Monday, August 15, 2022

ಬಂಟ್ವಾಳ: ಆಸ್ತಿಗಾಗಿ ವೃದ್ದ ತಾಯಿಗೆ ಸ್ವಂತ ಮಗನಿಂದ ದೊಣ್ಣೆಯಿಂದ ಹಲ್ಲೆ

ಬಂಟ್ವಾಳ: ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಒತ್ತಾಯಿಸಿ ವೃದ್ದ ತಾಯಿಗೆ ಮಗನೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿ, ಕೂಡಿ ಹಾಕಿ ಜೀವಬೆದರಿಕೆ ಹಾಕಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ದೂರಿನ ವಿವರ
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ 66 ವರ್ಷ ಪ್ರಾಯದ ಅಪ್ಪಿ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನಿದ್ದಾರೆ. ಹೆಣ್ಣು ಮಕ್ಕಳಿಗೆ ಈಗಾಗಲೇ ಮದುವೆಯಾಗಿರುತ್ತದೆ. ಮಗ ನವೀನನು ತನ್ನ ಸಂಸಾರದೊಂದಿಗೆ ಕುರಿಯಾಳದಲ್ಲಿ ಪ್ರತ್ಯೇಕ ಮನೆ ಮಾಡಿದ್ದಾನೆ. ಅಪ್ಪಿ ಅವರು ತಮ್ಮ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಅಪ್ಪಿ ಹೆಸರಿನಲ್ಲಿ 3.20 ಎಕ್ರೆ ಪಟ್ಟಾ ಜಾಗ ಹಾಗೂ ಸುಮಾರು 5 ಎಕ್ರೆ ಕುಮ್ಕಿ ಜಾಗಿವಿದೆ.

ಅದರಲ್ಲಿ ಬೆಳೆದ ಅಡಿಕೆ ಗಿಡಗಳನ್ನು ಹಾಗೂ ಜಾಗವನ್ನೂ ಮಗ ನವೀನ ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದನು. ಇದನ್ನು ಅರಿತ ಹೆಣ್ಣು ಮಕ್ಕಳು ಪಾಲು ಮಾಡಲು ಬಂಟ್ವಾಳ ಸಿವಿಲ್ ನ್ಯಾಯಾಲಯಲ್ಲಿ ದಾವೆ ಹೂಡಿದ್ದರು. ಅದರಂತೆ ನ್ಯಾಯಾಲಯ ಮಾ. 26 ರಂದು ತಾಯಿ ಅಪ್ಪಿ ಹಾಗೂ ಎಲ್ಲಾ ಮಕ್ಕಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

ಇದರಿಂದ ಮನಸ್ತಾಪಗೊಂಡ ಮಗ ನವೀನ ನಿನ್ನೆ (ಮಾ.25ರಂದು) ಬೆಳಿಗ್ಗೆ 9.30 ಗಂಟೆಗೆ ಅಪ್ಪಿ ಮನೆಗೆ ಬಂದು ಕೈಯಲ್ಲಿ ಮರದ ದೊಣ್ಣೆ ಹಿಡಿದುಕೊಂಡು ಮನೆಯ ಒಳಗೆ ಹೋಗಿ ತಾಯಿಗೆ ಬಲಕೈ, ಕೋಲು ಕೈಗೆ, ಬಲ ಭುಜಕ್ಕೆ ಹೊಡೆದಿದ್ದಾರೆ. ಎರಡು ದಿನಗಳ ಹಿಂದೆ ಮನೆಗೆ ಬಂದ ಮಗಳು ಜಯಂತಿಯು ಗಲಾಟೆ ತಡೆಯಲು ಹೋದಾಗ ಅವರಿಗೂ ಕೂಡ ಎಡ ಕೈ ರಟ್ಟೆಗೆ, ಮಣಿಗಂಟಿಗೆ, ಹೆಬ್ಬೆರಳಿಗೆ ಬೆನ್ನಿನ ಬಲ ಬದಿಗೆ, ಎಡ ಕಾಲಿನ ಮೊಣಗಂಟಿಗೆ ಹೊಡೆದಿದ್ದಾರೆ.

ನಂತರ ಇಬ್ಬರನ್ನೂ ದೂಡಿ ಹಾಕಿ ನಿಮ್ಮನ್ನು ಈ ಜಾಗ, ಮನೆಯಲ್ಲಿ ಜೀವಂತವಾಗಿ ಬದುಕಲು ಬಿಡುವುದಿಲ್ಲ ಎಂದು ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 26/2022 ಕಲಂ 324.504.506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

“ಇಂದು ಸೂರ್ಯಾಸ್ತದೊಳಗೆ ನಿಯಮಬದ್ಧವಾಗಿ ಧ್ವಜವನ್ನು ಸುರಕ್ಷಿತವಾಗಿ ಮಡಚಿಡಿ”

ಮಂಗಳೂರು: ಸ್ವಾತಂತ್ರ್ಯದ ಆಚರಣೆಯು ಈಗಾಗಲೇ ಮುಗಿದಿದ್ದು, ಇಂದು ಸಂಜೆ ಸೂರ್ಯಾಸ್ತಮಾನದೊಳಗೆ ನಿಯಮಬದ್ಧವಾಗಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಮಡಚಿಡುವಂತೆ ಎಲ್ಲಾ ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.ಈ ಬಗ್ಗೆ...

ಮಂಗಳೂರು: ಕಂದಾವರ ನೂರುಲ್ ಇಸ್ಲಾಂ ಮಸ್ಜಿದ್‌- ಮದರಸದಲ್ಲಿ 75ರ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: ನೂರುಲ್ ಇಸ್ಲಾಂ ಮಸ್ಜಿದ್ ಮತ್ತು ಮದರಸ ಮೂಡುಕರೆ ಕಂದಾವರ ಇಲ್ಲಿ 75ನೇ ಸ್ವಾತಂತ್ರ್ಯವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಗೌರವಧ್ಯಕ್ಷರಾದ ಎಂ ಎಸ್ ಅಲಿಯಬ್ಬ ಅವರು ಸಬೀಹ್ ಅಲಿ ಅವರಿಂದ ಗೌರವವಂದನೆಯನ್ನು ಸ್ವೀಕರಿಸಿ ಧ್ವಜಾರೋಹಣ...

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಕೆಂಪು ಕೋಟೆಯಲ್ಲಿ ಹಾರಾಡಿದ ತಿರಂಗಾ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು. ಪ್ರಧಾನಿಯಾದ ಬಳಿಕ ಅವರು ಇಂದು 9ನೆ ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದರು.ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ...