ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಶಿಕ್ಷಕನಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ 30 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ಚಂಡೀಗಢ: ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಶಿಕ್ಷಕನಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ 30 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
2019ರಲ್ಲಿ ನಡೆದ ಘಟನೆ ಇದಾಗಿದ್ದು, ಶಿಕ್ಷಕ 9ನೇ ತರಗತಿ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿದ್ದ.
ಕೋರ್ಟ್ ಈಗ ತಪ್ಪಿತಸ್ಥನಿಗೆ 20 ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ.2019ರ ಏಪ್ರಿಲ್ನಲ್ಲಿ ತರಗತಿಯ ಕೋಣೆಯಲ್ಲಿ ಯಾರು ಇಲ್ಲದ ವೇಳೆ ವಿದ್ಯಾರ್ಥಿನಿ ಮೇಲೆ ಅನುಚಿತವಾಗಿ ಶಿಕ್ಷಕ ವರ್ತಿಸಿದ್ದಾನೆ.
ಆಕೆ ಜೋರಾಗಿ ಚೀರಾಡಿದಾಗ ಆಕೆಯ ಬಾಯಿ ಬಿಗಿದು ಅತ್ಯಾಚಾರ ಮಾಡಿದ್ದನು. ಬಳಿಕ ಯಾರಿಗಾದರು ಹೇಳಿದರೆ ಥಳಿಸುವುದಾಗಿ ಹೇಳಿದ್ದನು.
ಭಯದಿಂದಾಗಿ ಈ ಸಂಗತಿಯನ್ನು ಬಾಲಕಿ ಮನೆಯಲ್ಲಿ ಹೇಳಿಕೊಂಡಿರಲಿಲ್ಲ. ಆದರೆ ನಂತರ ದಿನಗಳಲ್ಲಿ ಆಕೆಗೆ ಅನಾರೋಗ್ಯ ಕಾಣಿಸಿತು.
ಹೀಗಾಗಿ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ. ವಿದ್ಯಾರ್ಥಿ ಗರ್ಭಿಣಿ ಎಂದು ತಿಳಿದು ಬಂದಿದೆ.
ಶಿಕ್ಷಕನೇ ತನ್ನನ್ನು ಅತ್ಯಾಚಾರ ಮಾಡಿರುವುದಾಗಿ ಪೋಷಕರಿಗೆ ತಿಳಿಸಿದ್ದಳು.
ಆರೋಪಿಗೆ ಭಾರತ ದಂಡ ಸಂಹಿತೆ ಐಪಿಸಿ ಸೆಕ್ಷನ್ 376 (3) ಅಡಿಯಲ್ಲಿ 20 ವರ್ಷಗಳ ಕಠಿಣಜೈಲು ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಲಾಗಿದೆ.
ಲೈಂಗಿಕ ಅಪರಾಧ ಮಕ್ಕಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 33(8)ರ ನಿಬಂಧನೆಯ ಪ್ರಕಾರ 4 ಲಕ್ಷ ಪರಿಹಾರವನ್ನು ನೀಡುವಂತೆ ನ್ಯಾಯಾಲವು ಶಿಫಾರಸ್ಸು ಮಾಡಿದೆ.
ಈ ಮಧ್ಯೆ ಆರೋಪಿ ಶಿಕ್ಷಕ ಆಕೆಯನ್ನು ವಿವಾಹವಾಗುವುದಾಗಿ ತಿಳಿಸಿದ್ದಾನೆ..