Thursday, November 26, 2020

ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್-ಐಪಿ ಲಿಪಿ’ಯ ಶಬ್ಧಕೋಶ ಲೋಕಾರ್ಪಣೆ..

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ – ಶಾಸಕ ಕಾಮತ್..!

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ - ಶಾಸಕ ಕಾಮತ್ ಮಂಗಳೂರು : ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ...

 ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ  ನಾಮಕರಣದ ಸಂಭ್ರಮ 

ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ  ನಾಮಕರಣದ ಸಂಭ್ರಮ  ಉಡುಪಿ: ಎಲ್ಲ ಮಕ್ಕಳಿಗೂ ನಾಮಕರಣ ಸಂಭ್ರಮ ಸಾಮಾನ್ಯ ಆದ್ರೆ ಈ ಪುಟಾಣಿ ಕಂದಮ್ಮನಿಗೆ ನಾಮಕರಣ ಸಂಭ್ರಮ ವಿಶೇಷತೆಯೇ ಸರಿ ಯಾಕಂತೀರಾ... ಈ ಮುದ್ದು ಕಂದಮ್ಮನಿಗೆ...

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ ಭಾರತದಲ್ಲಿ ಕರಾಳ ಅಧ್ಯಾಯ ಬರೆದ  ನವೆಂಬರ್ 26.11. 2008ರ ಮುಂಬೈ ಭಯೋತ್ಪಾದಕ ದಾಳಿಗೆ 12 ವರ್ಷಗಳು ಕಳೆದಿದ್ದು, ಅಮಾಯಕ ಜನರು,...

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಭಾಜಪಾ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಹಲವು...

ಮಲ್ಪೆ ಬಸ್ಸು ನಿಲ್ದಾಣದ ಬಳಿ ಹೈಟೆನ್ಶನ್‌ ಕಂಬಕ್ಕೇರಿದ ಮಾನಸಿಕ ಅಸ್ವಸ್ಥ..!

ಮಲ್ಪೆ ಬಸ್ಸು ನಿಲ್ದಾಣದ ಬಳಿ ಹೈಟೆನ್ಶನ್‌ ಕಂಬಕ್ಕೇರಿದ ಮಾನಸಿಕ ಅಸ್ವಸ್ಥ..! ಉಡುಪಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ‌ ಘಟ‌ನೆ ನಿನ್ನೆ ನಡೆದಿದೆ. ಉಡುಪಿ ತಾಲೂಕಿನ ಮಲ್ಪೆಯಲ್ಲಿ‌ ಈ‌ ಘಟನೆ‌...

ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್-ಐಪಿ ಲಿಪಿ’ಯ ಶಬ್ಧಕೋಶ  ಲೋಕಾರ್ಪಣೆ

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರಕಟಿಸಿದ ‘ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್-ಐಪಿ ಲಿಪಿ’ಯನ್ನು ಒಳಗೊಂಡ ಶಬ್ಧಕೋಶದ ಬಿಡುಗಡೆ ಕಾರ್ಯಕ್ರಮವು ಮಂಗಳೂರು ತಾಪಂ ಹೊಸ ಕಟ್ಟಡದಲ್ಲಿ ನಡೆಯಿತು.

ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಶಬ್ಧಕೋಶ ಬಿಡುಗಡೆಗೊಳಿಸಿ ಮಾತನಾಡಿ ಕಳೆದ 11 ವರ್ಷದಲ್ಲಿ ಭಾಷಾ ಅಕಾಡಮಿಗಳ ಪೈಕಿ ಬ್ಯಾರಿ ಸಾಹಿತ್ಯ ಅಕಾಡಮಿಯು ಅನೇಕ ಮಹತ್ವದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಬ್ಯಾರಿಯೇತರರಿಗೆ ಬ್ಯಾರಿ ಭಾಷೆ ಕಲಿಯುವ ಸಲುವಾಗಿ ಹೊಸ ಮಾದರಿಯ ಶಬ್ಧಕೋಶ ಹೊರತಂದಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ಅಕಾಡಮಿಯು ಹೊಸ ಬ್ಯಾರಿ ಲಿಪಿ ರಚಿಸಿರುವುದು ಕೂಡ ಉತ್ತಮ ಬೆಳವಣಿಗೆಯಾಗಿದೆ.

ಭವಿಷ್ಯದಲ್ಲಿ ಇದರ ಪರಿಷ್ಕರಣೆಗೆ ಅವಕಾಶ ನೀಡುವ ಅಗತ್ಯವೂ ಇದೆ ಎಂದರು. ಬ್ಯಾರಿ ಭಾಷಾ ದಿನಾಚರಣೆಯ ಬಗ್ಗೆ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ ಬ್ಯಾರಿ ಭಾಷೆಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳಾಗುತ್ತಿದ್ದರೂ ಕೂಡ ಯುನೆಸ್ಕೋ ಪಟ್ಟಿಯಲ್ಲಿ ಇನ್ನೂ ಬ್ಯಾರಿ ಭಾಷೆಯ ಸೇರ್ಪಡೆ ಆಗಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರು ಪ್ರಯತ್ನ ನಡೆಸಬೇಕಿದೆ ಎಂದರು.

ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಬ್ಧಕೋಶ ಕೃತಿಯ ಮಾರ್ಗದರ್ಶಕರಾದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಲ್ವಿನ್ ಡೇಸಾ ಅವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಬಿ. ಅಪ್ಪಾಜಿ ಗೌಡ, ಅಕಾಡಮಿಯ ಸದಸ್ಯರಾದ ಶಂಶೀರ್ ಬುಡೋಳಿ, ರಾಧಾಕೃಷ್ಣ ನಾವಡ,ಸದಸ್ಯ ಅಬ್ದುಲ್ ರಝಾಕ್ ಸಾಲ್ಮರ ಉಪಸ್ಥಿತರಿದ್ದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.