Connect with us

BANTWAL

‘ಸತ್ಯ – ಧರ್ಮ’ ಜೋಡುಕರೆ ಕಂಬಳ: 155 ಜತೆ ಕೋಣಗಳು ಭಾಗಿ

Published

on

ಬಂಟ್ವಾಳ: ತಾಲೂಕಿನ ಕಕ್ಯಪದವಿನಲ್ಲಿ ನಡೆದ ‘ಸತ್ಯ – ಧರ್ಮ’ ಜೋಡುಕರೆ ಕಂಬಳ ಕೂಟ ಸಮಾಪನ್ನಗೊಂಡಿದೆ. ಒಟ್ಟು 155 ಜತೆ ಕೋಣಗಳು ಭಾಗವಹಿಸಿದ್ದವು. ಅದರ ಫಲಿತಾಂಶ ವಿವರ ಇಲ್ಲಿದೆ.

ಕನೆಹಲಗೆ: 02 ಜೊತೆ
ಅಡ್ಡಹಲಗೆ: 07 ಜೊತೆ
ಹಗ್ಗ ಹಿರಿಯ: 11 ಜೊತೆ
ನೇಗಿಲು ಹಿರಿಯ: 30 ಜೊತೆ
ಹಗ್ಗ ಕಿರಿಯ: 23 ಜೊತೆ
ನೇಗಿಲು ಕಿರಿಯ: 82 ಜೊತೆ

ಕನೆಹಲಗೆ
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ
ಪ್ರಥಮ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ “ಎ”
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ಅಳ್ಳಿಪ್ಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ “ಎ”
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ಹಗ್ಗ ಹಿರಿಯ
ಪ್ರಥಮ: ಪದವು ಕಾನಡ್ಕ ಫ್ಲೇವಿ ಡಿಸೋಜ “ಎ”
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಎ”
ಓಡಿಸಿದವರು: ಗುರುಚರಣ್ ಪಟ್ಟೆ
ಹಗ್ಗ ಕಿರಿಯ
ಪ್ರಥಮ: ಚೊಕ್ಕಾಡಿ ಕಟಪಾಡಿ ದೈವೀಕ್ ಸಂತೋಷ್ ಶೆಟ್ಟಿ “ಎ”
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಚೊಕ್ಕಾಡಿ ಕಟಪಾಡಿ ದೈವೀಕ್ ಸಂತೋಷ್ ಶೆಟ್ಟಿ “ಬಿ”
ಓಡಿಸಿದವರು: ಬೈಂದೂರು ಮಂಜುನಾಥ್

ನೇಗಿಲು ಹಿರಿಯ
ಪ್ರಥಮ: ಬಿ.ಸಿ ರೋಡ್ ಮಹಾಕಾಳಿಬೆಟ್ಟು ಸೀತಾರಾಮ ಶೆಟ್ಟಿ “ಬಿ”
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ದ್ವಿತೀಯ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ “ಬಿ”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
ನೇಗಿಲು ಕಿರಿಯ
ಪ್ರಥಮ: ಮರೋಡಿ ಕೆಳಗಿನಮನೆ ಕೃತೇಷ್ ಅಣ್ಣಿ ಪೂಜಾರಿ “ಎ”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
ದ್ವಿತೀಯ: ಗುರುಪುರ ಕಾರಮೊಗೆರಗುತ್ತು ಯಶ್ ಜಗದೀಶ್ ಆಳ್ವ
ಓಡಿಸಿದವರು: ಮೂಡಬಿದ್ರಿ ಲಾಡಿ ಸುರೇಶ್ ಶೆಟ್ಟಿ

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

LATEST NEWS

Trending