ಉಡುಪಿ: ನೇಣಿಗೆ ಶರಣಾಗಲು ಬಂದಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕರು ತಮ್ಮ ಸಮಯಪ್ರಜ್ಞೆಯಿಂದ ಬದುಕುಳಿಸಿದ ಘಟನೆ ಇಂದು ಉಡುಪಿಯಲ್ಲಿ ನಡೆದಿದೆ.
ಮನನೊಂದು ಬಂದಿರುವ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೈಯಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳಾವಕಾಶ ಹುಡುಕುತ್ತಿದ್ದರು.
ಈ ಬಗ್ಗೆ ವಿಷಯ ತಿಳಿದ ಉಡುಪಿಯ ಸಮಾಜಸೇವಕರು ಮನನೊಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ.
ಇವರು ಹೋಟೆಲಿನಲ್ಲಿ ಬಾಣಸಿಗರಾಗಿದ್ದರೆಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಒಳಕಾಡು, ದೀಪಕ್, ಹರೀಶ್ ಅಮೀನ್ ಭಾಗಿಯಾಗಿದ್ದರು.