Connect with us

LATEST NEWS

ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕು? ಎಂದು ಪಾರ್ಟಿ ನಿರ್ಧರಿಸುತ್ತದೆ: ಹರ್ಷ ಕುಟುಂಬಕ್ಕೆ ಟಿಕೆಟ್‌ ನೀಡಿ ಹೇಳಿಕೆಗೆ ಕೋಟ ಗರಂ

Published

on

ಉಡುಪಿ: ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕು? ಬಿಡಬೇಕು ಎಂಬುವುದನ್ನು ಪಾರ್ಟಿ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್‌ನವರು ಟಿಕೆಟ್‌ ಕೊಡಿ ಎಂದು ಹೇಳಲು ಯಾರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗರಂ ಆಗಿದ್ದಾರೆ.


ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ ಬಿಜೆಪಿಯಿಂದ ಟಿಕೆಟ್‌ ನೀಡಿ ಎಂಬ ಕಾಂಗ್ರೆಸ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ರಾಜಕೀಯ ಪಕ್ಷದ ಜವಾಬ್ದಾರಿ ಹೇಳಿಕೆಯಲ್ಲ.

ಇತಿಹಾಸದಲ್ಲಿ ಪ್ರಥಮ ಬಾರಿಗೆ ಹರ್ಷನ ಪೂರ್ತಿ ಕುಟುಂಬದ ಸಮಸ್ಯೆ ಪರಿಹಾರ ಮಾಡುವಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ. ಅವರ ಮನೆಗೆ ಹೋಗಿದ್ದೇವೆ.

ನಮ್ಮ ಮಿತಿಯೊಳಗೆ ಸಹಕಾರ ನೀಡಿದ್ದೇವೆ. ಕಾಂಗ್ರೆಸ್‌ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತಲ್ಲ. ಆಗ ಕಾಂಗ್ರೆಸಿಗರ ಪ್ರತಿಕ್ರಿಯೆ ಏನಿತ್ತು?.

ಕಾಂಗ್ರೆಸ್‌ನವರ ಕಾಲದಲ್ಲಿ ಅವರ ಕೇಸ್ ವಾಪಾಸು ಪಡೆದಿದ್ದರಿಂದಲೇ ಇವತ್ತು ಕೊಲೆ ಕೃತ್ಯ ನಡೆಯುತ್ತಿದೆ.

ಯಾವ ಕಾರಣಕ್ಕೂ ಹರ್ಷನನ್ನು ಕೊಲೆ ಮಾಡಿದವರಿಗೆ ರಿಯಾಯಿತಿ ನೀಡುವುದಿಲ್ಲ ಎಂದು ಹೇಳಿದರು.

DAKSHINA KANNADA

ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?

Published

on

ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಾರಾಧನೆ ವಿಶ್ವ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದ್ದು, ಸಾವಿರಾರು ಜನ ತುಳುನಾಡ ದೈವಗಳನ್ನು ನಂಬಲು ಆರಂಭಿಸಿದ್ದಾರೆ. ಆದ್ರೆ ದೈವಗಳನ್ನು ನಂಬುವ ಬಗೆ ಹೇಗೆ ಅನ್ನೋದು ಗೊತ್ತಿಲ್ಲದೆ ಇದ್ರೂ ಭಕ್ತಿಯಿಂದ ಕೈ ಮುಗಿದವರನ್ನು ದೈವಗಳು ಎಂದಿಗೂ ಕೈ ಬಿಟ್ಟಿಲ್ಲ. ಹೀಗಾಗಿ ಸೆಲೆಬ್ರೆಟಿಗಳೂ ಸೇರಿದಂತೆ ಪ್ರತಿನಿತ್ಯ ಹಲವಾರು ಜನ ದೈವ ಸಾನಿಧ್ಯಕ್ಕೆ ಬಂದು ಭಕ್ತಿಯಿಂದ ಕೈ ಮುಗಿಯುತ್ತಿದ್ದಾರೆ. ಅದರಲ್ಲೂ ಕುತ್ತಾರು ಕೊರಗಜ್ಜನ ಕ್ಷೇತ್ರವಂತೂ ನಿತ್ಯ ಹೊರ ಜಿಲ್ಲೆಯ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

ದೈವಾರಾಧನೆಯೇ ಪ್ರಮುಖವಾಗಿರುವ ತುಳುನಾಡಿನಲ್ಲಿ ಜನ ದೇವರಿಗಿಂತ ಹೆಚ್ಚು ಭಯ ಪಡೋದು ದೈವಗಳಿಗೆ. ಪ್ರಕೃತಿಯ ಆರಾಧನೆಯ ಮೂಲಕ ಇಲ್ಲಿನ ನೆಲ, ಜಲ, ಹಾಗೂ ಪರಿಸರ ಎಲ್ಲದರಲ್ಲೂ ದೈವಗಳನ್ನು ಕಾಣುವ ಸಂಸ್ಕೃತಿ ತುಳುನಾಡಿನದ್ದು. ಸಾವಿರದ ಎರಡು ದೈವಗಳು ಇಲ್ಲಿ ಆರಾಧಿಸಲ್ಪಡುತ್ತದೆ ಅನ್ನೋದು ಇತ್ತಿಚಿನ ವರೆಗೆ ಸಂಶೋಧಕರು ಕಂಡು ಕೊಂಡಿರೋ ಸತ್ಯ ಕೂಡ.

ಕೊರಗಜ್ಜ ಯಾರು ಏನು ಅನ್ನೋದು ಇಲ್ಲಿ ಮುಖ್ಯವಾಗದೇ ಇದ್ರೂ ಕೊರಗಜ್ಜ ಸಮಸ್ಯೆಗಳಿಗೆ ಪರಿಹಾರ ನೀಡ್ತಾನೆ ಅನ್ನೋದು ನಂಬಿ ಬರುವ ಭಕ್ತರಿಗೆ ಇರುವ ಆಶಾಕಿರಣ. ಯಾವುದೇ ಮದ್ಯವರ್ತಿ ಇಲ್ಲದೆ ತಾವೇ ಕೊರಗಜ್ಜನಿಗೆ ಪೂಜೆ ಸಲ್ಲಿಸಿ ಅವರಿಗೆ ಇಷ್ಟವಾದುದನ್ನು ಕೊಟ್ಟು ಕೈ ಮುಗಿದು ಬೇಡಲು ಇಲ್ಲಿ ಅವಕಾಶ ಇದೆ. ಕೊರಗಜ್ಜನಿಗೆ ಮೇಲು ಕೀಳೆಂಬ ಭೇದ-ಭಾವ ಇಲ್ಲ. ಇನ್ನು ಕೊರಗಜ್ಜ ಶ್ರೀಮಂತನಿಂದಲೂ ಬಡವನಿಂದಲೂ ಕೇಳದೋ ಎಲೆ ಅಡಿಕೆ , ಚಕ್ಕುಲಿ, ಹಾಗೂ ಒಂದು ಸ್ವಲ್ಪ ಮದ್ಯ ಅಷ್ಟೇ…

ಕೇವಲ ಎಲೆ-ಅಡಿಕೆಗೆ ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹಾರ ಮಾಡೊ ದೈವ ಎಂದರೆ ಸ್ವಾಮಿ ಕೊರಗಜ್ಜ. ಅಜ್ಜನನ್ನು ಆರಾಧಿಸಬೇಕೆಂದರೆ ದೊಡ್ಡ ದೊಡ್ಡ ದೈವ ಸ್ಥಾನಗಳೇ ಬೇಕೆಂದಿಲ್ಲ. ಕೇವಲ ಮನಸಿನಲ್ಲೇ ಸ್ವಾಮಿ ಕೊರಗಜ್ಜ ಅಂತ ಕಷ್ಟದ ಸಮದಯಲ್ಲಿ ನೆನೆಸಿದ್ರೆ ಸಾಕು ಅದ್ಯಾವುದೋ ರೂಪದಲ್ಲಿ ಬಂದು ಕಷ್ಟ ಪರಿಹಾರ ಮಾಡ್ತಾರೆ ಅನ್ನೋ ನಂಬಿಕೆ ತುಳುನಾಡಿನ ಜನರಲ್ಲಿ ಇದೆ. ಇನ್ನು ಕೊರಗಜ್ಜನ ಹಲವು ಕ್ಷೇತ್ರಗಳು ತುಳುನಾಡಿನಲ್ಲಿದ್ದು ಅಲ್ಲಿಗೆ ಎಲೆ ಅಡಿಕೆ, ಚಕ್ಕುಲಿ, ಮದ್ಯದ ಹರಕೆ ಹೇಳಿಕೊಂಡ್ರೆ ಮುಗಿತು.

ಇನ್ನು ಕೊರಗಜ್ಜನಿಗೆ ಅಗೇಲು ನೀಡುವ ಸಂಪ್ರದಾಯವಿದ್ದು ಅಲ್ಲಿ ಕೊರಗಜ್ಜನಿಗೆ ಕೋಡೊದು ಅನ್ನ, ಬಸಳೆಯ ಸಾರು, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಬೇಯಿಸಿದ ಮೊಟ್ಟೆ, ನಿಂಬೆ ಹಣ್ಣಿನ ಉಪ್ಪಿನಕಾಯಿ ಹಾಗೂ ಮದ್ಯ ಮಾತ್ರ. ಇದಿಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವ ಕೊರಗಜ್ಜ “ಅಜ್ಜಾ ಕಾಪುಲೆ ನಮನ್.. ಈರೆಗ್ ಬಾಜೆಲ್ ಕೊರ್ಪೆ” ಅಂತ ಹೇಳಿದರೆ ಸಾಕು ಕ್ಷಣ ಮಾತ್ರದಲ್ಲಿ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾನೆ.

ನೀವು ಕೊರಗಜ್ಜನ ಫೋಟೊವನ್ನು ಮನೆಯಲ್ಲಿ ಇಡಬಹುದಾ.. ಎಂದು ನೋಡುವುದಾದರೆ ಅಜ್ಜನ ಫೋಟೋ ಮಾತ್ರವಲ್ಲ ಯಾವ ದೈವಗಳ ಫೋಟೋವನ್ನೂ ಮನೆಯಲ್ಲಿ ಇಟ್ಟು ಆರಾಧನೆ ಮಾಡುವ ಪದ್ಧತಿ ಅಷ್ಟು ಬಳಕೆಯಲ್ಲಿಲ್ಲ. ಫೋಟೋ ಇಟ್ಟು ಆರಾಧನೆ ಮಾಡಬೇಕೆಂದು ಎಲ್ಲೂ ಹೇಳಿಲ್ಲ. ತಿನ್ನುವಂತಹ ಆಹಾರದಲ್ಲಿ, ನಾವು ನೋಡುವಂತಹ ನೋಟದಲ್ಲಿ, ನಾವು ಮಾಡುವ ಒಳ್ಳೆಯ ಕೆಲಸದಲ್ಲಿ, ಅಜ್ಜನ ಪ್ರಸಾದದಲ್ಲಿ ಅಜ್ಜ ಇರುತ್ತಾನೆ ಹೀಗಾಗಿ ಅಜ್ಜನ ಫೋಟೋ ಇಟ್ಟು ಪೂಜಿಸುವ ಕ್ರಮ ಇಲ್ಲ. ಪವಿತ್ರವಾದ ಹೃದಯದಲ್ಲಿ ನಾವು ಯಾವ ದೈವವನ್ನು ನಂಬುತ್ತೇವೊ ಆ ದೈವಕ್ಕೆ ನೆಲೆ ಕೊಟ್ಟರೆ ನಾವು ಎಲ್ಲಿ ನಿಂತು ಕೈ ಮುಗಿದರೂ ಕೂಡ ಕೊರಗಜ್ಜ ಆಗಲಿ ಅಥವಾ ಇನ್ನು ಯಾವೂದೇ ದೈವವಾಗಲಿ ಅಲ್ಲಿ ಬಂದು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆ.

Continue Reading

FILM

ಅಂದು ಸುಮಲತಾ, ಇಂದು ಸ್ಟಾರ್ ಚಂದ್ರುಗೆ ಜೈ ಎಂದ ದರ್ಶನ್; ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ನಿಂತ ಡಿ ಬಾಸ್ ಏನಂದ್ರು?

Published

on

ಮಂಡ್ಯ : ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಎಂದಿನಂತೆ ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರ. ಹೇಗಾದರೂ ಈ ಕ್ಷೇತ್ರ ತಮ್ಮದಾಗಿಸಿಕೊಳ್ಳಬೇಕು ಎಂದು ಅತ್ತ ಬಿಜೆಪಿ+ ಜೆಡಿಎಸ್ , ಇತ್ತ ಕಾಂಗ್ರೆಸ್ ಶ್ರಮಿಸುತ್ತಿದೆ.

ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದ ಸುಮಲತಾಗೆ ಮಂಡ್ಯ ಜನತೆ ಜೈ ಎಂದಿದ್ದರು. ಸುಮಲತಾ ಗೆಲುವಿಗಾಗಿ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ – ರಾಕಿಂಗ್ ಸ್ಟಾರ್ ಯಶ್ ಜೋಡೆತ್ತುಗಳಾಗಿ ಅಬ್ಬರಿಸಿದ್ದರು. ಆದರೆ, ಈ ಬಾರಿ ಎಲ್ಲವೂ ಉಲ್ಟಾ ಆಗಿದೆ. ಸುಮಲತಾ ‘ಕಮಲ’ ಹಿಡಿದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅಚ್ಚರಿಯ ಬೆಳವಣಿಗೆ ಎಂಬಂತೆ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಸ್ಟಾರ್ ಚಂದ್ರು ಪರ ದರ್ಶನ್ :

ಸುಮಲತಾ ಜೊತೆ ಇರುತ್ತೇನೆ ಎಂದಿದ್ದ ಡಿ ಬಾಸ್ ಈ ಬಾರಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಕಣದಲ್ಲಿದ್ದು, ಅವರ ಪರ ದರ್ಶನ್ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.

ವ್ಯಕ್ತಿ ಪರ ಅಂದ ದರ್ಶನ್ : 

ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆಗೆ ಇಳಿದಿರುವುದರಿಂದ ಹಲವು ಅನುಮಾನ ಹುಟ್ಟಿಸಿದ್ದವು. ಸುಮಲತಾ ಅವರೊಂದಿಗೆ ಸದಾ ಕಾಣಿಸಿಕೊಳ್ಳುವ ಡಿ ಬಾಸ್ ಬಿಜೆಪಿ ಪರವಾಗಿ ನಿಲ್ಲಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಪರ ಬ್ಯಾಟ್ ಬೀಸಿ ಪ್ರಶ್ನೆ ಹುಟ್ಟು ಹಾಕಿದ್ದರು. ಇದಕ್ಕೆ ಇದೀಗ ಅವರೇ ಉತ್ತರ ನೀಡಿದ್ದಾರೆ.

ನಾನು ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ. ಐದು ವರ್ಷದ ಹಿಂದೆ ನರೇಂದ್ರಸ್ವಾಮಿ ಸಹಾಯ ಮರೆಯಲ್ಲ. ಮೊದಲೇ ಶಾಸಕ ಉದಯ್ ಹೇಳಿದ್ರು ಸುಮಮ್ಮನಿಗೆ ಟಿಕೆಟ್ ಆಗಲಿಲ್ಲ. ಆದ್ರೆ ನಮಗೆ ಮಾಡಿ ಅಂದಿದ್ರು. ಮೊದಲು ಅವರು ಕೇಳಿದ ಕಾರಣ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರು ಅವರಿಗೆ ಎಲ್ಲರೂ ಮತ ಹಾಕಿ ಎಂದಿದ್ದಾರೆ.

ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್
ಎಲ್ಲೆಲ್ಲಿ ಪ್ರಚಾರ :
ಹಲಗೂರಿನಿಂದ ಸ್ಟಾರ್ ಚಂದ್ರು ಹಾಗೂ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರ ಜೊತೆಗೂಡಿ ದರ್ಶನ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ನಂತರ ಹುಸ್ಕೂರು, ಹಾಡ್ಲಿ ಸರ್ಕಲ್, ಮಳವಳ್ಳಿ, ಬೆಳಕವಾಡಿ, ಬೊಪ್ಪೇಗೌಡನಪುರ, ಸರಗೂರು ಹ್ಯಾಂಡ್ ಪೋಸ್ಟ್, ಪೂರಿಗಾಲಿ, ಟಿ. ಕಾಗೇಪುರ (ತಳಗವಾದಿ) ಬಂಡೂರು, ಹಿಟ್ಟನಹಳ್ಳಿ ಕೊಪ್ಪಲು, ಮಿಕ್ಕೆರೆ, ಕಿರುಗಾವಲು ಸಂತೆಮಾಳ, ಚನ್ನಪಿಳ್ಳೆಕೊಪ್ಪಲು ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Continue Reading

LATEST NEWS

ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾ*ವು

Published

on

ಮಂಡ್ಯ: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾ*ವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾ*ವನ್ನಪ್ಪಿದ ಕಂದಮ್ಮಗಳು. ನಿನ್ನೆ ಮಧ್ಯಾಹ್ನ ಮಕ್ಕಳಿಗೆ ತಾಯಿ ಐಸ್‌ಕ್ರೀಂ ತಿನ್ನಿಸಿದ್ದರು. ತಳ್ಳುವ ಗಾಡಿಯಾತನಿಂದ ಐಸ್‌ಕ್ರೀಂ ಕೊಡಿಸಿದ್ದರು. ಆನಂತರ ಮಕ್ಕಳು ಅಸ್ವಸ್ಥಗೊಂಡು ಮೃ*ತಪಟ್ಟಿದ್ದಾರೆ.

ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್‌ಕ್ರೀಂ ‌ತಿಂದಿದ್ದರು. ಐಸ್‌ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ. ಅವಳಿ ಮಕ್ಕಳ ಸಾ*ವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.

ಮಿಮ್ಸ್ ಆಸ್ಪತ್ರೆಗೆ ಶ*ವಗಳನ್ನು ರವಾನಿಸಲಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

LATEST NEWS

Trending