ಮಂಗಳೂರು: ಜನ ಸಾಮಾನ್ಯರ ಮನೆಯ ತಳಪಾಯ ಬಿದ್ದುಹೋಗುವ ಸ್ಥಿತಿ ನಿರ್ಮಾಣ ಮಾಡಿದ ಮರಳು ಮಾಫಿಯಾ ವಿರುದ್ದ ಉಳ್ಳಾಲ ಶಾಸಕ ಯು ಟಿ. ಖಾದರ್ ಗರಂ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗದ ಉಳ್ಳಾಲ ಪೊಲೀಸರು ಮತ್ತು ಅಧಿಕಾರಿಗಳಿಗೆ ಶಾಸಕ ಖಾದರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಸಿಪಿಗೆ ಖುದ್ದು ಫೋನ್ ಕರೆ ಮಾಡಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ತನ್ನ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ರಾಣಿಪುರ ನಿವಾಸಿಯೊಬ್ಬರು ಅಕ್ರಮ ಮರಳು ದಂಧೆಕೋರರಿಂದಾಗಿ ಮನೆಗೆ ಹಾನಿಯಾಗ್ತಿದೆ ಎಂದು ಶಾಸಕ ಖಾದರ್ ಎದುರು ಕಣ್ಣೀರಿಟ್ಟಿದ್ದರು.
ಈ ವೇಳೆ ಆಕ್ರೋಶಗೊಂಡ ಖಾದರ್, ತಕ್ಷಣ ಫೋನ್ ಮಾಡಿ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ಮತ್ತು ಎಸಿಪಿಯನ್ನು ತೀವ್ರ ತರಾಟೆಗೆ ತಗೊಂಡಿದ್ದಾರೆ.
‘ಪೊಲೀಸರು ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ, ನಾಚಿಗೆ ಇಲ್ವಾ?’ ‘ರಾಣಿಪುರ ಮುಖಾಂತರವೇ ಅಕ್ರಮವಾಗಿ ಮರಳು ಹೋಗ್ತಾ ಇದೆ, ನಿಮ್ಮ ಚೆಕ್ಕಿಂಗ್ ಎಲ್ಲಾ ನಮಗೆ ಗೊತ್ತಿದೆ, ತಕ್ಷಣ ರೈಡ್ ಮಾಡಿ, ಪೊಲೀಸರನ್ನ ಮರಳಿನವರು ಕಂಟ್ರೋಲ್ ಮಾಡ್ತಿದ್ದಾರಾ? ಅವರಿಗೆ ಯಾಕೆ ಹೆದರ್ತೀರಾ?’
ಒಂದು ವಾರದಿಂದ ಊರವರು ಇಲ್ಲಿ ಬಂದು ಕೂಗ್ತಾರೆ, ನಿಮಗೆ ನಿಲ್ಲಿಸಲು ಆಗಲ್ವಾ?’ ಪೊಲೀಸರು ಸರಿ ಇದ್ರೆ ಇದೆಲ್ಲಾ ಆಗುತ್ತಾ? ನೀವೇ ಖುದ್ದು ಹೋಗಿ ನಿಲ್ಲಿಸಿ” ಅಂತ ಎಸಿಪಿಗೆ ಸೂಚನೆ ನೀಡಿದ್ದಾರೆ.
ಖಾದರ್ ಅಧಿಕಾರಿಗೆ ಅವಾಜ್ ಹಾಕಿದ್ದು ವಿಡಿಯೋ ವೈರಲ್ ಆಗಿದೆ.