದಾ? ಎಂದ ನೆಟ್ಟಿಗರು

ಈತ ಬುದ್ದಿವಂತ ಅಪರಾಧಿ! 

ಕಳ್ಳತನ ಪ್ರಕರಣ ಸಾಮಾನ್ಯ. ಚಾಣಾಕ್ಷತನದಿಂದ ಕಳವುಗೈಯುವಲ್ಲಿ ಖದೀಮರು ನಿಸ್ಸೀಮರಾಗಿರುತ್ತಾರೆ. ಆದ್ರೆ, ಧನಿ ರಾಮ್ ಮಿತ್ತಲ್ ಮಾತ್ರ ಎಲ್ಲರಿಗಿಂತ ಒಂದು ಕೈ ಮೇಲು. ಭಾರತದ ಅತೀ ಹೆಚ್ಚು ಕಲಿತಿರುವ ಬುದ್ಧಿವಂತ ಅಪರಾಧಿ ಎಂಬ ಕುಖ್ಯಾತಿ ಈತನಿಗಿತ್ತು. ವಯಸ್ಸಾಗುತ್ತಿದ್ದಂತೆ ಕಳ್ಳತನ ಕೆಲಸ ಕಡಿಮೆ ಮಾಡುತ್ತಿದ್ದ. ಇಂತಹ ಭಯಂಕರ ಕಳ್ಳ ಇದೀಗ ಇಹಲೋಕ ತ್ಯಜಿಸಿದ್ದಾನೆ. ಆತನ ಮಗ ಈ ಬಗ್ಗೆ ಖಚಿತ ಪಡಿಸಿದ್ದಾರೆ.

Continue Reading

LATEST NEWS

Trending