Saturday, July 2, 2022

ಎನ್​ಕೌಂಟರ್​​ನಲ್ಲಿ ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಜಮ್ಮು ಕಾಶ್ಮೀರ: ಪುಲ್ವಾಮಾದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಇಂದು ಬೆಳಗ್ಗೆ ಕಾಶ್ಮೀರ ವಲಯದ ಪೊಲೀಸರು ಮಾಹಿತಿ ನೀಡಿ, ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸ್ಥಳವನ್ನು ಸುತ್ತುವರಿದಿದ್ದರು. ತಮ್ಮನ್ನು ಸೆರೆ ಹಿಡಿಯಲು ಬಂದ ಪೊಲೀಸ್​ ಸಿಬ್ಬಂದಿ ಮೇಲೆ ಭಯೋತ್ಪಾದಕರೂ ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಲಷ್ಕರ್​ ಇ ತೊಯ್ಬಾ ಉಗ್ರಸಂಘಟನೆಯ ಕಮಾಂಡರ್​ ಐಜಾಜ್​ ಅಲಿಯಾಸ್​ ಅಬು ಹುರೈರಾ ಮತ್ತು ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಹತ್ಯೆಗೈದಿದ್ದಾಗಿ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಲಷ್ಕರ್​ ಇ ತೊಯ್ಬಾ ಕಮಾಂಡರ್ ಸತ್ತಿದ್ದಕ್ಕೆ ನಿಜಕ್ಕೂ ರಕ್ಷಣಾ ಪಡೆಗಳಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಕಾಶ್ಮೀರ ವಲಯದ ಐಜಿಪಿ ಟ್ವೀಟ್ ಮಾಡಿದ್ದಾರೆ.

ಉಗ್ರರು ಅಡಗಿದ್ದಾರೆಂಬ ಮಾಹಿತಿ ಬಂದ ತಕ್ಷಣ ಅವರನ್ನು ಹುಡುಕಿ ಬಂಧಿಸಲು ನಾವು ಹೋಗಿದ್ದು. ಆದರೆ ಅಡಗಿದ್ದ ಉಗ್ರರು ಒಂದೇ ಸಮನೆ ನಮ್ಮ ಮೇಲೆ ದಾಳಿ ಮಾಡಲು ಶುರು ಮಾಡಿದರು. ಅನಿವಾರ್ಯವಾಗಿ ನಾವೂ ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಯಿತು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಾಕ್ರಬೈಲಿನ ಗತ್ತಿನ ಗುತ್ತುಮನೆಗಿದೆ 987 ವರ್ಷದ ಇತಿಹಾಸ…

ಮಂಗಳೂರು: ಹಿಂದಿನ ಕಾಲದಲ್ಲಿ 'ಗುತ್ತು ಮನೆ' ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು...

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ವಾಹನ ಸವಾರರ ಪರದಾಟ

ಸುಳ್ಯ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಸ್ವಲ್ಪ ಪ್ರಮಾಣದ ಟ್ರಾಫಿಕ್‌ ಜಾಂ ಉಂಟಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವೆ ರಸ್ತೆಗೆ ಮಣ್ಣು ಕುಸಿದಿದೆ.ಚರಂಡಿಗೆ ಮಣ್ಣು ಬಿದ್ದಿದ್ದರಿಂದ...

ಬಂಟ್ವಾಳದಲ್ಲಿ ಕಾರುಗಳ ಮಧ್ಯೆ ಭೀಕರ ಅಪಘಾತ: ಓರ್ವನ ಸ್ಥಿತಿ ಚಿಂತಾಜನಕ

ಬಂಟ್ವಾಳ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡು ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯ ಬಡಗುಂಡಿ ಎಂಬಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ. ಉಳಿದಂತೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು...