Sunday, July 3, 2022

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 250ಕ್ಕೂ ಅಧಿಕ ಮಂದಿ ಸಾವು-ಧರೆಗುರುಳಿದ ಬೃಹತ್‌ ಕಟ್ಟಡಗಳು

ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ  250ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


ರಿಕ್ಟರ್ ಮಾಪಕದಲ್ಲಿ 6.1 ರ ತೀವ್ರತೆಯ ಭೂಕಂಪನ ಉಂಟಾಗಿದ್ದು, 155ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ತಾಲಿಬಾನ್ ಆಡಳಿತದಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಸೀಮ್ ಹಕ್ಕಾನಿ ತಿಳಿಸಿದ್ದಾರೆ.
ಪೂರ್ವದ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್‌ಗಳಲ್ಲಿ ಕೂಡ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗಿವೆ. ಆಗ್ನೇಯ ಭಾಗದ ನಗರ ಖೋಸ್ಟ್‌ನಿಂದ ಸುಮಾರು 44 ಕಿಮೀ ದೂರದಲ್ಲಿ ಹಾಗೂ 51 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ. ಅಪಾರ ಪ್ರಮಾಣದ ಕಟ್ಟಡಗಳು ಧರೆಗುರುಳಿವೆ.

LEAVE A REPLY

Please enter your comment!
Please enter your name here

Hot Topics

ಕುವೈಟ್‌-ಮಂಗಳೂರು ಪ್ರಯಾಣಿಕನ ಜೊತೆ ಸಿಬ್ಬಂದಿ ಉದ್ಧಟತನ: ಕ್ಷಮೆ ಕೇಳಿದ ಏರ್‌ಇಂಡಿಯಾ

ಮಂಗಳೂರು: ಕುವೈಟ್‌ನಿಂದ ಮಂಗಳೂರಿಗೆ ಹೊರಡುವ ವೇಳೆ ಕುವೈಟ್‌ನ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ಬಗ್ಗೆ ದೂರಿದ ಮಂಗಳೂರಿಗರೊಬ್ಬರಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕ್ಷಮೆ ಕೋರಿದ ಘಟನೆ ನಿನ್ನೆ ನಡೆದಿದೆ.ಕುವೈತ್‌ನ ಅನಿವಾಸಿ ಭಾರತೀಯ,...

ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನ ಬಾಳಿಗೆ ಬೆಳಕಾದ ಸಮಾಜ ಸೇವಕ ಈಶ್ವರ್ ಮಲ್ಪೆ

ಉಡುಪಿ: ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಉಡುಪಿಯ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಹೊಸ ಬದುಕು ನೀಡಿದ ಉಡುಪಿ ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಕಾರವಾರ...

ಸೌದಿ ಅರೇಬಿಯಾ: ಹಜ್‌ ಯಾತ್ರಿಗಳ ಸೇವೆಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ(I.F.F.)

ರಿಯಾದ್‌: ಕೊಲ್ಲಿ ರಾಷ್ಟ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯ ಫ್ರೆಟರ್ನಿಟಿ ಫೋರಂ (ಐ.ಎಫ್.ಎಫ್) ಪ್ರತೀ ವರ್ಷದಂತೆ ಈ ವರ್ಷವೂ ಹಜ್‌ ಯಾತ್ರಾರ್ಥಿಗಳ ಸೇವೆಯಲ್ಲಿ ಸಕ್ರಿಯವಾಗಿದೆ.2022 ರ ಹಜ್‌ಗೆ ಈಗಾಗಲೇ ಭಾರತದಿಂದ ಎಪ್ಪತ್ತು...