Saturday, August 20, 2022

ಪಡುಬಿದ್ರೆ:  ಕ್ಷುಲ್ಲಕ ಕೋಳಿ ಜಗಳ: ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಡಿಗೆಯಲ್ಲಿ ಹೊಡೆದಾಡಿಕೊಂಡ ನೆರೆಮನೆಯವರು:

ಪಡುಬಿದ್ರೆ:  ಕ್ಷುಲ್ಲಕ ಕೋಳಿ ಜಗಳ: ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಡಿಗೆಯಲ್ಲಿ ಹೊಡೆದಾಡಿಕೊಂಡ ನೆರೆಮನೆಯವರು:

ಪಡುಬಿದ್ರಿ: ಕೋಳಿಯೊಂದು ಪದೇ ಪದೇ ಪಕ್ಕದ ಮನೆಗೆ ಹೋಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಬಡಿಗೆ ತೆಗೆದುಕೊಂಡು ಬಡಿದಾಡಿದ ಘಟನೆ, ಉಡುಪಿಯಲ್ಲಿ ನಡೆದಿದೆ.ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆಗೆ ಸಾಕ್ಷಿಯಾಗಿದೆ. ದೊಣ್ಣೆ ತೆಗೆದುಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಲೆತ್ನಿಸುವ ವ್ಯಕ್ತಿಯ ಹೆಸರು ರವಿರಾಜ ಶೆಟ್ಟಿ. ಎದಿರೇಟು ನೀಡುತ್ತಿರುವ ಮಹಿಳೆ ವಾರಿಜಾ ಶೆಟ್ಟಿ. ರವಿರಾಜ ಶೆಟ್ಟಿ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ.ಅದನ್ನು ವಾರಿಜ ಶೆಟ್ಟಿ ಓಡಿಸಿದ್ದಾರೆ. ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣವಾಗಿದೆ.

ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಒಬ್ಬರಿಗೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.

ಕೋಳಿ ಜಗಳದ ಹಿಂದೆ ಹಳೆ ದ್ವೇಷ  ಜಮೀನಿನ ತಗಾದೆ ಇರಬಹುದು ಎನ್ನಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics