Connect with us

    WORLD

    ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?

    Published

    on

    ಬಹುತೇಕ ಜನರು ಗೂಗಲ್ ಕ್ರೋಮ್ ಬಳಸುತ್ತಾರೆ. ಏಕೆಂದರೆ, ಬ್ರೌಸಿಂಗ್ ಕ್ಷೇತ್ರದಲ್ಲಿ ಗೂಗಲ್ ಏಕಸ್ವಾಮ್ಯ ಸಾಧಿಸಿದೆ. ಗೂಗಲ್ ಕ್ರೋಮ್ ಬಿಟ್ಟರೆ ಈ ಮಟ್ಟಿಗೆ ಸೇವೆ ನೀಡುವ ಮತ್ತೊಂದು ಬ್ರೌಸರ್ ಯಾವುದೂ ಇಲ್ಲ. ಒಂದು ವೇಳೆ ಇದ್ದರೂ ಗೂಗಲ್ ಮುಂದೆ ಎಲ್ಲವೂ ಕಡೆಗಣಿಸಲ್ಪಟ್ಟಿದೆ. ಗೂಗಲ್‌ ಏಕಸ್ವಾಮ್ಯ ಮುರಿಯಲು ಅಮೆರಿದದಲ್ಲಿ ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿದೆ. ಗೂಗಲ್ ಕ್ರೋಮ್ ಕಾನೂನು ಬಾಹಿರವಾಗಿ ವೆಬ್ ಬ್ರೌಸರ್‌ನಲ್ಲಿ ಏಕಸ್ವಾಮ್ಯ ಸಾಧಿಸಿದೆ ಅನ್ನೋದು ಗಂಭೀರ ಆರೋಪವಾಗಿದ್ದು, ಕ್ರೋಮ್‌ಗೆ ನಿರ್ಬಂಧ ಹೇರುವ ಪ್ರಕ್ರಿಯೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಚಾಟ್‌ಜಿಪಿಟಿ ಮೂಲಕ ಸಂಚಲನ ಸೃಷ್ಟಿಸಿರುವ  OpenAI ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸಹಾಯದ ವೆಬ್ ಬ್ರೌಸರ್ ಆರಂಭಿಸುತ್ತಿದೆ. ಈ ನಡೆ ಮುಂದಿನ ದಿನಗಳಲ್ಲಿ ಬ್ರೌಸಿಂಗ್ ಪರಿಕಲ್ಪನೆ, ಅಭ್ಯಾಸವನ್ನೇ ಬದಲಾಯಿಸಬಹುದು ಕಲ್ಪಿಸಲಾಗಿದೆ.

    OpenAI ಬೌಸರ್‌ಗೆ ಎಐ ಚಾಟ್‌ಬಾಟ್ ಅತ್ಯಾಧುನಿಕ ಟೆಕ್ ತಂತ್ರಜ್ಞಾನದ ನೆರವಿದೆ. ಹೀಗಾಗಿ OpenAI ವೆಬ್ ಬ್ರೌಸರ್ ಪ್ರಮುಖವಾಗಿ ನಿಖರ ಮಾಹಿತಿ ನೀಡಲಿದೆ. ಗೂಗಲ್ ಕ್ರೋಮ್ ಮೇಲೆ ಹೆಚ್ಚಿನ ಒತ್ತಡ ತರಲಿದೆ. ಕಾರಣ, ಗೂಗಲ್ ಕ್ರೋಮ್ ಹುಡುಕುತ್ತಿರುವ ವಿಷಯ ಕುರಿತು ಜಾಲತಾಣದಲ್ಲಿರುವ ಎಲ್ಲಾ ಮಾಹಿತಿ ನೀಡಲಿದೆ. ಇದರಲ್ಲಿ ಸತ್ಯ ಯಾವುದು, ನಕಲಿ ಯಾವುದು ಅನ್ನೋದು ಪತ್ತೆ ಹಚ್ಚಬೇಕು. ಆದರೆ  OpenAI ವೆಬ್ ಬ್ರೌಸರ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಒದಗಿಸಲಿದ್ದು ಗೂಗಲ್ ಕ್ರೋಮ್‌ನ ಏಕಸ್ವಾಮ್ಯ , ಪ್ರಾಬಲ್ಯ ಮುರಿಯುವ ಎಲ್ಲಾ ಸಾಧ್ಯತೆ ಇದೆ.

    ಸ್ಯಾಮ್ ಆಲ್ಟ್‌ಮನ್ ನೇತೃತ್ವದ  OpenAI ಕಂಪನಿ ಈಗಾಗಲೇ ವೆಬ್ ಬ್ರೌಸರ್ ಲಾಂಚ್ ಮಾಡುವ ತಯಾರಿಯಲ್ಲಿದ್ದು, ಜಗನತ್ತಿನ ಅತ್ಯುತ್ತಮ ಆ್ಯಪ್ ಡೆವಲಪ್ಪರ್ಸ್ , ವೆಬ್‌ಸೈಟ್ ಡೆವಲಪ್ಪರ್ಸ್ ಜೊತೆ ಮಾತುಕತೆ ನಡೆಸಿದೆ. ಕೊಂಡೆ ನಾಸ್ಟ್, ರೆಡ್‌ಫಿನ್ ಹಾಗೂ ಪ್ರೈಸ್‌ಲೈನ್ ಡೆವಲಪ್ಪರ್ಸ್ ಜತೆ ಮಾತುಕತೆ ನಡೆಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಪರಿಣಾಮಕಾರಿಯಾದ ವೆಬ್ ಬ್ರೌಸರ್ ಬಿಡುಗಡೆ ಮಾಡಲು  OpenAI ಸಜ್ಜಾಗಿದೆ.

    DAKSHINA KANNADA

    1700 ವರ್ಷಗಳ ಬಳಿಕ ಸಾಂಟಾ ಕ್ಲಾಸ್ ನಿಜ ಮುಖ ಅನಾವರಣ..!

    Published

    on

    ಮಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಬರಲಿದ್ದು, ಹಬ್ಬಕ್ಕೆ ಕಳೆ ತರಲು ಉಡುಗೊರೆ ಸಹಿತವಾಗಿ ಸಾಂಟಾ ಕ್ಲಾಸ್ ಕೂಡ ಬರಲಿದ್ದಾನೆ. ಮಕ್ಕಳಿಗೆ ತುಂಬಾ ಅಚ್ಚುಮೆಚ್ಚಿನ ಕ್ರಿಸ್ಮಸ್ ಅಜ್ಜನಾಗಿ ಕಾಣಿಸಿಕೊಳ್ಳುವ ಈ ಸಾಂಟಾ ಕ್ಲಾಸ್ ನಿಜಕ್ಕೂ ಇದ್ರಾ? ಅಥವಾ ಇದೊಂದು ಕಾಲ್ಪನಿಕ ವ್ಯಕ್ತಿಯಾ ಎಂಬ ಗೊಂದಲ ಹಲವರಲ್ಲಿ ಇರಬಹುದು. ಆದ್ರೆ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ವಿಜ್ಞಾನಿಗಳು ಮಾಡಿದ್ದು, ನಿಜವಾದ ಸಾಂಟಾಕ್ಲಾಸ್ ಹೇಗಿದ್ದ ಎಂಬ ಚಿತ್ರವನ್ನು ರಚಿಸಿದ್ದಾರೆ.

    ಮೈರಾದ ಸೇಂಟ್‌ ನಿಕೋಲ್ಸನ್ ಎಂಬ ವ್ಯಕ್ತಿಯೇ ಈ ಸಾಂಟಾ ಕ್ಲಾಸ್‌ ಎಂಬುದನ್ನು ವಿಜ್ಞಾನಿಗಳು ಅನಾವರಣ ಮಾಡಿದ್ದಾರೆ. 1700 ವರ್ಷಗಳ ಬಳಿಕ ಇದೇ ಮೊದಲ ಬಾರಿ ಸಾಂಟಾ ಕ್ಲಾಸ್ ಯಾರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಕ್ರೈಸ್ತ ಸಮುದಾಯದವರಾದ ನಿಕೋಲ್ಸನ್‌ , ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದು, ಬಳಿಕ ಇದು ಕ್ರಿಸ್‌ಮಸ್ ಜೊತೆಗೆ ಸಂಬಂಧ ಹೊಂದಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕಾರಣದಿಂದ ಮಕ್ಕಳು ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.  ಮಿರರ್ ವರದಿಯ ಸೇಂಟ್ ನಿಕೋಲ್ಸನ್ ಅವರ ತಲೆ ಬುರುಡೆಯನ್ನು ವಿಧಿ ವಿಜ್ಞಾನದ ಮೂಲಕ ಅಂದಾಜಿಸಿ ಅವರ ಮುಖವನ್ನು ಚಿತ್ರಿಸಲಾಗಿದೆ. ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ಸೇಂಟ್ ನಿಕೋಲ್ಸನ್‌ ಅವರ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆ ಇಲ್ಲದೇ ಇದ್ರೂ ಜನರು ಅವರ ಅಸಲಿ ಮುಖವನ್ನು ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ ಎನ್ನಲಾಗಿದೆ.


    ಈ ವರದಿಯ ಪ್ರಕಾರ, ಅಧ್ಯಯನದ ಮುಖ್ಯಸ್ಥ ಸಿಸೆರೋ ಮೊರೆಸ್ ಅವರು ನಿಕೋಲ್ಸನ್ ಅವರ ತಲೆ ತುಂಬಾ ಬಲವಾಗಿತ್ತು ಎಂದು ತೋರಿಸುತ್ತದೆ ಎಂದಿದ್ದಾರೆ. ಈ ಮುಖವು 1823 ರಲ್ಲಿ ‘ಎ ವಿಸಿಟ್ ಫ್ರಮ್‌ ಸೇಂಟ್ ನಿಕೋಲ್ಸನ್‌’ ಎಂಬ ಕವಿತೆಯಲ್ಲಿ ಮುದ್ರಿತವಾದ ಮುಖಕ್ಕೆ ಹೊಂದಿಕೆಯಾಗುತ್ತದೆ ಎಂದಿದ್ದಾರೆ. ಈ ಕವಿತೆಯಲ್ಲಿ ದಪ್ಪ ಗಡ್ಡದ ಮುಖವು ಸಾಂಟಾ ಕ್ಲಾಸ್ ಅವರನ್ನು ನೆನಪಿಸುತ್ತದೆ.

    ಸಾಂಟಾ ಕ್ಲಾಸ್ ಬಗ್ಗೆ ಅಧ್ಯಯನ ನಡೆಸ್ತಾ ಇರುವುದು ಹೊಸದೇನು ಅಲ್ಲ. 1950 ರಲ್ಲಿ ಲುಯಿಗಿ ಮಾರ್ಟಿನೋ ಎಂಬವರು ಸೇಂಟ್ ನಿಕೋಲ್ಸನ್‌ ಅವರನ್ನು ಅಧ್ಯಯನ ಮಾಡಲು ಆರಂಭಿಸಿದ್ದರು. ಈಗ ಸಿಸೆರೋ ಮೋರಸ್ ಅವರು ಲುಯಿಗಿ ಮಾರ್ಟಿನೋ ಅವರು ಸಂಗ್ರಹಿಸಿದ ಡೇಟಾವನ್ನು ಬಳಿಸಿಕೊಂಡು 3ಡಿ ಯಲ್ಲಿ ಅವರ ತಲೆಯನ್ನು ಮರು ನಿರ್ಮಿಸಿದ್ದಾರೆ. ನಂತರ ಎಸ್ಪಾಟಿಕ್ಸ್‌ ಎಕ್ಸ್‌ಟೆನ್ಶನ್ ಸಹಾಯದಿಂದ ಮುಖದ ಬಾಹ್ಯ ರೇಖೆಯನ್ನು ರಚಿಸಿ ರೂಪ ನೀಡಿದ್ದಾರೆ.

    Continue Reading

    LATEST NEWS

    2025 ರ ಕ್ಯಾಲೆಂಡರ್ ನೋಡಿ ಭಯ ಪಟ್ಟ ಜನ…! ಏನು ಈ WTF..?

    Published

    on

    ಮಂಗಳೂರು : 2024 ರ ಕ್ಯಾಲೆಂಡರ್ ಬದಲಾಯಿಸಿ 2025 ರ ಕ್ಯಾಲೆಂಡರ್ ಗೋಡೆಯಲ್ಲಿ ನೇತು ಹಾಕುವ ಸಮಯ ಬಂದೇ ಬಿಟ್ಟಿದೆ. ಹೊಸ ವರ್ಷದಲ್ಲಿ ಹೊಸದಾಗಿ ಏನು ಮಾಡುವುದು ? ಎಲ್ಲಿ ಹೋಗುವುದು ? ಹೇಗೆ ಹೊಸ ವರ್ಷವನ್ನು ಹೇಗೆ ಎಂಜಾಯ್ ಮಾಡುವುದು ? ಹೀಗೆ ಹಲವು ಪ್ಲ್ಯಾನ್‌ಗಳು ಕೂಡ ಆರಂಭವಾಗಿದೆ. ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷದ ಆರಂಭದ ಬಗ್ಗೆ ಆತಂಕಕಾರಿ ವಿಚಾರಗಳು ಚರ್ಚೆ ಆಗುತ್ತಿವೆ. ಹೊಸ ವರ್ಷದ ಆರಂಭ ಬುಧವಾರ ಆಗುತ್ತಿರುವುದೇ ಇದಕ್ಕೆ ಕಾರಣ ಅಂತ ಚರ್ಚೆಗಳು ನಡಿತಾ ಇದೆ.

    ಹೊಸ ವರ್ಷದ ಆರಂಭ ಅಂದ ಮೇಲೆ ಎಲ್ಲರಿಗೂ ಹೊಸತೊಂದು ಖುಷಿ ಕೊಡುವ ದಿನದ ಆರಂಭ ಮಾತ್ರವಲ್ಲ, ಪೂರ್ತಿ ವರ್ಷ ಚೆನ್ನಾಗಿ ಸಾಗಲಿ ಎಂದು ಒಬ್ಬರಿಗೊಬ್ಬರು ಹಾರೈಸುವ ದಿನ ಕೂಡ ಹೌದು. ಆದ್ರೆ, 2025 ರ ಆರಂಭದ ಕುರಿತಾಗಿ ದೊಡ್ಡ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಮೊಬೈಲ್ ಕ್ಯಾಲೆಂಡರ್ ಪ್ರಕಾರವಾಗಿ ಮೊದಲ ಮೂರು ದಿನಗಳನ್ನು WTF ಎಂದು ಕರೆಯಲಾಗುತ್ತದೆ. ಬುಧವಾರ ಗುರುವಾರ ಶುಕ್ರವಾರ ಈ ಮೊದಲ ಮೂರು ದಿನಗಳಲ್ಲಿ ಆರಂಭವಾಗುವ ವರ್ಷ ಸುಂದರವಾಗಿರುವುದಿಲ್ಲ ಎಂದು ಚರ್ಚೆ ನಡೆಯುತ್ತಿದೆ.

    WTF ಅಂದರೆ ಏನು ಇದರ ಭಯ ಯಾಕೆ ?

    ಎಕ್ಸ್ ಖಾತೆಯ ಬಳಕೆದಾರರೊಬ್ಬರು ಈ WTF ಮಾರ್ಕ್ ಮಾಡಿದ ಕ್ಯಾಲೆಂಡರ್‌ ಹಂಚಿಕೊಂಡು, “2025 WTF ನೊಂದಿಗೆ ಆರಂಭವಾಗುವುದಕ್ಕೆ ಚಿಂತಿಸಬೇಕೇ” ಎಂದು ಬರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಸುಮಾರು 11 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ ಮತ್ತು ಇದರ ಅರ್ಥ ಏನು ಎಂದು ಜನರು ಸರ್ಚ್ ಇಂಜಿನ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ, ಮುಂದಿನ ವರ್ಷ ಆಶಾದಾಯಕವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಕೆಲವರು ಕಳೆದ ವರ್ಷಕ್ಕಿಂತ ಕೆಟ್ಟದಾಗಿರಲಿದೆ ಎಂದರೆ, ಇನ್ನೂ ಕೆಲವರು ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ.

    2020 ರ ಪುನಾರಾವರ್ತನೆಯ ಭಯ..!

    ಇದು ಇಷ್ಟೊಂದು ವೈರಲ್ ಆಗಲು ಕಾರಣವಾಗಿದ್ದು 2020 ರ ಆರಂಭ ಬುಧವಾರದಿಂದಲೇ ಆಗಿತ್ತು ಎಂಬುದು . 2020ರ ಆರಂಭದಲ್ಲೇ ಕೋವಿಡ್‌ 19 ಜಗತ್ತಿಗೆ ಅಪ್ಪಳಿಸಿತ್ತು. ಆ ವರ್ಷ ಜಗತ್ತಿನ ಜನ ಏನೆಲ್ಲಾ ಸಂಕಷ್ಟ ಪಟ್ಟಿದ್ದರು ಎಂಬುದು ಮರೆಯುವಂತಿಲ್ಲ. ಹೀಗಾಗಿ ಈ ವರ್ಷದ ಆರಂಭ ಬುಧವಾರ ಆಗುವ ಕಾರಣ ಮತ್ತೊಂದು ಸಂಕಷ್ಟ ಜಗತ್ತನ್ನು ಕಾಡಲಿದೆಯಾ ಎಂಬ ಚಿಂತೆಯನ್ನು ಜನ ವ್ಯಕ್ತಪಡಿಸಿದ್ದಾರೆ.

    Continue Reading

    FILM

    ಸಮುದ್ರ ತೀರದಲ್ಲಿ ಯೋಗ ಮಾಡುತ್ತಿದ್ದ ಖ್ಯಾತ ನಟಿ ಅಲೆಗೆ ಬ*ಲಿ !!

    Published

    on

    ಮಂಗಳೂರು/ಥಾಯ್ಲೆಂಡ್: ಸಮುದ್ರದ ತೀರದಲ್ಲಿನ ಬಂಡೆಗಳ ಮೇಲೆ ಕುಳಿತು ಪ್ರಾಣಾಯಾಮ ಸೇರಿದಂತೆ ಯೋಗಾಭ್ಯಾಸದಲ್ಲಿ ನಿರತಳಾಗಿದ್ದ 24 ವರ್ಷದ ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ಮೇಲೆ ಭೀ*ಕರ ಸಮುದ್ರದ ಅಲೆಗಳು ಅಪ್ಪಳಿಸಿ, ದುರಂ*ತ ಅಂ*ತ್ಯ ಕಂಡಿದ್ದಾಳೆ.

    ನಟಿ ಕ್ಯಾಮಿಲ್ಲಾ ಪ್ರತಿ ದಿನ ಯೋಗ ಮಾಡುತ್ತಾ ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿದ್ದಳು. ಇದರಿಂದ ಜೀವನ ಸಂಪೂರ್ಣ ಬದಲಾಗಿರುವುದಾಗಿ ಕ್ಯಾಮಿಲ್ಲಾ ಹೇಳಿಕೊಂಡಿದ್ದರು. ರಷ್ಯಾ ನಟಿ ಕ್ಯಾಮಿಲ್ಲಾ ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಈ ಘಟನೆ ನಡೆದಿದೆ. ಚಿತ್ರ ಸೇರಿದಂತೆ ಹಲವು ಬ್ಯೂಸಿ ಶೆಡ್ಯೂಲ್ ಬಳಿಕ ನಟಿ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪಕ್ಕೆ ಭೇಟಿ ನೀಡುವುದು ಹೆಚ್ಚಾಗಿತ್ತು. ಇದರಂತೆ ಈ ಬಾರಿಯೂ ಪ್ರವಾಸ ಮಾಡುತ್ತಿದ್ದ ವೇಳೆ ದು*ರಂತ ನಡೆದುಹೋಗಿದೆ.

    ಕೊಹ್ ಸಮುಯಿ ದ್ವೀಪದ ಸಮುದ್ರದ ತೀರದಲ್ಲಿನ ಬಂಡೆ ಕಲ್ಲಿನ ಮೇಲೆ ಕುಳಿತು ಪ್ರಾಣಾಯಾಮ ಮಾಡುತ್ತಿದ್ದ ವೇಳೆ ಭೀಕರ ಅಲೆ ಅಪ್ಪಳಿಸಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ನಟಿ ಸಮುದ್ರ ಅಲೆಗೆ ಕೊಚ್ಚಿ ಹೋಗಿದ್ದಾರೆ. ಪಕ್ಕದ ಬಂಡೆ ಕಲ್ಲಿನ ಮೇಲಿದ್ದ ಪ್ರವಾಸಿಗರು ನಟಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ದೈತ್ಯ ಅಲೆಯಿಂದ ನಟಿ ಕೊಚ್ಚಿ ಹೋಗಿದ್ದಾಳೆ. ತಕ್ಷಣವೆ ಕೋಸ್ಟಲ್ ಪೊಲೀಸರು ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ರಕ್ಕಸ ಅಲೆಗಳ ಪ್ರಮಾಣ ಹೆಚ್ಚಾದ ಕಾರಣ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

    ಸತತ ಕಾರ್ಯಾಚರಣೆ ಬಳಿಕ ಪೊಲೀಸರು ಕಿ.ಮೀ. ದೂರದಲ್ಲಿ ರಷ್ಯಾ ನಟಿ ಕ್ಯಾಮಿಲ್ಲಾ ಮೃ*ತದೇಹ ಪತ್ತೆರಯಾಗಿದೆ. ಕ್ಯಾಮಿಲ್ಲಾ ದು*ರಂತ ಅಂ*ತ್ಯ ಕಂಡ ಅದೇ ಬಂಡೆ ಕಲ್ಲಿನ ಮೇಲೆ ಹಲವು ಬಾರಿ ಯೋಗ ಮಾತ್ತಿದ್ದಳು. ಕ್ಯಾಮಿಲ್ಲಾ ಅತೀ ಹೆಚ್ಚು ಪ್ರವಾಸ ಮಾಡಿದ ಪ್ರದೇಶದಲ್ಲಿ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಹಲವು ಬಾರಿ ಈ ‘ದ್ವೀಪ ನನ್ನ ಎರಡನೇ ತವರು ಮನೆ’ ಎಂದು ಹೇಳಿಕೊಂಡಿದ್ದರು. ಸಂಜೆ ವೇಳೆ ಯೋಗ ಮಾಡಿ ವಾಪಸ್ ಬರುವುದಾಗಿ ಬಾಯ್‌ಫ್ರೆಂಡ್‌ಗೆ ಹೇಳಿ ಹೊಟೆಲ್‌ನಿಂದ ಹೊರಟಿದ್ದಾರೆ. ಆದರೆ ಮರಳಿ ಬರಲೇ ಇಲ್ಲ. ಸಮುದ್ರದ ದೈ*ತ್ಯ ಅಲೆಗಳು ಅಪ್ಪಳಿಸುತ್ತಿರುವ ಕಾರಣ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಹೆಚ್ಚಿನ ಸುರಕ್ಷತಾ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

    Continue Reading

    LATEST NEWS

    Trending