LATEST NEWS
ಸುಳ್ಯ: ರಬ್ಬರ್ ಆ್ಯಸಿಡ್ ಸೇವಿಸಿ ಯುವಕ ಆತ್ಮಹತ್ಯೆ
ಸುಳ್ಯ: ರಬ್ಬರ್ ಆ್ಯಸಿಡ್ ಸೇವಿಸಿ ಯುವಕನೋರ್ವ ಆತ್ಮಹತ್ಯೆಗೈದ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ರೆಂಜಾಳದಲ್ಲಿ ನಡೆದಿದೆ.
ರೆಂಜಾಳ ನಿವಾಸಿ ಜಗದೀಶ್(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ನಿನ್ನೆ ಮನೆಯಲ್ಲಿ ರಬ್ಬರ್ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥನಾದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತರಾದರೆಂದು ತಿಳಿದುಬಂದಿದೆ. ಮೃತರು ಓರ್ವ ಸಹೋದರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
DAKSHINA KANNADA
ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ
ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್ ಹಾನಿಗೊಂಡಿದೆ.
ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!
ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.
LATEST NEWS
60ನೇ ವಯಸ್ಸಿಗೆ “ಮಿಸ್ ಯುನಿವರ್ಸ್” ಕಿರೀಟ ಮುಡಿಗೇರಿಸಿಕೊಂಡ ಈಕೆ ಯಾರು ಗೊತ್ತಾ? ಈಕೆಯ ಸೌಂದರ್ಯಕ್ಕೆ ಬೆರಗಾದ್ರು ಜನ..!!
ಹೆಚ್ಚಾಗಿ ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಇನ್ನೂ ಮುಂತಾದ ಸೌಂದರ್ಯ ಸ್ಪರ್ಧೆಯಲ್ಲಿ ಹದಿಹರೆಯದ ಸುಂದರಿಯರೇ ಭಾಗವಹಿಸುತ್ತಾರೆ. ಆದರೆ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಎಂಬ ಮಹಿಳೆ ತನ್ನ 60ನೇ ವಯಸ್ಸಿನಲ್ಲಿ ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.
ವೃತ್ತಿಯಲ್ಲಿ ವಕೀಲ ಮತ್ತು ಪತ್ರಕರ್ತೆಯಾಗಿರೋ ಅಲೆಜಾಂಡ್ರಾ ಅವರು 60ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಪಡೆದುಕೊಂಡಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್ನ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಗೆದ್ದು ಇಡೀ ಜಗತ್ತೆ ತಿರುಗಿ ನೋಡುವಂತೆ ಮಾಡಿದ್ದಾಳೆ.
ಇನ್ನೂ 60ನೇ ವಯಸ್ಸಿನಲ್ಲಿಯೂ ಈಕೆಯ ಸೌಂದರ್ಯ ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅನೇಕರು ಆಕೆ ಮಿಸ್ ಯುನಿವರ್ಸ್ ಕಿರೀಟ ಪಡೆದುಕೊಂಡಿರೋದಕ್ಕೆ ಶುಭಾಶಯ ತಿಳಿಸುತ್ತಿದ್ದು ಇನ್ನೂ ಕೆಲವರು ಕಮೆಂಟ್ಸ್ಗಳನ್ನು ಹಾಕುತ್ತಿದ್ದಾರೆ.
LATEST NEWS
ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!
ಪುತ್ತೂರು : ಬೊಳ್ವಾರ್ ಬಸ್ ತಂಗುದಾಣದ ಪಕ್ಕದಲ್ಲಿದ್ದ ಬೃಹದಾಕಾರದ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಹಲವು ವಾಹನಗಳು ಜಖಂಗೊಂಡಿವೆ. ವಾಹನ ಮಾಲಕರು ವಾಹನಗಳನ್ನು ಹೊರತೆಗೆಯಲು ಹರಸಾಹಸ ಪಡುವಂತಾಯಿತು.
ಬಿದ್ದ ಮರದಲ್ಲಿದ್ದ ಮಾವಿನಕಾಯಿಗಳನ್ನು ಕೊಯ್ಯಲು ಜನ ಮುಗಿಬಿದ್ದ ಘಟನೆಯೂ ನಡೆಯಿತು. ಬಳಿಕ ಸ್ಥಳೀಯರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸಿದರು.
ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ದುರಂತವೊಂದು ತಪ್ಪಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!
- FILM6 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM6 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- chikkamagaluru6 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!
- FILM7 days ago
ಶೈನ್ ಶೆಟ್ಟಿ, ಅಂಕಿತಾ ಜಸ್ಟ್ ಮ್ಯಾರೀಡ್..!! ಅಭಿಮಾನಿಗಳಿಗೆ ಖುಷಿ