ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ. ಈ ಸಮಾಜದ ಯುವಕರನ್ನು ಪೂಜಾರಿಯವರಿಂದ ದೂರ ಮಾಡಿದ ಶ್ರೇಯಸ್ಸು ಯಾರಿಗಿದೆ ಎಂದರೆ ಅದೇ ಮಹಾನುಭಾವನಿಗೆ ಎಂದು ನಾರಾಯಣ ಗುರು ವಿಚಾರವಾದಿ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಜ.26ರಂದು ಸ್ವಾಭಿಮಾನಿ ನಡಿಗೆ ಕುರಿತು ಕುದ್ರೋಳಿ ಕ್ಷೇತ್ರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.26ರಂದು ಸ್ವಾಭಿಮಾನಿ ನಡಿಗೆ ಜಾಥಾ 3 ಗಂಟೆಗೆ ಕಂಕನಾಡಿ ಗರೋಡಿ
ಕ್ಷೇತ್ರದಿಂದ ಹೊರಟು ಪಂಪ್ವೆಲ್, ಜ್ಯೋತಿ ಸರ್ಕಲ್, ಹಂಪನ್ಕಟ್ಟೆ ಸಿಗ್ನಲ್, ಕೆ ಎಸ್ ರಾವ್ ರಸ್ತೆ, ನವಭಾರತ್ ಸರ್ಕಲ್, ಪಿವಿಎಸ್, ಎಂ ಜಿ ರೋಡ್ , ಲೇಡಿಹಿಲ್ ಆಗಿ ಮಣ್ಣಗುಡ್ಡ ಮುಖಾಂತರ ಕುದ್ರೋಳಿ ಕ್ಷೇತ್ರಕ್ಕೆ ತಲುಪಲಿದೆ ಎಂದು ವಿವರಿಸಿದರು.
ಇದು ಸಂಪೂರ್ಣ ವಾಹನ ಜಾಥಾವಾಗಿದ್ದು, ಜೊತೆಗೆ ಮೌನ ಮೆರವಣಿಗೆ ಮತ್ತು ಕೇವಲ ಹಳದಿ ಶಾಲಿಗೆ ಮಾತ್ರ ಅವಕಾಶ ಎಂದು ಸ್ಪಷ್ಟಪಡಿಸಿದರು.
ರಾಜಕೀಯದ ಎಲ್ಲಾ ಲಾಭ ಪಡೆದು ಯಾವ ವ್ಯಕ್ತಿಯ ಜೊತೆ ನಿಂತುಕೊಂಡು ಬೆಳೆದರೋ ಅದೇ ಮಹಾನುಭಾವ. ಪ್ರಶ್ನಾತೀತ ನಾಯಕನಿಗೆ ಪ್ರಶ್ನೆ ಮಾಡಿದ್ದಾರೆ.
ಇದರ ಮಧ್ಯೆ ಇಂದು ಬೆಳಗ್ಗೆ ಜೊತೆಗೆ ಉಸ್ತುವಾರಿ ಸಚಿವರನ್ನು ಬಿಲ್ಲವ ನೇತಾರ ಜನಾರ್ದನ ಪೂಜಾರಿ ಮನೆಗೆ ಕರೆದುಕೊಂಡು ಹೋಗಿ ಅವರ ಮೂಲಕ ಹೇಳಿಕೆ ಕೊಡಿಸುವ ವಿಫಲ ಪ್ರಯತ್ನ ಮಾಡಿದ್ದಾರೆ. ನಾವು ಏನಾದರೊಂದು ಕ್ರಮ ಕೈಗೊಳ್ಳುತ್ತೇವೆ.
ಯಾತ್ರೆ ಕೈ ಬಿಡಿ ಎಂದು ಮನವಿ ಮಾಡಿದರೂ ಅದಕ್ಕೆ ಜಗ್ಗದ ಜನಾರ್ದನ ಪೂಜಾರಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿ ಕಳುಹಿಸಿದ್ದಾರೆ.
ಈ ಹಂತದಲ್ಲೂ ಬೇರೆಯವರು ರಾಜಕೀಯ ಮಾಡುತ್ತಾರೆಂದು ಸ್ವತಃ ಇವರೇ ಇವತ್ತು ರಾಜಕೀಯ ಮಾಡುತ್ತಿದ್ದಾರೆ ವಾಗ್ದಾಳಿ ನಡೆಸಿದರು.
ಈವತ್ತು ಮತ್ತೆ ಜನಾರ್ದನ ಪೂಜಾರಿ ಅವರ ಗೌರವ ಹಾಗೂ ಹೆಸರು ಹಾಳು ಮಾಡಲು ಹೊರಟಿದ್ದಾರೆ.
ಅವರಿಗೆ ನಾಚಿಕೆಯಾಗಬೇಕು ಆ ಮನುಷ್ಯನಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ,
ಖಜಾಂಚಿ ಆರ್ ಪದ್ಮರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ, ಶೈಲೇಂದ್ರ ಸುವರ್ಣ, ಎಂ ಎಸ್ ಕೋಟ್ಯಾನ್, ಅವಿನಾಶ್ ಸುವರ್ಣ, ಲೋಕೇಶ್ ಕೋಡಿಕೆರೆ, ಉದಯ ಪೂಜಾರಿ, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಕ್ಷ ಬಿ ಕರ್ಕೇರ ಮೊದಲಾದವರಿದ್ದರು.