Monday, May 23, 2022

ಒಂಟಿ ವೃದ್ಧೆಯನ್ನು 3 ತುಂಡು ಮಾಡಿ ಚರಂಡಿಗೆ ಎಸೆದ ದಂಪತಿ

ಹೊಸದಿಲ್ಲಿ: ಒಂಟಿ ವೃದ್ದೆಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಚರಂಡಿಗೆ ಎಸೆದ ಆರೋಪದಲ್ಲಿ ನೆರೆಮನೆಯ ದಂಪತಿ ಬಂಧನವಾದ ಘಟನೆ ದೆಹಲಿಯ ನಜಾಫ್ ಗಢದ ಬಳಿ ನಡೆದಿದೆ.
ದೆಹಲಿಯ ನಜಾಫ್ ಗಢದ ಅನಿಲ್ ಆರ್ಯ ವೃತ್ತಿಯಲ್ಲಿ ಈವೆಂಟ್ ಮ್ಯಾನೇಜರ್‌.

ಈತ ತನ್ನನೆರೆಮನೆಯ 72 ವೃದ್ದೆ ಕವಿತಾ ಅವರಿಂದ ರೂ. 1.5 ಲಕ್ಷ ಸಾಲ ಪಡೆದಿದ್ದ. ಅದರಂತೆ ಜೂನ್ 30 ರಂದು ರಾತ್ರಿ ಕವಿತಾ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಾಳೆ. ಇದರಿಂದ ಕೋಪಗೊಂಡ ದಂಪತಿ ವೃದ್ಧ ಮಹಿಳೆಗೆ ಥಳಿಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು.
ಕೊಲೆಯ ಬಳಿಕ ದಂಪತಿ ವೃದ್ಧೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಮೂರು ಚೀಲಗಳಲ್ಲಿ ತುಂಬಿಸಿ ನಜಾಫ್ ಗಢ ಚರಂಡಿಗೆ ಎಸೆದರು. ಕತ್ತರಿಸಿದ ಮೃತದೇಹವನ್ನು ಹೊಂದಿದ್ದ ಬ್ಯಾಗ್ ಅನ್ನು ಇಬ್ಬರು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ನೆರೆಹೊರೆಯ ಕಟ್ಟಡದ ಹೊರಗಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂನ್ 30 ರಿಂದ ಮರುದಿನ ಬೆಳಿಗ್ಗೆ 5 ರಿಂದ ಸಂಜೆ 9 ರವರೆಗೆ ದಂಪತಿ ತಮ್ಮ ನೆರೆಯ ಮನೆಯಲ್ಲಿದ್ದರು.
ಶವವನ್ನು ಚರಂಡಿಗೆ ಎಸೆಯುವ ಮೊದಲು ಮಹಿಳೆಯ ದೇಹದಿಂದ ಆಭರಣಗಳನ್ನು ತೆಗೆದು ಅಡವಿಟ್ಟು, ಪ್ರತಿಯಾಗಿ ರೂ. 70,000 ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆ ಹಚ್ಚಿ ಸೋಮವಾರ ಬಂಧಿಸಲಾಗಿದೆ. ಪೊಲೀಸರು ಅದೇ ದಿನ ಮಹಿಳೆಯ ಶವವನ್ನು ಚರಂಡಿಯಿಂದ ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಅಡ್ಡಾದಿಡ್ಡಿ ಕಾರು ಚಾಲನೆ-ಚಾಲಕನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಬಂಟ್ವಾಳ: ಮಹಿಳೆಯರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಸಂದರ್ಭ ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದ್ದರಿಂದ ಕಾರು ನಿಲ್ಲಿಸಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ...

ಉಜಿರೆ SDM ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ನಿಧನ

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ (66) ಅನಾರೋಗ್ಯದಿಂದಾಗಿ ನಿನ್ನೆ ಮಧ್ಯರಾತ್ರಿ ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ...

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.ಲೆಬನಾನ್, ಸಿರಿಯಾ, ಟರ್ಕಿ,...